ಜನಸೇವೆಗೆ ಸಮರ್ಪಿತ ಕರ್ಮಯೋಗಿ, ದೇಶದ ಶ್ರೇಷ್ಠ ಪ್ರಧಾನ ಸೇವಕ, ದೂರದೃಷ್ಟಿಯ ನಾಯಕತ್ವದೊಂದಿಗೆ ವಿಕಸಿತ ಭಾರತ ಸಂಕಲ್ಪದೆಡೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ಕಾಯಕ ತಪಸ್ವಿಯಾದ ನಮ್ಮೆಲ್ಲರ ನೆಚ್ಚಿನ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..💐
#HappyBdayPMModi
ಕೋಟ್ಯಂತರ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಶತ ಶತ ನಮನಗಳು.
ಅಟಲ್ ಜೀ ಅವರ ಜನ್ಮದಿನವನ್ನು ಸುಶಾಸನ ದಿನ (ಉತ್ತಮ ಆಡಳಿತ ದಿನ)ವನ್ನಾಗಿ ಆಚರಿಸಲಾಗುತ್ತದೆ.
#GoodGovernanceDay#AtalBihariVajpayee#Atal100#AtalSmritiVarsh
ಕ್ರಿಯಾಶೀಲ ಯುವ ಸಂಸದರು & ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು, ಆತ್ಮೀಯರು ಆದ ಶ್ರೀ ತೇಜಸ್ವೀ ಸೂರ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು...💐
ದೇವರು ಅವರಿಗೆ ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ ಕರುಣಿಸಿ, ಅವರ ಜನಪರ ಕೆಲಸಗಳಿಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ... 🙏 @Tejasvi_Surya#HBDTejasviSurya
1925 ರ ವಿಜಯದಶಮಿಯಂದು ಆರಂಭಗೊಂಡ ಆರ್ಎಸ್ಎಸ್ ನ ಈ ಪಯಣವು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ಯಾಗ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಜೀವಂತ ಕಥೆಯಾಗಿದೆ.
ರಾಷ್ಟ್ರ ಸೇವೆ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎಲ್ಲಾ ಸ್ವಯಂಸೇವಕರಿಗೆ ಸಂಘ ಸ್ಥಾಪನಾ ದಿನ ಮತ್ತು ಸಂಘ ಶತಾಬ್ದಿಯ ಹಾರ್ದಿಕ ಶುಭಾಶಯಗಳು.
#RSS100Years#ಸಂಘಶತಾಬ್ದಿ
ಈ ಬಜೆಟ್ನಲ್ಲಿ ಪ್ರಸ್ತಾಪಿತ ಅಭಿವೃದ್ಧಿ ಕ್ರಮಗಳು 10 ವಿಶಾಲ ಕ್ಷೇತ್ರಗಳಲ್ಲಿ ವ್ಯಾಪಿಸಿವೆ. ಬಡವರು, ಯುವಕರು, ಅನ್ನದಾತರು ಮತ್ತು ಮಹಿಳೆಯರ ಮೇಲೆ ಕೇಂದ್ರೀಕರಿಸಿದೆ.
#ViksitBharatBudget2025
ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ, ಲಕ್ಷಾಂತರ ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ, ತನ್ನ ಪ್ರಖರ ಮಾತುಗಳಿಂದ ವಿಶ್ವವನ್ನೇ ಬೆರಗುಗೊಳಿಸಿದ ಸಿಡಿಲಸಂತ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಶತ ಶತ ನಮನಗಳು.
#SwamiVivekanandaJayanti#NationalYouthDay
ಕೋಟಿ ಕೋಟಿ ಕಾರ್ಯಕರ್ತರ ಮಾರ್ಗದರ್ಶಕರು, ಅಜಾತ ಶತ್ರು, ಭಾರತ ರತ್ನ ಶ್ರದ್ಧೇಯ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು ಶತ ಶತ ನಮನಗಳು.
ಅವರ ಜನ್ಮದಿನವಾದ ಡಿಸೆಂಬರ್ 25 ನ್ನು 2014 ರಿಂದ 'ಸುಶಾಸನ ದಿನ' ವನ್ನಾಗಿ ಆಚರಣೆ ಮಾಡಲಾಗುತ್ತಿದೆ.
#GoodGovernanceDay#AtalBihariVajpayee#AtalJanmShatabdi
ವಿಶ್ವ ಚೆಸ್ ಕಿರೀಟ ತೊಟ್ಟ 18 ವರ್ಷದ ಗುಕೇಶ್. ಭಾರತಕ್ಕೆ ಹೆಮ್ಮೆಯ ದಿನ.
ಕೇವಲ 18 ವರ್ಷ ವಯಸ್ಸಿನ ಗುಕೇಶ್ ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ಗೆದ್ದ ಗುಕೇಶ್ ಅವರಿಗೆ ಅಭಿನಂದನೆಗಳು..🇮🇳 💐
#Gukesh
ಒಬ್ಬ ಮನುಷ್ಯ ಜೀವನದಲ್ಲಿ ಹೇಗಿರಬೇಕು, ಸಂಬಂಧಗಳ ನಿಭಾಯಿಸುವಿಕೆ, ಧರ್ಮ, ಕರ್ಮ, ಅನ್ಯಾಯ ಹೀಗೆ ಹತ್ತು ಹಲವು ವಿಷಯಗಳನ್ನು ಸಹಸ್ರಾರು ವರ್ಷಗಳ ಹಿಂದೆ ಭಗವದ್ಗೀತೆಯ ಮೂಲಕ ಸಾರಿದ "ಕೃಷ್ಣ ಸಂದೇಶ" ಇಡೀ ಮನುಕುಲಕ್ಕೆ ಇಂದಿಗೂ ಪ್ರಸ್ತುತ.
#GeetaJayanthi