A phone call is not enough. Visit Coastal Karnataka, witness the ground reality, and take action.
@BZZameerAhmedK
You are our elected leader — lead like one, for all of us.
#CoastalKarnataka#MuslimsLivesMatters
ಭಾರತ್ ಮಾತೆ , ಗೋ ಮಾತೆ ಎಂದು ಹೇಳುವವರ ಬಾಯಲ್ಲಿ, ಅದೇ ಮಾತೆಯಾದ ಹೆಣ್ಣಿನ ಬಗ್ಗೆ ಈ ರೀತಿಯ ಅವಹೇಳನಕಾರಿ, ಅಸಭ್ಯ ಹೇಳಿಕೆ ಬಂದಿರುವುದು ನಿಜಕ್ಕೂ ದುರದೃಷ್ಟಕರ. ಮಹಿಳೆಯರ ಭಾವನೆಗೆ ಧಕ್ಕೆ ಉಂಟುಮಾಡಿದ ಪ್ರಭಾಕರ ಭಟ್ಟರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಿ...
# arrestkalladkaprabakarBhat
@CMofKarnataka@DKShivakumar
ಮಾನ್ಯ ಕುಮಾರಸ್ವಾಮಿಯವರೇ,
ನೀವು ಯಾರ ಜೊತೆ ಬೇಕಾದರೂ ಮೈತ್ರಿ ಮಾಡಿಕೊಳ್ಳಿ,ಆದರೆ ನಿಮ್ಮ ರಾಜಕೀಯ ನಾಟಕಕ್ಕೆ ಮುಸ್ಲಿಂ ಸಮುದಾಯವನ್ನು ಎಳೆದು ತರಬೇಡಿ. ಮುಸ್ಲಿಂ ಸಮುದಾಯಕ್ಕೆ ಚೆನ್ನಾಗಿ ಅರಿವಿದೆ ಯಾರಿಗೆ ಮತ ಹಾಕಬೇಕು ಎಂಬೂದು. ಅದು ನಿಮ್ಮಿಂದ ಕಲಿಯಬೇಕಾದ ಅಗತ್ಯತೆನೂ ಇಲ್ಲ. ನಿಮ್ಮ ಕೊಳಕು ರಾಜಕೀಯಕ್ಕೆ ಒಂದು ಸಮುದಾಯವನ್ನು ಎಳೆದು ತರಬೇಡಿ.
ಅಂದು ಕರ್ನಾಟಕ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಕ್ರಿಯೆಗೆ ಪ್ರತಿಕ್ರಿಯೆ ಹೇಳಿದ್ರು,
ಇಂದು ಕರ್ನಾಟಕದ ಜನ ತಮ್ಮ ಮತದಾನದ ಮೂಲಕ ಕರ್ಮಕ್ಕೆ ಪ್ರತಿಕರ್ಮ ನೀಡಿದ್ದಾರೆ. ಜಾತಿ ರಾಜಕಾರಣ, ಭ್ರಷ್ಟಾಚಾರಕ್ಕೆ ಜನ ತಕ್ಕ ಪಾಠ ಕಲಿಸುತ್ರಾರೆಂಬೂದಕ್ಕೆ ಇದಕ್ಕಿಂತ ದೊಡ್ಡ ಸನ್ನಿವೇಶ ಬೇರೊಂದಿಲ್ಲ....
@siddaramaiah@DKShivakumar
5ತಿಂಗಳ ಹಿಂದೆ ಕರಾವಳಿಯಲ್ಲಿ ನಡೆದ ಮೂರು ಕೊಲೆಗಳ ನೇರ ಆರೋಪಿಗಳ ಜೊತೆಗೆ ಕೊಲೆ ನಡೆಸಲು ಕುಮ್ಮಕ್ಕು ನೀಡಿದವರನ್ನೂ ಕೂಡ ಬಂಧಿಸಿ ಜೈಲಿಗೆ ಅಟ್ಟುತ್ತಿದ್ದರೆ, ಇಂದು ಇನ್ನೊಂದು ಅಮಾಯಕ ಜೀವ ಬಲಿಯಾಗುತ್ತಿರಲಿಲ್ಲ. ಮಾನ್ಯ ಪೋಲೀಸ್ ಆಯುಕ್ತರೇ,ನಮಗೆ ನಿಮ್ಮ ಮೇಲೆ ಅಪಾರ ಭರವಸೆ ಇದೆ, ಆದರೆ ಅದನ್ನು ಕಳೆದುಕೊಳ್ಳಬೇಡಿ.
*ಜಸ್ಟೀಸ್ ಫಾರ್ ಜಲೀಲ್*
Today it is 12 years completed for Mangalore plane crash which incident was happened On May 22, 2010, a flight carrying more than 170 passengers from Dubai, crashed due to technical error. The accident claimed 159 lives.
May the Creator give peace to the soul of the deceased ...
ಎಲ್ಲಿಂದ ಆರಂಭವಾಯಿತೋ ಅಲ್ಲಿಂದಲೇ ಅಂತ್ಯಕಾಣಲಿ.
ಇಡೀ ರಾಜ್ಯದಲ್ಲಿಯೇ ಕೋಮುಸೌಹಾರ್ಧ ಹದಗೆಡಲು ಕಾರಣವಾದ ಹಿಜಾಬ್ ಬಗೆಗಿನ ಅನಗತ್ಯ ಗೊಂದಲ ಹಾಗೂ ಅಪಪ್ರಚಾರ ಮೊತ್ತಮೊದಲ ಬಾರಿಗೆ ಆರಂಭವಾದದ್ದು ಉಡುಪಿಯಲ್ಲಿ. ಅದೇ ಉಡುಪಿಯಲ್ಲಿ ಇಂದು ಸಾಮರಸ್ಯದ ನಡೆ ಮುನ್ನುಡಿ ಬರೆದಿದೆ.
ಈ ಸಾಮರಸ್ಯ ಇಡೀ ದೇಶಾದ್ಯಂತ ಹರಡಲಿ ಎಂಬ ಆಶೆ ಆಕಾಂಕ್ಷೆಯೊಂದಿಗೆ...
ಒಬ್ಬ ಉತ್ತಮ ಆಡಳಿತಗಾರ, ತನ್ನ ದೇಶವನ್ನು ಉನ್ನತ ಮಟ್ಟಕ್ಕೆ ಏರಿಸಿದ ಕೀರ್ತಿ ಹೊತ್ತಿರುವ ಯುಎಇ ಅಧ್ಯಕ್ಷರ ಮರಣದಲ್ಲಿ ಭಾರತ ಸರ್ಕಾರ ಗೌರವ ಸಂಕೇತವಾಗಿ ಶೋಕಾಚರಣೆ ಘೋಷಿಸಿದ್ದು ನಿಜಕ್ಕೂ ಉತ್ತಮ ನಡೆ. ವಿದೇಶದಲ್ಲಿ ದುಡಿಯುವ ಭಾರತೀಯರಾದ ನಮಗೆ ಇದು ಬಹಳ ಹೆಮ್ಮೆಯ ವಿಚಾರ.
ವಿದ್ಯಾರ್ಥಿಗಳೆ,
ಯಾರದ್ದೋ ಕುಮ್ಮಕ್ಕಿಗೆ ಒಳಗಾಗಿ ಅಥವಾ ಆತುರದ ನಿರ್ಧಾರದಿಂದ ನಿಮ್ಮ ಶಿಕ್ಷಣದ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ.
ಇದರ ಬಗ್ಗೆ ಈಗಾಗಲೇ ನಮ್ಮ ಉಲಮಾ ನಾಯಕರು ನಿಮಗೆಲ್ಲರಿಗೂ ಕಿವಿಮಾತೊಂದನ್ನು ನೀಡಿದ್ದಾರೆ.
ಆದ್ದರಿಂದ ಹಿಜಾಬ್ ಹೆಸರೇಳಿ
ಪರೀಕ್ಷೆಗೆ ಹಾಜರಾಗದಿರುವುದು ಸರಿಯಾದ ನಿರ್ಧಾರವಲ್ಲ......
ಯೋಚಿಸಿ, ಆಲೋಚಿಸಿ
ಹಿಂದೂ ಸಮುದಾಯದ ಸಹೋದರ - ಸಹೋದರಿ ವಿದ್ಯಾರ್ಥಿಗಳೇ, ಮುಸ್ಲಿಂ ಸಮುದಾಯ ಮೊದಲಿನಿಂದಲೂ ಹಾಕುತ್ತಿರುವ ಶಿರವಸ್ತ್ರ (ಹಿಜಾಬ್) ನಿಮಗೆ ನಿಜವಾಗಿ ಒಂದು ಸಮಸ್ಯೆಯಾ..... ಎಂದು ನಿಮ್ಮ ನಿಮ್ಮ ಆತ್ಮಸಾಕ್ಷಿಯೊಂದಿಗೆ ಕೇಳಿಕೊಳ್ಳಿ....
ಶಿಕ್ಷಣ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಆದ್ದರಿಂದ ಶಿಕ್ಷಣಕ್ಕೆ ಒತ್ತುನೀಡಿ... ಕೋಮುವಾದಕ್ಕಲ್ಲ...
ಬೆಲೆಯೇರಿಕೆಯನ್ನು ಮರೆಮಾಚಿ, ಸೌಹಾರ್ದತೆಯನ್ನು ಕಡೆಗಣಿಸಿ, ಸರ್ವಾಧಿಕಾರ,ಕೋಮುವಾದದ ಅಮಲಿನಲ್ಲಿ ತೇಲಾಡುತ್ತಿದ್ದ ಶ್ರೀಲಂಕಾದ ಇಂದಿನ ಆರ್ಥಿಕ ಪರಿಸ್ಥಿತಿ ಭಾರತೀಯರಾದ ನಮಗೂ ಬಾರದೇ ಇರಬೇಕಾದರೆ ನಮ್ಮಲ್ಲಿರುವ ಕೋಮು ಭಾವನೆಯನ್ನು ಬದಿಗಿಟ್ಟು, ಸೌಹಾರ್ದತೆಯ ಬದುಕನ್ನು ಕಟ್ಟಿಕೊಂಡು, ಬೆಲೆಯೇರಿಕೆಯ ವಿರುದ್ದ ಎಲ್ಲರೂ ಒಗ್ಗಟ್ಟಾಗಿ ಧ್ವನಿಗೂಡಿಸೋಣ
ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ನಡೆಯುವ ನಮ್ಮ ದೇಶದಲ್ಲಿ, ಒಬ್ಬಳು ಹೆಣ್ಣು ತನ್ನ ರಕ್ಷಣೆಗಾಗಿ ಮುಖ- ತಲೆ ಮುಚ್ಚಿ ಕೊಳ್ಳಲು ಅವಕಾಶ ಕೇಳಿದರೆ, ಅದನ್ನು ತಳ್ಳಿ ಹಾಕುವ ವ್ಯವಸ್ಥಿತ ತಂತ್ರ ನಿಜಕ್ಕೂ ಖೇದಕರ.