ಕರ್ನಾಟಕದ ಪ್ರತಿಷ್ಠಿತ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ನ 2026–27ರ ಪ್ರವಾಸಿ ಋತುವಿಗೆ ಬೆಂಗಳೂರಿನ ಕೆ.ಎಸ್.ಆರ್. ರೈಲು ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ. #GoldenChariot#KarnatakaTourism#LuxuryTrain
https://t.co/09ZD4jOYU6
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ವಾಹನ ಚಾಲನಾ ಪರವಾನಗಿ (DL) ನಿಯಮಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಕರಡು ಅಧಿಸೂಚನೆ ಹೊರಡಿಸಿದೆ. #DrivingLicense#NewRules#MORTH#TransportNews
https://t.co/MuBVHAoqdK
ಮೈಸೂರು ದಸರಾ ಡ್ರೋನ್ ಶೋಗೆ ಗಿನ್ನಿಸ್ ವಿಶ್ವ ದಾಖಲೆಯ ಗರಿ!
3,473 ಡ್ರೋನ್ಗಳ ಮೂಲಕ ಆಕಾಶದಲ್ಲಿ ಮೂಡಿಬಂದ ಬೃಹತ್ ನವಿಲಿನ ಆಕೃತಿ ವಿಶ್ವದ ಗಮನ ಸೆಳೆದಿದೆ. CESC ಮತ್ತು ಇಂಧನ ಇಲಾಖೆಯ ತಾಂತ್ರಿಕ ನಾವೀನ್ಯತೆಗೆ ಸಾಕ್ಷಿಯಾದ ಈ ಅದ್ಭುತ ಪ್ರದರ್ಶನ ನಾಡಹಬ್ಬದ ವೈಭವಕ್ಕೆ ಹೊಸ ಮೆರುಗು ನೀಡಿದೆ.
#MysuruDasara#DroneShow
ಬೆಳಕಿನ ವೈಭವಕ್ಕೆ ಸಾಕ್ಷಿಯಾಗೋಣ… ಸುರಕ್ಷತೆಯೊಂದಿಗೆ ದಸರಾ ಸಂಭ್ರಮಿಸೋಣ!
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು (ಚಾವಿಸನಿನಿ) ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅರ್ಚನಾ ಎಂ.ಎಸ್ ಅವರು ದಸರಾ ದೀಪಾಲಂಕಾರ, ಡ್ರೋನ್ ಪ್ರದರ್ಶನ ಹಾಗೂ ಸಾರ್ವಜನಿಕರ ಸುರಕ್ಷತೆಯ ಕುರಿತು ಮಹತ್ವದ ಸಂದೇಶ ನೀಡಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ–2026ರ ಸಂಭ್ರಮಕ್ಕೆ ಕಂಗೊಳಿಸುವ ವಿದ್ಯುತ್ ದೀಪಾಲಂಕಾರ ಹಾಗೂ 3,500 ಡ್ರೋನ್ಗಳ ಅದ್ಭುತ ಪ್ರದರ್ಶನ ಮತ್ತಷ್ಟು ಮೆರುಗು ನೀಡಲಿವೆ.
ದೀಪಾಲಂಕಾರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ. ಆದರೆ ವಿದ್ಯುತ್ ದೀಪಗಳು, ಅಲಂಕಾರಿಕ ವಿದ್ಯುತ್ ಉಪಕರಣಗಳು ಹಾಗೂ ತಂತಿಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸಬೇಡಿ.
ದಸರಾ ವೈಭವವನ್ನು ಕಣ್ತುಂಬಿಕೊಳ್ಳುವುದು ನಮ್ಮ ಸಂಭ್ರಮ… ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ!
ಬನ್ನಿ, ಬೆಳಕಿನ ಹಬ್ಬವನ್ನು ಸುರಕ್ಷಿತವಾಗಿ ಸಂಭ್ರಮಿಸೋಣ!
#MysuruDasara2026 #DasaraIllumination #MysuruDroneShow #CESCmysuru #SafetyFirst #MysuruDasara #Dasara2026
ವಿಶ್ವವಿಖ್ಯಾತ ಮೈಸೂರು ದಸರಾ 2026ರ ಜಂಬೂಸವಾರಿಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗಲು 54 ವರ್ಷದ ಹಿರಿಯ ಆನೆ 'ಪ್ರಶಾಂತ'ನನ್ನು ಆಯ್ಕೆ ಮಾಡಲಾಗಿದೆ. #MysuruDasara2026#JumboSavari#PrashanthaElephant
https://t.co/P8374wIvc1
ಮೈಸೂರು ದಸರಾ ವೀಕ್ಷಣೆಗೆ KSTDC ವಿಶೇಷ ವ್ಯವಸ್ಥೆ – ಅಂಬಾರಿ ಡಬಲ್ ಡೆಕ್ಕರ್ ಬಸ್, 7 ವಿಶೇಷ ಪ್ಯಾಕೇಜ್ಗಳು
- ದಸರಾ ವೈಭವ, ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ `ಅಂಬಾರಿ' ವಿಶೇಷ ಸವಾರಿ
- ಊಟಿ, ಮೈಸೂರು, ಬೇಲೂರು-ಹಳೇಬೀಡು, ಕೊಡಗು ಸೇರಿದಂತೆ ಏಳು ವಿಶೇಷ ಪ್ರವಾಸ ಯೋಜನೆಗಳು
- ದಸರಾ ಜೊತೆಗೆ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳನ್ನೂ ಪರಿಚಯಿಸಲು ಒತ್ತು https://t.co/XGMTpaZWgM
#MysuruDasara #AmbariBus #Mysuru #KSTDC #TourPackages