ಶಿರಹಟ್ಟಿಯಲ್ಲಿ ಮಾನ್ಯ ಶಾಸಕರಾದ ಶ್ರೀ ಚಂದ್ರು ಎಸ್ ಲಮಾಣಿ ಅವರು ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಹಾಗೂ ಗೌಂಡಿ ಕಾರ್ಮಿಕರಿಗೆ ಕಟ್ಟಡ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು.
ಈ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
#kbocwwb#ಶ್ರಮೇವ_ಜಯತೆ#ಕಾರ್ಮಿಕ_ಇಲಾಖೆ
ಕ್ರೇನ್ಗಳನ್ನು ನಿರ��ಮಾಣ ಸಾಮಗ್ರಿಗಳ ಸಾಗಿಸಲು ಮಾತ್ರವೇ ಬಳಸಿ. ಕ್ರೇನ್ಗಳಲ್ಲಿ ಕಾರ್ಮಿಕರು ನಿಂತು ಕಟ್ಟಡದ ಮೇಲು ಭಾಗಕ್ಕೆ ಹೋಗುವುದು ಹಾಗೂ ಕೆಳಕ್ಕೆ ಬರುವುದು ಅಪಾಯಕಾರಿ. ಈ ಬಗ್ಗೆ ಕಾರ್ಮಿಕರು ಗಮನ ಹರಿಸಿ.
#ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ
#KBOCWWB
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೆಲಸದ ವೇಳೆ ಅಪಘಾತ ಸಂಭವಿಸಿದಲ್ಲಿ ಮಂಡಳಿಯು ಅಪಘಾತ ಪರಿಹಾರವನ್ನು ನೀಡು���್ತದೆ. ಈ ಸೌಲಭ್ಯವನ್ನು ಪಡೆಯಲು ಫಲಾನುಭವಿಯು ಅಪಘಾತಕ್ಕೀಡಾದ ದಿನದಿಂದ ಒಂದು ವರ್ಷದ ಒಳಗೆ ಅರ್ಜಿ ಸಲ್ಲಿಸಬೇಕು.
#ಶ್ರಮೇವ_ಜಯತೇ
#KBOCWWB #ಕಾರ್ಮಿಕ_ಇಲಾಖೆ
ಕಟ್ಟಡ ಕಾರ್ಮಿಕರು ಧರಿಸಬೇಕಾದ ಪ್ರಮುಖ ಸುರಕ್ಷತಾ ಸಾಧನಗಳಲ್ಲಿ ಗ್ಲೌಸ್ ಪ್ರಮುಖವಾದುದು. ಆದರೆ ಈ ಗ್ಲೌಸ್ ಗುಣಮಟ್ಟದಿಂದ ಕೂಡಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಧರಿಸಬೇಕು. ಇಲ್ಲದೇ ಇದ್ದರೆ ಕೈನ ಚರ್ಮಕ್ಕೆ ಹಾನಿಯಾಗಬಹುದು. ಗ್ಲೌಸ್ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಅತೀ ಅವಶ್ಯ.
#ಶ್ರಮೇವ_ಜಯತೇ#ಕಾರ್ಮಿಕ_ಇಲಾಖೆ#KBOCWWB
ಕೊಠಡಿಗಳ ಕಿಟಕಿ, ಬಾಗಿಲುಗಳನ್ನು ಜೋಡಿಸುವಾಗ ಮತ್ತು ಮರದ ದಿಮ್ಮಿಗಳನ್ನು ಸಾಗಿಸಿ ಜೋಡಿಸುವಾಗ ಅಗತ್ಯ ಎಚ್ಚರಿಕೆಯನ್ನು ತಪ್ಪದೇ ವಹಿಸಿ. ಹರಿತವಾದ ಅಂಚುಗಳು ದೇಹಕ್ಕೆ ತಾಗಿದರೆ ಅಪಾಯವಾಗುತ್ತದೆ. ಇವುಗಳಲ್ಲಿ ತಯಾರಿಸಿವ ಯಂತ್ರಗಳನ್ನು ಬಳಸುವಾಗ ಮತ್ತು ಇಡುವಾಗ ಜಾಗ್ರತೆ ಇರಲಿ.
#ಶ್ರಮೇವ_ಜಯತೇ
#KBOCWWB#ಕಾರ್ಮಿಕ_ಇಲಾಖೆ
ಕಟ್ಟಡಗಳ ಮುಂಭಾಗದ ಚರಂಡಿ ಸ್ವಚ್ಛಗೊಳಿಸುವಾಗ ಮತ್��ು ಕಟ್ಟುವಾಗ ಅಗತ್ಯ ಎಚ್ಚರಿಕೆಯನ್ನು ವಹಿಸಬೇಕು. ವಾಹನಗಳ ಸಂಚಾರದ ಮೇಲೆ ಗಮನ ಇಡಬೇಕು. ಕೊಳಕು ಮಣ್ಣಿನ ಕೆಲಸ ಮಾಡುವಾಗ ಮರೆಯದೇ ಗ್ಲೌಸ್ ಮತ್ತು ಶೂಗಳನ್ನು ಧರಿಸಿ. ಚರ್ಮದ ಉರಿತ ಮತ್ತು ಇತರೆ ಸಮಸ್ಯೆ ಕಂಡು ಬಂದರೆ ಚಿಕಿತ್ಸೆ ಪಡೆದುಕೊಳ್ಳಿ.
#ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ
#KBOCWWB
ಬಸವನಗುಡಿಯ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸೇಫ್ಟಿ ಕಿಟ್ ಗಳನ್ನು ಮಾನ್ಯ ಶಾಸಕರಾದ ಶ್ರೀ @Ravi_LA ಅವರು ವಿತರಿಸಿದರು.
ಈ ವೇಳೆ ಕಾರ್ಮಿಕ ಇಲಾಖೆಯ ��ಧಿಕಾರಿಗಳು ಉಪಸ್ಥಿತರಿದ್ದರು.
#ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ
#KBOCWWB
ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಬೇಗೂರು ಗ್ರಾಮದಲ್ಲಿ ಮಂಡಳಿಯ ವತಿಯಿಂದ ನಿರ್ಮಿಸಲಾಗುವ ಶ್ರಮಿಕ ವಸತಿ ಶಾಲೆಗೆ ಮಾನ್ಯ ಶಾಸಕರಾದ ಶ್ರೀ @SharathSBG ಅವರು ಶಂಕುಸ್ಥಾಪನೆ ಮಾಡಿದರು. ಇದೇ ವೇಳೆ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಿಸಿದರು.
ಈ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
#ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ
#KBOCWWB
ಕಟ್ಟಡಗಳ ಸಂಪ್ ಅನ್ನು ಕಾಲಕಾಲಕ್ಕೆ ಸ್ಚಚ್ಛಗೊಳಿಸುವುದು ಅತೀ ಅವಶ್ಯ. ಸಂಪ್ ಸ್ವಚ್ಛಗೊಳಿಸುವಾಗ ಅಗತ್ಯ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿ. ಸಂಪ್ ನಲ್ಲಿನ ಎಲೆಕ್ಟ್ರಿಕ್ ವೈರ್ ಗಳ ಬಗ್ಗೆ ಗಮನವಿರಲಿ. ಸಂಪ್ ಸ್ವಚ್ಛತೆಗೆ ಬಳಸುವ ರಾಸಾಯನಿಕಗಳ ಕಡೆಗೂ ಗಮನವಿರಲಿ.
ನೋಂದಾಯಿತ ಕಟ್ಟಡ ಕಾರ್ಮಿಕರ ಮೊದಲ ಮದುವೆಗೆ ಮಂಡಳಿಯ���ಂದ ಸಹಾಯಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಕಾರ್ಮಿಕರು ಹೊಂದಿರಬೇಕು. ಮದುವೆಯ ದಿನಾಂಕದಿಂದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು.
#ಕಾರ್ಮಿಕ_ಇಲಾಖೆ #KBOCWWB
#ಶ್ರಮೇವ_ಜಯತೇ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಾನ್ಯ ಸಚಿವರಾದ @drmcsudhakar ಅವರು ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ಗಳನ್ನು ವಿತರಿಸಿದರು.
ಈ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
#ಶ್ರಮೇವ_ಜಯತೇ#ಕಾರ್ಮಿಕ_ಇಲಾಖೆ#KBOCWWB
ಪರೀಕ್ಷೆಯ ಒತ್ತಡ, ಕೌಟುಂಬಿಕ ಸಮಸ್ಯೆ, ಮಾದಕ ವಸ್ತುಗಳ ವ್ಯಸನದಂತಹ ಸಮಸ್ಯೆಗಳಿಗೆ ಒಳಗಾಗಿದ್ದಲ್ಲಿ ಟೆಲಿ ಮನಸ್ ಸಹಾಯವಾಣಿ 14416 ಅಥವಾ 1800-89-14416 ಕ್ಕೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು.
#ಶ್ರಮಮೇವ_ಜಯತೇ#KBOCWWB#ಕಾರ್ಮಿಕ_ಇಲಾಖೆ
ಮಳೆ ಬೀಳುವಾಗ ಆದಷ್ಟು ಗೋಡೆ ಕಟ್ಟುವ ಕೆಲಸವನ್ನು ತಪ್ಪಿಸಿ. ಇದರಿಂದ ಅಪಾಯ ಉಂಟಾಗುತ್ತದೆ. ಕೆಲಸ ಮಾಡುವಾಗ ತಪ್ಪದೆ ಸುರಕ್ಷತಾ ಪರಿಕರಗಳನ್ನು ಧರಿಸಿ. ಕೆಲಸದ ವೇಳೆ ಅವಘಡ ಸಂಭವಿಸಿದಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ.
#ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ#KBOCWWB
ಕಾರ್ಮಿಕರ ಕನಿಷ್ಠ ವೇತನವನ್ನು 60% ಏರಿಕೆ ಮಾಡಿ ನಮ್ಮ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ನಾಡಿನ ಶ್ರಮಿಕರ ಬಹು ವರ್ಷಗಳ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ.
ಈ ಅಧಿಸೂಚನೆಯು ರಾಜ್ಯದ ಅಸಂಘಟಿತ ವಲಯ ಹಾಗೂ ನಿರ್ದಿಷ್ಟ ವಲಯಗಳ ಕಾರ್ಮಿಕರಿಗೆ ಆರ್ಥಿಕ ಭದ್ರತೆ ಒದಗಿಸಲಿದೆ. ಕನಿಷ್ಠ ವೇತನ ನಿರ್ಧರಿಸುವಾಗ ಸುಪ್ರೀಂ ಕೋರ್ಟ್ ನ ಘನ ನ್ಯಾಯ ಪೀಠದ ನಿರ್ದೇಶನವನ್ನು ಪಾಲಿಸಿ, ಈ ಪರಿಷ್ಕರಣೆ ಮಾಡಲಾಗಿದೆ. ಅಲ್ಲದೇ, ಈ ಮೊದಲಿದ್ದ ನಾಲ್ಕು ವಲಯಗಳ ವರ್ಗೀಕರಣದ ಬದಲಾಗಿ ಇದೇ ಮೊದಲ ಬಾರಿಗೆ ಎಲ್ಲ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ. ಒಟ್ಟಿನಲ್ಲಿ ನಾಡಿನ 81 ಅನುಸೂಚಿತ ಉದ್ಯೋಗಗಳಲ್ಲಿ ದುಡಿಯುವ ಲಕ್ಷಾಂತರ ಶ್ರಮಿಕರ ಬಾಳಿಗೆ ಈ ಪರಿಷ್ಕೃತ ವೇತನ ಹೊಸ ಭರವಸೆ ತುಂಬಲಿದೆ.
ನಮ್ಮ ಕಾರ್ಮಿಕ ಇಲಾಖೆಯ ಇಂತಹ ದಿಟ್ಟ ನಿರ್ಧಾರಕ್ಕೆ ಸಲಹೆ ಸೂಚನೆಗಳನ್ನು ನೀಡಿ, ಪ್ರೋತ್ಸಾಹಿಸಿದ ಮಾನ್ಯ @CMofKarnataka ಶ್ರೀ @siddaramaiah ಅವರಿಗೆ, ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರಿಗೆ ಹಾಗೂ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ಅಮೂಲ್ಯ ಸಲಹೆಗಳನ್ನು ನೀಡಿದ ಎಲ್ಲ ತಜ್ಞರಿಗೆ ಸಮಸ್ತ ಶ್ರಮಿಕ ವರ್ಗದ ಪರವಾಗಿ ತುಂಬು ಹೃದಯದ ಧನ್ಯವಾದಗಳು.
#ಶ್ರಮೇವಜಯತೇ #MinimumWages #Karnataka #SantoshLad
ಮಂಡಳಿಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಕಾರ್ಮಿಕ ಸಂಘದ ಪ್ರತಿನಿಧಿಗಳಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರದಲ್ಲಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ರವಿ ಡಿ ಚನ್ನಣ್ಣವರ್ ಭಾ.ಪೊ. ಸೇ, ಮಂಡಳಿಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
#ಶ್ರಮೇವ_ಜಯತೇ#ಕಾರ್ಮಿಕ_ಇಲಾಖೆ#KBOCWWB
ಮಂಡಳಿಯ ವತಿಯಿಂದ ನೋಂದಾಯಿತ ಕಾರ್ಮಿಕರ ಅಂತ್ಯಕ್ರಿಯೆ ವೆಚ್ಚ ಹಾಗೂ ಅನುಗ್ರಹ ರಾಶಿ ಸಹಾಯಧನವನ್ನು ಅವರ ನಾಮನಿರ್ದೇಶಿತರಿಗೆ ನೀಡಲಾಗುವುದು. ಇದನ್ನು ಪಡೆಯಲು ಮಂಡಳಿ ಸೂಚಿಸಿರುವ ದಾಖಲೆಗಳನ್ನು ನೀಡಬೇಕಾದುದು ಅವಶ್ಯ.
#ಶ್ರಮೇವ_ಜಯತೇ#KBOCWWB#ಕಾರ್ಮಿಕ_ಇಲಾಖೆ
ಮಂಡಳಿಯ ವತಿಯಿಂದ ನೋಂದಾಯಿತ ಕಾರ್ಮಿಕ ಪಿಂಚಣಿದಾರರ ಪತಿ ಅಥವಾ ಪತ್ನಿಗೆ ಮಾಸಿಕ ಪಿಂಚಣಿ ನೀಡಲಾಗುತ್ತದೆ. ಅಗತ್ಯ ದಾಖಲೆಗಳೊಂದಿಗೆ ಸೂಕ್ತ ಸಮಯದಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು.
#KBOCWWB#ಶ್ರಮೇವ_ಜಯತೇ#ಕಾರ್ಮಿಕ_ಇಲಾಖೆ