ಸಹೋದರ-ಸಹೋದರಿಯರ ನಡುವಿನ ಪ್ರೀತಿ, ನಂಬಿಕೆ ಮತ್ತು ಶ್ರೇಷ್ಠ ಬಾಂಧವ್ಯದ ಸಂಕೇತವಾದ ‘ರಕ್ಷಾ ಬಂಧನ’ ದ ಹಾರ್ದಿಕ ಶುಭಾಶಯಗಳು.
ಈ ಪವಿತ್ರ ಬಾಂಧವ್ಯ ಸದಾ ಸಿರಿವಂತವಾಗಿರಲಿ, ಪ್ರೀತಿ-ವಿಶ್ವಾಸದಿಂದ ಮತ್ತಷ್ಟು ಗಟ್ಟಿಯಾಗಲಿ.
#RakshaBandhan
ಇಂದು ನಗರಾಭಿವೃದ್ಧಿ ಸಚಿವರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ವಸತಿ ಸಚಿವರಾದ ಶ್ರೀ ಜಮೀರ್ ಅಹಮದ್ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಿ, ಕ್ಷೇತ್ರದ ವಿವಿಧ ಅಭಿವೃದ್ಧಿ ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಇಂದು ನಗರಾಭಿವೃದ್ಧಿ ಸಚಿವರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ಅವರ ನಿವಾಸಕ್ಕೆ ಭೇಟಿ ನೀಡಿ, ಹಲವು ಅಭಿವೃದ್ಧಿ ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಅತಿ ಕಿರಿಯ ವಯಸ್ಸಿನ ಪ್ರಧಾನಿಯಾಗಿ, ದೇಶದಲ್ಲಿ ಕಂಪ್ಯೂಟರ್ ಹಾಗೂ ದೂರಸಂಪರ್ಕ ಕ್ರಾಂತಿಯನ್ನು ತಂದ ನಾಯಕ ಶ್ರೀ ರಾಜೀವ್ ಗಾಂಧಿ ಅವರ ಜಯಂತಿಯಂದು (ಸದ್ಭಾವನಾ ದಿನ) ಗೌರವ ಪೂರ್ವಕ ನಮನಗಳು..
ಭೂಸುಧಾರಣೆ ಮತ್ತು ಸಾಮಾಜಿಕ ಕ್ರಾಂತಿಯ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಚಿರಸ್ಮರಣೀಯರಾದ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಡಿ.ದೇವರಾಜ ಅರಸು ಅವರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ನಮನಗಳು. ದೀನದಲಿತರ, ಹಿಂದುಳಿದವರ ಹಾಗೂ ಶೋಷಿತರ ಬಾಳಿಗೆ ಬೆಳಕಾದ ಅವರ ಜೀವನವು ಸಮಾಜಕ್ಕೆ ಎಂದೆಂದಿಗೂ ಸ್ಫೂರ್ತಿದಾಯಕವಾಗಿದೆ.
ನಾಡಿನ ಸ್ವಾತಂತ್ರ್ಯ, ಸ್ವಾಭಿಮಾನ ಹಾಗೂ ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ವೀರಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ನನ್ನ ಗೌರವಪೂರ್ವಕ ನಮನಗಳು.
ಅವರ ಅಪ್ರತಿಮ ಧೈರ್ಯ, ಶೌರ್ಯ, ತ್ಯಾಗ ಮತ್ತು ದೇಶಭಕ್ತಿ ನಮ್ಮೆಲ್ಲರಿಗೂ ಸದಾ ಸ್ಫೂರ್ತಿ.
#SangolliRayanna
ದಿವ್ಯ ಸಾನಿಧ್ಯದಲ್ಲಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ ಮತ್ತು ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ನಗರಾಭಿವೃದ್ಧಿ ಸಚಿವರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
2/2
ಇಂದು ಸರಗೂರು ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾರ ಮಹಾಸಭಾ ವತಿಯಿಂದ ಆಯೋಜಿಸಿದ್ದ ಮಾದಾರ ಸಂಘದ ನೂತನ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಪೂಜ್ಯ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳವರ
1/2
ನಾಡಿನ ಹೆಮ್ಮೆಯ ಜನನಾಯಕರು, ಸಾಮಾಜಿಕ ನ್ಯಾಯದ ಹರಿಕಾರರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ತಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ನಿರಂತರ ಜನಸೇವೆಯ ಭಾಗ್ಯವನ್ನು ಕರುಣಿಸಲಿ.
@siddaramaiah
ಗುರುವಿನ ರೂಪವೇ ಧ್ಯಾನದ ಮೂಲ, ಗುರುವಿನ ಪಾದವೇ ಪೂಜೆಯ ಮೂಲ, ಗುರುವಿನ ವಾಕ್ಯವೇ ಮಂತ್ರದ ಮೂಲ ಮತ್ತು ಗುರುವಿನ ಕೃಪೆಯೇ ಮೋಕ್ಷದ ಮೂಲ ಎಂಬ ಮಾತಿನಂತೆ, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರವಾದ ಸ್ಥಾನವಿದೆ. ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಗುರುವಿಗೆ ಶಿರಬಾಗಿ ನಮಿಸೋಣ. ಸರ್ವರಿಗೂ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
ಮೈಸೂರು ಜಿಲ್ಲಾ ಪಂಚಾಯತ್’ನ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಇಂದು ಮೈಸೂರು ಉಸ್ತುವಾರಿ ಜಿಲ್ಲಾ ಸಚಿವರಾದ ಶ್ರೀ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮೈಸೂರು ದಸರಾ ಮಹೋತ್ಸವ-2026 ರ ಆಚರಣೆ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದೆನು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ‘ನಾಡಹಬ್ಬ ಮೈಸೂರು ದಸರಾ ಮಹೋತ್ಸವ -2026ʼ ಆಚರಣೆ ಸಂಬಂಧ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿ ಸುದೀರ್ಘವಾಗಿ ಚರ್ಚಿಸಲಾಯಿತು.
ಇಂದು ಹೆಚ್ .ಡಿ.ಕೋಟೆ ತಾಲೂಕು ಕಛೇರಿ ಸಭಾಂಗಣದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕುಡಿಯುವ ನೀರಿನ ಪರಿಸ್ಥಿತಿ ಹಾಗೂ ಮುಂಗಾರು ಪ್ರಗತಿಯನ್ನು ಕುರಿತು ಸಮಗ್ರವಾಗಿ ಚರ್ಚಿಸಿ ಹಲವು ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು..
ತದನಂತರ ಮಾತನಾಡಿ,ಎಲ್ಲಾ ವೈದ್ಯರಿಗೆ ವೈದ್ಯರ ದಿನಾಚರಣೆ ಶುಭಾಶಯಗಳು ಕೊರುತ್ತಾ,ದೇವರನ್ನ ಬಿಟ್ಟರೆ ಕೈ ಮುಗಿಯುವುದು ವೃದ್ಯರಿಗೆ ಮಾತ್ರಾ,ಈ ವೃತ್ತಿ ಬಹಳ ಪವಿತ್ರವಾದ ವೃತ್ತಿ,ಈ ವೃತ್ತಿಯನ್ನು ಪ್ರತಿಒಬ್ಬರೂ ಗೌರವಿಸಬೇಕು ಎಂದು ತಿಳಿಸಿದರು..
2/2
ಇಂದು ಹೆಚ್ .ಡಿ. ಕೋಟೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಾರ್ಟ್ ಸಂಸ್ಥೆಯ ವತಿಯಿಂದ ಆಯೋಜನೆ ಮಾಡಿದ ವೈದ್ಯರ ದಿನಾಚರಣೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ನಮ್ಮ ತಾಲೂಕಿನ ಉತ್ತಮ ಆಡಳಿತ ಮಾಡಿದ ವೈದ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು ..
1/2
ಇಂದು ನನ್ನ ಮತಕ್ಷೇತ್ರದ ಡಿ. ಮಟಕೆರೆ ಗ್ರಾಮದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ. ಬಳಿಕ ಭಕ್ತರ ಬಹುಕಾಲದ ಆಶಯವಾಗಿದ್ದ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಇಂದು ಸಂಚಾರ ಟಿವಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನ ಕಚೇರಿಯ ಶುಭಾರಂಭಕ್ಕೆ ಶುಭ ಹಾರೈಸಲಾಯಿತು.
ಸಮಾಜದ ಧ್ವನಿಯಾಗಿ, ಜನರ ಸಮಸ್ಯೆಗಳನ್ನು ಜವಾಬ್ದಾರಿಯಿಂದ ಬಿಂಬಿಸಿ, ಸತ್ಯ ಮತ್ತು ನಿಷ್ಪಕ್ಷಪಾತ ಪತ್ರಿಕೋದ್ಯಮದ ಮೂಲಕ ಮತ್ತಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ.