ಈ ವ್ಯಕ್ತಿಗೆ ವಾಹನ ಅಪಘಾತದಲ್ಲಿ ತನ್ನ ಕಾಲು ಮೂಳೆ ಸಂಪೂರ್ಣ ಮುರಿದಿರುತ್ತದೆ ವ್ಯದ್ಯರು ಎಲ್ಲ ರೀತಿಯ ಪ್ರಯತ್ನ ಮಾಡಿ ಆಗದೆ ಕೊನೆಗೆ ಕಾಲಿನ ಒಳಗೆ ರಾಡ್ ಜೊತೆ ತಂತಿಗಳ ಹೋಲುವ ಉಪಕರಣವನ್ನು ಜೋಡಿಸಿ ಅವರಿಗೆ ಸೂಕ್ಷ್ಮವಾಗಿ ಇರಲು ಹೇಳಿರುತ್ತಾರೆ, ಅಂದರೆ ಆ ಕಾಲನ್ನು ಅಲುಗಾಡಿಸುವಂತಿಲ್ಲ ನೆಲಕ್ಕೆ ಊರುವಂತಿಲ್ಲ...
ವರ್ಷಗಳು ಕಳೆದರೂ ಅದರಿಂದ ಯಾವುದೇ ಉಪಯೋಗವಾಗಿರಲಿಲ್ಲ ಕೊನೆಗೆ ಯಾವ ದಾರಿಯೂ ಕಾಣದೆ ಆ ವ್ಯಕ್ತಿಯು ಹ0ಗರಹಳ್ಳಿ ಬಸವಣ್ಣನವರ ಬಳಿ ಬಂದು ತನ್ನ ಕಷ್ಟವನ್ನು ಹೇಳಿಕೊಂಡು ಅದರಿಂದ ಪಾರು ಮಾಡಲು ಬೇಡಿಕೊಳ್ಳುತ್ತಾನೆ.
ಆತನ ಪರಿಸ್ಥಿತಿಯನ್ನು ನೋಡಿದ ಸ್ವಾಮಿ ಆತನಿದ್ದಲ್ಲಿಗೆ ಬಂದು ಸೂಕ್ಷ್ಮವಾಗಿ ಗಮನಿಸಿ ಆತನನ್ನು ಮಲಗಿಸಲು ಸೂಚಿಸುತ್ತಾರೆ. ಮಲಗಿಸಿದಾಗ ಆತನನ್ನು ದಾಟಿಕೊಂಡು ಹೋಗುತ್ತಾರೆ ಅದಾದ ಕೆಲವೇ ದಿನಗಳಲ್ಲಿ ಭಗವಂತನ ಪವಾಡ ಎಂಬಂತೆ ವರ್ಷಗಳಿಂದ ಕೂಡಿಕೊಳ್ಳದ ಮೂಳೆ ಮಾಂಸ ಖಂಡಗಳು ಭಗವಂತನ ಆಶೀರ್ವಾದದಿಂದ ಕೂಡಿಕೊಳ್ಳಲು ಆರಂಭಿಸಿ ಸದ್ಯ ಆತನ ಕಾಲಿಗೆ ಹಾಕಿದ್ದ ಕೆಲವೊಂದು ಉಪಕರಣಗಳನ್ನು ತೆಗೆಯುವ ಮಟ್ಟಿಗೆ ಚೇತರಿಕೆ ಕಂಡಿದ್ದಾರೆ.
ಅದಲ್ಲದೆ ವಾಕರ್ ಸಹಾಯದಿಂದ ತಾನಾಗಿಯೇ ನಡೆಯುವ ಹಂತಕ್ಕೆ ಬಂದು ನಿಂತಿದ್ದಾರೆ ಆದರೆ ಇಲ್ಲಿ ವಿಶೇಷ ಏನೆಂದರೆ ಉತ್ಸವ ಕಾರ್ಯಕ್ರಮ ಒಂದರಲ್ಲಿ ರಸ್ತೆಯಲ್ಲಿ ಸ್ವಾಮಿ ಹೋಗುತ್ತಿರುವಾಗ ಕಾರೊಂದು ಸ್ವಾಮಿಯ ಪಕ್ಕಕ್ಕೆ ಬಂದು ನಿಲ್ಲುತ್ತದೆ ಯಾರೆಂದು ನೋಡಿದಾಗ ಅಂದು ಇವರು ಕ್ಷೇತ್ರಕ್ಕೆ ಬಂದ ನೆನಪು ಇರುತ್ತದೆ ಆ ವ್ಯಕ್ತಿ ವಾಕರ್ ಸಹಾಯದಿಂದ ತಾನಾಗೆ ನಡೆದುಕೊಂಡು ಬಂದು ಸ್ವಾಮಿಯ ಮುಂದೆ ನಿಂತಾಗ ಭಗವಂತ ಆತನನ್ನು ನೋಡಿದ ರೀತಿ ಮತ್ತು ಆ ವ್ಯಕ್ತಿಯ ಕಣ್ಣಿನಲ್ಲಿ ಬಂದ ಆನಂದ ಭಾಷ್ಪ ಇವೆರಡರ ಭಾವನೆಗಳನ್ನು ಬಿಡಿಸಿ ಹೇಳಬೇಕಂತೇನಿಲ್ಲ.
ಇಲ್ಲಿ ವೈದ್ಯರಿಂದಲೇ ಕೆಲವೊಂದು ನಡೆದಿದ್ದರೂ ವೈದ್ಯರು ಕೈ ಚೆಲ್ಲಿ ಕೂತಿದ್ದ ಸಮಯದಲ್ಲಿ ಭಗವಂತನ ಆಶೀರ್ವಾದ ಒಂದು ಆತನ ಬದುಕಿಗೆ ಮರುಜನ್ಮ ನೀಡಿತು. ಅಂದು ನಡೆಯಲಾಗದ ಸ್ಥಿತಿಯಲ್ಲಿ ಬಸಪ್ಪನ ಬಳಿ ಬಂದು ಕಣ್ಣೀರು ಹಾಕಿದ ವ್ಯಕ್ತಿಯ ಕಣ್ಣೀರನ್ನು ತಾನಿರುವ ಭರವಸೆ ನೀಡಿ ಒರೆಸಿದ್ದ ಸ್ವಾಮಿ.. ಇಂದು ಪವಾಡವೆಂಬಂತೆ ಆತ ನಡೆಯುವ ಸ್ಥಿತಿಯಲ್ಲಿದ್ದಾಗ ತಾನಾಗೆ ಅವನಿಗೆ ದರ್ಶನ ಕೊಟ್ಟು ಆತನೊಟ್ಟಿಗೆ ತಾನೆ ಇರುವ ಧೈರ್ಯ ಮತ್ತೆ ತುಂಬಿ ಮತ್ತೊಮ್ಮೆ ಆತನ ಕಣ್ಣಿನಿಂದ ಬಂದ ನೀರನ್ನು ಒರೆಸಿದರು... ಇದೆಲ್ಲವೇ ಬಸವಣ್ಣನ ಪವಾಡ 🙏❤️
ಶ್ರೀ_ವಿದ್ಯಾ_ಚೌಡೇಶ್ವರಿ_ಮಹಾ_ಸಂಸ್ಥಾನ_ಮಠ