Kpcl job Aspirant wrote a letter with Blood to @CMofKarnataka for Completion of 622 Ae/Je recruitment asap. Because it's not yet finished from 9+ years..
ನಿರುದ್ಯೋಗದ ತಾಣವಾಗುತ್ತಿದೆ ಕರುನಾಡು !
ನುಡಿದಂತೆ ನಡೆದಿದ್ದೇವೆ ಎನ್ನುವುದು ಕಾಂಗ್ರೆಸ್ಸಿನ ಬೊಗಳೆ ಮಾತುಗಳಷ್ಟೇ. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ 1 ಲಕ್ಷ ಉದ್ಯೋಗ ಭರ್ತಿ ಮಾಡುತ್ತೇವೆ ಎಂದಿದ್ದ ಕಾಂಗ್ರೆಸ್, ಆದರೆ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಕನಿಷ್ಠ 5 ಸಾವಿರ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ.
ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರುವ ಕಾಂಗ್ರೆಸ್ ಸರ್ಕಾರ ತಮ್ಮದೇ ಸರ್ಕಾರದ ನಡೆಗೆ ಮಾತ್ರ ಮೌನವಾಗಿರುವುದು ಶೋಚನೀಯ ಸಂಗತಿ.
#CongressFailsKarnataka
KPCL-2017: 622ಅಭ್ಯರ್ಥಿಗಳ ನಿರೀಕ್ಷೆ ಮುಗಿಯಬೇಕಾಗಿದೆ
DPAR ನಿಯಮದಂತೆ,ಅಂತಿಮ ಆಯ್ಕೆಪಟ್ಟಿ ಪ್ರಕಟವಾದ 1ವಾರದೊಳಗೆ ಸಿಂಧುತ್ವ & ಪೊಲೀಸ್ ಪರಿಶೀಲನೆ ಪ್ರಾರಂಭವಾಗಬೇಕು.
ಇಂಧನ ಸಚಿವರ ಭರವಸೆ ಪ್ರಕಾರ,ಒಂದು ವಾರದೊಳಗೆ ಆದೇಶ ಪತ್ರ ನೀಡಲಾಗುವುದು ದಯವಿಟ್ಟು ತಕ್ಷಣ ಕಾರ್ಯಗತಗೊಳಿಸಿ
@KJGeorgeOffice@Gaurav_Gupta67@salagar_sharanu
8 ವರ್ಷಗಳ ನಿರೀಕ್ಷೆಯ ಬಳಿಕ KPCL 622 ಹುದ್ದೆಗಳ ಅಂತಿಮ ಪಟ್ಟಿ ಪ್ರಕಟವಾಗಿದೆ. ಆದೇಶ ಪ್ರತಿಯನ್ನು ಈ ತಿಂಗಳೊಳಗೆ ನೀಡಲು ವಿನಮ್ರ ಮನವಿ. ನುಡಿದಂತೆ ನಡೆದು ತೋರಿದ ಮಾನ್ಯ ಇಂಧನ ಸಚಿವರು @KJGeorgeOffice ಮತ್ತು KPCL MD @Gaurav_Gupta67ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
#KPCL#OrderCopyWithinThisMonth
ರವಿ ಕೃಷ್ಣರೆಡ್ಡಿ ಅವರ ವಿರುದ್ಧ ಆರೋಪ ಮಾಡುವವರಿಗೆ ಅವರ ಏರುಧ್ವನಿ,ಜೋರು ಬಾಯಿಯೊಂದೇ ಅಸ್ತ್ರ.ಬಾಯಲ್ಲಿ ಮಾತ್ರ ದೊಡ್ಡದೊಡ್ಡ ಮಾತುಗಳನ್ನಾಡಿಕೊಂಡು ಕೃತಿಯಲ್ಲಿ ಇನ್ನೇನೊ ಮಾಡುಕೊಂಡು ೧೦೦ದಿನ ವ್ಯರ್ಥವಾಗಿ ಬದುಕುವುದಕ್ಕಿಂತ ರವಿ ಕೃಷ್ಣರೆಡ್ಡಿಯವರ ಹಾಗೆ ನ್ಯಾಯ-ನೀತಿ,ಪ್ರಾಮಾಣಿಕತೆಗೆ ಅಂಟಿಕೊಂಡು ಅವರಂತೆ ನೀವು ಮೂರು ದಿನ ಬದುಕಿ ತೋರಿಸಿ ಸಾಕು
@SagarKhandre12 ನಿಮ್ಮ ಭಾಷಣದಲ್ಲಿ ಅವಶ್ಯಕವಾದ ಮಾಹಿತಿಗಳನ್ನು ಹಂಚಿಕೊಂಡಿದ್ದೀರಿ. ಅದೇ ರೀತಿ ಬೀದರ್-ಕಲಬುರ್ಗಿ-ಬೆಂಗಳೂರು ನಡುವೆ ಹೊಸದಾಗಿ ರಾತ್ರಿಯಲ್ಲಿ ಎರಡು ಹಾಗೂ ಹಗಲು ಹೊತ್ತಿನಲ್ಲಿ ಎರಡು ಒಟ್ಟು ನಾಲ್ಕು ರೈಲುಗಳನ್ನು ಬಿಡುವುದಕ್ಕೆ ಪ್ರಯತ್ನಿಸಿ.
ಸಂಸತ್ತಿನಲ್ಲಿ ರೈಲ್ವೆ ಸಂಬಂಧಿತ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದೆನು.
✅ NCRB ವರದಿ ಪ್ರಕಾರ ಕಳೆದ ದಶಕದಲ್ಲಿ 2.6 ಲಕ್ಷಕ್ಕೂ ಹೆಚ್ಚು ಜನರು ರೈಲ್ವೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
✅ ಈ ಸಮಸ್ಯೆಗೆ ತ್ವರಿತ ಪರಿಹಾರವಾಗಿ KAVACH ತಂತ್ರಜ್ಞಾನವನ್ನು ಎಲ್ಲೆಡೆ ಶೀಘ್ರ ಜಾರಿಗೆ ತರಬೇಕೆಂದು ಒತ್ತಾಯಿಸಿದೆನು.
✅ ಅಮೃತ ಭಾರತ ನಿಲ್ದಾಣ ಯೋಜನೆ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದನ್ನು ಶೀಘ್ರಗತಿಯಲ್ಲಿ ಮುನ್ನಡೆಸುವಂತೆ ಆಗ್ರಹಿಸಿದೆನು.
✅ ನನ್ನ ಕ್ಷೇತ್ರದ ಭಾಲ್ಕಿ ಮತ್ತು ಕಮಲನಗರ ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ಯೋಜನೆಯಡಿ ಸೇರ್ಪಡಿಸಿ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದೆನು.
✅ ಬೀದರ-ಬೆಂಗಳೂರು ರೈಲುಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಇನ್ನು ಹೆಚ್ಚುವರಿ 2 ಬೋಗಿಗಳನ್ನು ಸೇರಿಸಲು ಅವಕಾಶವಿದ್ದು ಬೋಗಿಗಳನ್ನು ಸೇರಿಸಲು ಮನವಿ ಮಾಡಿದೆನು.
✅ ಬೀದರ ಕ್ಷೇತ್ರದವರನ್ನು ದೆಹಲಿಗೆ ಸಂಪರ್ಕ ಕಲ್ಪಿಸಲು ದಕ್ಷಿಣ ಎಕ್ಸ್ಪ್ರೆಸ್ ರೈಲನ್ನು ಹೈದರಾಬಾದ್ನಿಂದ ಬೀದರಕ್ಕೆ ವಿಸ್ತರಿಸುವಂತೆ ಪ್ರಸ್ತಾಪಿಸಿದೆನು.
✅ ಬೀದರ-ಬೆಂಗಳೂರು ವಂದೇ ಭಾರತ ರೈಲು ಆರಂಭಿಸುವಂತೆ ಆಗ್ರಹಿಸಿದೆನು.
✅ ತಾಂಡೂರು-ಜಹೀರಾಬಾದ್ ಹೊಸ ರೈಲು ಮಾರ್ಗವನ್ನು ಕ್ಷೇತ್ರದ ಚಿಂಚೋಳಿ ಮೂಲಕ ಸಾಗುವಂತೆ ಒತ್ತಾಯಿಸಿದೆನು.
✅ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ 50% ರಿಯಾಯಿತಿಯನ್ನು ಮರುಪ್ರಾರಂಭಿಸಲು ಆಗ್ರಹಿಸಿದೆನು.
ರೈಲ್ವೆ ಸುರಕ್ಷತೆ, ಮೂಲಸೌಕರ್ಯ ಹಾಗೂ ಪ್ರಯಾಣಿಕರ ಅನುಕೂಲತೆಗಳ ಸುಧಾರಣೆಗೆ ಕೇಂದ್ರ ಸರ್ಕಾರವು ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ.
#ParliamentSession
ಪ್ರತಿಯೊಂದನ್ನೂ ಬೇಡಿ ಬೇಡಿ ಪಡ್ಕೊಬೇಕು ಅಂದ್ರೆ ಉತ್ತರ ಕರ್ನಾಟಕ ಭಾಗ ನಮ್ಮ ರಾಜ್ಯದಲ್ಲಿಲ್ಲವಾ?
ಸರ್ಕಾರಕ್ಕೆ ಆ ಭಾಗವನ್ನು ಅಭಿವೃದ್ಧಿ ಮಾಡೋಕೆ ಆಗಲ್ಲ, ಯೋಗ್ಯತೆ ಇಲ್ಲ ಅಂದ್ರೆ ಇನ್ನೊಂದ್ ಭಾಗ ಮಾಡಿ. ಅಲ್ಲಿನ ಕಷ್ಟ ಸುಖ ಅವರೇ ನೋಡಿಕೊಳ್ತಾರೆ...
ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗಷ್ಟೇ ಉದ್ಯೋಗ ನೀಡಬೇಕು ನಿರ್ಲಕ್ಷಿಸಿದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರ ಪತ್ರಿಕಾ ಹೇಳಿಕೆ ನೀಡಿದ ಸುದ್ದಿ ಇಂದಿನ ದಿನಪತ್ರಿಕೆಗಳಲ್ಲಿ.
#ಕರವೇಸಾಮಾಜಿಕಜಾಲತಾಣ#ಕರವೇ#KRV#karave#NammaMetro
ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ 50 ರೈಲು ನಿರ್ವಾಹಕರ ನೇಮಕಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂದಕ್ಕೆ ಪಡೆದಿದೆ. ಇದನ್ನು ನಾನು ಸ್ವಾಗತಿಸುತ್ತೇನೆ. ನಮ್ಮ ಮೆಟ್ರೋ ನಿಗಮ ಮುಂದೆ ಇಂಥ ವಿಷಯಗಳಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು ಮತ್ತು ಕನ್ನಡಿಗರ ವಿರುದ್ಧ ನಡೆದುಕೊಳ್ಳಬಾರದು ಎಂದು ಆಗ್ರಹಿಸುತ್ತೇನೆ.
ನಮ್ಮ ಮೆಟ್ರೋ ಮಾತ್ರವಲ್ಲ, ಬೇರೆ ಯಾವುದೇ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಅನ್ಯಾಯವಾಗುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿತ ಸಹಿಸಿಕೊಳ್ಳುವುದಿಲ್ಲ. ಹಿಂದೆ ಕದ್ದು ಮುಚ್ಚಿ ಇಂಥ ನೇಮಕಾತಿಗಳು ನಡೆದುಹೋಗುತ್ತಿತ್ತು. ಆದರೆ ಕರ್ನಾಟಕ ರಕ್ಷಣಾ ವೇದಿಕೆ ಈಗ ಇಂಥ ಪ್ರತಿಯೊಂದು ವಿದ್ಯಮಾನಗಳನ್ನು ಅತ್ಯಂತ ಹತ್ತಿರದಿಂದ ಗಮನಿಸುತ್ತಲೇ ಇರುತ್ತದೆ.
ಕನ್ನಡಿಗರಿಗೆ ದ್ರೋಹ ಎಲ್ಲೇ ನಡೆದರೂ ನಾವು ಸುಮ್ಮನಿರೋದಿಲ್ಲ. ಸಂಬಂಧಪಟ್ಟವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಈ ಮೂಲಕ ಎಚ್ಚರಿಸಲು ಬಯಸುತ್ತೇನೆ.
Namma Jana for Namma Metro!
The recent BMRCL recruitment for Train Operators (Loco Pilots) requiring experience of minimum 3 years has been withdrawn. I had asked MD BMRCL to relook at the notification regarding appointment of Train Operators on contract basis and to ensure that the state guidelines are followed. Our government stands firm on justice & fair representation—empowering Kannadigas and securing their rightful place.
#NammaMetro
ಸರ್ಕಾರಿ ಟೆಂಡರ್ ಗಳಲ್ಲಿ ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ ನೀಡುವ @INCKarnataka ಸರ್ಕಾರದ ಅಸಂವಿಧಾನಿಕ ನಿರ್ಧಾರದ ಬಗ್ಗೆ ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದೆ.
ಎಸ್.ಸಿ, ಎಸ್ ಟಿ & ಇತರ ಹಿಂದುಳಿದ ವರ್ಗಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಮೀಸಲಾತಿ ಸೌಲಭ್ಯಗಳನ್ನು, ತನ್ನ ವೋಟ್ ಬ್ಯಾಂಕ್ ಭದ್ರಗೊಳಿಸಲು, ಕೇವಲ ರಾಜಕೀಯ, ಧಾರ್ಮಿಕ ಕಾರಣಗಳಿಗಾಗಿ ಜಾರಿಗೆ ತರುತ್ತಿರುವ ಇಂತಹ ನಿರ್ಧಾರಗಳನ್ನು ದೇಶದ ನ್ಯಾಯಾಲಯಗಳು ಈಗಾಗಲೇ ಹಲವು ಬಾರಿ ತಿರಸ್ಕರಿಸಿವೆ.
ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಸವಿರದೇ ಇದ್ದರೂ, ಕೋರ್ಟ್ ಗಳಿಂದ ಈ ಕುರಿತಾಗಿ ನಿರ್ದೇಶನಗಳಿದ್ದರೂ, ಶ್ರೀ @siddaramaiah ಸರ್ಕಾರ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ನಿರ್ಧರಿಸಿರುವುದು ಡಾ. ಬಿ ಆರ್ ಅಂಬೇಡ್ಕರ್ & ಸಂವಿಧಾನಕ್ಕೆ ಮಾಡುತ್ತಿರುವ ದೊಡ್ಡ ಅಪಚಾರ.
ವಿಷಯ: ಕನ್ನಡಿಗರಾದ ಈ ಮಣ್ಣಿನ ಮಕ್ಕಳಾದ ನಾವು ನಮ್ಮ ನಾಡಿನ ಸಂಸ್ಥೆಯಲ್ಲಿ ಉದ್ಯೋಗ ನೀಡಿ ಎಂದು ಗೊಗೆರೆದರೂ ನಮಗೆ ಉದ್ಯೋಗವನ್ನು ನೀಡದೇ, 50 ಸಂಖ್ಯೆಯ ಟ್ರೈನ್ ಆಪರೇಟರ್ ಹುದ್ದೆಯ ಉದ್ಯೋಗವನ್ನು ಅನ್ಯ ಭಾಷಿಕರಿಗೆ/ಅನ್ಯ ರಾಜ್ಯದರವರಿಗೆ ಕರೆದು ನೀಡುತ್ತಿರುವ BMRCLನ ವಿರುದ್ಧ ಆಕ್ಷೇಪಣೆಯನ್ನು ಸಲ್ಲಿಸುತ್ತಿರುವ ಕುರಿತು. @OfficialBMRCL@DKShivakumar
ಉಲ್ಲೇಖ:1) ಈ ಹಿಂದಿನ SC/TO ಹುದ್ದೆಯ ಪ್ರಕಟಣೆಯ ಸಂಖ್ಯೆ: BMRCL/O&M/C-32065/R-02/2023 ದಿ:22/03/2023.
2)ಮಾನ್ಯ ಉಚ್ಚ ನ್ಯಾಯಲಯದಲ್ಲಿ ದಾಖಲಾಗಿರುವ Writ Petition No:28577/2023 & 8208/2024.
3)ಪ್ರಸ್ತುತ SC/TO ಹುದ್ದೆಯ ಪ್ರಕಟಣೆಯ ಸಂಖ್ಯೆ: BMRCL/HR/0004/O&M /2025 ದಿ:12/03/2025.
*
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ಮಾನ್ಯ ಉಪ ಮುಖ್ಯಮಂತ್ರಿಗಳು/ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ತಮ್ಮಲ್ಲಿ ಗಮನಕ್ಕೆ ತರಬಯಸುವುದೆನೇಂದರೆ, ಓದಲಾದ ಉಲ್ಲೇಖಿತ-1ರಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, ಸಂಸ್ಥೆಯು ಆಹ್ವಾನಿಸಲಾಗಿದ್ದ ಒಟ್ಟು 108 ಸಂಖ್ಯೆಯ ಟ್ರೈನ್ ಆಪರೇಟರ್/ಸ್ಟೇಷನ್ ಕಂಟ್ರೋಲರ್ ಹುದ್ದೆಗೆ ಈ ಕೆಳಕಂಡ ಸಹಿ ಮಾಡಲಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ನಂತರ ಬಿಡುಗಡೆ ಮಾಡಲಾದ ಮುಖ್ಯ ಆಯ್ಕೆಪಟ್ಟಿಯಲ್ಲಿಯೂ ಸಹ ಸ್ಥಾನವನ್ನು ಪಡೆಯಲಾಗಿರುತ್ತದೆ. ಸದರಿ ಪ್ರಕಟಣೆಯಲ್ಲಿ ನಿರ್ದೇಶಿಸಿದಂತೆ ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮೇಲೆ ಕಟ್ಟುನಿಟ್ಟಾಗಿ ಆಯ್ಕೆ ಮಾಡಿ ನಂತರ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದೆಂದು ತಿಳಿಸಿ, ಸದರಿ ಪರೀಕ್ಷೆಯನ್ನು ಸೈಕೋಮೆಟ್ರಿಕ್ ಪರೀಕ್ಷೆಯ ರೂಪದಲ್ಲಿ, ಯಾವುದೇ ಮಾನದಂಡಗಳನ್ನು ನಮೂದಿಸದೇ, ಅಸಮರ್ಪಕವಾಗಿ ಹಾಗೂ ಅವೈಜ್ಞಾನಿಕವಾಗಿ ನಡೆಸಿ ಹಾಗೂ ಅರ್ಹತಾ ಪರೀಕ್ಷೆಯಲ್ಲಿ ಪಡೆಯಬೇಕಾದ ಕನಿಷ್ಠ ಅಂಕಗಳನ್ನು ನಿಗದಿಪಡಿಸದೇ, ಕೃತಕವಾಗಿ ದಾಖಲಾತಿಯನ್ನು ನೀಡಿ, ಅತೀ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಆಯ್ಕೆಪಟ್ಟಿಯಿಂದ ತೆಗೆದು, ಅನರ್ಹವೆಂದು ಪರಿಗಣಿಸಿ, ಕೇವಲ 20-40 ಅಂಕಗಳನ್ನು ಪಡೆದ Waiting List-4 & 5ರಲ್ಲಿನ ಅಭರ್ಥಿಗಳನ್ನು ಆಯ್ಕೆಮಾಡಿರುತ್ತಾರೆ.
ಈ ಹಿನ್ನಲೆಯಲ್ಲಿ, ಈ ಬಗ್ಗೆ ಅಂದಿನ ವ್ಯವಸ್ಥಾಪಕ ನಿರ್ದೇಶಕರು ರವರಾಗಿದ್ದ ಶ್ರೀ. ಅಂಜುಂ ಪರ್ವೇಜ್ ಸರ್ರವರಿಗೆ ನಮ್ಮಗೆ ಅನ್ಯಾಯ ಹಾಗೂ ಪರೀಕ್ಷೆಯಲ್ಲಿ ನಡೆದ ಅಹಿತ ಘಟನೆ , ಸ್ವಜನಪಕ್ಷಪಾತ್ತದ ಬಗ್ಗೆ ವಿವರಿಸಲಾಗಿದ್ದು, ಅಂದು ಮಾನ್ಯರು ಲಿಖಿತ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ನಡೆಸಿ, ಸೈಕೋಮೆಟ್ರಿಕ್ ಪರೀಕ್ಷೆಯಲ್ಲಿ ಹಿಂದಿ ಭಾಷೆಯಿರುವ ಬಗ್ಗೆ, ಸದರಿ ಪರೀಕ್ಷೆಯ ಭಾಗವಾದ Reaction Time ಪರೀಕ್ಷೆಯಲ್ಲಿ (ರಾಜ್ಯಕ್ಕೆ ಹೈದ್ರಾಬಾದ್ ಕರ್ನಾಟಕ ವಿಭಾಗದಲ್ಲಿ ಮೊದಲ, ಎರಡನೇ ಸ್ಥಾನವನ್ನು ಪಡೆದ ಹಾಗೂ ಇನ್ನಿತರ ಅತಿ ಹೆಚ್ಚು ಅಂಕವನ್ನು ಪಡೆದು ಅನೇಕರು ಹಾಗೂ ನಾನ್-ಹೈದ್ರಾಬಾದ್ ವಿಭಾಗದಲ್ಲಿ ದ್ವಿತೀಯ, ತೃತೀಯ ಸ್ಥಾನವನ್ನು ಪಡೆದ ಹಾಗೂ ಹೆಚ್ಚು ಅಂಕಗಳನ್ನು ಪಡೆದ ಅನೇಕ ಅಭ್ಯರ್ಥಿಗಳು ಸೇರಿದಂತೆ) ಅಭ್ಯರ್ಥಿಗಳನ್ನು ಕೇವಲ 0.002 ಮಿಲಿ ಸೆಕೆಂಡು (1 ಸೆಕೆಂಡು =1000 ಸೆಕೆಂಡುಗಳು)ಗಳಲ್ಲಿ ಅನುತ್ತಿರ್ಣಗೊಳಿಸಿರುವ ಬಗ್ಗೆ ಹಾಗೂ ಪರೀಕ್ಷೆಬೇಕಾದ ಮಾನದಂಡಗಳನ್ನು ನಮೂದಿಸದಿರುವುದನ್ನು ಪರಿಗಣಿಸಿ, ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದಿರುತ್ತಾರೆ. ಅಂದು ಸದರಿಯವರು ಹಾಗೂ BMRCLನ ಅಧಿಕಾರಿಗಳು ಮರು ಪರೀಕ್ಷೆ ನೀಡುವುದಾಗಿಯೂ ಸಹ ಒಪ್ಪಿರುತ್ತಾರೆ. ಇದಕ್ಕೆ ಬೇಕಾದ ವಿಡಿಯೋ ಸಾಕ್ಷಿಗಳು ಸಹ ನಮ್ಮಲ್ಲಿವೆ.
ಮುಂದುವರೆದು, ಉಲ್ಲೇಖಿತ-2ರಂತೆ ಮಾನ್ಯ ಹೈಕೋರ್ಟ್ನಲ್ಲಿ ಎರಡು ಪಿಟಿಷನ್ಗಳನ್ನು ದಾಖಲಿಸಲಾಗಿದ್ದು, ಮಾನ್ಯ ನ್ಯಾಯಲಯವು ತನ್ನ ಮಧ್ಯಂತರ ಆದೇಶದಲ್ಲಿ ಮರು ಪರೀಕ್ಷೆಯನ್ನು ನೀಡುವಂತೆ ನಿರ್ದೇಶಿಸಿರುತ್ತದೆ. ನಂತರ, ಅಂತಿಮ ಆದೇಶದ ವೇಳೆಯಲ್ಲಿ ನಡೆದ ವಿಚಾರಣೆಯಲ್ಲಿ BMRCL ಸಂಸ್ಥೆಯು ನಕಲಿ ದಾಖಲಾತಿಯನ್ನು ಸಲ್ಲಿಸಿ, ನ್ಯಾಯಲಯದ ದಿಕ್ಕನ್ನು ತಪ್ಪಿಸಿ ನಮ್ಮೆರಡು ಪಿಟಿಷನ್ಗಳನ್ನು ರದ್ದುಮಾಡಿಸಿರುತ್ತದೆ. ಇದಕ್ಕೆ ಪೂರಕವಾದ ದಾಖಲಾತಿಗಳು ಸಹ ನಮ್ಮಲಿವೆ ಹಾಗೂ ಈ ಆದೇಶದ ವಿರುದ್ದ ಈಗಾಗಲೇ ಮರು ಪರಿಶೀಲನೆ/ಮೇಲ್ಮನವಿಯನ್ನು ಅರ್ಜಿಯನ್ನು ಸಹ ಸಲ್ಲಿಸುವ ತಯಾರಿ ಕೂಡ ಕೈಗೊಳ್ಳಲಾಗಿದೆ.
ಈ ನಡುವೆ, BMRCL ಸಂಸ್ಥೆಯವರು ನಿರಕುಂಶವಾಗಿ, 50 ಸಂಖ್ಯೆ ಟ್ರೈನ್ ಆಪರೇಟರ್ಖಾಲಿ ಹುದ್ದೆಗಳಿಗೆ ಕನ್ನಡಿಗರಲ್ಲದವರಿಗೆ ಅಂದರೆ ಅನ್ಯ ಭಾಷಿಕರಿಗೆ/ಅನ್ಯ ರಾಜ್ಯದರವರಿಗೆ ಕರೆದು ಉದ್ಯೋಗವನ್ನು ನೀಡುವುದಕ್ಕಾಗಿ ಉಲ್ಲೇಖಿತ-3ರಂತೆ ಹೊಸ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿ, ಔಪಚಾರಿಕವೆಂಬಂತೆ ಕನ್ನಡವನ್ನು ಒಂದು ವರ್ಷದಲ್ಲಿ ಬರೆಯಲು,ಓದಲು ಹಾಗೇ ಅರ್ಥೈಸಿಕೊಳ್ಳಲು ತರಗತಿ ನೀಡಲಾಗುವುದೆಂದು ತಿಳಿಸಿರುತ್ತಾರೆ. ಇದಕ್ಕಾಗಿಯೇ ಬಹುತೇಕ ಕರ್ತವ್ಯದ ಗಂಟೆಗಳನ್ನು ಪೋಲು ಮಾಡಲು ಅಲ್ಲಿನ ಅನ್ಯ ಭಾಷೆಯ/ಅನ್ಯ ರಾಜ್ಯದ ಅಧಿಕಾರಿಗಳು ನಿರ್ಧರಿಸಿರುತ್ತಾರೆ. ಈ ಮೂಲಕ ಸದರಿ ಹುದ್ದೆಗೆ ಪೂರಕವಾಗಿ ತಾಂತ್ರಿಕ ಅಂಶಗಳಂತೆ ಅತೀ ಹೆಚ್ಚು ಅಂಕ ಪಡೆದ ನಮ್ಮನ್ನು ನಿರ್ಲಕ್ಷಿಸಿ, ಅವೈಜ್ಞಾನಿಕವಾಗಿ ನಡೆಸಿದ ಸೈಕೋಮೆಟ್ರಿಕ್ ಪರೀಕ್ಷೆಯಲ್ಲಿ ಬಗ್ಗೆ ಇಲ್ಲಸಲ್ಲದ ಸಬೂಬನ್ನು ನೀಡಿ ಹಾಗೂ ಮಾನ್ಯ ನ್ಯಾಯಲಯಕ್ಕೆ ತಪ್ಪು ದಾಖಲಾತಿಯನ್ನು ಪೂರೈಸಿ, ಈ ಮಣ್ಣಿನ ಮಕ್ಕಳಾದ /ಕನ್ನಡಿಗರಾದ ನಮ್ಮನ್ನು ಸೋಲಿಸಿರುತ್ತಾರೆ. ಈ ಬಗ್ಗೆ ತಮ್ಮಲ್ಲಿ ವಿನಯಪೂರ್ವಕವಾಗಿ ಕೋರಿಕೊಳ್ಳುವುದೆನೇಂದರೆ, ಸದರಿ ಹುದ್ದೆಗಾಗಿ ಈ ಹಿಂದೆ ಅರ್ಜಿ ಸಲ್ಲಿಸಿ ಅತೀ ಹೆಚ್ಚು ಅಂಕವನ್ನು ಪಡೆದ ನಮ್ಮಗೆ ಸದರಿ ಉದ್ಯೋಗವನ್ನು ಕಲ್ಪಿಸಿಕೊಡಲು/ಒದಗಿಸಿಕೊಡಲು ಸಂಬಂಧಿಸಿದವರಿಗೆ ಸೂಕ್ತ ಕ್ರಮಕೈಗೊಳ್ಳಲು ನಿರ್ದೇಶಿಸುವಂತೆ ಈ ಮೂಲಕ ಕೋರಲಾಗಿದೆ.