ಲಕ್ಷಾಂತರ ಯುವ ಜನರ ಭವಿಷ್ಯದೊಂದಿಗೆ ಆಟವಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! 'ಧಾರವಾಡ ಚಲೋ’ ಮೂಲಕ ವಿದ್ಯಾರ್ಥಿಗಳ ನಡೆಸುತ್ತಿರುವ ನ್ಯಾಯಯುತ ಬೃಹತ್ ಪ್ರತಿಭಟನೆಯ ಹಿಂದಿನ ತಮ್ಮ ವೈಫಲ್ಯ, ಯುವಜನರ ನೋವು, ಹತಾಶೆಗಳನ್ನು ಗಮನಿಸದೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಬಲ ಪ್ರಯೋಗದಿಂದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ. ಕಷ್ಟಪಟ್ಟು ವ್ಯಾಸಂಗ ಮಾಡಿ ಉದ್ಯೋಗಕ್ಕಾಗಿ ಒತ್ತಾಯಿಸುತ್ತಿರುವ ನಮ್ಮ ಯುವಜನರ ನ್ಯಾಯಯುತ ಧ್ವನಿಯನ್ನು ಹತ್ತಿಕ್ಕಲು ಪೊಲೀಸ್ ಬಲವನ್ನು ಉಪಯೋಗಿಸಿರುವುದು ಹೇಯ ಕೃತ್ಯ.
ಜನಪರ ದಾಯಿತ್ವವನ್ನು ಸಂಪೂರ್ಣ ಮರೆತು, ಕುರ್ಚಿ ಕಿತ್ತಾಟದಲ್ಲಿ ಮುಳುಗಿರುವ ಈ ಬೇಜವಾಬ್ದಾರಿ ರಾಜ್ಯ ಸರ್ಕಾರ, ನಮ್ಮ ಯುವಕ-ಯುವತಿಯರ ಭವಿಷ್ಯವನ್ನು ಹಗುರವಾಗಿ ಪರಿಗಣಿಸಿದೆ. ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ನವರೇ, ಮೊದಲು ಬಂಧಿತರಾಗಿರುವ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳನ್ನು ಬಿಡುಗಡೆ ಮಾಡಿ, ಈ ಕೂಡಲೇ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಎಂದು ಒತ್ತಾಯಪೂರ್ವಕವಾಗಿ ಆಗ್ರಹಿಸುತ್ತಿದ್ದೇನೆ! ಇನ್ನು ವಿಳಂಬ ಮಾಡದೆ ರಾಜ್ಯ ಸರ್ಕಾರ, ಪರೀಕ್ಷಾರ್ಥಿಗಳ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನೇಮಕಾತಿಗೆ ಆದೇಶ ನೀಡಬೇಕು.
#CongressFailsKarnataka
ರಾಜ್ಯದ ಯುವಕರ ಆಕ್ರೋಶ ಭ್ರಷ್ಟ @INCKarnataka ಸರ್ಕಾರದ ವಿರುದ್ಧ ಹೊತ್ತಿ ಉರಿಯುತ್ತಿದೆ.
ಖಾಲಿ ಹುದ್ದೆಗಳ ಭರ್ತಿ ಮಾಡದ ಲೂಟಿಕೋರ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು, ಯುವಕರು ಧಾರವಾಡದಲ್ಲಿ ಬೀದಿಗೆ ಇಳಿದಿದ್ದಾರೆ.
ಸಿದ್ದರಾಮಯ್ಯನವರೇ, ಪ್ರತಿಭಟನೆ ಜ್ವಾಲೆಯ ಸ್ವರೂಪ ಪಡೆದುಕೊಳ್ಳುವುದರ ಒಳಗೆ ಬೇಡಿಕೆ ಈಡೇರಿಸಿ ಇಲ್ಲವೇ ಜಾಗ ಖಾಲಿ ಮಾಡಿ
#CongressFailsKarnataka
ಕನ್ನಡ ಸಾಹಿತ್ಯಕ್ಕೆ ವಿಶ್ವಮಾನ್ಯತೆ ತಂದು ಕೊಡುವ ಮೂಲಕ ರಾಷ್ಟ್ರ ಹಿತಾಸಕ್ತಿಯ ವಿಚಾರಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ನಾಡಿನ ಮಹಾನ್ ಚೇತನ, ಸರಸ್ವತಿ ಸಮ್ಮಾನ್ ಹಾಗೂ ಪದ್ಮ ಪ್ರಶಸ್ತಿ ಪುರಸ್ಕೃತ ಡಾ.ಎಸ್. ಎಲ್. ಭೈರಪ್ಪ ಅವರ ನಿಧನದ ಸುದ್ದಿ ತಿಳಿದು ಆಘಾತವಾಯಿತು.
ತಮ್ಮ ಸಾಹಿತ್ಯದ ಮೂಲಕ ಸಾಮಾನ್ಯ ಓದುಗರನ್ನೂ ಆಕರ್ಷಿಸುವ ಕಾದಂಬರಿಗಳನ್ನು ರಚಿಸಿ ಅಸಂಖ್ಯಾತ ಓದುಗರನ್ನು ಹೊಂದಿದ್ದ, ಹಲವು ಭಾಷೆಗಳಿಗೆ ಅನುವಾದಗೊಂಡು ಜಗತ್ತಿನಾದ್ಯಂತ ಸಾಹಿತ್ಯಾಭಿಮಾನಿಗಳನ್ನು ಹೊಂದಿದ್ದ ಕರುನಾಡಿನ ಹೆಮ್ಮೆ ಎಸ್.ಎಲ್.ಭೈರಪ್ಪನವರು ಈ ನೆಲದ ಸೊಬಗು ಹಾಗೂ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಿ ಕನ್ನಡಿಗರ ಹೆಗ್ಗಳಿಕೆಯಾಗಿದ್ದರು.
ಸಾಮಾಜಿಕ ಬದಲಾವಣೆ ಹಾಗೂ ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಹಾಗೂ ಅಸ್ತಿತ್ವ ಉಳಿಸುವ ಬದ್ಧತೆಯನ್ನು ತಮ್ಮ ಸಂಶೋಧನಾತ್ಮಕ ಕಾದಂಬರಿಗಳ ಮೂಲಕ ಸಾಕ್ಷೀಕರಿಸಿದ್ದರು. ಸಾಹಿತ್ಯಲೋಕದಲ್ಲಿ ಭೈರಪ್ಪನವರಿಗೆ ಭೈರಪ್ಪನವರೇ ಸಾಟಿಯಾಗಿ ನಿಲ್ಲಬಲ್ಲ ವ್ಯಕ್ತಿತ್ವ ಹಾಗೂ ಪ್ರತಿಭೆ ಅವರದ್ದಾಗಿತ್ತು. ರಾಷ್ಟ್ರೀಯ ಚಿಂತನೆ ಅವರ ಆದ್ಯತೆಯಾಗಿದ್ದರೆ, ಕನ್ನಡ ನಾಡು, ನುಡಿ, ಜನರ ಪರವಾದ ಚಿಂತನೆ ಅವರ ಬದ್ಧತೆಯಾಗಿತ್ತು.
ಕನ್ನಡ ಸಾಹಿತ್ಯ ಲೋಕದ ಅತ್ಯಂತ ಸೃಜನಶೀಲ ಕಾದಂಬರಿಕಾರರಾಗಿ ಪದ್ಮಭೂಷಣ ಗೌರವಕ್ಕೂ ಪಾತ್ರರಾಗಿದ್ದ ಮಾನ್ಯ ಎಸ್.ಎಲ್.ಭೈರಪ್ಪ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಅವರ ಅಗಲಿಕೆಯ ನೋವಿನಲ್ಲಿರುವ ಅವರ ಕುಟುಂಬ ವರ್ಗ ಹಾಗೂ ಕೋಟ್ಯಂತರ ಕನ್ನಡ ಸಾಹಿತ್ಯಾಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.
ಓಂ ಶಾಂತಿಃ 🙏
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿಸಿಕೊಂಡಿರುವ ಸಾವಿರಾರು ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಾಗವಹಿಸಿ ಅಹವಾಲು ಸ್ವೀಕರಿಸಿದ ಸಂದರ್ಭ.
#CongressFailsKarnataka
ಕೂಡಲೇ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಿ ಎಂದು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯು ದಿನಾಂಕ 11.08.2025 ರಂದು ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಲ್ಲರೂ ಭಾಗವಹಿಸಿ ಬದಲಾವಣೆ ನಿಮ್ಮಿಂದ 🙏🙏@AKSSAofficial
ದಾರವಾಡದ ಶ್ರೀನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಓದಲು ಬಂದ ಗಂಗಾಧರ ಕರಿಗೌಡರ (ಇಂಜಿನಿಯರ್ ಪದವಿದರ ವಿದ್ಯಾರ್ಥಿ ವಯಸ್ಸು ಸುಮಾರು 32) ಎಂಬ ವಿದ್ಯಾರ್ಥಿ ಒಬ್ಬ ಹಠಾತ್ತನೆ ಮರಣ ಹೊಂದಿದು ನಿಜಕ್ಕೂ ದುರದೃಷ್ಟಕರ,
ಮೆಲ್ನೊಟಕ್ಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಕಂಡು ಬಂದಿದೆ. ಅವರ ಸಂಬಂಧಿಕರು ಹೆಳುವ ಪ್ರಕಾರ 5 ವರ್ಷದಿಂದ ಮನೆಯ ಯಾವುದೇ ಕಾರ್ಯಕ್ರಮಗಳಿಗೆ ಹೊಗದೆ ಅಧ್ಯಯನದಲ್ಲಿ ನಿರಂತರವಾಗಿದ, ಆದರೆ ಇತ್ತಿಚಿನ ದಿನಗಳಲ್ಲಿ ಯಾವುದೇ ನೊಟಿಪಿಕೇಶನ್ ಆಗದೆ ಇರುವುದರಿಂದ ವಿದ್ಯಾರ್ಥಿಗಳಲ್ಲಿ ಮನೊಸ್ಥೈರ್ಯ ಕುಸಿತವಾಗುತ್ತಿರುವುದು ನಿಜಕ್ಕೂ ವಿಪರ್ಯಾಸ, ಸರ್ಕಾರ ವಿದ್ಯಾರ್ಥಿಗಳ ಈ ಕಷ್ಟಕರ ವಿಷಯವನ್ನು ಅರ್ಥ ಮಾಡಿಕೊಳ್ಳದೆ ಒಳಮಿಸಲಾತಿ ವಿಷಯ ಇಟ್ಟುಕೊಂಡು ನೊಟಿಪಿಕೇಶನ್ ಮುಂದುಡುತ್ತಾ ಹೊಗುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ... ಸರ್ಕಾರದ ಈ ದುರ್ವರ್ತನೆ ಹೀಗೆ ಮುಂದುವರೆದರೆ ಮುಂದೊಂದಿನ ವಿದ್ಯಾರ್ಥಿ ಕ್ರಾಂತಿ ಮಾಡುವುದು ಅನಿವಾರ್ಯವಾಗುತ್ತದೆ... ಪ್ರತಿಯೊಬ್ಬರು ಸರ್ಕಾರ ಸ್ಪರ್ಧಾತಿಗಳ ಬಗ್ಗೆ ತೊರುತ್ತಿರುವ ಈ ನಿರ್ಲಕ್ಷ್ಯ ಬಗ್ಗೆ ಜಾಗೃತವಹಿಸಿ ಒಗ್ಗೂಡಿ ಹೊರಾಡಬೇಕು ಇಲ್ಲದಿದ್ದರೆ ಅದೆಷ್ಟು ವಿದ್ಯಾರ್ಥಿಗಳ ಮನೊಸ್ಥೈರ್ಯ ಕುಸಿದು ಜೀವಗಳು ಸಾವಿಗೆ ಬಲಿಯಾಗುತ್ತೆ ಗೊತ್ತಿಲ್ಲ....@siddaramaiah@kharge@RahulGandhi@PriyankKharge
What a stellar end to a stellar campaign by @RCBTweets! It took us 18 years to reach here, but we made it and that’s what truly matters.
This win is personal for every fan who stood by RCB through the ups and downs, who believed, cheered, and never gave up.
Here’s to the spirit of #PlayBold and the RCB family this is just the beginning!
#RCBForever #EeSalaCupNamdu
ಐಪಿಎಲ್ 2025 ಪ್ರಶಸ್ತಿ ಗೆದ್ದ ಬೆಂಗಳೂರಿನ ಆರ್.ಸಿ.ಬಿ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಅಂತೂ ಈ ಸಲ ಕಪ್ ನಮ್ಮದಾಯಿತು. ಸರಣಿ ಆರಂಭಗೊಂಡ 18 ವರ್ಷಗಳ ನಂತರ ಪ್ರಶಸ್ತಿ ಗೆದ್ದ ಬೆಂಗಳೂರಿನ ತಂಡದ ಸತತ ಪ್ರಯತ್ನ, ದೃಢನಿಶ್ಚಯ ಮತ್ತು ಅಭಿಮಾನಿಗಳ ಅಸದೃಶ ಬೆಂಬಲಗಳನ್ನು ಸಂಭ್ರಮಿಸುವ ಅರ್ಹ ಗೆಲುವು ಇದಾಗಿದೆ. ಮುಂದೆಯೂ ತಂಡ ಉತ್ತಮ ಪ್ರಯತ್ನ ಮುಂದುವರಿಸಲಿ ಎಂದು ಹಾರೈಸುತ್ತೇನೆ.
A proud moment for all #RCB fans. Congratulations to @RCBTweets on winning IPL 2025.
The @BJP4India top brass is invoking the Yediyurappa factor in #Karnataka again. The disciplinary action against @BSYBJP family baiters is an acknowledgment of the past misstep of sidelining regional stalwart. @BYVijayendra
https://t.co/mOI2WW01gB
"KPSCಯ ಮತ್ತೊಂದು ಮಹಾಲೋಪ ಬಯಲು"
ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕಿದ್ದ KPSCಯು @INCKarnataka ಸರ್ಕಾರದ ದುರಾಡಳಿತದಲ್ಲಿ ಲೋಪದೋಷಗಳು ಹಾಗೂ ಅವ್ಯವಸ್ಥೆಯ ಭ್ರಷ್ಟಕೂಪವಾಗಿ ಮಾರ್ಪಟ್ಟಿರುವುದು ಬಯಲಾಗಿದೆ. KPSC ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ. ಇದೀಗ ಮತ್ತೊಂದು ಪ್ರಮಾದವೆಸಗಿ ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಜತೆ ಚೆಲ್ಲಾಟವಾಡಿ ಸಾರ್ವಜನಿಕ ವಲಯದಲ್ಲೂ ಆಕ್ರೋಶಕ್ಕೆ ಗುರಿಯಾಗಿದೆ.
ಸೋಮವಾರ ನಡೆದ ಪರೀಕ್ಷೆಯಲ್ಲಿ ಬೆಂಗಳೂರಿನ ಕೇಂದ್ರವೊಂದರಲ್ಲಿ ಸೀಲ್ ತೆರೆದಿದ್ದ ಪ್ರಶ್ನೆಪತ್ರಿಕೆಯ ಬಂಡಲ್ ಪತ್ತೆಯಾಗಿದ್ದು, ಇದನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರೂ ಸಹ ಒಪ್ಪಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಅನುಮಾನ ಹುಟ್ಟುಹಾಕಿದೆ. ಕರ್ನಾಟಕ ಲೋಕಸೇವಾ ಆಯೋಗವು ಪದೇ ಪದೇ ಎಡವಟ್ಟುಗಳು, ಗೊಂದಲಗಳನ್ನು ಸೃಷ್ಟಿಸಿ ದೇಶದೆದುರು ಕರ್ನಾಟಕದ ಘನತೆ ಕುಗ್ಗಿಸುವ ಕೆಲಸ ಮಾಡುತ್ತಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದು ದುರಂತದ ದೌರ್ಭಾಗ್ಯವೇ ಸರಿ.
ಈ ಕೂಡಲೇ ಪರೀಕ್ಷಾ ಕೊಠಡಿಗೆ ಪ್ರಶ್ನೆಪತ್ರಿಕೆಗಳು ಬರುವ ಮುನ್ನವೇ ಬಂಡಲ್ ತೆರೆದಿರುವ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ಕೆಪಿಎಸ್ಸಿ ಪರೀಕ್ಷಾ ಅಭ್ಯರ್ಥಿಗಳಿಗಾಗುತ್ತಿರುವ ಬಹುದೊಡ್ಡ ಅನ್ಯಾಯ, ದ್ರೋಹಗಳನ್ನು ಸರಿಪಡಿಸದಿದ್ದರೆ ಲಕ್ಷಾಂತರ ವಿದ್ಯಾರ್ಥಿಗಳ ಆಕ್ರೋಶಕ್ಕೆ ಭ್ರಷ್ಟ ಕಾಂಗ್ರೆಸ್ ಸರ್ಕಾರ ಬೆಲೆ ತೆರಬೇಕಾದೀತು ಎಂದು ಎಚ್ಚರಿಸುತ್ತಿದ್ದೇನೆ.
#KPSCMosa
#CongressFailsKarnataka
ಒಂದು ನೇಮಕಾತಿ ಪರೀಕ್ಷೆಯನ್ನ ನೆಟ್ಟಗೆ ನಡೆಸಲು 'ಕೈ'ಲಾಗದಿರುವ ಈ ನಾಲಾಯಕ್ @INCKarnataka ಸರ್ಕಾರ ಇದ್ದರೆಷ್ಟು ಸತ್ತರೆಷ್ಟು?
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ.
ಈಗ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆ ಎರಡು ದಿನಗಳ ಮುಂಚೆಯೇ ಸೋರಿಕೆ ಆಗಿತ್ತು ಎನ್ನುವ ಸುದ್ದಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಮರ್ಮಾಘಾತ ನೀಡಿದೆ.
ಸಿಎಂ @siddaramaiah ನವರೇ, ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನ ನೆಟ್ಟಗೆ ನಡೆಸಲಾಗದ ತಾವು ಯಾವ ಸೀಮೆ ಮುಖ್ಯಮಂತ್ರಿ ಸ್ವಾಮಿ? ತಮ್ಮ ಕೈಯಲ್ಲಿ ಆಡಳಿತ ನಡೆಸುವುದು ಸಾಧ್ಯವಿಲ್ಲ ಎನ್ನುವುದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಈ ರೀತಿ ಪದೇ ಪದೇ ಯಾಕೆ ತೊಂದರೆ ಕೊಡುತ್ತೀರಿ?
ಭ್ರಷ್ಟ @INCKarnataka ಸರ್ಕಾರದ ಯೋಗ್ಯತೆಗೆ ಒಂದು ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗದಿರುವುದು ರಾಜ್ಯದ ದುರಂತ.
#KAS ಪರೀಕ್ಷೆ ವೇಳೆಯೂ ಅಕ್ರಮ ನಡೆದಿರುವುದು @siddaramaiah ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ.
ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಬಂಡಲ್ಗಳು ಓಪನ್ ಆಗಿದೆ ಎಂದು ಆರೋಪಿಸಿ #KPSC ವಿರುದ್ಧ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಕೂಡ ಪರೀಕ್ಷೆ ವೇಳೆ ಕನ್ನಡಕ್ಕೆ ಭಾಷಾಂತರ ವೇಳೆ 3 ಬಾರಿ ಎಡವಟ್ಟು ಮಾಡಿದ್ದ ಕೆಪಿಎಸ್ಸಿ, ಇಂದು ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.
ವಚನ ಭ್ರಷ್ಟ ಸಿದ್ದರಾಮಯ್ಯ ಸರ್ಕಾರದ ಬೇಜವಾಬ್ದಾರಿಯಿಂದ ಉದ್ಯೋಗದ ಕನಸು ಕಂಡಿದ್ದ ಸಾವಿರಾರು ಅಭ್ಯರ್ಥಿಗಳ ಭವಿಷ್ಯವೇ ಡೋಲಾಯಮಾನವಾಗಿದೆ.
#KPSCMosa
#KAS
@siddaramaiah ನಿಮ್ಮಂಥ ಮುಖ್ಯಮಂತ್ರಿ ಯಾವತ್ತು ಈ ರಾಜ್ಯ ಕಾಣದಿರಲ್ಲಿ ನಾಯಕನಾಗುವ ಯಾವ ಗುಣಗಳು ನಿಮ್ಮಲ್ಲಿ ಇಲ್ಲ ನಾಡ ಭ್ರಷ್ಟರು ಎಂದರೆ ಅದು ನಮ್ಮ @CMofKarnataka ನೀವು ಮುಖ್ಯಮಂತ್ರಿ ಆಗೋ ಬದಲು #kpsc ಮತ್ತುನಿಮ್ಮಸುತ್ತ ಮುತ್ತ ಇರೋ ಸಂಗಡಿಗರ ಮಾತು ಕೇಳುವ ಸೇವಕ ಆಗೋದು ಒಳ್ಳೇದು ಅದೇ ನೀವು ಮಾಡ್ತೀರೋದು ಆದಷ್ಟುಬೇಗ ಮನೆಗೆ ಹೋಗ್ತೀರ
ಎತ್ತ ಸಾಗುತ್ತಿದೆ ಕರ್ನಾಟಕ, ತಾಲಿಬಾನ್ ಆಡಳಿತ ಕೂಡಾ ಇಷ್ಟು ಕೆಟ್ಟು ಹೋಗಿಲ್ಲ!!!
ಅಪರಾತ್ರಿ, ಸುರಿಯುತ್ತಿರುವ ಮಳೆ, ವಿಪರೀತ ಚಳಿ, ಹಸಿದ ಹೊಟ್ಟೆ, ಒಬ್ಬಾಕೆಯ ಕಂಕುಳಲ್ಲಿ ಪುಟ್ಟ ಕಂದಮ್ಮ, ಕೈಯಲ್ಲಿ ಶೈಕ್ಷಣಿಕ ದಾಖಲೆಗಳು.... ಈ ದೃಶ್ಯಗಳು ಊರಿಗೆ ಹೊರಟವರೋ, ಪ್ರವಾಸಕ್ಕೆ ಹೊರಟವರು ಎದುರಿಸುತ್ತಿರುವ ಸನ್ನಿವೇಶಗಳಲ್ಲ, ಇದೆಲ್ಲವೂ ಭಾವೀ ಸರ್ಕಾರಿ ಅಧಿಕಾರಿಗಳಾಗಬೇಕಿರುವ ಅಭ್ಯರ್ಥಿಗಳು ನಾಲಾಯಕ್ @INCKarnataka ಸರ್ಕಾರದಿಂದ ಎದುರಿಸುತ್ತಿರುವ ಸಮಸ್ಯಗಳು.
ಕೆಪಿಎಸ್ಸಿ ಕರ್ಮಕಾಂಡಗಳಿಗೆ ನ್ಯಾಯಾಲಯದಿಂದ ಉಗಿಸಿಕೊಂಡಿದ್ದ ಸರ್ಕಾರ, ಅಂತಿಮವಾಗಿ ಮೇ 3 ರಂದು ಪರೀಕ್ಷೆ ನಡೆಸುವುದಾಗಿ ಒಪ್ಪಿಕೊಂಡಿತ್ತು. ಆದರೆ ಪರೀಕ್ಷೆಯ ಹಿಂದಿನ ದಿನ ಮಧ್ಯರಾತ್ರಿ 12 ಗಂಟೆಗೆ ಹಾಲ್ ಟಿಕೆಟ್ ನೀಡುತ್ತೇವೆ ಎನ್ನುವ ಮೂಲಕ ಅಭ್ಯರ್ಥಿಗಳನ್ನು ಅತಂತ್ರರನ್ನಾಗಿಸಿದೆ. ನಡುರಾತ್ರಿ ಅರ್ಜಿ ಸಲ್ಲಿಸಿ, ಹಾಲ್ ಟಿಕೆಟ್ ಪಡೆದು ಮರುದಿನ ಪರೀಕ್ಷೆಗೆ ಹಾಜರಾಗಬೇಕು ಎಂದರೆ ಹೇಗೆ ಸಾಧ್ಯ?
⁉️ ದೂರದ ಊರುಗಳ ಅಭ್ಯರ್ಥಿಗಳು ಏನು ಮಾಡಬೇಕು?
⁉️ 12 ಗಂಟೆ ರಾತ್ರಿಗೆ ಹೆಣ್ಣು ಮಕ್ಕಳು, ಮಹಿಳೆಯರು ಬರಲು ಸಾಧ್ಯವೇ?
⁉️ ನಡುರಾತ್ರಿ ಬರುವ ಹೆಣ್ಣು ಮಕ್ಕಳಿಗೆ ಸರ್ಕಾರ ಎಸ್ಕಾರ್ಟ್ ವ್ಯವಸ್ಥೆ ಮಾಡುತ್ತದೆಯೇ?
ಹೀಗೆ ಪ್ರಶ್ನೆಗಳ ಸುರಿಮಳೆಗಳನ್ನು ಅಭ್ಯರ್ಥಿಯೋರ್ವರು ಸಿಎಂ @siddaramaiah ಅವರ ಮುಖಕ್ಕೆ ಎಸೆದಿದ್ದಾರೆ, ಏನು ಉತ್ತರ ಹೇಳುತ್ತಾರೆ ತುಘಲಕ್ ದರ್ಬಾರಿನ ರಾಯಭಾರಿಗಳು?
ನೆಟ್ಟಗೆ ಒಂದು ಪರೀಕ್ಷೆ ನಡೆಸಲು ಕೈಲಾಗದವರಿಗೆ ಆಡಳಿತ ನಡೆಸಲು ಯಾವ ಅರ್ಹತೆಯಿದೆ?
#KPSCMosa #WakeUpKarnataka #CongressFailsKarnataka
"ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಯಾರಿಗೂ ನೆಮ್ಮದಿಯಿಲ್ಲ"
KPSC ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದರು, ಮಧ್ಯರಾತ್ರಿ ಅರ್ಜಿ ತುಂಬಿ ಪ್ರವೇಶಾತಿ (ಹಾಲ್ ಟಿಕೆಟ್) ಪಡೆಯುವಂತೆ ಗೊಂದಲ ಸೃಷ್ಟಿಸಿರುವ KPSC ಕಾರ್ಯವೈಖರಿ ಪರೀಕ್ಷಾರ್ಥಿಗಳಿಗೆ ಅನಗತ್ಯ ಕಿರುಕುಳ ನೀಡುವ ದುರುದ್ದೇಶ ಪ್ರತಿಬಿಂಬಿಸಿದೆ. ಉದ್ಯೋಗಾಂಕ್ಷಿ ಅಭ್ಯರ್ಥಿಗಳ ಭವಿಷ್ಯದ ಜೊತೆ KPSC ಚೆಲ್ಲಾಟವಾಡುತ್ತಿದ್ದರೆ ರಾಜ್ಯ ಸರ್ಕಾರ ಕಣ್ಣುಮುಚ್ಚಿಕೊಂಡು ನೋಡುತ್ತಿದೆ.
ಮೇ 2ರ ಮಧ್ಯರಾತ್ರಿ 12 ಗಂಟೆಯವರೆಗೆ KPSC ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮಧ್ಯರಾತ್ರಿ ಹಾಲ್ ಟಿಕೆಟ್ ಪಡೆದು ಹೋಗಿ ಮರುದಿನ ಬೆಳಗ್ಗೆಯೇ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯುವಂತೆ ಮಾಡಿರುವ ಗೊಂದಲದ ವ್ಯವಸ್ಥೆಯಿಂದ ಹಿಂಸೆ ಅನುಭವಿಸುತ್ತಿರುವ ಪರೀಕ್ಷಾರ್ಥಿಗಳು ಹಾಗೂ ಅವರ ಕುಟುಂಬದವರ ಶಾಪ ರಾಜ್ಯ ಸರ್ಕಾರಕ್ಕೆ ತಟ್ಟದೇ ಬಿಡದು.
ವಿಧಾನಸಭಾ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಮಾತು ಕೊಟ್ಟು, ಪರೀಕ್ಷಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. @BJP4Karnataka ನೊಂದವರ ದನಿಯಾಗಿ ನಿಲ್ಲಲಿದೆ.
#KPSCMosa #WakeUpKarnataka #CongressFailsKarnataka
ಕೆಪಿಎಸ್ಸಿ ಅನ್ಯಾಯದ ವಿರುದ್ಧ ಕೋರ್ಟ್ ಮೆಟ್ಟಲೇರಿದ್ದ ಅಭ್ಯರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕಾಂಗ್ರೆಸ್ ಸರ್ಕಾರ!
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿ, ಮೇ 3ರಿಂದ ಅಂದರೆ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ಅನುಮತಿ ಪಡೆದಿದ್ದರೆ, ಅವರಿಗೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ @INCKarnataka ಸರ್ಕಾರ.
ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಅರ್ಜಿ ತುಂಬಲು ಯಾವ ದಾಖಲಾತಿಗಳು ಬೇಕೆ ಎನ್ನುವ ಗೊಂದಲ, ಹತ್ತಿರದಲ್ಲಿ ಒಂದು ಜೆರಾಕ್ಸ್ ಅಂಗಡಿ ಇಲ್ಲ, ಕುಡಿಯೋಕೆ ನೀರಿಲ್ಲ, ಕಾಫಿ ತಿಂಡಿಗೆ ಒಂದು ಹೋಟೆಲ್ ಇಲ್ಲ, ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ, ಹಸುಗೂಸುಗಳಿಗೆ ಹಾಲುಣಿಸೋಕೆ ಜಾಗ ಇಲ್ಲ, ಮಧ್ಯರಾತ್ರಿ ಆದರೂ ಹಾಲ್ ಟಿಕೆಟ್ ಕೈಗೆ ಸಿಕ್ಕಿಲ್ಲ, ಬೆಳಗಾದರೆ ಪರೀಕ್ಷೆ, ಇಂತಹ ಅವಾಂತರದ ನಡುವೆ ಪಾಪ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ?
ಸಿಎಂ @siddaramaiah ನವರೇ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅಂದರೆ ತಮಗೆ ಯಾಕಿಷ್ಟು ದ್ವೇಷ? ಯಾಕಿಷ್ಟು ಅಸಡ್ಡೆ? ಬಡವರು ಮಕ್ಕಳು ಮುಂದೆ ಬರಬಾರದ?
ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬೇರೆ ದಾರಿ ಇಲ್ಲದೆ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಆದೇಶ ತಂದರೆ ಹಾಲ್ ಟಿಕೆಟ್ ಕೊಡಲು
ಸತಾಯಿಸಿ ನೆಮ್ಮದಿಯಾಗಿ ಪರೀಕ್ಷೆ ಬರೆಯಲೂ ತೊಂದರೆ ಮಾಡಿದ್ದೀರಿ.
ನೂರಾರು ಕನಸುಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ವರ್ಷಗಟ್ಟಲೆ ತಯಾರಿ ನಡೆಸಿದ ಅಭ್ಯರ್ಥಿಗಳ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರದು.
#KPSCMosa
#ಕೆಪಿಎಸ್ಸಿ_ಮೋಸ
ಇಂದು ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರಿಗೆ TEAM AKSARA ವತಿಯಿಂದ ಮೇಲ್ಕಂಡ ಮನವಿ ಪತ್ರವನ್ನು ನೀಡಲಾಯಿತು, ಅಧ್ಯಕ್ಷರು ಎಲ್ಲಾ ಸದಸ್ಯರ ಜೊತೆ ಸಭೆ ನಡೆಸಿ ಮುಂದಿನ ನಡೆ ತಿಳಿಸುತ್ತೇವೆ ಎಂದು ನಮಗೆ ತಿಳಿಸಿದರು. ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸಿ ಮಾನ್ಯ @secretarykpsc@CMofKarnataka@siddaramaiah