ಕರ್ನಾಟಕದ ಸೋಲುಗಳು 2012ರ ಸೆಪ್ಟಂಬರ್ ತಿಂಗಳಿನಲ್ಲೂ ಇಂತಹುದೇ ಬಿಕ್ಕಟ್ಟು ಎದುರಾಗಿತ್ತು. ಸೆಪ್ಟಂಬರ್ 12ರಿಂದ 19ರ ತನಕ ಏಳು ದಿನಗಳ ಕಾಲ ನಿತ್ಯ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಹೇಳಿತ್ತು
#ಕಾವೇರೀನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ನಮ್ಮ ದುರಂತ
#ಕಾವೇರೀನಮ್ಮದು
ಕಾವೇರಿ ನದಿ ನೀರಿಗಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ದೊಡ್ಡ ಇತಿಹಾಸವೇ ಇದೆ. ಇತ್ತೀಚಿನ ವರ್ಷಗಳಲ್ಲಂತೂ ಪ್ರತಿ ವರ್ಷ ಹೋರಾಟ, ಪ್ರತಿಭಟನೆ, ಹರತಾಳಗಳು ನಡೆಯುತ್ತಲೇ
ಇವೆ. ಸಾಕಷ್ಟು ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿಗಳಾದರೂ ಕಾವೇರಿ ವಿಚಾರದಲ್ಲಂತೂ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ
#ಕಾವೇರೀನಮ್ಮದು
ವರ್ಷ 1910 ರಲ್ಲಿ, ಎರಡೂ ಪ್ರಭುತ್ವಗಳು ಕಾವೇರಿ ನದಿಯ ಅಣೆಕಟ್ಟಿನ ನಿರ್ಮಾಣ ಯೋಜನೆಯನ್ನು ಆರಂಭಿಸಿದರು. ಪ್ರತಿ ರಾಜ್ಯಗಳು ನೀರಿನ ಎಷ್ಟು ಪಾಲು ಪಡೆಯುತ್ತಾರೆ ಎಂದು ನಿರ್ಧರಿಸಲು ಬ್ರಿಟಿಷ್ ಸವರು ಅಧ್ಯಕ್ಷತೆ ವಹಿಸಿದ್ದರು.
#ಕಾವೇರೀನಮ್ಮದು
ಬ್ರಿಟಿಷ್ ರಾಜ್ ಅಡಿಯಲ್ಲಿದ್ದ ಮದ್ರಾಸ್ ಪ್ರಾಂತ್ಯ ಮತ್ತು ಮೈಸೂರು ರಾಜ್ಯದ ನಡುವೆ ನೀರಿನ ಹಂಚಿಕೆ ಬಗೆಗೆ ಈ ಎರಡು ರಾಜ್ಯಗಳ ನಡುವೆ ನದಿ ನೀರು ಹಂಚುವ ಕಾವೇರಿ ವಿವಾದ 1892 ರಲ್ಲಿ ಆರಂಭವಾಯಿತು.
#ಕಾವೇರೀನಮ್ಮದು
ಚೋಳರ ಕಾಲದಲ್ಲಿ ಕಾವೇರಿಗಾಗಿ ಯುದ್ಧ ನಡೆದಿತ್ತು ಎಂಬ ಉಲ್ಲೇಖವಿದೆ! ಆಗಲು ಕನ್ನಡಿಗರು ಸೋತಿದ್ದರು ಈ ಯುದ್ಧ ಎಂದು ಕೊನೆಗೊಳ್ಳುವುದೋ? ಕನ್ನಡಿಗರಿಗೆ ಯಾವಾಗ ಜಯವಾಗುವುದೋ?
#ಕಾವೇರೀನಮ್ಮದು
ರೈತ ಮತ್ತು ಕನ್ನಡ ಸಂಘಟನೆಗಳಲ್ಲಿ ಒಗ್ಗಟ್ಟಿಲ್ಲ ಎಲ್ಲರು ಸ್ವ ಪ್ರತಿಷ್ಠೆ ಜಂಬ, ಮತ್ತು ರಾಜಕೀಯ ಪಕ್ಷಗಳಿಗೆ ಕಾಳಜಿ ಅನ್ನೋದು ಸತ್ತು ಹೋಗಿದೆ! ಕನ್ನಡಿಗರಿಗೆ ಯಾರು ದಿಕ್ಕು?
#ಕಾವೇರೀನಮ್ಮದು
ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನ ವಿರೋಧಿಸಿ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಕಳೆದ ಒಂದು ತಿಂಗಳಿಂದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿ ನಡೆಸುತ್ತಿದೆ - ಇದು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೇ
#ಕಾವೇರೀನಮ್ಮದು
ಕರ್ನಾಟಕ ರಾಜ್ಯಕ್ಕೆ ಕಾವೇರಿ ವಿಚಾರದಲ್ಲಿ ಬಹಳ ದೊಡ್ಡ ಅನ್ಯಾಯವಾಗಿದೆ, ಕೇವಲ ಸುಪ್ರೀಂ ಕೋರ್ಟ್ ಆದೇಶದ ಕಾರಣ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ ಇದು ಸರ್ಕಾರದ ಸಂಪೂರ್ಣ ಸೋಲು
#ಕಾವೇರೀನಮ್ಮದು
ಕಾವೇರಿ ಕರ್ನಾಟಕಕ್ಕೆ ಅನ್ಯಾಯ - ಕಾವೇರಿ ಬಿಕ್ಕಟ್ಟು; ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಕನ್ನಡಿಗರು ಒತ್ತಾಯುಸುತ್ತಿದ್ದವೇ, ಬರಿ ಒತ್ತಾಯವೇ ಆಯ್ತಲ್ಲ ನಂದು ನ್ಯಾಯ ಯಾವಾಗ?
#ಕಾವೇರೀನಮ್ಮದು