Justice M Nagaprasanna presided in Court Hall 14 of the Karnataka High Court until 8:05PM today. The Court heard a total of 555 cases today out of which 305 cases were listed, and 250 moved matters that were heard in a span of 2.5 hours.
📍ಬೆಂಗಳೂರು
ಸನ್ಮಾನ್ಯ ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆದ ಸಹಾಯಕ ಅಭಿಯಂತರರು ಗ್ರೇಡ್ 1 ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ #KPSC ನಡೆಸಿದ ಅಕ್ರಮಪೂರಿತ ಆಯ್ಕೆ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡ ರಾಜ್ಯ ಸರಕಾರ ಎಸಗಿದ ತಪ್ಪುಗಳು ಹಾಗೂ ಅನುಸರಿಸುತ್ತಿರುವ ವಿಳಂಬದ್ರೋಹದ ಬಗ್ಗೆ ಮತ್ತೊಮ್ಮೆ ದಾಖಲೆಗಳ ಸಮೇತ ಮಾಧ್ಯಮಮಿತ್ರರ ಜತೆ ಚರ್ಚೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ನಾನು 10 ಪ್ರಶ್ನೆಗಳನ್ನು ಕೇಳಿದ್ದೇನೆ. ಅವರು ಉತ್ತರಿಸುವರು ಎಂಬ ನಿರೀಕ್ಷೆಯೊಂದಿಗೆ..
1.ನಿಮ್ಮ ಗಮನಕ್ಕೆ ಬಾರದೇ ಅಕ್ರಮ ಮಾರ್ಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಕೊಟ್ಟಿದ್ದೀರಾ ಅಥವಾ ಇಲ್ಲವಾ?
2.ರಾಜ್ಯ ಹೈಕೋರ್ಟ್'ನಲ್ಲಿ ಪ್ರಕರಣ ನಡೆಯುತ್ತಿರುವುದು ನಿಮಗೆ ಗೊತ್ತಿಲ್ಲವೇ?
3.ಇಷ್ಟೆಲ್ಲಾ ದಾಖಲೆಗಳು ಇದ್ದರೂ ನಾನು ನಿಮ್ಮ ರಾಜೀನಾಮೆ ಕೇಳಬಾರದೇ?
4.AEEಗಳ ಅಕ್ರಮ ನೇಮಕೆ ಬಗ್ಗೆ ನಿಮಗೆ ಗೊತ್ತಿಲ್ಲ ಅಂದರೆ ತನಿಖೆ ಮಾಡಿಸಬೇಕಿತ್ತು, ಅಲ್ಲವೇ?
5.ಅಕ್ರಮ ಎಸಗಿದ ಅಭ್ಯರ್ಥಿಗಳಿಗೆ ಷರತ್ತಿನ ಮೇಲೆ ನೇಮಕಾತಿ ಆದೇಶ ಕೊಟ್ಟಿದ್ದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ?
6.ನೇಮಕಾತಿ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಕಾರಣಕ್ಕೆ ಷರತ್ತಿನ ನೇಮಕಾತಿ ಆದೇಶ ಪತ್ರ ಕೊಟ್ಟಿದ್ದು ಹೌದಲ್ಲವೇ?
7.ಅಕ್ರಮ ನಡೆದಿರುವ ಬಗ್ಗೆ ಅನೇಕ ದಾಖಲೆಗಳು ಇದ್ದರೂ ತರಾತುರಿಯಲ್ಲಿ ಯಾಕೆ ನೇಮಕಾತಿ ಆದೇಶ ನೀಡಿದಿರಿ?
8.ನಿಮ್ಮ ಇಲಾಖೆಯಿಂದ ಕಳಂಕಿತ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ಕೊಟ್ಟ ವಿಷಯ ಸಚಿವರಾಗಿ ನಿಮಗೆ ಗೊತ್ತಿರಲಿಲ್ಲವೇ?
9.ಮಹಿಳಾ ಅಧಿಕಾರಿ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆಯಾದ ನಂತರ ಆ ಸ್ಥಾನಕ್ಕೆ ಬಂದ ಅಧಿಕಾರಿ ಅಕ್ರಮ ನಡೆದಿರುವ ಬಗ್ಗೆ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಪತ್ರ ಬರೆದ ದಿನವೇ ನೇಮಕಾತಿ ಆದೇಶ ಪತ್ರಗಳನ್ನು ಕೊಟ್ಟಿದ್ದು ಯಾಕೆ?
10.ರೆಸಾರ್ಟ್ ನಲ್ಲಿ ಓಎಂಆರ್ ಶೀಟುಗಳನ್ನು ತಿದ್ದಿಸಿದ ಅಧಿಕಾರಿ ಜತೆಗೆ ನಿಮ್ಮ ಸಂಬಂಧವೇನು?
#KPSCಕರ್ಮಕಾಂಡ
#KarnatakaKpscFiles