ದಿ : 15.06.26 ರಂದು ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿದ್ದು. ಆ ಸ್ಥಳದಲ್ಲಿ ಯಾವುದೋ ಒಂದು ಕಾರು ಎರಡು ಆಡು ಗಳಿಗೆ ಡಿಕ್ಕಿ ಮಾಡಿ ಹೊರಟುಹೋಗಿದ್ದು, ಆ ಎರಡು ಆಡುಗಳು ಸ್ಥಳದಲ್ಲೇ ಸತ್ತುಹೋಗಿದ್ದು., ಕಾರಿನ no. ಸಿಕ್ಕಿದ್ದು ಮುಂದಿನ ಕ್ರಮ ಕೈಗೊಂಡಿರುತ್ತಾರೆ
ದಿ:15-06-2026 ರಂದು 112ಗೆ ಮಂಡ್ಯ ಪಿ. ಕೆ. ಕಾಲೋನಿಯಲ್ಲಿ ಜೂ ಜಾಡುತ್ತಿದ್ದರೆ ಎಂದು ಕರೆ ಬಂದ ಕೂಡಲೇ ಸ್ಥಳಕ್ಕೆ ಭೇಟಿ ಕೊಟ್ಟು ನೋಡಲಾಗಿ,,,, ಸ್ಥಳದಲ್ಲಿ ಯಾರು ಕಂಡು ಬಂದಿರುವುದಿಲ್ಲ ಎಂದು ತಿಳಿಸಿ ಗಸ್ತು ಮಾಡಿ ಬಂದಿರುತ್ತಾರೆ.
ದಿ:15-06-2026 ರಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ,,,,ಸ್ಥಳದಲ್ಲಿ ದೊರನಹಳ್ಳಿ ದೇವಸ್ಥಾನದ ಮುಂಭಾಗ ಆಟೋ ನಿಲ್ಲಿಸುವ ವಿಚಾರಕ್ಕೆ ಜಗಳ ಆಗಿದ್ದು,,,,, ಸೂಕ್ತ ತಿಳುವಳಿಕೆ ಹೇಳಿ ಬಂದಿರುತ್ತಾರೆ.
ದಿ:13-06-2026 ರಂದು ಮಂಡ್ಯ ಜಿಲ್ಲಾ ಅಕ್ಕಪಡೆ ಸಿಬ್ಬಂದಿಯವರು ಕೆ ಆರ್ ಪೇಟೆ ಟೌನ್ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ನಲ್ಲಿ ಸಾರ್ವಜನಿಕರಿಗೆ ಬಾಲ್ಯ ವಿವಾಹ ಕಾಯ್ದೆ, ಪೋಕ್ಸೋ ಕಾಯ್ದೆ, ಸೈಬರ್ ಕ್ರೈಂ, ಸರಗಳ್ಳತನ,ಭಿಕ್ಷಾಟನೆ & ಬಾಲ ಕಾರ್ಮಿಕ ಪದ್ಧತಿ ಹಾಗೂ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.
ದಿ:13-06-2026 ರಂದು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿ ಯಿಂದ ನಡೆದಾಡುವ ರಸ್ತೆ ವಿಚಾರಕ್ಕೆ ಗಲಾಟೆ ಎಂದು 112 ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ನಿಲ್ಲಿಸಿ ಸೂಕ್ತ ತಿಳುವಳಿಕೆ ಹೇಳಿರುತ್ತಾರೆ.
ದಿ:13-06-2026 ರಂದು ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಹುಲಗನಹಳ್ಳಿ ಗ್ರಾಮದಿಂದ ಜಾಗದ ವಿಚಾರಕ್ಕೆ ಗಲಾಟೆ ಎಂದು 112 ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ನಿಲ್ಲಿಸಿ ಸೂಕ್ತ ತಿಳುವಳಿಕೆ ಹೇಳಿರುತ್ತಾರೆ.
ದಿ:12-06-2026 ರಂದು ಮಂಡ್ಯ ಜಿಲ್ಲಾ ಅಕ್ಕಪಡೆ ಸಿಬ್ಬಂದಿಯವರು ಶ್ರೀರಂಗಪಟ್ಟಣ ಕೆಎಸ್ಆರ್ಟಿಸಿ ಬಸ್ ಸ್ಟಾಂಡ್ ನಲ್ಲಿ ಸಾರ್ವಜನಿಕರಿಗೆ ಬಾಲ್ಯ ವಿವಾಹ ಕಾಯ್ದೆ, ಪೋಕ್ಸೋ ಕಾಯ್ದೆ, ಸೈಬರ್ ಕ್ರೈಂ, ಸರಗಳ್ಳತನ,ಭಿಕ್ಷಾಟನೆ & ಬಾಲ ಕಾರ್ಮಿಕ ಪದ್ಧತಿ ಹಾಗೂ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.
ದಿ:12-06-2026 ರಂದು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ತೇನಹಳ್ಳಿ ಗ್ರಾಮದಿಂದ ಜಾಗದ ವಿಚಾರಕ್ಕೆ ಗಲಾಟೆ ಎಂದು 112 ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ನಿಲ್ಲಿಸಿ ಸೂಕ್ತ ತಿಳುವಳಿಕೆ ಹೇಳಿರುತ್ತಾರೆ.
ದಿ:12-06-2026 ರಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾತುಂಗೆರೆ ಗ್ರಾಮದಿಂದ ಸೈಟಿನ ವಿಚಾರಕ್ಕೆ ಗಲಾಟೆ ಎಂದು 112 ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ನಿಲ್ಲಿಸಿ ಸೂಕ್ತ ತಿಳುವಳಿಕೆ ಹೇಳಿರುತ್ತಾರೆ.
ದಿ:12-06-2026 ರಂದು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾತುಂಗೆರೆ ಗ್ರಾಮದಿಂದ ಸೈಟಿನ ವಿಚಾರಕ್ಕೆ ಗಲಾಟೆ ಎಂದು 112 ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ನಿಲ್ಲಿಸಿ ಸೂಕ್ತ ತಿಳುವಳಿಕೆ ಹೇಳಿರುತ್ತಾರೆ.
ದಿ:12-06-2026 ರಂದು ಬೆಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಾಗೋನಹಳ್ಳಿ ಗ್ರಾಮದಿಂದ ಗಂಡ ಮತ್ತು ಹೆಂಡತಿಯ ನಡುವೆ ಕೌಟುಂಬಿಕ ಗಲಾಟೆ ಎಂದು 112 ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಗಲಾಟೆ ನಿಲ್ಲಿಸಿ ಸೂಕ್ತ ತಿಳುವಳಿಕೆ ಹೇಳಿರುತ್ತಾರೆ.
ದಿ:11-06-2026 ರಂದು ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಲಿ ಸರ್ಕಲ್ ಹತ್ತಿರ ಹೋಟೆಲ್ ನಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿಕೊಳ್ಳುತ್ತಿರುವುದಾಗಿ 112 ಗೆ ಕರೆ ಬಂದ್ದಿದ್ದು ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ವಿಚಾರಿಸಿ ಅವರಿಗೆ ಠಾಣೆಗೆ ಹೋಗಲು ತಿಳಿಸಿರುತ್ತಾರೆ.
ದಿ:11-06-2026 ರಂದು ಮಂಡ್ಯ ರೂರಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾಮಕಹಳ್ಳಿ ಗ್ರಾಮದಿಂದ ಅಪರಿಚಿತ ವ್ಯಕ್ತಿ ಅನುಮಾನಾಸ್ಪದ ವಾಗಿ ರಾತ್ರಿ ವೇಳೆಯಲ್ಲಿ ಓಡಾಡಿಕೊಂಡಿರುವುದಾಗಿ 112 ಗೆ ಕರೆ ಬಂದ್ದಿದ್ದು ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ತಿಳುವಳಿಕೆ ನೀಡಿ ಅವನಿಗೆ ತನ್ನ ಸ್ಥಳವಾದ ರಾಯಚೂರಿಗೆ ಹೋಗಲು ತಿಳಿಸಿರುತ್ತಾರೆ
ದಿ:11-06-2026 ರಂದು ಮಂಡ್ಯ ಕಿಕ್ಕೇರಿ ಪೊಲೀಸ್ ಠಾಣ ವ್ಯಾಪ್ತಿಯ ಯಲದಹಳ್ಳಿ ಗ್ರಾಮದಲ್ಲಿ ಜಮೀನಿನ ವಿಚಾರವಾಗಿ ಸಹೋದರ ಸಂಬಂದಿಗಳು ಗಲಾಟೆ ಮಾಡಿಕೊಂಡಿದ್ದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಇಬ್ಬರಿಗೂ ಸೂಕ್ತ ತಿಳುವಳಿಕೆ ನೀಡಿ ಠಾಣೆಗೆ ಕಳುಹಿಸಿ ಕೊಟ್ಟಿರುತ್ತಾರೆ.
ದಿ:11-06-2026 ರಂದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣ ವ್ಯಾಪ್ತಿಯ ಚಿಕ್ಕ ಮಂಡ್ಯ ಗ್ರಾಮದಲ್ಲಿ ಹಣಕಾಸಿನ ವಿಚಾರವಾಗಿ ಕೌಟುಂಬಿಕ ಕಲಹ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸೂಕ್ತ ತಿಳುವಳಿಕೆ ನೀಡಿ ಠಾಣೆಗೆ ಕಳುಹಿಸಿ ಕೊಟ್ಟಿರುತ್ತಾರೆ.
ದಿ:10-06-2026 ರಂದು ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿನ ಪಂಪ್ ದುರಸ್ತಿಗೆ ಅನುಮತಿ ನೀಡದೆ ಅಡ್ಡಿಪಡಿಸುತ್ತಿದ್ದಾರೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಗೆ ಸೂಕ್ತ ತಿಳಿಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ.
ದಿ:10-06-2026 ರಂದು ಕ್ಯಾತನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಣಿವೆಕೊಪ್ಪಲು ಗ್ರಾಮದಲ್ಲಿ ಸಣ್ಣಪುಟ್ಟ ವಿಚಾರವಾಗಿ ನೆರೆಹೊರೆಯವರ ನಡುವೆ ಗಲಾಟೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ವಿಚಾರಿಸಿ ಸೂಕ್ತ ತಿಳುವಳಿಕೆ ನೀಡಿ ಅಗತ್ಯವಿದ್ದಲ್ಲಿ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿರುತ್ತಾರೆ.
ದಿ:10-06-2026 ರಂದು ಕಿಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿಪುರ ಗ್ರಾಮದಲ್ಲಿ ಜಮೀನಿನ ವಿಚಾರವಾಗಿ ಗಲಾಟೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ವಿಚಾರಿಸಿ ಎರಡು ಕಡೆಯವರಿಗೂ ಸೂಕ್ತ ತಿಳಿಹೇಳಿ ಸಂಬಂಧಪಟ್ಟ ಇಲಾಖೆಯಲ್ಲಿ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿರುತ್ತಾರೆ.
ದಿ:10-06-2026 ರಂದು ಕೆ.ಆರ್ ಪೇಟೆ ಟೌನ್ ಪೊಲೀಸ್ ಠಾಣ ವ್ಯಾಪ್ತಿಯ ಕರ್ತೇನಹಳ್ಳಿ ಗ್ರಾಮದಲ್ಲಿ ಎದುರು ಮನೆಯವರು ವಿನಾಕಾರಣ ತಮ್ಮೊಡನೆ ಜಗಳ ಮಾಡುತ್ತಿದ್ದಾರೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ವಿಚಾರಿಸಿ ಸೂಕ್ತ ತಿಳುವಳಿಕೆ ನೀಡಿ ಅಗತ್ಯವಿದ್ದಲ್ಲಿ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿರುತ್ತಾರೆ.
ದಿ:09-06-2026 ರಂದು ಮದ್ದೂರು ಪೊಲೀಸ್ ಠಾಣ ವ್ಯಾಪ್ತಿಯ ಐಶ್ವರ್ಯ ಕಾನ್ವೆಂಟ್ ಬಳಿ ಬೈಕ್ ಅಪಘಾತವಾಗಿದೆ ಎಂದು 112ಗೆ ಕರೆ ಬಂದ ಕೂಡಲೇ ERV ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಗಾಯಾಳುವನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಿ ಮುಂದಿನ ಕ್ರಮಕ್ಕೆ ಠಾಣೆಗೆ ಮಾಹಿತಿ ತಿಳಿಸಿರುತ್ತಾರೆ.