16/06/2021 22:30ಗಂಟೆಗೆ ಆದಿಉಡುಪಿ ಬಳಿ ವ್ಯೆಕ್ತಿಯೊಬ್ಬನಿಗೆ ತೀವೃ ರಕ್ತ ಸ್ರಾವವಾಗುತ್ತಿರುವ ಬಗ್ಗೆ ಜಿಲ್ಲಾ 112ಸಹಾಯವಾಣಿಗೆ ಕರೆ ಬಂದಿದ್ದು ERV-03ದಲ್ಲಿ ಸ್ಥಳಕ್ಕೆ ತೆರಳಿ ವಿಚಾರಿಸಿದಲ್ಲಿ ಅಪಘಾತದಿಂದ ಗಾಯವಾಗಿರುವುದಾಗಿ ತಿಳಿಸಿದ್ದು 108 ಮುಖಾಂತರ ಆಸ್ಪತ್ರೆಗೆ ದಾಖಲಿಸಿ ಉಡುಪಿ ನಗರ ಠಾಣೆಗೆ ಮಾಹಿತಿ ನೀಡಿರುತ್ತೇವೆ.@112Karnataka
15/06/2021 ರಂದು ಆಗುಂಬೆ ಪ್ರಥಮ ತಿರುವಿನಲ್ಲಿ ಎರಡು ಕಾರಗಳ ನಡುವೆ ಅಪಘಾತವಾಗಿದ್ದ ಬಗ್ಗೆ ಜಿಲ್ಲಾ 112ಸಹಾಯವಾಣಿಗೆ ಕರೆ ಬಂದಿದ್ದು ERV-08 ದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿದ್ದು ಯಾವುದೇ ನೋವು ಗಾಯಗಳಿರುವುದಿಲ್ಲಾ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದ್ದು ಹೆಬ್ರಿ ಠಾಣೆಗೆ ಮಾಹಿತಿ ನೀಡಿರುತ್ತೇವೆ.@112Karnataka
14/06/2021 ರಂದು ಉಡುಪಿ ಬೋರ್ಡ ಹೈ ಸ್ಕೂಲ್ ನ ನಿರ್ಗತಿಕ ಕೇಂದ್ರದಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಜಿಲ್ಲಾ 112ಸಹಾಯವಾಣಿಗೆ ಕರೆ ಬಂದಿದ್ದು ERV-02ದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿ ಅಲ್ಲಿ ಗಲಾಟೆ ಮಾಡುತ್ತಿರುವವರನ್ನು ಮುಂದಿನ ಕ್ರಮಕ್ಕಾಗಿ ಉಡುಪಿ ನಗರ ಠಾಣೆಗೆ ಕರೆದುಕೊಂಡು ಬಂದಿರುತ್ತೇವೆ.@112Karnataka
14/06/2021 ರಂದು ಉಡುಪಿ ಜೋಡುಕಟ್ಟೆ ಬಳಿ ದೂರುದಾರರಿಗೆ ಅವರ ನೆರೆ ಕೆರೆಯ ವ್ಯಕ್ತಿ ತೊಂದರೆ ನೀಡುತ್ತಿರುವ ಬಗ್ಗೆ ಜಿಲ್ಲಾ 112ಸಹಾಯವಾಣಿಗೆ ಕರೆ ಬಂದಿದ್ದು ERV-02ದಲ್ಲಿ ಸ್ಥಳಕ್ಕೆ ತೆರಳಿ ವಿಚಾರಿಸಿ ಆತನಿಗೆ ದೂರುದಾರರ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿ ಸಮಸ್ಯೆ ಬಗೆಹರಿಸಿ ದೂರುದಾರರಿಗೆ ದೈರ್ಯ ಹೇಳಿ ಬಂದಿರುತ್ತೇವೆ .@112Karnataka
14/06/2021 ರಂದು ರಾತ್ರಿ 00:30 ಗಂಟೆಗೆ ಸಾಸ್ತಾನ ಯಕ್ಷಿಮಠ ಎಂಬಲ್ಲಿ ಸಹೋದರರಿಬ್ಬರ ನಡುವೆ ಗಲಾಟೆ ನಡೆಯುತ್ತಿರುವ ಬಗ್ಗೆ ಜಿಲ್ಲಾ 112ಸಹಾಯವಾಣಿಗೆ ಕರೆ ಬಂದಿದ್ದು ERV-01ದಲ್ಲಿ ಸ್ಥಳಕ್ಕೆ ತೆರಳಿ ವಿಚಾರಿಸಿ ಅವರಿಬ್ಬರೂ ಗಲಾಟೆ ಮಾಡದಂತೆ ತಿಳುವಳಿಕೆ ನೀಡಿ ಮನೆಯವರಿಗೆ ಸಮಾಧಾನ ಹೇಳಿ ಬಂದಿರುತ್ತೇವೆ.@112Karnataka
13/06/2021ರಂದು ಬೀಡನಗುಡ್ಡೆ ಬಳಿ ಗಲಾಟೆ ನಡೆಯುತ್ತಿರುವ ಬಗ್ಗೆ ಜಿಲ್ಲಾ 112ಸಹಾಯವಾಣಿಗೆ ಕರೆ ಬಂದಿದ್ದು ERV-02ದಲ್ಲಿ ತೆರಳಿ ವಿಚಾರಿಸಿದ್ದು ಮಗುವಿನ ವಿಚಾರವಾಗಿ ಗಲಾಟೆ ನಡೆದು ಒಬ್ಬನಿಗೆ ಗಾಯವಾಗಿದ್ದು ಆಸ್ಪತ್ರೆಗೆ ಹೋಗಿರುತ್ತಾನೆ ಅಲ್ಲಿದ್ದವರಿಗೆ ಗಲಾಟೆ ಮಾಡದಂತೆ ಕಾನೂನು ಬಗ್ಗೆ ಸೂಕ್ತ ತಿಳುವಳಿಕೆ ನೀಡಿರುತ್ತೇವೆ.@112Karnataka
13/06/2021 ಸಿದ್ದಾಪುರ ಬಳಿ ಅಪರಿಚಿತ ವ್ಯೆಕ್ತಿ ಮಲಗಿರುವ ಬಗ್ಗೆ ಜಿಲ್ಲಾ 112ಸಹಾಯವಾಣಿಗೆ ಕರೆ ಬಂದಿದ್ದು ERV-09ದಲ್ಲಿ ತೆರಳಿ ವಿಚಾರಿಸಿದ್ದು ಆತ ಬಾವಿ ಕೆಲಸ ಮಾಡಿಕೊಂಡಿದ್ದು ವೇತನ ತೆಗೆದುಕೊಂಡು ಹೋಗಲು ಬಂದಿರುವುದಾಗಿದೆ ಮಾಲಿಕರಿಗೆ ಕರೆ ಮಾಡಿ ಹಣ ಕೊಡಿಸಿ ಮಂಗಳೂರಿಗೆ ಹೋಗಲು ಟ್ಯಾಕ್ಸಿ ವ್ಯವಸ್ಥೆ ಮಾಡಿ ಕಳುಹಿಸಿದೆವು.@112Karnataka
06/06/2021 ರಂದು ನಿಟ್ಟೂರು ಬಳಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಹಾರ್ಡವೇರ್ ಅಂಗಡಿನಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಜಿಲ್ಲಾ 112ಸಹಾಯವಾಣಿಗೆ ಕರೆ ಮಾಡಿದ್ದು ERV-03ದಲ್ಲಿ ಸ್ಥಳಕ್ಕೆ ತೆರಳಿ ಕೆಲಸಗಾರರಿಗೆ ಕೋವಿಡ್ ನಿಯಮಾವಳಿಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ಅಂಗಡಿಯನ್ನು ಮುಚ್ಚಿಸಿರುತ್ತೇವೆ.@112Karnataka
02/06/2021 ಮದ್ವಾನಗರ ಬಳಿ ಕೋವಿಡ್ ಸೋಂಕಿತ ವ್ಯೆಕ್ತಿ ಮನೆಯಿಂದ ಹೊರಗಡೆ ತಿರುಗಾಡುತ್ತಿದ್ದ ಬಗ್ಗೆ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು ERV-03ದಲ್ಲಿ ಸ್ಥಳಕ್ಕೆ ತೆರಳಿ ಆತನಿಗೆ ಕೋವಿಡ್ ನಿಯಮಾವಳಿಗಳ ಸೂಕ್ತ ಮಾಹಿತಿನೀಡಿ ಮುಂದೆಮನೆಯಿಂದ ಹೊರಗಡೆ ಬರದಂತೆ ಎಚ್ಚರಿಸಿದ್ದು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿರುತ್ತೇವೆ.@112Karnataka
01/06/2021ರ ರಾತ್ರಿ 22:30 ಗಂಟೆಗೆ ಕೋಟ ಬನ್ನಾಡಿ ಬಳ ಅಕ್ರಮವಾಗಿ ಮರಳನ್ನು ತುಂಬಿಸಿದ ವಾಹನ ಸಂಚರಿಸುತ್ತಿರುವ ಬಗ್ಗೆ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದುERV-01ದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿ ವಾಹನವನ್ನು ಅಡ್ಡಗಟ್ಟಿ ಹಿಡಿದು ಮುಂದಿನ ತನಿಖೆಗಾಗಿ ಕೋಟ ಠಾಣೆಗೆ ಒಪ್ಪಿಸಿರುತ್ತೇವೆ.@112Karnataka
01/06/2021 ರಂದು ಸಾಸ್ತಾನ ಬಸ್ ನಿಲ್ದಾಣ ಬಳಿ ಅಪರಿಚಿತ ಮಹಿಳೆ ಇರುವ ಬಗ್ಗೆ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದುERV-01ದಲ್ಲಿ ತೆರಳಿ ವಿಚಾರಿಸಿದ್ದು ಗಂಡ ಹೆಂಡತಿ ನಡುವೆ ಗಲಾಟೆ ನಡೆದು ಆಕೆ ಮನೆ ಬಿಟ್ಟು ಬಂದಿರುವುದಾಗಿದೆ ಆಕೆಯನ್ನು ಕೌನ್ಸಲಿಂಗ್ಗಾಗಿ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಬಂದಿರುತ್ತೇವೆ.@112Karnataka
01/06/2021 ರಂದು ಮಣಿಪಾಲ ದಶರಥ ನಗರ ಬಳಿ ಬಳಿ ಹುಡುಗರು ಗುಂಪು ಸೇರಿ ಕ್ರಿಕೆಟ್ ಆಡುತ್ತಿರುವ ಬಗ್ಗೆ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು ERV-02 ದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿದ್ದು ನಮ್ಮ ವಾಹನವನ್ನು ನೋಡಿ ಅವರು ಅಲ್ಲಿಂದ ಓಡಿ ಹೋಗಿರುತ್ತಾರೆ ಮಣಿಪಾಲ ಠಾಣೆಗೆ ಮಾಹಿತಿ ನೀಡಿರುತ್ತೇವೆ.@112Karnataka
30/05/2021 ರಂದು ಕಲ್ಮಾಡಿ ಬಳಿ ಕೋವಿಡ್ ಸೋಕಿತ ವ್ಯೆಕ್ತಿಯೊಬ್ಬ ಮನೆಯಿಂದ ಹೊರಗಡೆ ಸುತ್ತಾಡುತ್ತಿರುವ ಬಗ್ಗೆ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು ERV-03ದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿ ಕೋವಿಡ್ ನಿಯಮಾವಳಿಗಳ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಮನೆಯಿಂದ ಹೊರಬರದಂತೆ ಆತನಿಗೆ ಎಚ್ಚರಿಕೆ ನೀಡಿ ಬಂದಿರುತ್ತೇವೆ.@112Karnataka
30/05/2021ರಂದು ಮಣಿಪುರ ಬಳಿ ಸಹೋದರರ ನಡುವೆ ಜಾಗದ ವಿಚಾರವಾಗಿ ಗಲಾಟೆ ನಡೆಯುತ್ತಿದ್ದ ಬಗ್ಗೆ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು ERV-07ದಲ್ಲಿ ತೆರಳುವ ಮೊದಲೇ ಅವರಿಬ್ಬರು ಕಾಪು ಠಾಣೆಗೆ ದೂರು ನೀಡಲು ತೆರಳಿದ್ದು ಸ್ಥಳದಲ್ಲಿದ್ದವರಿಗೆ ಗಲಾಟೆ ಮಾಡಿಕೊಳ್ಳದೇ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಿಳಿಸಿದೆವು@112Karnataka
30/05/2021 ಹೆಸಕುತ್ರು ಬಳಿ ದೂರುದಾರರ ಮನೆಯ ಹಿಂಬಾಗದಲ್ಲಿ 4-5 ಜನ ಅಕ್ರಮವಾಗಿ ಜೂಜಾಟವಾಡುತಿದ್ದು ಅಲ್ಲದೇ ಅವರಿಗೆ ಹಲ್ಲೆ ಮಾಡಿಲು ಮುಂದಾದ ಬಗ್ಗೆ ಜಿಲ್ಲಾ 112 ಸಹಾಯವಾಣಿಗೆ ಕರೆ ಮಾಡಿದ್ದು ಕೂಡಲೇ ಸ್ಥಳಕ್ಕೆ ತೆರಳಿ ನಮ್ಮ ವಾಹನವನ್ನುನೋಡಿಅವರು ಓಡಿ ಹೋಗಿದ್ದು ಕುಂದಾಪುರ ಗ್ರಾಮಾಂತರಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೇವೆ @112Karnataka
28/05/2021ರಂದು ಶಂಕರನಾರಾಯಣ ಬಳಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು ERV-09ದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿ ಸುಮಾರು 20 ಚೀಲ ಮರಳಿದ್ದು ತಮ್ಮ ಸ್ವಂತಕ್ಕೆ ಉಪಯೋಗಿಸುವುದಾಗಿಮಾರಾಟಕ್ಕಲವೆಂದುತಿಳಿಸಿದ್ದು ಶಂಕರನಾರಾಯಣ ಠಾಣೆಗೆ ಮಾಹಿತಿ ನೀಡಿದೆವು.@112Karnataka
28/05/2021ರಂದು ಕುಂದಾಪುರ ಕಾರ್ವಿಕೇರಿ ಬಳಿ ಅಕ್ರಮವಾಗಿ ಮರಳನ್ನು ತುಂಬಿಸಿಟ್ಟಿರುವ ಬಗ್ಗೆ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು ERV-09ದಲ್ಲಿ ಕೂಡಲೇ ತೆರಳಿದ್ದು ಸ್ಥಳದಲ್ಲಿ ಯಾರೂ ಕಂಡು ಬಂದಿಲ್ಲಾ ಸುಮಾರು 40 ಮರಳು ಚೀಲಗಳನ್ನು ವಶಪಡಿಸಿಕೊಂಡು ಕುಂದಾಪುರ ಠಾಣೆಗೆ ಮಾಹಿತಿ ನೀಡಿರುತ್ತೇವೆ.@112Karnataka
25/05/2021ರಂದು ಕುಂದಾಪುರ ಆಶ್ರಯ ಕಾಲನಿ ಬಳಿ ಹೋಮ್ ಐಸೋಲೆಷನ್ನಲ್ಲಿರುವ ಕೋವಿಡ್ ಸೋಂಕಿತರಿಬ್ಬರು ಮನೆಯಿಂದ ಹೊರಗಡೆ ಸುತ್ತಾಡುತ್ತಿರುವ ಬಗ್ಗೆ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು ERV-09ದಲ್ಲಿ ಸ್ಥಳಕ್ಕೆ ತೆರಳಿ ಇಬ್ಬರಿಗೂ ಮನೆಯಲ್ಲಿರುವಂತೆ ಎಚ್ಚರಿಕೆಯನ್ನು ನೀಡಿ ಸಂಬಂಧಪಟ್ಟ ಇಲಾಖೆಯವರಿಗೆ ಮಾಹಿತಿ ನೀಡಿರುತ್ತೇವೆ@112Karnataka
24/05/2021ರಂದು ಕುಚ್ಚೂರು ಹಾಡಿಮನೆ ಬಳಿ ತಕರಾರಿದ್ದ ಜಾಗದಲ್ಲಿ ಜಿಸಿಬಿ ಮುಖಾಂತರ ರಸ್ತೆ ಮಾಡಿದ ವಿಚಾರವಾಗಿ ಗಲಾಟೆ ನಡೆಯುತ್ತಿದ್ದು ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು ERV-08ದಲ್ಲಿ ತೆರಳಿ ವಿಚಾರಿಸಿ ಯಾವುದೇ ಘರ್ಷಣೆಗೆ ಅವಕಾಶ ನೀಡದೇ ಎರಡೂ ಕಡೆಯವರಿಗೂ ತಿಳಿ ಹೇಳಿದ್ದು ಹೆಬ್ರಿ ಠಾಣೆಯವರು ಸ್ಥಳದಲ್ಲಿ ಹಾಜರಿದ್ದರು@112Karnataka