ನಾಗಪುರ: ರಾಷ್ಟ್ರ ಸೇವಿಕಾ ಸಮಿತಿಯ ನಾಗಪುರ ಮಹಾನಗರ ಘಟಕದ ವತಿಯಿಂದ 2026ರ ಅಕ್ಟೋಬರ್ 16ರಂದು ಶಸ್ತ್ರಪೂಜೆ ಹಾಗೂ ವಿಜಯದಶಮಿ ಉತ್ಸವವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖ ಸಂಚಾಲಿಕಾ ವಿ. ಶಾಂತಾಕುಮಾರಿ (ಶಾಂತಕ್ಕ) ಮಾತನಾಡಿ, ಮಹಿಳೆಯರು ತಮ್ಮ ಆಂತರಿಕ ಶಕ್ತಿಯನ್ನು ಗುರುತಿಸಿ ಅದನ್ನು ಸಮಾಜದ ಕಲ್ಯಾಣಕ್ಕಾಗಿ ಬಳಸಬೇಕು ಎಂದು ಕರೆ ನೀಡಿದರು. ಶಾಖೆಗಳ ಮೂಲಕ ಚಾರಿತ್ರ್ಯವಂತ ಹಾಗೂ ರಾಷ್ಟ್ರನಿಷ್ಠ ನಾಗರಿಕರ ನಿರ್ಮಾಣವಾಗುತ್ತದೆ ಎಂದು ಅವರು ತಿಳಿಸಿದರು.
ಯುವಜನರ ಆಲೋಚನೆ ಮತ್ತು ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣ��� ತರುವ ಅಗತ್ಯವನ್ನು ಒತ್ತಿಹೇಳಿದ ಅವರು, ಭಾರತೀಯ ಜೀವನಮೌಲ್ಯಗಳ ಆಧಾರದ ಮೇಲೆ ಯುವಜನರನ್ನು ವಿಶ್ವಕಲ್ಯಾಣದ ವಾಹಕರನ್ನಾಗಿ ರೂಪಿಸಲು ಪ್ರಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು. ಮಹಿಳಾ ಶಕ್ತಿ ಜಾಗೃತಿ, ವ್ಯಕ್ತಿತ್ವ ವಿಕಸನ ಮತ್ತು ರಾಷ್ಟ್ರನಿಷ್ಠ ನಾಗರಿಕರ ನಿರ್ಮಾಣದ ಮಹತ್ವವನ್ನು ಅವರು ತಮ್ಮ ಭಾಷಣದಲ್ಲಿ ವಿವರಿಸಿದರು.
ಮಂಗಳೂರು: ವಿಕ್ರಮದ ವಿಜಯದಶಮಿ ವಿಶೇಷಾಂಕ ‘ಕರುನಾಡಿನಲ್ಲಿ ಸಂಘಯಾನ’ ವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ಡಾ��� ಪಿ. ವಾಮನ್ ಶೆಣೈ ಮಂಗಳೂರಿನ ಸಂಘನಿಕೇತನ ಕಾರ್ಯಾಲಯದಲ್ಲಿ ಬಿಡುಗಡೆ ಮಾಡಿದರು. ಮಂಗಳೂರು ಮಹಾನಗರ ಸಂಘಚಾಲಕ ಡಾ। ಸತೀಶ್ ರಾವ್, ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್, ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ಪ್ರಾಂತ ಸಹಬೌದ್ಧಿಕ್ ಪ್ರಮುಖ್ ರಾಜೇಶ್, ಸ್ವದೇಶಿ ಜಾಗರಣ ಮಂಚ್ ನ ಪ್ರಾಂತ ಸಂಘಟನಾ ಕಾರ್ಯದರ್ಶಿ ಜಗದೀಶ್, ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸೂರಜ್ ಮತ್ತಿತರರು ಉಪಸ್ಥಿತರಿದ್ದರು.
ಹೈದರಾಬಾದ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾ. ಬಿ.ಆರ್. ಅಂಬೇಡ್ಕರ್ ಶಾಖೆಯ ವತಿಯಿಂದ ಹೈದರಾಬಾದ್ ಕೇಂದ್ರ ವಿಶ್ವವಿದ್ಯಾಲಯದ ಸಂಘಸ್ಥಾನದಲ್ಲಿ ಅಕ್ಟೋಬರ್ 14ರಂದು ವಿಜಯದಶಮಿ ಉತ್ಸವವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ದಪ್ಪು ವಾದ್ಯದ ಸಾಂಸ್ಕೃತಿಕ ಮಹತ್ವವನ್ನು ಪರಿಚಯಿಸಲಾಯಿತು. ತಮಟೆ ಕೇವಲ ಸಂಗೀತ ವಾದ್ಯವಲ್ಲ; ಅದು ಗ್ರಾಮೀಣ ಜನಜೀವನ, ಸಾಂಸ್ಕೃತಿಕ ಬೇರುಗಳು ಹಾಗೂ ಸಾಮೂಹಿಕ ಅಸ್ಮಿತೆಯ ಸಂಕೇತವಾಗಿದೆ. ಅದರ ನಾದವು ಜನರನ್ನು ಒಗ್ಗೂಡಿಸಿ, ಸಾಮಾಜಿಕ ಏಕತೆ, ಸಾಂಸ್ಕೃತಿಕ ಹೆಮ್ಮೆ ಮತ್ತು ರಾಷ್ಟ್ರ ಜಾಗರಣಕ್ಕೆ ಪ್ರೇರಣೆ ನೀಡುತ್ತದೆ ಎಂಬ ಸಂದೇಶವನ್ನು ಸಾರಲಾಯಿತು
ಬಿಹಾರ ಮೋತಿಹಾರಿ: ವಿಜಯದಶಮಿಯ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೋತಿಹಾರಿ ಜಿಲ್ಲಾ ಘಟಕದ ವತಿಯಿಂದ ಸ್ಥಳೀಯ ನರಸಿಂಹ ಬಾಬಾ ಮಂದಿರದ ಆವರಣದಲ್ಲಿ ಶಸ್ತ್ರಪೂಜೆ ಹಾಗೂ ಪಥಸಂಚಲನವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ವಕ್ತಾರರಾಗಿ ಉಪಸ್ಥಿತರಿದ್ದ ಸಂಘದ ಸಹಸರಕಾರ್ಯವಾಹ ��ಾ. ಕೃಷ್ಣ ಗೋಪಾಲ್ ಮಾತನಾಡಿ, ಸಮಾಜದ ಸಂಘಟನೆ ಮತ್ತು ನೈತಿಕ ಸದೃಢತೆಯೇ ನಿಜವಾದ ವಿಜಯಕ್ಕೆ ಆಧಾರವಾಗಿದೆ. ಸಂಪೂರ್ಣ ಸಮಾಜವನ್ನು ಸಂಘಟಿಸುವುದೇ ಸಂಘದ ಸ್ಥಾಪನೆಯ ಮೂಲ ಧ್ಯೇಯವಾಗಿದೆ ಆಧುನಿಕ ತಂತ್ರಜ್ಞಾನ ಮತ್ತು ಆರ್ಥಿಕ ಪ್ರಗತಿಯ ಜೊತೆಗೆ ಭಾರತದ ಪ್ರಾಚೀನ ಸಾಂಸ್ಕೃತಿಕ ಪರಂಪರೆ ಹಾಗೂ ಮೌಲ್ಯಗಳ ಆಧಾರದ ಮೇಲೆಯೇ ನವಭಾರತದ ನಿರ್ಮಾಣ ಸಾಧ್ಯ. ಭಾರತದ ಸಾಂಸ್ಕೃತಿಕ ಮೌಲ್ಯಗಳು ಜಾಗತಿಕ ಸವಾಲುಗಳನ್ನು ಎದುರಿಸುವುದರ ಜೊತೆಗೆ ಜಗತ್ತಿಗೆ ಸರಿಯಾದ ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿವೆ ಎಂದು ಅಭಿಪ್ರಾಯಪಟ್ಟರು.
ಮಂಗಳೂರು: ವಿಕ್ರಮ- ವಿಜಯದಶಮಿ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ
ಮಂಗಳೂರಿನ ಸಂಘನಿಕೇತನದಲ್ಲಿ ನಾಳೆ ಶುಕ್ರವಾರ ಅಕ್ಚೋಬರ್ 15, 2026ರಂದು ವಿಕ್ರಮ ವಿಜಯದಶಮಿ ವಿಶೇಷಾಂಕ-2026 “ಕರುನಾಡಿನಲ್ಲಿ ಸಂಘಯಾನ” ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ದಕ್ಷಿಣ ಮಧ್ಯ ಕ್ಷೇತ್ರ ಸಂಘಚಾಲಕರಾದ ಡಾ॥ ಪಿ. ವಾಮನ ಶೆಣೈ ಅವರು ವಿಶೇಷಾಂಕವನ್ನು ಸಂಜೆ 5:30ಕ್ಕೆ ಬಿಡುಗಡೆ ಮಾಡಲಿದ್ದಾರೆ.
ಅಸ್ಸಾಂ ಮಾಜುಲಿ: ರಾಷ��ಟ್ರೀಯ ಸ್ವಯಂಸೇವಕ ಸಂಘದ ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸ��ನಿಲ್ ಆಂಬೇಕರ್ ಹಾಗೂ ವಿದ್ಯಾಭಾರತಿ (ಉನ್ನತ ಶಿಕ್ಷಣ)ದ ಸಂಘಟನಾ ಮಂತ್ರಿ ರಘುನಂದನ್ ಅಕ್ಟೋಬರ್ 13ರಂದು ಅಸ್ಸಾಂನ ಮಾಜುಲಿಯಲ್ಲಿರುವ ಶ್ರೀ ಔನಿಯಾಟಿ ಸತ್ರ ಮತ್ತು ಶ್ರೀ ಉತ್ತರ ಕಮಲಾಬಾರಿ ಸತ್ರಗಳಿಗೆ ಭೇಟಿ ನೀಡಿ ದರ್ಶನ ಪಡೆದರು.
ಕಮಲಾಬಾರಿ ಘಾಟ್ ದಾಟಿ ಮಾಜುಲಿಗೆ ಆಗಮಿಸಿದ ಗಣ್ಯರು, ಮೊದಲು ಶ್ರೀ ಔನಿಯಾಟಿ ಸತ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸತ್ರಾಧಿಕಾರಿ ಪ್ರಭು ಈಶ್ವರ ಶ್ರೀ ಪೀತಾಂಬರ ದೇವ ಗೋಸ್ವಾಮಿ ಅವರನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿ���ಿದರು.
ತದನಂತರ ಶ್ರೀ ಉತ್ತರ ಕಮಲಾಬಾರಿ ಸತ್ರಕ್ಕೆ ಭೇಟಿ ನೀಡಿ ದರ್ಶನ ಪಡೆದು, ಸತ್ರಾಧಿಕಾರಿ ಪ್ರಭು ಈಶ್ವರ ಶ್ರೀ ಜನಾರ್ದನ ದೇವ ಗೋಸ್ವಾಮಿ ಅವರನ್ನು ಭೇಟಿಯಾದರು.
ಕಾಸರಗೋಡು, ಕೇರಳ: ಸೇವಾ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತಿ��ುವ ಸೇವಾಭಾರತಿ ಸಂಸ್ಥೆಯ ‘ಜೀವಾಮೃತಂ’ ಅಭಿಯಾನವು ರಕ್ತದಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ.2025ರ ಅಕ್ಟೋಬರ್ 1ರಿಂದ 2026ರ ಸೆಪ್ಟೆಂಬರ್ 30ರವರೆಗಿನ ಅವಧಿಯಲ್ಲಿ ಜೀವಾಮೃತಂ ಯೋಜನೆಯಡಿ ಕಾರ್ಯನಿರ್ವಹಿಸಿದ ಸ್ವಯಂಸೇವಕರು ಕಾಸರಗೋಡು ಜನರಲ್ ಆಸ್ಪತ್ರೆಗೆ ಒಟ್ಟು 1,044 ಯೂನಿಟ್ ರಕ್ತವನ್ನು ಒದಗಿಸಿದ್ದಾರೆ.
ಈ ಮಹತ್ವದ ಕೊಡುಗೆಯ ಫಲವಾಗಿ, ಆಸ್ಪತ್ರೆಯ ರಕ್ತನಿಧಿಗೆ ರಕ್ತದಾನ ಮಾಡುವ ಸ್ವಯಂಸೇವಾ ಸಂಸ್ಥೆಗಳ ಪೈಕಿ ಸೇವಾಭಾರತಿ ಮುಂಚೂಣಿ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ನೆರವಾಗುವ ಈ ಸೇವೆಯು ಸ್ವಯಂಪ್ರೇರಿತ ರಕ್ತದಾನದ ಮಹತ್ವವನ್ನು ಸಾರುತ್ತ��ೆ. ಸ್ವಯಂಸೇವಕರ ಸಂಘಟಿತ ಪ್ರಯತ್ನ, ಸೇವಾ ಮನೋಭಾವ ಮತ್ತು ಸಾಮಾಜಿಕ ಹೊಣೆಗಾರಿಕೆಗೆ ಈ ಸಾಧನೆ ಸಾಕ್ಷಿಯಾಗಿದೆ.
“ಎಲ್ಲರ ಕಲ್ಯಾಣ ಮತ್ತು ಸುಖ ಎಲ್ಲಿ ಒಳಗೊಂಡಿದೆಯೋ,ಅದೇ ಧರ್ಮದ ನಿಜವಾದ ಪ���ಲನೆ”: ದತ್ತಾತ್ರೇಯ ಹೊಸಬಾಳೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರ���ಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇಂದು ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ದಿರಾಂಗ್ ಖಂಡದಲ್ಲಿ ಆಯೋಜಿಸಲಾಗಿದ್ದ ವಿಜಯದಶಮಿ ಉತ್ಸವದಲ್ಲಿ ಭಾಗವಹಿಸಿದರು.
ಶಕ್ತಿ, ಉತ್ಸಾಹ ಮತ್ತು ದೇಶಭಕ್ತಿಯ ಸಂಗಮ!
ಯುವಜನರಿಗಾಗಿ ವಿಶೇಷ ಅನುಭವ ನೀಡುವ ಪರಮ್ ಡಿಜಿಟಲ್ ದಸರಾ ಅನುಭವಕ್ಕೆ ಸಜ್ಜಾಗಿ!
🗓️ಅಕ್ಟೋಬರ್ 11–21
📍 ಸಾಹಸ, ಇತಿಹಾಸ, ತಂತ್ರಜ್ಞಾನ ಮತ್ತು ಸಂಸ್ಕೃತಿಯ ರೋಚಕ ಅನುಭವ ನಿಮ್ಮದಾಗಲಿ!
#Param#DigitalDasara
ನಾಗಪುರ: ಹೆಸರಾಂತ ವಕೀಲರೂ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆದ ಉಜ್ಜ್ವಲ್ ನಿಕಮ್ ಅವರ ಜೀವನವನ���ನು ಆಧರಿಸಿ ನಿರ್ಮಿಸಲಾದ ‘ಪ್ರಹಾರ್’ ಚಿತ್ರದ ನಿರ್ಮಾಪಕ-ನಿರ್ದೇಶಕ (ಮ್ಯಾಡಾಕ್ ಫಿಲ್ಮ್ಸ್) ದಿನೇಶ್ ವಿಜನ್ ಹಾಗೂ ರಾಜ್ಯಸಭಾ ಸದಸ್ಯ ಉಜ್ಜ್ವಲ್ ನಿಕಮ್ ಅವರು ರೇಶಿಮ್ಬಾಗ್ನಲ್ಲಿರುವ ಸ್ಮೃತಿಮಂದಿರಕ್ಕೆ ಭೇಟಿ ನೀಡಿ ಸಂಘಸಂಸ್ಥಾಪಕ ಡಾ॥ ಕೇಶವ ಬಲಿರಾಮ್ ಹೆಡಗೇವಾರ್ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ತದನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.