Many Many congratulations to RCB namma dodda Simhagulu for an emphatic victory in Dharamshala tonight. You roared loud like the Lions of Bengaluru and roared into the IPL final as defending champions.
ಚಿಕ್ಕಮಗಳೂರು ನನ್ನ ಪಾಲಿಗೆ ಕೇವಲ ಕ್ಷೇತ್ರವಲ್ಲ, ಅದು ನನ್ನ ಉಸಿರು. ಇಲ್ಲಿನ ಜನರ ಬದುಕನ್ನು ಹಸನಾಗಿಸಲು ನನ್ನ ಜೀವನದ ಪ್ರತಿ ಹಂತದಲ್ಲೂ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. 2018 ರಿಂದ 2023ರವರೆಗಿನ ಅವಧಿಯಲ್ಲಿ ನಿಮ್ಮ ಮನೆಯ ಮಗನಾಗಿ ಚಿಕ್ಕಮಗಳೂರಿನ ಸರ್ವಾಂಗೀಣ ಏಳಿಗೆಗಾಗಿ ₹5,857.07ಕೋಟಿ ಅನುದಾನವನ್ನು ಮಂಜೂರು ಮಾಡಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ.
ಇಂದು ನಾವು ತಂದ ಅನುದಾನದ ಕೆಲಸಗಳಿಗೆ ತಾವೇ ಕಾರಣ ಎಂದು ಬಿಂಬಿಸಿಕೊಳ್ಳುತ್ತಿರುವವರಿಗೆ, ಅಂಕಿ-ಅಂಶಗಳ ಸಮೇತ ಅಧಿಕೃತ ವರದಿ ಇಲ್ಲಿದೆ. ಚಿಕ್ಕಮಗಳೂರಿನ ಸಮಗ್ರ ಅಭಿವೃದ್ಧಿಗೆ ತಂದ ಅನುದಾನದ ಪ್ರತಿ ಪೈಸೆ ಲೆಕ್ಕವನ್ನೂ ಕ್ಷೇತ್ರದ ಮಾಲೀಕರಾದ ನಿಮ್ಮ ಮುಂದೆ ಹೆಮ್ಮೆಯಿಂದ ಇಡುತ್ತಿದ್ದೇನೆ.
RCB, RCB, RCB namma dodda Simhagulu… you made us all soooo proud today - first team to qualify. You played BOLD and roared even louder as the Lions from Bengaluru. Well done and congratulations. Onward and Upward to the best team in the IPL.
ನಮ್ಮ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಹಾಗು ಕಾರ್ಯಕರ್ತರ ಬೆನ್ನಿಗೆ ನಿಲ್ಲುವ ಬಿಎಲ್ ಸಂತೋಷ್ ಜಿಯವರನ್ನು @blsanthosh ಭೇಟಿಯಾಗಿ 10 ವರ್ಷಗಳ ರಿಪೋರ್ಟ್ ಕಾರ್ಡ್ ನೀಡಿ ಆಶೀರ್ವಾದ ಪಡೆದುಕೊಂಡೆ.
ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಶ್ರೀ @narendramodi ಅವರ ನೇತೃತ್ವದ @BJP4India ಸರಕಾರದ ನೀಡಿದ ಜನಪರ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜನರಿಗೆ ತಿಳಿ ಹೇಳಲು ಪ್ರತಿ ಗ್ರಾಮಕ್ಕೆ 24 ತಾಸುಗಳ ಕಾಲ ವಾಸ್ತವ್ಯ ಸಮೇತ ಪ್ರವಾಸಿ #GaonChaloAbhiyan, ಗ್ರಾಮ ಚಲೋ ಅಭಿಯಾನವು ಫೆಬ್ರವರಿ 9 ರಿಂದ 11 ರವರೆಗೆ ನಡೆಯಲಿದೆ.
ಇಂದು ತುಮಕೂರು ಜಿಲ್ಲೆ ಕುಣಿಗಲ್ ಮಂಡಲದಲ್ಲಿ, ಈ ಅಭಿಯಾನದಲ್ಲಿ ತೊಡಗಿಸಿಕೊಂಡ ಪ್ರವಾಸಿ ಕಾರ್ಯಕರ್ತರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದೆನು. ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರಕಾರದ ನೀಡಿದ ಜನಪರ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜನರಿಗೆ ತಲುಪುವಂತೆ ಮಾಡಲು ಕೆಲಸ ಮಾಡಬೇಕು. ಗ್ರಾಮ ಚಲೋ ಅಭಿಯಾನ ಯಶಸ್ವಿಯಾಗಲು ಎಲ್ಲರೂ ಸೇರಿ ಮಾಡಬೇಕಾದ ಕಾರ್ಯಗಳನ್ನು ಪ್ರವಾಸಿ ಕಾರ್ಯಕರ್ತರಿಗೆ ಕರೆ ನೀಡಿದೆ.
ಈ ಸಂದರ್ಭದಲ್ಲಿ ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ರವಿ ಹೆಬ್ಬಾಕ, ಕುಣಿಗಲ್ ಮಂಡಲ ಅಧ್ಯಕ್ಷರಾದ ಶ್ರೀ ಬಲರಾಮ್ ಕೆ ಎಸ್ , ಬಿಜೆಪಿ ಮುಖಂಡರಾದ ಶ್ರೀ ಡಿ ಕೃಷ್ಣ ಕುಮಾರ್ , ಅಭಿಯಾನ ಜಿಲ್ಲಾ ಸಂಚಾಲಕರಾದ ಶ್ರೀ ರುದ್ರೇಶ್, ಮಂಡಲ ಸಂಚಾಲಕರಾದ ಶ್ರೀ ಡಿ ಜಿ ವೆಂಕಟೇಶ್, ಸಹ ಸಂಚಾಲಕರು , ಪ್ರವಾಸಿ ಕಾರ್ಯಕರ್ತರು ಭಾಗವಹಿಸಿದ್ದರು.
#ಗ್ರಾಮಚಲೋ
#GramaChalo
#ಗ್ರಾಮ_ಚಲೋ
ನಮ್ಮ ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡದ ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಕುಂಪಲ ಅವರ ಪದಗ್ರಹಣ ಸಮಾರಂಭದಲ್ಲಿ ಇಂದು ಭಾಗವಹಿಸಲಾಯಿತು.
ಈ ಲೋಕಸಭಾ ಚುನಾವಣೆಗಾಗಿ ನೂತನ ಅಧ್ಯಕ್ಷರು ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಲಿ, ಅದರಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸುತ್ತೇನೆ.
ಚಿಕ್ಕಮಗಳೂರು ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಶ್ರೀ ದೇವರಾಜ ಶೆಟ್ಟಿ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಆಗಮಿಸಿದ @BJP4Karnataka ದ ನೂತನ ಅಧ್ಯಕ್ಷರಾದ @BYVijayendra ಅವರಿಗೆ ಚಿಕ್ಕಮಗಳೂರಿನ ಜನತೆ ನೀಡಿದ ಭರ್ಜರಿ ಸ್ವಾಗತ.
ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದಲ್ಲಿ @JanataDal_S ಮತ್ತು @BJP4Karnataka ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದೆ.
ಬಿಜೆಪಿ ಹಿರಿಯ ನಾಯಕರಾದ ಶ್ರೀ @CTRavi_BJP ಅವರು, ಮಾಜಿ ಶಾಸಕ ಶ್ರೀ ಪ್ರೀತಂಗೌಡ, ನಮ್ಮ ಪಕ್ಷದ ಮಾಜಿ ಶಾಸಕರಾದ ಶ್ರೀ ಸುರೇಶ್ ಗೌಡ, ಶ್ರೀ ಸಿ.ಎಸ್.ಪುಟ್ಟರಾಜು, ಡಾ.ಕೆ.ಅನ್ನದಾನಿ ಸೇರಿ ಎರಡೂ ಪಕ್ಷಗಳ ರಾಜ್ಯ, ಜಿಲ್ಲಾ ಮುಖಂಡರು ಹಾಗೂ ಅಸಂಖ್ಯಾತ ಕಾರ್ಯಕರ್ತರು ಭಾಗಿಯಾಗಿದ್ದರು.
#ಮಂಡ್ಯ #ಹನುಮಧ್ವಜ
Divine Moment 🙏
Hon’ble President Smt. Droupadi Murmu was welcomed with the traditional “Sengol” as She entered the Parliament to address the Joint Session of both the Houses today.
ಹಿಂದುಗಳ ತಾಳ್ಮೆ ದೌರ್ಬಲ್ಯ ಎಂದು ಕೊಂಡಿರುವ ಹಿಂದೂ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತುಘಲಕ್ ಸರ್ಕಾರದ ವಿರುದ್ಧ ಎದ್ದು ನಡೆದಿದೆ ಹಿಂದೂ ಶಕ್ತಿ.
ಮಂಡ್ಯದ ಕೆರಗೋಡಿನಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ನಿರ್ಣಯ ಮಾಡಿ ಹಾಕಲಾಗಿದ್ದ ಹನುಮಧ್ವಜವನ್ನು ತೆರವುಗೊಳಿಸಿದ ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ನಡೆಗೆ ಖಂಡಿಸಿ ಮಂಡ್ಯದೆಡೆಗೆ ನಡೆದಿದೆ ಹಿಂದು ಶಕ್ತಿ.
ಕೆರೆಗೋಡಿನ ಗ್ರಾಮಸ್ಥರ ನೋವಿಗೆ ಧ್ವನಿಯಾಗಿದೆ ಹಿಂದು ಶಕ್ತಿ