Hearty birthday wishes to the MP of Rae Bareli Lok Sabha constituency and Leader of the Opposition in Lok Sabha, Shri Rahul Gandhi. May the country progress under your leadership, and I wish you good health and long life.
#RahulGandhi | #BirthdayWishes
ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಶ್ರೀ ಬಿ.ಕೆ. ಹರಿಪ್ರಸಾದ್, ಶ್ರೀ ತಿಪ್ಪಣ್ಣಪ್ಪ ಕಮಕನೂರ್, ಶ್ರೀ ಪಿ.ವಿ. ಮೋಹನ್, ಶ್ರೀ ಶಿವಣ್ಣ ಮಳವಳ್ಳಿ, ಶ್ರೀ ವಿನಯ್ ಕಾರ್ತಿಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ತಮ್ಮೆಲ್ಲರ ಜನಸೇವೆ ಹೀಗೆಯೇ ನಿರಂತರವಾಗಿರಲಿ ಎಂದು ಶುಭ ಹಾರೈಸುವೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಆತ್ಮೀಯರಾದ ಶ್ರೀ ಸತೀಶ್ ಜಾರಕಿಹೊಳಿ ಅಣ್ಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ, ಆಯುಷ್ಯ, ಆರೋಗ್ಯ ನೀಡಿ ಇನ್ನಷ್ಟು ಜನಸೇವೆ ಮಾಡಲು ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ.🎉
"ಈ ಸಲನೂ ಕಪ್ ನಮ್ದೇ" ಎನ್ನುವ ಘೋಷಣೆಯನ್ನು ಮತ್ತೊಮ್ಮೆ ನಿಜವಾಗಿಸಿ, ಐಪಿಎಲ್ 2026ರ ಮಹಾ ಸಂಗ್ರಾಮದಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕರುನಾಡಿನ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು! 🏆❤️💛
#RCB#IPL2026#PlayBold#Champions
ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು.
ಬಕ್ರೀದ್ ಹಬ್ಬ ತ್ಯಾಗ ಮತ್ತು ಬಲಿದಾನದ ಸಂಕೇತ. ಈ ಹಬ್ಬವು ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಒಳಿತನ್ನು ತರಲಿ ಎಂದು ಹಾರೈಸೋಣ.
#BakridMubarak#EidMubarak
ದೇಶದಲ್ಲಿ ದೂರಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆದ ಶ್ರೇಷ್ಠ ನೇತಾರ, ಅಭಿವೃದ್ಧಿಯ ಕುರಿತು ವಿಶಿಷ್ಟ ಪರಿಕಲ್ಪನೆಗಳನ್ನು ಹೊಂದಿದ್ದ ಮಾಜಿ ಪ್ರಧಾನಿ, ಭಾರತರತ್ನ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಅಗಣಿತ ನಮನಗಳು.
#RajivGandhi
ಕರ್ನಾಟಕದ ಜನಪ್ರಿಯ ಉಪ ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀDK Shivakumar ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ದಕ್ಷ ನಾಯಕತ್ವ ಮತ್ತು ಅಚಲ ನಿರ್ಧಾರಗಳು ಸದಾಕಾಲವೂ ಸ್ಪೂರ್ತಿದಾಯಕ.ತಾಯಿ ಚಾಮುಂಡೇಶ್ವರಿಯು ನಿಮಗೆ ಆಯುರಾರೋಗ್ಯ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ.
#BirthdayWishes
ಧರ್ಮ,ಶೌರ್ಯ,ಸ್ವಾಭಿಮಾನ ಹಾಗೂ ಹಿಂದವಿ ಸ್ವರಾಜ್ಯದ ರಕ್ಷಣೆಗೆ ತನ್ನ ಜೀವನವನ್ನೇ ಸಮರ್ಪಿಸಿ,ಕೊನೆಯ ಉಸಿರಿನವರೆಗೂ ಹೋರಾಡಿದ ವೀರಪುತ್ರ ಶ್ರೀ ಛತ್ರಪತಿ ಸಂಭಾಜಿ ಮಹಾರಾಜ ಅವರ ಜಯಂತಿಯಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
ಅವರ ಧೈರ್ಯ,ನಿಷ್ಠೆ ಮತ್ತು ತ್ಯಾಗದ ಬದುಕು ನಮ್ಮೆಲ್ಲರಿಗೂ ದಾರಿದೀಪ.
chatrapathisambhajimaharaj
ಸ್ತ್ರೀ ಕುಲದ ಆದರ್ಶ ರತ್ನ, ಸಂಕಷ್ಟಗಳನ್ನು
ಮೆಟ್ಟಿ ನಿಂತು ಸಾಮಾಜಿಕ ಚಿಂತನೆಯಲ್ಲಿ ಬದುಕಿನ ಆದರ್ಶ
ಮೌಲ್ಯಗಳನ್ನು ರೂಢಿಸಿಕೊಂಡು ಧಾರ್ಮಿಕ ಸಾಧನೆಗೈದ
ಮಹಾಶಿವಶರಣೆ ಮಾತೋಶ್ರೀ ಹೇಮರೆಡ್ಡಿ ಮಲ್ಲಮ್ಮನವರ
ಜಯಂತಿಯಂದು ಪೂಜ್ಯರಿಗೆ ಭಕ್ತಿಪೂರ್ವಕ ಗೌರವನಮನಗಳು.
#hemaraddimallammajayanti
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ. ಸುಧಾಕರ್ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.
ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬದವರಿಗೆ, ಬಂಧು-ಬಳಗಕ್ಕೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#DSudhakar
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಪ್ರತಿಮ ನಾಯಕ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾಗಿದ್ದ ಗೋಪಾಲಕೃಷ್ಣ ಗೋಖಲೆ ಅವರ ಜನ್ಮದಿನದಂದುಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ
ಗಾಂಧೀಜಿಯವರ ಮಾರ್ಗದರ್ಶಕರೂ ದೂರದೃಷ್ಟಿಯ ಸಮಾಜ ಸುಧಾರಕರೂಆಗಿದ್ದ ಗೋಖಲೆಯವರ ತತ್ವಗಳು ನವ ಭಾರತದ ನಿರ್ಮಾಣಕ್ಕೆ ಇಂದಿಗೂ ದಾರಿದೀಪವಾಗಿವೆ
ತ್ಯಾಗ, ಸ್ವಾಭಿಮಾನ, ಸಾಟಿಯಿಲ್ಲದ ಶೌರ್ಯ ಮತ್ತು ಅಪ್ರತಿಮ ಮಹಾವೀರ ಮಹಾರಾಣಾ ಪ್ರತಾಪ್ ಸಿಂಗ್ ಅವರ ಜನ್ಮದಿನದಂದು ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ.
#maharanapratapjayanti
ಜನ ಗಣ ಮನ ರಚಿಸಿದ ಮೇರು ಕವಿ, ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಸಾಹಿತಿ, ಗುರುದೇವ ಎಂದೇ ಪ್ರಸಿದ್ಧರಾಗಿದ್ದ ಶ್ರೇಷ್ಠ ಚಿಂತಕ, ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನದಂದು ಗೌರವ ಪ್ರಣಾಮಗಳು.
#RabindranathTagore
ಪತ್ರಿಕೆಗಳು ಇಂದು ಕೇವಲ ಸಮೂಹ ಮಾಧ್ಯಮವಾಗಿ ಉಳಿಯದೇ ಅಭಿಪ್ರಾಯ ರೂಪಿಸುವ ಮಹತ್ವದ ಕೊಂಡಿಯಾಗಿ ಪರಿವರ್ತನೆಯಾಗಿವೆ.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ, ನಿರ್ಭೀತ, ಮುಕ್ತ ಮತ್ತು ನ್ಯಾಯಸಮ್ಮತ ಪತ್ರಿಕಾಧರ್ಮದ ಉಳಿವು ಸಮಾಜದ ಒಳಿತಿಗೆ ಯಾವತ್ತಿಗೂ ಅತ್ಯವಶ್ಯಕ.
#WorldPressFreedomDay
ನಾಡಿನ ಸಮಸ್ತ ಶ್ರಮಿಕ ಬಂಧುಗಳಿಗೆ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ರಾಜ್ಯದ ಕಾರ್ಮಿಕ ಸಮುದಾಯದ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿ, ಸೌಲಭ್ಯಗಳನ್ನು ಒದಗಿಸುತ್ತಿದೆ. ಶ್ರಮಿಕರ ಅಭ್ಯುದಯವೇ ನಮ್ಮ ಸರ್ಕಾರದ ಧ್ಯೇಯ.
#ಶ್ರಮೇವಜಯತೇ#InternationalLaboursDay
ಮಾನ್ಯ #ಶ್ರೀ_ಜೆ_ಎನ್_ಗಣೇಶ್
ಅನ್ನದಾತರ ಪರ ನಮ್ಮ ಸರ್ಕಾರ
ಕೊಟ್ಟ ಮಾತಿನಂತೆಯೇ ಮಳೆಗಾಲ ಆರಂಭಕ್ಕೂ ಮುನ್ನವೇ ತುಂಗಭದ್ರಾ ಜಲಾಶಯದ ಎಲ್ಲಾ 33 ಕ್ರಸ್ಟ್ ಗೇಟ್ಗಳನ್ನು ಬದಲಾಯಿಸುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ಜಲಾಶಯವು ಇದೀಗ ಸಂಪೂರ್ಣ ಸುಭದ್ರವಾಗಿದ್ದು, ಮುಂದಿನ 50-60 ವರ್ಷಗಳ ಕಾಲ ರೈತರು ಆತಂಕಪಡುವ ಅಗತ್ಯವಿಲ್ಲ.
#TungabhadraDam
ಮಹಾತ್ಮ ಗಾಂಧಿ ಅವರ 'ಗ್ರಾಮ ಸ್ವರಾಜ್ಯ'ದ ಕನಸನ್ನು ಸಾಕಾರಗೊಳಿಸಿದ್ದು 'ಪಂಚಾಯತ್ ರಾಜ್' ವ್ಯವಸ್ಥೆ. ಅಧಿಕಾರ ವಿಕೇಂದ್ರಿಕರಣದ ಕ್ರಾಂತಿಕಾರಕ ಹೆಜ್ಜೆಯಾದ ಪಂಚಾಯತ್ ರಾಜ್ ವ್ಯವಸ್ಥೆಯೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ. ಹಳ್ಳಿಯಿಂದ ದಿಲ್ಲಿವರೆಗೆ ಜನಸಾಮಾನ್ಯರಿಗೆ ಅಧಿಕಾರ ನೀಡುವ ಈ ವ್ಯವಸ್ಥೆಯನ್ನು ಬಲಗೊಳಿಸೋಣ.
ಕನ್ನಡ, ಕನ್ನಡತನ ಮತ್ತು ಕರ್ನಾಟಕದ ಅಸ್ಮಿತೆಯಂತಿದ್ದ 'ನಟಸಾರ್ವಭೌಮ' ಡಾ. ರಾಜ್ಕುಮಾರ್ ಅವರ ಜನ್ಮದಿನದಂದು ಮಹಾನ್ ಚೇತನಕ್ಕೆ ಭಕ್ತಿಪೂರ್ವಕ ನಮನಗಳು. ಸರಳತೆ ಮತ್ತು ಸಜ್ಜನಿಕೆಗೆ ಸಾಟಿಯಿಲ್ಲದ ಅವರ ಜೀವನ ನಮಗೆಲ್ಲರಿಗೂ ಸದಾ ಸ್ಫೂರ್ತಿ ಎನಿಸಿದೆ.