ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ವಿಳಂಬವಾಗಿ ದಾಖಲಾಗುತ್ತಿದ್ದ ವಿದ್ಯಾರ್ಥಿಗಳಿಗೆ ʻವಿಳಂಬ ದಾಖಲಾತಿ ದಂಡ ಶುಲ್ಕʼ ವಿಧಿಸುವುದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಶೈಕ್ಷಣಿಕ (2026-27) ಸಾಲಿನಿಂದ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ವಿಳಂಬವಾಗಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ವಿಧಿಸಲಾಗುತ್ತಿದ್ದ ₹ 670 ವಿಳಂಬ ದಾಖಲಾತಿ ದಂಡ ಶುಲ್ಕ (Fine for late admission for 10 days) ಹಾಗೂ ₹ 2,220 ವಿಶೇಷ ದಂಡ ಶುಲ್ಕ (Special fine for late admission for 20 days) ಪಾವತಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
The State Government has officially rescinded its previous order regarding the imposition of late admission penalty fees for students seeking enrollment in government pre-university colleges. Effective from the current (2026-27) academic year, students securing late admissions for First and Second PUC classes across all government pre-university colleges state-wide are completely exempted from paying the ₹670 late admission fine (applicable for a 10-day delay) as well as the ₹2,220 special late admission fine (applicable for a 20-day delay).
#StudentWelfare #PUCEducation #Admissions2026 #GovtColleges #Governmentschollsofkarnataka #Shalashikshana
ಶಾಲಾ ಶಿಕ್ಷಣ ಇಲಾಖೆಯು ಕರ್ನಾಟಕ ಪಬ್ಲಿಕ್ ಸ್ಕೂಲ್ಗಳ (KPS)ಗಾಗಿ ಪ್ರತ್ಯೇಕ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ವೃಂದವನ್ನು (Cadre) ಸ್ಥಾಪಿಸಿದೆ. ಶಿಕ್ಷಕರ ನಿಯೋಜನೆ ಮತ್ತು ಮರುಹಂಚಿಕೆ ಪ್ರಕ್ರಿಯೆಯ ನಂತರ, ಸರ್ಕಾರವು 2,500 ಕಂಪ್ಯೂಟರ್ ಸೈನ್ಸ್ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಹೊಸ ಶಿಕ್ಷಕರ ವೃಂದಕ್ಕಾಗಿ ಪ್ರತ್ಯೇಕ ವೃಂದ ಮತ್ತು ನೇಮಕಾತಿ (Cadre & Recruitment - C&R) ನಿಯಮಗಳನ್ನು ಇಲಾಖೆ ರೂಪಿಸುತ್ತಿದೆ.
The Department of School Education has established a dedicated Computer Science teacher cadre for Karnataka Public Schools (KPS). Following the teacher deployment and reallocation process, the government has issued an official order sanctioning 2,500 Computer Science teacher posts. The department is framing separate Cadre and Recruitment (C&R) rules specifically for this new teacher cadre.
#KPS #KPSKarnataka #EducationPolicy #ITEducation #DigitalLiteracy #ShalaShikshana #KarnatakaEducation #GovernmentSchoolsofKarnataka #ComputerEducation
ಶಾಲೆಗೆ ಕಲಿಯಲು ಬರುವ ಮಕ್ಕಳಿಗೆ ಶುದ್ಧ ಗಾಳಿ, ಸುಂದರ ಪರಿಸರ ದೊರೆಯಬೇಕೆಂಬ ಉದ್ದೇಶದಿಂದ ಉಡುಪಿ ಜಿಲ್ಲೆ ಹಿರಿಯಡಕದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಮೋಹನ್ ಕಡಬ ಅವರು ತಾವೇ ಶಾಲೆಯ ಆವರಣದಲ್ಲಿ ಉದ್ಯಾನವೊಂದನ್ನು ನಿರ್ಮಿಸಿ, ಬೆಳೆಸಿದ್ದಾರೆ. ಇದು ಈ ಶಾಲೆಯ ಆಕರ್ಷಣೆಯನ್ನು ಹೆಚ್ಚಿಸಿದೆ. ಸರ್ವರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು.
With the noble vision of ensuring fresh air and a beautiful environment for school children, Shri Mohan Kadaba, a teacher at the Karnataka Public School in Hiriyadka, Udupi district, has personally developed and nurtured a vibrant garden on the school campus. This has greatly enhanced the school's charm!
Wishing everyone a very Happy World Environment Day!
#WorldEnvironmentDay #GreenSchools #KPSHiriyadka #KarnatakaPublicSchool #ShalaShikshana #KarnatakaEducation #GovernmentSchoolsofKarnataka
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಶೈಕ್ಷಣಿಕ ಸಾಲಿನಿಂದಲೇ ಡಿಜಿಟಲ್ ಹಾಜರಾತಿ ವ್ಯವಸ್ಥೆ, `ನಿರಂತರʼ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಇನ್ನು ಮುಂದೆ ಪಿಯುಸಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹೆಸರು ಕರೆದು ಹಾಜರಾತಿ ಹಾಕುವುದಕ್ಕೆ ಬದಲಾಗಿ, ಮುಖಚರ್ಯೆ ಗುರುತಿಸಿ (Facial Recognition) ಹಾಜರಾತಿ ಹಾಕುವ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಮೊದಲಿಗೆ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಗೆ ಬರುತ್ತಿದ್ದು, ಮುಂದೆ ಅನುದಾನಿತ ಕಾಲೇಜುಗಳಿಗೂ ಈ ವ್ಯವಸ್ಥೆ ಅನ್ವಯವಾಗಲಿದೆ.
Starting from this academic year, the State Government is phasedly implementing the 'Nirantara' project, a digital attendance system, across government pre-university colleges. Under this initiative, the traditional method of calling out student names for attendance will be replaced by an advanced facial recognition system. This digital system will initially be launched exclusively in government PU colleges and will subsequently be extended to aided colleges.
#Nirantara #DigitalAttendance #EdTechKarnataka #GovtPUColleges #EducationReform #Shalashikshana #KarnatakaEducation #SmartAttendance @PU_Karnataka
ಇಂದು ಬಾಗಲಕೋಟೆ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಸಂಭ್ರಮ, ಸಂತೋಷ ಮತ್ತು ಹೊಸ ಕನಸುಗಳಿಂದ ತುಂಬಿಕೊಂಡಿತ್ತು. ಪುಟ್ಟ ಮಕ್ಕಳ ನಗುವು, ಶಿಕ್ಷಕರ ಆತ್ಮೀಯ ಸ್ವಾಗತ, ಪೋಷಕರ ಉತ್ಸಾಹ ಮತ್ತು ಶಾಲೆಗಳ ಹಬ್ಬದ ವಾತಾವರಣ ಎಲ್ಲರ ಮನಸೆಳೆಯಿತು. ಹೊಸ ಪುಸ್ತಕಗಳ ಸುವಾಸನೆ, ಹೊಸ ಬ್ಯಾಗ್ಗಳ ಖುಷಿ ಮತ್ತು ಸ್ನೇಹಿತರ ಜೊತೆಗಿನ ಮೊದಲ ದಿನದ ಸಂಭ್ರಮ ಮಕ್ಕಳ ಮುಖದಲ್ಲಿ ಸ್ಪಷ್ಟವಾಗಿ ಕಾಣಿಸಿತು. ಶಿಕ್ಷಣದ ಮೂಲಕ ಪ್ರತಿಯೊಂದು ಮಗುವಿನ ಭವಿಷ್ಯ ಬೆಳಗಲಿ ಎಂಬ ಆಶಯದೊಂದಿಗೆ ಈ ವಿಶೇಷ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಾಗಲಕೋಟೆಯ ಶಾಲೆಗಳು ಇಂದು ನಿಜವಾಗಿಯೂ ಜ್ಞಾನೋತ್ಸವದ ಕೇಂದ್ರಗಳಾಗಿ ಮಿಂಚಿದವು.
The School Reopening Celebration held today across various schools in Bagalkote district was filled with joy, excitement, and new dreams. The cheerful smiles of children, the warm welcome by teachers, the enthusiasm of parents, and the festive atmosphere in schools created a memorable beginning to the academic year. The fragrance of new books, excitement of carrying new school bags, and happiness of meeting friends again were clearly visible on every child’s face. With the hope of shaping a brighter future for every student through education, the day was celebrated with great meaning and positivity. Schools across Bagalkote truly transformed into vibrant spaces of learning and celebration today.
#ಶಾಲಾ_ಪ್ರಾರಂಭೋತ್ಸವ #Bagalkote #ಶಿಕ್ಷಣ #ಮಕ್ಕಳ_ಭವಿಷ್ಯ #SchoolReopening #Education #KarnatakaSchools #BackToSchool #LearningJourney #BagalkoteDistrict #Governmentofkarnataka #ShalaShikshana
ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದು, ಸರ್ಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಲು ನಮ್ಮ ಸರ್ಕಾರವು ಘೋಷಿಸಿರುವ 8 ಶಿಕ್ಷಣ ಗ್ಯಾರಂಟಿಗಳ ಕುರಿತು ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಸಂಪಾದಕೀಯ ಬರಹ
ಶಿಕ್ಷಣ ಗ್ಯಾರಂಟಿಗಳ ಕುರಿತ ಮಾಹಿತಿಗಾಗಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಜಾಹೀರಾತನ್ನು ಕೂಡ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
#ಕನ್ನಡಸುದ್ದಿ
"ಉಪನ್ಯಾಸಕರು ನಮ್ಮನ್ನು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ಓದಿಸಿದರು!" – ಇದು ವಾಣಿಜ್ಯ ವಿಭಾಗದ ಸಾಧಕಿ ಲಾವಣ್ಯ ಅವರ ಕೃತಜ್ಞತೆಯ ನುಡಿ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಲಾವಣ್ಯ, ವಾಣಿಜ್ಯ ವಿಭಾಗದಲ್ಲಿ 600ಕ್ಕೆ 592 ಅಂಕಗಳನ್ನು ಗಳಿಸಿ ಇಡೀ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಗ್ರಾಮೀಣ ಪ್ರತಿಭೆಯಾದ ಲಾವಣ್ಯ, ತಮ್ಮ ಈ ದೊಡ್ಡ ಸಾಧನೆಗೆ ಕಾಲೇಜಿನ ಉಪನ್ಯಾಸಕರು ನೀಡಿದ ಮಾರ್ಗದರ್ಶನವೇ ಕಾರಣ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಇಂತಹ ಪವಿತ್ರ ಬಾಂಧವ್ಯವೇ ನಿಜವಾದ ಯಶಸ್ಸಿನ ಮೂಲ. ಸಾಧಕ ವಿದ್ಯಾರ್ಥಿನಿ ಲಾವಣ್ಯ, ಅವರ ಪೋಷಕರು ಹಾಗೂ ಪ್ರೀತಿಯಿಂದ ಬೋಧಿಸಿದ ಹೊನ್ನವಳ್ಳಿ ಕಾಲೇಜಿನ ಎಲ್ಲಾ ಉಪನ್ಯಾಸಕರಿಗೂ ಹೃತ್ಪೂರ್ವಕ ಅಭಿನಂದನೆಗಳು.
"Our lecturers cared for us and taught us more than their own children!" – A heartfelt tribute from Commerce topper Lavanya.
Lavanya, a student at the Government Pre-University College in Honnavalli, Tiptur Taluk, Tumakuru district, has secured a brilliant 592/600 in the Commerce stream. This rural talent credits her success to the parental care and constant guidance provided by her lecturers. Her achievement is a beautiful example of how dedicated mentorship can transform lives. Heartiest congratulations to Lavanya, her supportive parents, and the entire teaching faculty of Honnavalli Govt PU College for this remarkable feat.
#SuccessStory #Tumakuru #GovernmentCollege #RuralTalen #Shalashikshana #GovernmentSchoolsofKarnataka #2ndPUC2026 #CommerceTopper