A proud moment captured! 🎓✨
Glimpses from the 13th Convocation of BLDE (Deemed to be University) — celebrating achievement, dedication, and new beginnings.
'ಕ್ಷೀರ ಪೈಲಟ್ ಯೋಜನೆ' #ಬಬಲೇಶ್ವರ ಮತಕ್ಷೇತ್ರದ #ನಾಗರಾಳ ಗ್ರಾಮದ ರೈತ ಸಾಹೇಬಗೌಡ ಪಾಟೀಲ ಅವರ ಬದುಕನ್ನೇ ಬದಲಿಸಿದೆ.
BLDE, ಕೃಷಿಕಲ್ಪ ಹಾಗೂ ಅಕ್ಷಯಕಲ್ಪ ಫೌಂಡೇಶನ್ ಗಳ ವೈಜ್ಞಾನಿಕ ತರಬೇತಿ, ತಾಂತ್ರಿಕ ಮಾರ್ಗದರ್ಶನ ಮತ್ತು ನಿರಂತರ ಸಹಕಾರದಿಂದ ಒಂದು ಹಸುವಿನಿಂದ ಆರಂಭಿಸಿದ ಅವರು ಇಂದು 6 ಹಸುಗಳನ್ನು ಸಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಸುಗಳನ್ನು ಹೆಚ್ಚಿಸಿ ಹೈನುಗಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಗುರಿ ಹೊಂದಿದ್ದಾರೆ.
ಇಂದು ಅವರು ಪ್ರತಿ ತಿಂಗಳು ₹55,000–₹60,000 ಆದಾಯ ಗಳಿಸುತ್ತಿದ್ದು, BLDE, ಕೃಷಿಕಲ್ಪ ಹಾಗೂ ಅಕ್ಷಯಕಲ್ಪ ಫೌಂಡೇಶನ್ ಗಳ ಸಹಯೋಗ ರೈತರ ಬದುಕಿನಲ್ಲಿ ಹೊಸ ಭರವಸೆ ಮತ್ತು ಸಮೃದ್ಧಿಯನ್ನು ಮೂಡಿಸುತ್ತಿದೆ.
#ಕ್ಷೀರಪೈಲಟ್_ಯೋಜನೆ
ನಮ್ಮ ಗುರಿ ಸ್ಪಷ್ಟ - ಪ್ರತಿ ಸಣ್ಣ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿರಬೇಕು!
ಜಲಕ್ರಾಂತಿಯಿಂದ ಬಸವನಾಡಿನ ನೆಲ ಹಸಿರಾಯಿತು...ವೈಜ್ಞಾನಿಕ ಹೈನುಗಾರಿಕೆಯ ಮೂಲಕ ರೈತರ ಬದುಕು ಸಮೃದ್ಧಿಯಾಗುತ್ತಿದೆ.
BLDE–ಅಕ್ಷಯಕಲ್ಪ–ಕೃಷಿಕಲ್ಪ ಸಹಯೋಗದ 'ಕ್ಷೀರ ಪೈಲಟ್ ಯೋಜನೆ' ನೂರಾರು ಕುಟುಂಬಗಳಿಗೆ ಹೊಸ ಆಶಾಕಿರಣವಾಗುತ್ತಿದೆ.
ಬಬಲೇಶ್ವರ ಕ್ಷೇತ್ರದ ತಿಕೋಟಾ ತಾಲೂಕಿನ ಧನ್ನರ್ಗಿ ಗ್ರಾಮದಲ್ಲಿ ಸುಮಾರು ರೂ. 65 ಲಕ್ಷ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಈ ಸಂಬಂಧ ಗುರುವಾರ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮದ ಹಿರಿಯರೊಂದಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಗ್ರಾಮೀಣ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಮತ್ತಷ್ಟು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಈ ಆರೋಗ್ಯ ಮಂದಿರ ಮಹತ್ವದ ಹೆಜ್ಜೆಯಾಗಲಿದೆ
ನಮ್ಮ ಗುರಿ ಪ್ರತಿ ಸಣ್ಣ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿರಬೇಕು!
ಹೆಸರಾಂತ ಅಕ್ಷಯ ಕಲ್ಪ, ಕೃಷಿ ಕಲ್ಪಗಳ ಸಹಯೋಗದಲ್ಲಿ ವೈಜ್ಞಾನಿಕ ತರಬೇತಿ
ಕ್ಷೀರ ಪೈಲೆಟ್ ಯೋಜನೆ ಜಾರಿಗೊಳಿಸಲು BLDE ಪ್ರತಿ ವರ್ಷ ರೂ. 50ಲಕ್ಷ ಖರ್ಚು ಮಾಡುತ್ತಿದೆ
ಹೈನೋದ್ಯಮದಲ್ಲಿ ಸೂಕ್ತ ಶಿಕ್ಷಣ ನೀಡಲು ನಿಡೋಣಿ ಗ್ರಾಮದ 11 ಎಕರೆ ಪ್ರದೇಶದಲ್ಲಿ ಬೃಹತ್ ಕ್ಷೀರ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಸ್ಥಾಪನೆ
ನೀರಾವರಿ ಯೋಜನೆಗಳ ಮೂಲಕ ಬಸವನಾಡಿನ ಒಣನೆಲಕ್ಕೆ ಜೀವ ತುಂಬಿ ಜಲಕ್ರಾಂತಿ ಸೃಷ್ಟಿಸಿರುವುದು ಈಗ ಇತಿಹಾಸವಾಗಿದೆ. ಅದರ ಫಲವಾಗಿ ಸಾವಿರಾರು ರೈತ ಕುಟುಂಬಗಳು ಕೃಷಿಯನ್ನು ಆಶ್ರಯಿಸಿ ನೆಮ್ಮದಿಯ ಹಾಗೂ ಸಮೃದ್ಧ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ.
ಆ ಜಲಕ್ರಾಂತಿಯ ಮುಂದುವರಿದ ಅಧ್ಯಾಯವೇ ಕಳೆದ ವರ್ಷ ಆರಂಭಿಸಿದ ಕ್ಷೀರ ಪೈಲೆಟ್ ಯೋಜನೆ. ಕೇವಲ ಒಂದು ವರ್ಷದ ಅವಧಿಯಲ್ಲೇ ಈ ಯೋಜನೆ 150ಕ್ಕೂ ಹೆಚ್ಚು ರೈತ ಕುಟುಂಬಗಳ ಬದುಕಿನಲ್ಲಿ ಆರ್ಥಿಕ ಕ್ರಾಂತಿಯನ್ನು ತಂದಿದೆ.
ಒಂದು ಕಾಲದಲ್ಲಿ ಹೈನುಗಾರಿಕೆಯನ್ನು ಅವಲಂಬಿಸಿ ತಿಂಗಳಿಗೆ ₹20-30 ಸಾವಿರ ಆದಾಯ ಗಳಿಸುವುದೇ ಸವಾಲಾಗಿತ್ತು. ಆದರೆ BLDE, ಅಕ್ಷಯಕಲ್ಪ ಹಾಗೂ ಕೃಷಿಕಲ್ಪ ಫೌಂಡೇಶನ್ ಸಂಸ್ಥೆಗಳ ಸಹಯೋಗದಲ್ಲಿ ಜಾರಿಗೊಂಡಿರುವ ಈ ಯೋಜನೆಯಿಂದ ಇಂದು ಹಲವು ರೈತ ಕುಟುಂಬಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಮಟ್ಟಕ್ಕೆ ಬೆಳೆದಿವೆ.
ಪ್ರತಿ ರೈತ ಕುಟುಂಬದ ಮಾಸಿಕ ಆದಾಯವೂ ಲಕ್ಷಗಳಲ್ಲಿ ಇರಬೇಕು ಎಂಬುದು ನಮ್ಮ ಸಂಕಲ್ಪ. ಆ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿBLDE ಡೀಮ್ಡ್ ವಿವಿ ವತಿಯಿಂದ ಕ್ಷೀರ ಪೈಲೆಟ್ ಯೋಜನೆ ಜಾರಿಗೊಳಿಸಲು ಪ್ರತಿ ವರ್ಷ ರೂ. 50ಲಕ್ಷ ಖರ್ಚು ಮಾಡುತ್ತಿದ್ದೇವೆ.
ನಿಡೋಣಿ ಗ್ರಾಮದ 11 ಎಕರೆ ಪ್ರದೇಶದಲ್ಲಿ BLDE–ಅಕ್ಷಯಕಲ್ಪ–ಕೃಷಿಕಲ್ಪ ಸಹಯೋಗದೊಂದಿಗೆ ಅತ್ಯಾಧುನಿಕ ಬೃಹತ್ ಕ್ಷೀರ ಉತ್ಪಾದನೆ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗುವುದು.
ಜಲಕ್ರಾಂತಿಯಿಂದ ಕ್ಷೀರಕ್ರಾಂತಿಯವರೆಗೆ… ನಮ್ಮ ಜನರ ಬದುಕು ಮತ್ತಷ್ಟು ಸಮೃದ್ಧವಾಗಬೇಕು ಎಂಬುದೇ ನಮ್ಮ ಧ್ಯೇಯ.
ನಿಡೋಣಿ ಗ್ರಾಮದಲ್ಲಿ ಶೀಘ್ರದಲ್ಲೇ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರ ಸ್ಥಾಪನೆ
ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ, ಇಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ನಿಡೋಣಿ ಗ್ರಾಮದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ.
ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ BLDE, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್ ಗಳ ಸಹಯೋಗದಲ್ಲಿ ಜಾರಿಗೊಳಿಸಲಾಗುತ್ತಿರುವ 'ಕ್ಷೀರ ಪೈಲಟ್ ಯೋಜನೆ' ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಿದೆ. ಆಧುನಿಕ ಹೈನುಗಾರಿಕೆ, ವೈಜ್ಞಾನಿಕ ಪಶುಪಾಲನೆ ಹಾಗೂ ಗುಣಮಟ್ಟದ ಹಾಲು ಉತ್ಪಾದನೆಯ ಮೂಲಕ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.
ರೈತರಿಗೆ ನಿರಂತರ ತರಬೇತಿ, ತಾಂತ್ರಿಕ ಮಾರ್ಗದರ್ಶನ ಹಾಗೂ ಕೌಶಲಾಭಿವೃದ್ಧಿಯನ್ನು ಒದಗಿಸುವ ಉದ್ದೇಶದಿಂದ, ಶೀಘ್ರದಲ್ಲೇ ನಿಡೋಣಿ ಗ್ರಾಮದಲ್ಲೇ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದೆ. ಈ ಕೇಂದ್ರವು ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸಲು ರೈತರಿಗೆ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯವನ್ನು ನೀಡುವ ಮಹತ್ವದ ವೇದಿಕೆಯಾಗಲಿದೆ.
ಈ ಮಹತ್ವದ ಕಾರ್ಯಕ್ರಮದಲ್ಲಿ ಪರಮಪೂಜ್ಯ ಗುರುಗಳಾದ ಶ್ರೀ ಮ.ನಿ.ಪ್ರ. ಸಿದ್ದಲಿಂಗೇಶ್ವರ ಮಹಾಸ್ವಾಮಿಗಳು, ವಿರಕ್ತಮಠ, ನಿಡೋಣಿ, ಅಕ್ಷಯಕಲ್ಪ ಸಂಸ್ಥೆಯ ಶ್ರೀ ಸಿ. ಎಂ. ಪಾಟೀಲ, BLDE ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಅನೇಕ ಗಣ್ಯರು ಹಾಗೂ ರೈತ ಬಂಧುಗಳು ಉಪಸ್ಥಿತರಿದ್ದರು.
ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಧನ್ಶಾಳ ಗ್ರಾಮದಲ್ಲಿ ಹಳೆಯ ಗ್ರಾಮದಿಂದ ಹೊಸ ಗ್ರಾಮದವರೆಗೆ ₹30 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣಾ ಕಾಮಗಾರಿ ಹಾಗೂ ಗ್ರಾಮದಲ್ಲೇ ₹50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಈ ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರೊಂದಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.
ಈ ಕಾಮಗಾರಿಗಳಿಂದ ಗ್ರಾಮದ ಸಂಚಾರ ವ್ಯವಸ್ಥೆ ಮತ್ತಷ್ಟು ಸುಗಮವಾಗುವುದರೊಂದಿಗೆ, ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸವಿದೆ.
ಕ್ಷೀರ ಪೈಲಟ್ ಯೋಜನೆಯ ಫಲಶ್ರುತಿ: ನಾಗರಾಳ ಗ್ರಾಮದ ಶ್ರೀ ಸಾಹೇಬ ಗೌಡ ಬಾಬಾ ಸಾಹೇಬ ಪಾಟೀಲ ಅವರ ಯಶೋಗಾಥೆ
ತಿಂಗಳಿಗೆ ₹60 ಸಾವಿರದವರೆಗೆ ಆದಾಯ – ವೈಜ್ಞಾನಿಕ ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಬನೆಯತ್ತ ಯಶಸ್ವಿ ಹೆಜ್ಜೆ
ಈ ದಿನ ನಾಗರಾಳ ಗ್ರಾಮದ ರೈತ ಶ್ರೀ ಸಾಹೇಬ ಗೌಡ ಬಾಬಾ ಸಾಹೇಬ ಪಾಟೀಲ ಅವರನ್ನು ಭೇಟಿ ಮಾಡಿ, ನಮ್ಮ BLDE, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್ಗಳ ಸಹಯೋಗದಲ್ಲಿ ಜಾರಿಗೊಂಡಿರುವ 'ಕ್ಷೀರ ಪೈಲಟ್ ಯೋಜನೆ'ಯಿಂದ ಅವರ ಬದುಕಿನಲ್ಲಿ ಮೂಡಿರುವ ಸಕಾರಾತ್ಮಕ ಪರಿವರ್ತನೆಯ ಕುರಿತು ತಿಳಿದುಕೊಂಡೆ.
ಯೋಜನೆ ಆರಂಭಕ್ಕೂ ಮುನ್ನ ಕೇವಲ ಒಂದು ಹಸುವನ್ನು ಸಾಕುತ್ತಿದ್ದ ಅವರು, ಯೋಜನೆಯಡಿ ನೀಡಲಾದ ವೈಜ್ಞಾನಿಕ ತರಬೇತಿ, ನಿರಂತರ ಮಾರ್ಗದರ್ಶನ ಹಾಗೂ ತಾಂತ್ರಿಕ ನೆರವಿನ ಪ್ರೇರಣೆಯಿಂದ ಇಂದು ತಮ್ಮ ಹೈನುಗಾರಿಕೆಯನ್ನು ವಿಸ್ತರಿಸಿ ಆರು ಹಸುಗಳನ್ನು ಸಾಕುತ್ತಿದ್ದಾರೆ. ಇದರ ಫಲವಾಗಿ ಪ್ರತಿ ತಿಂಗಳು ₹55,000 ರಿಂದ ₹60,000ರವರೆಗೆ ಆದಾಯ ಗಳಿಸುತ್ತಿರುವುದು ತಿಳಿದು ಸಂತಸವಾಯಿತು.
ಕಳೆದ ಆರು ತಿಂಗಳುಗಳಲ್ಲಿ ವೈಜ್ಞಾನಿಕ ಪಶುಪಾಲನೆ, ಆಧುನಿಕ ಹೈನುಗಾರಿಕೆ ವಿಧಾನಗಳು ಹಾಗೂ ಸಮರ್ಪಕ ನಿರ್ವಹಣೆಯನ್ನು ಅಳವಡಿಸಿಕೊಂಡ ಪರಿಣಾಮ, "ಹೈನುಗಾರಿಕೆಯೇ ನಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ರೂಪಿಸಬಲ್ಲ ಉದ್ಯಮ" ಎಂಬ ದೃಢ ವಿಶ್ವಾಸ ಅವರಲ್ಲಿ ಮೂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಸುಗಳನ್ನು ಖರೀದಿಸಿ ತಮ್ಮ ಹೈನುಗಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಸಂಕಲ್ಪವನ್ನೂ ಅವರು ವ್ಯಕ್ತಪಡಿಸಿದರು.
ಇಂತಹ ಯಶೋಗಾಥೆಗಳು ಕ್ಷೀರ ಪೈಲಟ್ ಯೋಜನೆಯ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿದ್ದು, ಕೃಷಿಯೊಂದಿಗೆ ಹೈನುಗಾರಿಕೆಯನ್ನು ಸಂಯೋಜಿಸುವ ಮೂಲಕ ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ.
ಈ ಸಂದರ್ಭದಲ್ಲಿ ಅಕ್ಷಯಕಲ್ಪ ಸಂಸ್ಥೆಯ ಶ್ರೀ ಸಿ.ಎಂ. ಪಾಟೀಲ, BLDE ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೈನುಗಾರಿಕೆಯ ಮೂಲಕ ರೈತರನ್ನು ಇನ್ನಷ್ಟು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ, ಶೀಘ್ರದಲ್ಲೇ ನಿಡೋಣಿ ಗ್ರಾಮದಲ್ಲಿ BLDE ವತಿಯಿಂದ ಆಧುನಿಕ ಹೈನುಗಾರಿಕೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು.
ಜ್ಞಾನ, ತಂತ್ರಜ್ಞಾನ ಹಾಗೂ ನಿರಂತರ ಮಾರ್ಗದರ್ಶನದ ಮೂಲಕ ವಿಜಯಪುರ ಜಿಲ್ಲೆಯನ್ನು ಕ್ಷೀರ ಕ್ರಾಂತಿಯ ಮಾದರಿ ಜಿಲ್ಲೆಯಾಗಿ ರೂಪಿಸುವುದು ನಮ್ಮ ಸಂಕಲ್ಪವಾಗಿದೆ.
ಬಬಲೇಶ್ವರ ಮತ ಕ್ಷೇತ್ರದ ನಾಗರಾಳ ಗ್ರಾಮದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ದಿನ ಗ್ರಾಮ ಪಂಚಾಯತ್ ಸದಸ್ಯರು, ಸ್ಥಳೀಯ ಮುಖಂಡರೊಂದಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಬಸವಾದಿ ಶರಣರ ವಚನಗಳು ನಮಗೆ ಲಭ್ಯವಾಗಿದ್ದರೆ ಅದಕ್ಕೆ ಪರಮಪೂಜ್ಯ ಹಳಕಟ್ಟಿಯವರು ಕಾರಣ. ತಮ್ಮ ಜೀವಮಾನವಿಡೀ ನಾನಾ ಮಠ-ಮಂಟಪಗಳನ್ನು ಸುತ್ತಿ, ಭಕ್ತರ ಮನೆಗಳಿಗೆ ಅಲೆದಾಡಿ ತಾಳೆಗರಿ, ಹಸ್ತಪ್ರತಿಗಳಲ್ಲಿದ್ದ ವಚನ ಸಂಗ್ರಹಿಸಿ, ಪ್ರಕಟಿಸಿ ಗ್ರಂಥ ರೂಪ ನೀಡಿದ್ದಾರೆ. ಅವರ ಕೊಡುಗೆಯನ್ನು ನೆನೆಯುತ್ತಾ ಅವರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುವೆ.
#ವಚನಸಾಹಿತ್ಯಸಂರಕ್ಷಣಾದಿನ #PGHalakatti #ವಚನಪಿತಾಮಹ
ನಮ್ಮೆಲ್ಲ ಪತ್ರಕರ್ತರಿಗೆ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
1843ರ ಜುಲೈ 1ರಂದು ಹೆರ್ಮನ್ ಮೊಗ್ಲಿಂಗ್ ಅವರ ಸಾರಥ್ಯದಲ್ಲಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಆರಂಭವಾಯಿತು. ಆ ಐತಿಹಾಸಿಕ ಕ್ಷಣದ ಸ್ಮರಣಾರ್ಥವಾಗಿ ಪ್ರತಿವರ್ಷ ಜುಲೈ 1ರಂದು ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ನ್ಯಾಯ, ಸಮಾನತೆ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸತ್ಯವನ್ನು ಜನರ ಮುಂದಿಡುವ ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಸಮಾಜದ ಹಿತವನ್ನು ಕಾಪಾಡುವ ಅವರ ಸೇವೆ ಅಮೂಲ್ಯವಾದದ್ದು.
#ಪತ್ರಿಕಾದಿನಾಚರಣೆ
ನಾಡಿನ ಸಮಸ್ತ ವೈದ್ಯರಿಗೂ ಭಾರತ ರತ್ನ ಡಾ. B.C.ರಾಯ್ ಅವರ ಜನ್ಮದಿನದ ನಿಮಿತ್ತ ಆಚರಿಸಲಾಗುತ್ತಿರುವ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಶುಭಾಶಯಗಳು. ತಮ್ಮ ಜೀವದ ಹಂಗು ತೊರೆದು ನಮ್ಮೆಲ್ಲರನ್ನೂ ರಕ್ಷಿಸುತ್ತಿರುವ ವೈದ್ಯರು, ಅವರಿಗೆ ಬೆಂಬಲವಾಗಿ ನಿಂತಿರುವ ಎಲ್ಲರ ಸೇವೆಯನ್ನು ಗೌರವದಿಂದ ಸ್ಮರಿಸೋಣ.
#NationalDoctorsDay#doctorsday
ಗ್ರಾಮೀಣ ಸೊಗಡಿನ, ನಮ್ಮ ಸಂಸ್ಕೃತಿಯನ್ನು ಬಿಂಬಿಸುವ, ಕಾರ ಹುಣ್ಣಿಮೆ ಹಬ್ಬವು ಉತ್ತರ ಕರ್ನಾಟಕದ ಪ್ರಮುಖ ಹಬ್ಬವಾಗಿದೆ. ಉಳುಮೆಗೆ ಸಹಕಾರ ನೀಡುವ ಎತ್ತುಗಳನ್ನು ಸಿಂಗರಿಸಿ, ಕುಟುಂಬದ ಸದಸ್ಯರಂತೆ ಕಾಣುವ ಸಂಪ್ರದಾಯವೂ ನಮ್ಮಲ್ಲಿದೆ. ರೈತಾಪಿ ವರ್ಗ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ಇಂದಿನಿಂದ ಅಣಿಯಾಗುತ್ತಾರೆ. ಅನ್ನದಾತರ ಕೃಷಿ ಕಾರ್ಯಗಳೆಲ್ಲಾ ಯಶಸ್ವಿಯಾಗಲಿ. ದೇಶ ಸುಭಿಕ್ಷವಾಗಲಿ.
#ಕಾರಹುಣ್ಣಿಮೆ
ಬಸವ ತತ್ವದ ಸಾರ, ಶರಣರ ವಚನಗಳ ಪ್ರಚಾರ ಮಾಡುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಚೇತನ, ವಚನ ಸಾಹಿತ್ಯ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಪ್ರಕಟಿಸುವ ಮೂಲಕ ಶರಣ ಸಂಸ್ಕೃತಿಯನ್ನು ಜೀವಂತವಾಗಿರಿಸಿದ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ನಮನಗಳು.
#PGHalakatti#ವಚನಪಿತಾಮಹ
ಜಗದ ಜನರ ಆರೋಗ್ಯ ರಕ್ಷಣೆಗೆ ಭಾರತ ನೀಡಿದ ಕೊಡುಗೆಗಳು ಅಪಾರ. ಅವುಗಳಲ್ಲಿ ಯೋಗಾ ಅತ್ಯಂತ ಪ್ರಮುಖವಾದದ್ದು. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅತ್ಯುತ್ತಮ ಸಾಧನವಾಗಿದೆ. ಸ್ವಸ್ಥ ಮನಸ್ಸು, ಸಧೃಡ ದೇಹಕ್ಕಾಗಿ ಯೋಗಾಭ್ಯಾಸ ಮಾಡೋಣ, ಆರೋಗ್ಯಕರ ಸಮಾಜ ನಿರ್ಮಿಸೋಣ.
#InternationalDayofYoga#yogaday2026
ನಾಟಕಕಾರ, ಲೇಖಕ, ರಂಗಕರ್ಮಿ, ನಟ-ನಿರ್ದೇಶಕ ಹಾಗೂ ಅಸಮಾನ್ಯ ಚಿಂತಕರೂ ಆಗಿದ್ದ ಡಾ.ಗಿರೀಶ್ ಕಾರ್ನಾಡ್ ಅವರ ಪುಣ್ಯಸ್ಮರಣೆಯಂದು ಅವರನ್ನು ಗೌರವದಿಂದ ಸ್ಮರಿಸುತ್ತೇನೆ.
ಬಹುಭಾಷಾ ವಿದ್ವಾಂಸರಾಗಿದ್ದ ಅವರು ಹಲವಾರು ಕೃತಿಗಳನ್ನು ರಚಿಸಿ, ಕನ್ನಡ ಭಾಷೆಗೆ ಜ್ಞಾನಪೀಠ ದೊರೆಯುವಂತೆ ಮಾಡಿದ್ದು ಅನನ್ಯ ಸಾಧನೆ.
#GirishKarnad
ತುಮಕೂರು ಸಮೀಪದ ಶ್ರೀ ಸಿದ್ಧಗಂಗಾ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರು ಇಂದು ಬೆಂಗಳೂರಿನ ನಮ್ಮ ನಿವಾಸಕ್ಕೆ ಆಗಮಿಸಿದ್ದು, ಅವರನ್ನು ನನ್ನ ತಾಯಿ-ತಂದೆ ಹಾಗೂ ಸಹೋದರನೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತಿಸಿ, ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡೆವು.
ವಿಶ್ವಗುರು ಬಸವಣ್ಣನವರ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಜನಮಾನಸದಲ್ಲಿ ಬಿತ್ತುವಲ್ಲಿ ಪೂಜ್ಯರು ಮಹತ್ತರ ಪಾತ್ರ ವಹಿಸುತ್ತಿದ್ದು, ಶರಣ ಸಂಸ್ಕೃತಿಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಬೆಳೆಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
ಪೂಜ್ಯ ಗುರುಗಳ ಆಗಮನವು ನಮ್ಮೆಲ್ಲರಿಗೂ ಅಪಾರ ಸಂತಸ ಮತ್ತು ಸ್ಫೂರ್ತಿಯನ್ನು ನೀಡಿದೆ