ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ (FTA) ಜಾರಿಗೆ!
ನಮ್ಮ ರೈತರು, ಮೀನುಗಾರರು, ಕಾರ್ಮಿಕರು ಮತ್ತು MSME ವಲಯಕ್ಕೆ ಜಾಗತಿಕ ಮಾರುಕಟ್ಟೆಯ ಹೊಸ ಬಾಗಿಲು ಓಪನ್.
ಗರಿಷ್ಠ ಸುಂಕದಿಂದ ನೇರ ಶೂನ್ಯಕ್ಕೆ ಇಳಿದಿದೆ. ಶೇ. 97.1% ರಷ್ಟು ಟ್ಯಾರಿಫ್ ಲೈನ್ಗಳಿಗೆ ಶೂನ್ಯ ಸುಂಕದ ವಿನಾಯಿತಿ ನೀಡಲಾಗಿದೆ.
#IndiaUKTrade#EconomicGrowth
'ಗುಡ್ ಮಾರ್ನಿಂಗ್ ಬ್ಯಾಟರಾಯನಪುರ' – ಮನೆ ಮನೆಗೆ ಭೇಟಿ, ಮತದಾರರ ಜಾಗೃತಿಯ ಪಯಣ!
ಇಂದು ವಿದ್ಯಾರಣ್ಯಪುರ ವಾರ್ಡಿನ ಹೆಚ್.ಎಮ್.ಟಿ (HMT) ಬಡಾವಣೆಯ 1ನೇ ಬ್ಲಾಕ್ ಹಾಗೂ 2ನೇ ಬ್ಲಾಕ್ ಭಾಗಗಳಲ್ಲಿ 'ಗುಡ್ ಮಾರ್ನಿಂಗ್ ಬ್ಯಾಟರಾಯನಪುರ' ಜನಸಂಪರ್ಕ ಅಭಿಯಾನ ಉತ್ಸಾಹದಿಂದ ನಡೆಯಿತು.
#GoodMorningBytarayanapura#ARavi#ARaviBJP
'ಗುಡ್ ಮಾರ್ನಿಂಗ್ ಬ್ಯಾಟರಾಯನಪುರ' – ಮನೆ ಮನೆಗೆ ಭೇಟಿ, ಮತದಾರರ ಜಾಗೃತಿಯ ಪಯಣ!
ಇಂದು ವಿದ್ಯಾರಣ್ಯಪುರ ವಾರ್ಡಿನ ಹೆಚ್.ಎಮ್.ಟಿ (HMT) ಬಡಾವಣೆಯ 1ನೇ ಬ್ಲಾಕ್ ಹಾಗೂ 2ನೇ ಬ್ಲಾಕ್ ಭಾಗಗಳಲ್ಲಿ 'ಗುಡ್ ಮಾರ್ನಿಂಗ್ ಬ್ಯಾಟರಾಯನಪುರ' ಜನಸಂಪರ್ಕ ಅಭಿಯಾನ ಉತ್ಸಾಹದಿಂದ ನಡೆಯಿತು.
#SpecialIntensiveRevision#SIR#ARavi#ARaviBJP
ಬೆಳಗಿನ ಶುಭಾರಂಭ... ಜನರೊಂದಿಗೆ ಆತ್ಮೀಯ ಸಂವಾದ!
ಇಂದು 'ಗುಡ್ ಮಾರ್ನಿಂಗ್ ಬ್ಯಾಟರಾಯನಪುರ' ಅಭಿಯಾನದಡಿ ವಿದ್ಯಾರಣ್ಯಪುರ ವಾರ್ಡಿನ ಜ್ಞಾನೇಶ್ವರಿ ಬಡಾವಣೆ, BEL 5th Block ಹಾಗೂ ಐ.ಇ.ಸಿ.ಎಚ್.ಎಸ್. ಲೇಔಟ್ (IECHS Layout) ಬಡಾವಣೆಗಳ ಮನೆ ಮನೆಗೆ ತೆರಳಿ ಸಾರ್ವಜನಿಕರನ್ನು ಭೇಟಿ ಮಾಡಲಾಯಿತು.
#ARavi#GoodMorningBytarayanapura
ಬ್ಯಾಟರಾಯನಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕಂಡುಬಂದ ಲೋಪಗಳಿಂದ ಸುಮಾರು 30,000 ಅರ್ಹ ಮತದಾರರ ಹಕ್ಕಿಗೆ ಧಕ್ಕೆಯಾಗುವ ಆತಂಕವಿದೆ. ದಾಖಲೆಗಳೊಂದಿಗೆ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಪ್ರತಿಯನ್ನು ಮುಖ್ಯ ಚುನಾವಣಾ ಆಯುಕ್ತರಿಗೂ ಕಳುಹಿಸಲಾಗಿದೆ. ಪ್ರತಿಯೊಬ್ಬ ಮತದಾರರ ಹಕ್ಕಿನ ರಕ್ಷಣೆಗೆ ನಾವು ಬದ್ಧ.
#ARavi
ವಿಶ್ವ ಯುವ ಕೌಶಲ್ಯ ದಿನದ ಹಾರ್ದಿಕ ಶುಭಾಶಯಗಳು!
ಯುವಕರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಅಗತ್ಯವಾದ ಕೌಶಲ್ಯ ಮತ್ತು ಅವಕಾಶಗಳನ್ನು ನೀಡುವುದು ಸಮಾಜದ ಜವಾಬ್ದಾರಿಯಾಗಿದೆ.
ವಿಶ್ವ ಯುವ ಕೌಶಲ್ಯ ದಿನ, ನಾವೆಲ್ಲರೂ ಯುವಜನರ ನೈಪುಣ್ಯತೆಯನ್ನು ಹೆಚ್ಚಿಸಲು ಬದ್ಧರಾಗಿ ರಾಷ್ಟ್ರದ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸೋಣ.
ಪಕ್ಷದ ಹಿರಿಯ ನಾಯಕರು, ಮಾಜಿ ಸಚಿವರು ಹಾಗೂ ಜನಪರ ರಾಜಕಾರಣದ ಪ್ರತಿರೂಪರಾಗಿದ್ದ ಶ್ರೀ ರಾಮಚಂದ್ರ ಗೌಡರ ನಿಧನದ ಸುದ್ದಿ ತಿಳಿದು ಬಹಳ ದುಃಖವಾಯಿತು.
ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ. ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಈ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ತಮ್ಮ ವಿಶಿಷ್ಟ ಹಾಗೂ ಭಾವಪೂರ್ಣ ಕಂಠದ ಮೂಲಕ ಹಲವು ತಲೆಮಾರುಗಳ ಸಂಗೀತಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಹಿರಿಯ ಗಾಯಕಿ ಎಸ್. ಜಾನಕಿ ಅಮ್ಮನವರ ಅಗಲಿಕೆ ನನಗೆ ತೀವ್ರ ದುಃಖವನ್ನುಂಟು ಮಾಡಿದೆ.
ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ.
ಭಾವಪೂರ್ಣ ಶ್ರದ್ಧಾಂಜಲಿ.
ಓಂ ಶಾಂತಿ. 🙏
#sjanaki#omshanti
ಕ್ಷೇತ್ರದ ಅಭಿವೃದ್ಧಿ ಕೇವಲ ರಸ್ತೆ, ದೀಪಗಳಿಗೆ ಸೀಮಿತವಾಗಿಲ್ಲ; ಅದು ಪ್ರತಿಯೊಬ್ಬ ನಾಗರಿಕನ ಹಕ್ಕನ್ನು ಸಶಕ್ತಗೊಳಿಸುವುದರಲ್ಲಿದೆ. ಇದೇ ಆಶಯದೊಂದಿಗೆ, ಇಂದು ವಿದ್ಯಾರಣ್ಯಪುರ ವಾರ್ಡಿನ ವೆಂಕಟಶಾಮಪ್ಪ ಮತ್ತು ಗುರುದರ್ಶಿನಿ ಬಡಾವಣೆಗಳಲ್ಲಿ 'ಗುಡ್ ಮಾರ್ನಿಂಗ್ ಬ್ಯಾಟರಾಯನಪುರ' ಅಭಿಯಾನ ನಡೆಸಲಾಯಿತು.
ಕ್ಷೇತ್ರದ ಅಭಿವೃದ್ಧಿ ಕೇವಲ ರಸ್ತೆ, ದೀಪಗಳಿಗೆ ಸೀಮಿತವಾಗಿಲ್ಲ; ಅದು ಪ್ರತಿಯೊಬ್ಬ ನಾಗರಿಕನ ಹಕ್ಕನ್ನು ಸಶಕ್ತಗೊಳಿಸುವುದರಲ್ಲಿದೆ. ಇದೇ ಆಶಯದೊಂದಿಗೆ, ಇಂದು ವಿದ್ಯಾರಣ್ಯಪುರ ವಾರ್ಡಿನ ವೆಂಕಟಶಾಮಪ್ಪ ಮತ್ತು ಗುರುದರ್ಶಿನಿ ಬಡಾವಣೆಗಳಲ್ಲಿ 'ಗುಡ್ ಮಾರ್ನಿಂಗ್ ಬ್ಯಾಟರಾಯನಪುರ' ಅಭಿಯಾನ ನಡೆಸಲಾಯಿತು
#SIR#VoterListRevision#VoterPower
ಶಿಕ್ಷಣ, ಸಂಸ್ಕಾರ ಮತ್ತು ಸಮಾಜ ಸೇವೆಯ ಧ್ಯೇಯೋದ್ದೇಶಗಳ ಅಡಿಯಲ್ಲಿ, ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ರಾಷ್ಟ್ರ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿರುವ ಸಕ್ರಿಯ ಎಬಿವಿಪಿ ಕಾರ್ಯಕರ್ತರಿಗೆ ರಾಷ್ಟ್ರೀಯ ವಿದ್ಯಾರ್ಥಿ ದಿನ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು.
#InspiringYouth
ಇಂದು ವಿದ್ಯಾರಣ್ಯಪುರ ವಾರ್ಡಿನ ಬಿ. ಇ. ಎಲ್ ಲೇಔಟ್ 2ನೇ ಬ್ಲಾಕ್ ನಲ್ಲಿ ನಡೆದ 'ಗುಡ್ ಮಾರ್ನಿಂಗ್ ಬ್ಯಾಟರಾಯನಪುರ' ಜನಸಂಪರ್ಕ ಅಭಿಯಾನದಲ್ಲಿ ಕಾರ್ಯಕರ್ತರು, ಹಿತೈಷಿಗಳು ಹಾಗೂ ಬೆಂಬಲಿಗರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಲಾಯಿತು.
#GoodMorningByatarayanapura#ARaviBJP
ಭಾರತೀಯ ರಾಜಕೀಯದಲ್ಲಿ ಹೊಸ ಧೋರಣೆಗೆ ಬೆಳಕು ನೀಡಿ, ದೇಶದ ಸಾರ್ವಭೌಮತ್ವಕ್ಕಾಗಿ ಹೋರಾಡಿದ ಧೀಮಂತ ನಾಯಕರು ಹಾಗೂ ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜಯಂತಿಯಂದು ವಿನಮ್ರ ನಮನಗಳು.
#ShyamaPrasadMookherjee#RashtraBhakti#BJP#ARaviBJP
ಹಸಿರು ಕ್ರಾಂತಿಯ ಹರಿಕಾರರು ಹಾಗೂ ಸಾಮಾಜಿಕ ಕ್ರಾಂತಿಯ ಧೀಮಂತ ನಾಯಕರಾದ ಡಾ. ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
ಸಮಾಜದ ಪ್ರತಿಯೊಬ್ಬರಿಗೂ ಗೌರವ ಮತ್ತು ಅವಕಾಶ ಸಿಗಬೇಕು ಎಂಬ ಸಂದೇಶವನ್ನು ಬಾಬು ಜಗಜೀವನ್ ರಾಮ್ ಅವರ ಜೀವನ ಸಾರುತ್ತದೆ. ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಸ್ಮರಿಸೋಣ.
ಸಾರ್ವಜನಿಕ ಜೀವನದಲ್ಲಿ ಸರಳತೆ ಮತ್ತು ಪ್ರಾಮಾಣಿಕತೆ ಎಷ್ಟು ಮುಖ್ಯವೆಂಬುದನ್ನು ತಮ್ಮ ಬದುಕಿನಿಂದ ತೋರಿಸಿದ ಡಾ. ವಿ.ಎಸ್. ಆಚಾರ್ಯ ಅವರ ಜಯಂತಿಯಂದು ಭಾವಪೂರ್ಣ ನಮನಗಳು.
#VSAcharya#ಜನ್ಮದಿನಸ್ಮರಣೆ#KarnatakaBJP#ARaviBJP