Official twitter account of AP Nagar Police Station (080-23482644).| Dial Namma -112 in case of emergency. | Help us to serve you better | @BlrCityPolice
ಈ ದಿನ "ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧದ ದಿನ" ಅಂಗವಾಗಿ, #apnagarbcp ಠಾಣಾ ವ್ಯಾಪ್ತಿಯಲ್ಲಿನ ವಿದ್ಯಾರ್ಥಿ ನಿಲಯ, ಪಿ ಜಿ, ರಸ್ತೆ, ಪಾರ್ಕ್, ಹೋಟೆಲ್, ಐ ಟಿ ಕಚೇರಿಗಳಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ದಿನ "ವಿಶ್ವ ಮಾದಕ ವಸ್ತುಗಳ ನಿಷೇಧ ದಿನಾಚರಣೆ"ಯ ಅಂಗವಾಗಿ #apnagarbcp ಠಾಣಾ ಸರಹದ್ದಿನ ನಮ್ಮೂರ ತಿಂಡಿ, ವಿನಾಯಕ ಪಾರ್ಕ್, ಬಕಾಸುರ ಬಂಡಿ ಗೆ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಲಾಯಿತು...
ಮನೆ, ಅಂಗಡಿ, ಕಚೇರಿ & ಅಪಾರ್ಟ್ಮೆಂಟ್ಗಳಲ್ಲಿ ಪ್ರವೇಶ & ನಿರ್ಗಮನ ಸ್ಥಳಗಳಲ್ಲಿ ಸ್ಪಷ್ಟ ಚಿತ್ರಣವನ್ನು ದಾಖಲಿಸುವಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ
#CCTV ಕೇವಲ ಕ್ಯಾಮೆರಾ ಅಲ್ಲ, ಅದು ಅಪರಾಧ ತಡೆಗಟ್ಟುವ & ನಿಮ್ಮ ಸುರಕ್ಷತೆಯನ್ನು ಹೆಚ್ಚಿಸುವ ಪರಿಣಾಮಕಾರಿ ಸಾಧನವಾಗಿದೆ @BlrCityPolice#CrimePrevention#PublicSafety
ಈ ದಿನ #apnagarbcp ಠಾಣಾ ಸರಹದ್ದಿನಲ್ಲಿ, ಮಾನ್ಯ ಸಿಪಿ ಸಾಹೇಬರು ಬೆಂಗಳೂರು ನಗರ, ರವರ ಆದೇಶದಂತೆ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿರುತ್ತದೆ, ಹಾಗೂ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆ ವಹಿಸುವಂತೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡಿರುತ್ತದೆ...
ಈ ದಿನ #apnagarbcp ಠಾಣಾ ಸರಹದ್ದಿನಲ್ಲಿ, ಮಾನ್ಯ ಸಿಪಿ ಸಾಹೇಬರು ಬೆಂಗಳೂರು ನಗರ, ರವರ ಆದೇಶದಂತೆ ರೌಡಿ ಆಸಾಮಿಗಳ ಪರಿಶೀಲನೆ ನಡೆಸಲಾಗಿರುತ್ತದೆ, ಹಾಗೂ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ರೌಡಿ ಆಸಾಮಿಗಳಿಗೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡಿರುತ್ತದೆ...
ಪಶ್ಚಿಮ ವಿಭಾಗದ ಪೊಲೀಸ್ ಸಿಬ್ಬಂದಿಯ ದೈಹಿಕ ಸದೃಢತೆ, ಮಾನಸಿಕ ಆರೋಗ್ಯ & ಒತ್ತಡ ನಿರ್ವಹಣೆಯನ್ನು ಉತ್ತೇಜಿಸುವ ಉದ್ದೇಶದಿಂದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಯೋಗ ಶಿಬಿರವನ್ನು ಆಯೋಜಿಸಲಾಗಿತ್ತು.
ಅಧಿಕಾರಿ & ಸಿಬ್ಬಂದಿಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ಯೋಗಾಸನಗಳು & ಪ್ರಾಣಾಯಾಮ ಅಭ್ಯಾಸ ಮಾಡಿದರು @BlrCityPolice.
ಈ ದಿನ #apnagarbcp ಪೊಲೀಸ್ ಠಾಣೆಯಲ್ಲಿ ಮಾನ್ಯ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಲತೇಶ್ ಕುಮಾರ್ ಡಿಕೆ ರವರು ಮಾನ್ಯ ಗೃಹ ಸಚಿವರ ಹಾಗೂ ಮಾನ್ಯ ಬೆಂಗಳೂರು ಪೊಲೀಸ್ ಕಮಿಷನರ್ ಅವರ ಆದೇಶದಂತೆ ಠಾಣ ���್ಯಾಪ್ತಿಯಲ್ಲಿನ ಬಾರ್ ಅಂಡ್ ರೆಸ್ಟೋರೆಂಟ್, ಪಬ್ , ಕ್ಲಬ್ ನ ಮಾಲೀಕರಿಗೆ ಮಾನ್ಯ ಗೃಹ ಸಚಿವರ ಆದೇಶವನ್ನು ಪಾಲಿಸುವಂತೆ ತಿಳುವಳಿಕೆ ನೀಡಿರುತ್ತಾರೆ
ಈ ದಿನ#apnagarbcp ವ್ಯಾಪ್ತಿಯಲ್ಲಿನ ಮುದ್ದಿನಪಾಳ್ಯದಲ್ಲಿ ,ಪುಟ್ ಪೆಟ್ರೋಲಿಂಗ್, ಏರಿಯಾ ಡಾಮಿನೇಷನ್ ಕೈಗೊಂಡು ಬಾರ್ ಮತ್ತು ರೆಸ್ಟೋರೆಂಟ್ಗಳು, ಲಾಡ್ಜ್ಗಳಿಗೆ, ಮೆಡಿಕಲ್ ಶಾಪ್ ಗಳಿಗೆ ಮತ್ತು ಪೆಟ್ರೋಲ್ ಬಂಕ್ ಗೆ ಭೇಟಿ ನೀಡಿ ಕಾನೂನು ಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಯಿತು ಅಪರಾಧಗಳ ಬಗ್ಗೆ ಅರಿವು ಮೂಡಿಸಲಾಯಿತು
ಈ ದಿನ ಅನ್ನಪೂರ್ಣೇಶ್ವರಿ ನಗರ ಪೊ��ೀಸ್ ಠಾಣೆಯ ವ್ಯಾಪ್ತಿಯ ಕನಕ ಶಾಲೆ ನಾಗರಬಾವಿ ಇಲ್ಲಿಗೆ ಭೇಟಿ ನೀಡಿ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ತೆರದ ಮನೆ ಕಾರ್ಯಕ್ರಮ ಹಾಗೂ ಬಾಲಕಾರ್ಮಿಕರ ವಿರೋಧಿ ದಿನದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು...
ಈ ದಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ "ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ"ದ ಅಂಗವಾಗಿ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು..
ಈ ದಿನ #apnagarbcp ಠಾಣಾ ವ್ಯಾಪ್ತಿಯಲ್ಲಿ ಬರುವ ಮಾಳಗಾಳ, ಕಲ್ಯಾಣ ನಗರ, ಆದಿಜಾಂಬವ ಕಾಲೋನಿಗೆ ಎಲ್ಲಿ ,ಪುಟ್ ಪೆಟ್ರೋಲಿಂಗ, ಏರಿಯಾ ಡಾಮಿನೇಷನ್ ಕೈಗೊಂಡು ಬಾರ್ ಮತ್ತು ರೆಸ್ಟೋರೆಂಟ್ಗಳು ಹಾಗೂ ಅಂಗಡಿ ಮಾಲೀಕರಿಗೆ ಕಾನೂನುಬದ್ಧ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಯಿತು ಅಪರಾಧಗಳ ಮುನ್ನೆಚ್ಚರಿಕೆಯ ಬಗ್ಗೆ ಅರಿವು ಮೂಡಿಸಲಾಯಿತು
ಈ ದಿನ ಠಾಣಾ ಸರಹದ್ದಿನ RHSC ಲೇಔಟ್ ನಲ್ಲಿ ನಿರ್ಮಾಣ ಹ��ತದಲ್ಲಿರುವ ಕಟ್ಟಡದ ನಾಲ್ಕನೇ ಮಹಡಿಯಿಂದ ಬುದ್ಧಿಮಾಂದ್ಯ ವ್ಯಕ್ತಿಯೊಬ್ಬ ಬೀಳಲು ಯತ್ನಿಸುತ್ತಿರುವುದನ್ನು ಗಮನಿಸಿದ ಠಾಣಾ PSI Suresh Handral, ASI Lokesh, HC Prakash ಹಾಗು HC Suresh Babu ರವರು ಸುರಕ್ಷಿತವಾಗಿ ರಕ್ಷಿಸಿ ನಿರಾಶ್ರಿತರ ಕೇಂದ್ರಕ್ಕೆ ಬಿಟ್ಟಿರುತ್ತಾರೆ...
ಈ ದಿನ ಸಾರ್ವಜನಿಕರೊಬ್ಬರು ಓಲಾ ಆಟೋದಲ್ಲಿ ತಮ್ಮ ಬೆಲೆಬಾಳುವ ಚ���ನ್ನದ ಮಾಂಗಲ್ಯ ಹಾಗೂ 4000 ಹಣವನ್ನು ಮರೆತು ಬಿಟ್ಟಿರುವುದಾಗಿ ತಿಳಿಸಿದ ಮೇರೆಗೆ ತಕ್ಷಣವೇ ಕಾರ್ಯಮಜ್ಞರಾದ ಠಾಣಾ ಅಧಿಕಾರಿ/ಸಿಬ್ಬಂದಿಗಳು ಆಟೋ ನಂಬರ್ ಹಾಗೂ ಚಾಲಕರ ಮೊಬೈಲ್ ನಂಬರ್ ಅನ್ನು ಹುಡುಕಿ ಅವರಿಂದ ಆಟೋದಲ್ಲಿ ಬಿಟ್ಟಿದ್ದ ವಸ್ತುಗಳನ್ನು ಪತ್ತೆಮಾಡಿ ಹಿಂದಿರುಗಿಸಲಾಯಿತು.
ಈ ದಿನ @APNagarBCP ಠಾಣ ವ್ಯಾಪ್ತಿಯಲ್ಲಿ ಏರಿಯಾ ಡಾಮಿನೇಷನ್ ಮಾಡುವ ಮೂಲಕ ಠಾಣಾ ವ್ಯಾಪ್ತಿಯಲ್ಲಿನ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಲ್ಲಿನ ಸಿಬ್ಬಂದಿ ಅವರಿಗೆ ಸಮಯದ ಪರಿಪಾಲನೆ ಹಾಗೂ ಅಪರಾಧ ನಿಯಂತ್ರಣದ ಕುರ��ತು ಸೂಕ್ತ ತಿಳುವಳಿಕೆ ನೀಡಲಾಗಿರುತ್ತದೆ...
ಈ ದಿನ ಅನ್ನಪೂರ್ಣೇಶ್ವರಿನಗರ ಠಾಣಾ ಸರಹದ್ದಿನ ಮುಖ್ಯ ಪ್ರದೇಶಗಳಲ್ಲಿ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಸರ್ಪ್ರೈಸ್ ವೆಹಿಕಲ್ ಚೆಕಿಂಗ್, ಸೀಜಿಂಗ್, ಫೇಕ್ ನಂಬರ್ ಪ್ಲೇಟ್ಸ್ ಮತ್ತು ಎನ್.ಡಿ.ಪಿ.ಎಸ್ ಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಯಿತು...