"ಅಜಾದಿ ಕಾ ಅಮೃತ ಮಹೋತ್ಸವ" ಪ್ರಯುಕ್ತ ಕ್ಷಯರೋಗದ ಕುರಿತು ರಸಪ್ರಶ್ನೆ / ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಅಯಾ ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಯಿತು.
ಇಂದು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ "ಅಜಾದಿ ಕಾ ಅಮೃತ ಮಹೋತ್ಸವ" ಪ್ರಯುಕ್ತ ಕ್ಷಯರೋಗದ ಕುರಿತು ರಸಪ್ರಶ್ನೆ / ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ NTEP, ಶಾಲಾ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಕ್ಷಯ ಮುಕ್ತ ಭಾರತ ಪ್ರತಿಯೊಬ್ಬರ ಪ್ರತಿಜ್ಞೆಯಾಗಲಿ,
√ಎರಡು ವಾರಕ್ಕಂತ ಹೆಚ್ಚು ದಿನದ ಕೆಮ್ಮು
√ ಅಲ್ಲದೆ ಸಂಜೆ ವೇಳೆ ಜ್ವರ,
√ ರಾತ್ರಿ ವೇಲಕೆ ಬೆವರುವದು.
√ ಕಫದಲ್ಲಿ ರಕ್ತ ಬೀಳುವುದು.
√ ಎದೆ ನೋವು.
√ ಹಸಿವಾಗದಿರುವುದು.
√ ತೂಕ ಇಳಿಕೆ.
ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ
ಈ ದಿನ ಬಳ್ಳಾರಿ ಜಿಲ್ಲಾ ಕ್ಷಯರೋಗ ಸಮಿತಿ ಸಭೆಯು ಅಪರ ಜಿಲ್ಲಾಧಿಕಾರಿ ಮಾನ್ಯ ಪಿ.ಎಸ್. ಮಂಜುನಾಥ ಸರ್ ಇವರ ಅಧ್ಯಕ್ಷತೆಯಲ್ಲಿ, ನಡೆಯಿತು. ಈ ಸಭೆಯಲ್ಲಿ DHO ಡಾ.ಜನಾರ್ದನ್ ಸರ್, DTO ಡಾ.ಇಂದ್ರಾಣಿ ಮೇಡಂ, WHO ಪ್ರತಿನಿಧಿ ಡಾ.ಹಂಸವೇಣಿ ಮೇಡಂ ಹಾಗೂ ಎಲ್ಲಾ ಕಾರ್ಯಕ್ರಮ ಅಧಿಕಾರಿಗಳು ಸೇರಿದಂತೆ ಇನ್ನಿತರರು ಇದ್ದರು.
ದಿನಾಂಕ:08-03-21ರಂದು ಟಿ.ಬಿ. ಘಟಕಗಳಾದ ಬಳ್ಳಾರಿ & ಹೊಸಪೇಟೆಯ ನಗರ ಆರೋಗ್ಯ ಕೇಂದ್ರಗಳಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಕ್ಷಯರೋಗ ಕಾಯಿಲೆಯಿಂದ ಗುಣಮುಖ ಹೊಂದಿದ ಮಹಿಳೆರಿಗೆ ಆಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಮತ್ತು ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನವನ್ನು ನೀಡಿ ಸನ್ಮಾನಿಸಲಾಯಿತು.