ಬಳ್ಳಾರಿ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಮನೆ ಕಳ್ಳತನ ತಡೆಯಲು ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಜಾರಿಗೆ ತರಲಾಗಿದೆ. ಮನೆಗೆ ಬೇಗ ಹಾಕಿ ಊರಿಗೆ/ಪ್ರವಾಸಕ್ಕೆ ತೆರಳುವವರು ಕೆಳಗಿನ ಅಧಿಕೃತ ವಾಟ್ಸಾಪ್ ಗೆ ಅಗತ್ಯ ಮಾಹಿತಿ ಕಳುಹಿಸಬೇಕು. ಬಳಿಕ ಆ ಮನೆಯನ್ನು ವಿಶೇಷ ನಿಗಾಪಟ್ಟಿಗೆ ಸೇರಿಸಿ ನಿಯಮಿತ ಗಸ್ತು ನಡೆಸಲಾಗುತ್ತದೆ.
📷
ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತೆ ಹಾಗೂ ಅಪಘಾತಗಳನ್ನು ತಡೆಯಲು ಪ್ರತಿಯೊಬ್ಬರು ರಸ್ತೆಯ ತಿರುವುಗಳಲ್ಲಿ ತಿರುಗುವ ಮುನ್ನ 30 ಮೀಟರ್ ಮುಂಚೆ ಇಂಡಿಕೇಟರ್ ಬಳಸಿ: ನೀವು ಯಾವುದೇ ಕಡೆಗೆ ತಿರುಗಬೇಕಾದರೂ ಕನಿಷ್ಠ 30 ಮೀಟರ್ಗಿಂತ ಮುಂಚಿತವಾಗಿ ವಾಹನದ ಇಂಡಿಕೇಟರ್ ಆನ್ ಮಾಡುವುದನ್ನು ಮರೆಯಬೇಡಿ.
ತೋರಣಗಲ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ 04 ಮೊಬೈಲ್ಗಳನ್ನು CEIR ಪೋರ್ಟಲ್ನ ಸಹಾಯದಿಂದ ಪತ್ತೆ ಹಚ್ಚಿ, ಸಂಬಂಧಿತ ವಾರಸುದಾರರಿಗೆ ಯಶಸ್ವಿಯಾಗಿ ಹಸ್ತಾಂತರಿಸಲಾಯಿತು.
ಎಪಿಎಂಸಿ ಹಾಗೂ ಪಿ.ಡಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ 06 ಮೊಬೈಲ್ಗಳನ್ನು CEIR ಪೋರ್ಟಲ್ನ ಸಹಾಯದಿಂದ ಪತ್ತೆ ಹಚ್ಚಿ, ಸಂಬಂಧಿತ ವಾರಸುದಾರರಿಗೆ ಯಶಸ್ವಿಯಾಗಿ ಹಸ್ತಾಂತರಿಸಲಾಯಿತು.
🚨 ಅಕ್ಕ ಪಡೆ ವತಿಯಿಂದ ಜಾಗೃತಿ ಕಾರ್ಯಕ್ರಮ 🚨
ಬಳ್ಳಾರಿ ನಗರದ ಮಕ್ಕಳು ಮತ್ತು ಮಹಿಳೆಯರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು.
📞 1098 ಮಕ್ಕಳ ಸಹಾಯವಾಣಿ ಮತ್ತು 181 ಮಹಿಳಾ ಸಹಾಯವಾಣಿ ಕುರಿತು ಮಾಹಿತಿ ನೀಡಿ, ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯ ಮಹತ್ವವನ್ನು ವಿವರಿಸಲಾಯಿತು.
🚔 ಸುರಕ್ಷಿತ ಪ್ರಯಾಣಕ್ಕೆ ಹೆಲ್ಮೆಟ್ ಕಡ್ಡಾಯ 🚔
ಕುಡುತಿನಿ ಪೊಲೀಸ್ ಠಾಣೆ ವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಅಪಘಾತ ಸಂದರ್ಭದಲ್ಲಿ ಜೀವ ರಕ್ಷಿಸುವ ಹೆಲ್ಮೆಟ್ ಅನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಧರಿಸುವಂತೆ ಸೂಚಿಸಲಾಯಿತು.
🛵 ನಿಯಮ ಪಾಲಿಸಿ – ಜೀವ ಉಳಿಸಿ.
ಸುರಕ್ಷಿತ ಮನೆ, ನಿಶ್ಚಿಂತೆಯ ಮನ
ನಿಮ್ಮ ಮನೆಗೆ ಬೀಗ ಹಾಕುವ ಮುನ್ನ, ನಮಗೆ ಮಾಹಿತಿ ನೀಡಲು ಮರೆಯದಿರಿ. ನಿಮ್ಮ ಮನೆಯ ಸುರಕ್ಷತೆಗಾಗಿ ನಮ್ಮ ಪೊಲೀಸರು ನಿರಂತರ ಗಸ್ತು ತಿರುಗಲಿದ್ದಾರೆ. ಈ ಸೇವೆಯ ಪ್ರಯೋಜನ ಪಡೆದುಕೊಳ್ಳಿ ಮತ್ತು ಅಪರಾಧಗಳನ್ನು ತಡೆಯುವಲ್ಲಿ ನಮ್ಮೊಂದಿಗೆ ಕೈಜೋಡಿಸಿ.
📵 “No Bill… No Box… No Deal!”
📱 ದಾಖಲೆಗಳಿಲ್ಲದ ಮೊಬೈಲ್ ಖರೀದಿ ಅಪಾಯಕರ.
⚠️ ಬಿಲ್ ಹಾಗೂ ಬಾಕ್ಸ್ ಇಲ್ಲದೆ ಮೊಬೈಲ್ ಖರೀದಿಸಬೇಡಿ.
🔍 IMEI ಸಂಖ್ಯೆ ಮತ್ತು ಮಾರಾಟಗಾರರ ವಿವರವನ್ನು ಪರಿಶೀಲಿಸಿ.
🚫 ಅನುಮಾನಾಸ್ಪದ ಕಡಿಮೆ ಬೆಲೆಯ ಆಫರ್ಗಳಿಂದ ದೂರವಿರಿ.
📵 “ಅಗ್ಗದ ಆಫರ್ ನೋಡಬೇಡಿ… ಸುರಕ್ಷತೆಯನ್ನು ನೋಡಿ!”
🚨 ಒಂದು ತಪ್ಪು ಕ್ಲಿಕ್ — ಖಾತೆ ಖಾಲಿಯಾಗಬಹುದು. 🚨
📩 ಅಪರಿಚಿತ SMS ಮತ್ತು ಲಿಂಕ್ಗಳಿಂದ ದೂರವಿರಿ.
🔐 OTP, ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
⚠️ ನಕಲಿ ಸಂದೇಶಗಳಿಗೆ ಮೋಸಹೋಗಬೇಡಿ.
📞 ಸೈಬರ್ ಸಹಾಯವಾಣಿ: 1930
🛡️ ಜಾಗೃತರಾಗಿರಿ — ಸುರಕ್ಷಿತವಾಗಿರಿ.
ಧನ್ಯವಾದಗಳು ಬಳ್ಳಾರಿ! ❤️
ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಪಾಲಿಸುತ್ತಿರುವ ಬಳ್ಳಾರಿಯ ಜನತೆಗೆ ಜಿಲ್ಲಾ ಪೊಲೀಸ್ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. 🙏
ನೆನಪಿಡಿ: ಇದು ಕೇವಲ ಒಂದು ದಿನದ ಅಭಿಯಾನವಲ್ಲ, ಸುರಕ್ಷತೆ ನಿರಂತರ ಜವಾಬ್ದಾರಿ.
ಹೆಲ್ಮೆಟ್ ಧರಿಸುವುದು ನಿಮ್ಮ ರಕ್ಷಣೆಗಾಗಿ, ನಿಯಮ ಪಾಲನೆ ನಮ್ಮೆಲ್ಲರ ಕರ್ತವ್ಯ. 🏍️🪖
ಇಂದು ರಾತ್ರಿ ಆರ್ಸಿಬಿ ಅನುಮಾನಗಳ ವಿರುದ್ಧ ಅಂತಿಮ ಚಾರ್ಜ್ಶೀಟ್ ಸಲ್ಲಿಸಿ, ಚಾಂಪಿಯನ್ ಪಟ್ಟ ಗೆದ್ದು ಪ್ರಕರಣವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ! 🏆🚔
@RCBinKannada ತಂಡಕ್ಕೆ ಹಾರ್ದಿಕ ಅಭಿನಂದನೆಗಳು.
ವಿಜಯೋತ್ಸವವನ್ನು ಸಂಭ್ರಮದಿಂದ, ಆದರೆ ಸುರಕ್ಷಿತವಾಗಿ ಆಚರಿಸಿ, ಬಳ್ಳಾರಿಯ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡೋಣ.