ನೆನೆಗುದಿಗೆ ಬಿದ್ದ ಯೋಜನೆಗಳು, ಒಣಗಿದ ನದಿಗಳ ಕಣ್ಣೀರು.ಕಲ್ಯಾಣ ಕರ್ನಾಟಕಕ್ಕೆ ನಡೆಯುತ್ತಿರುವ ಅನ್ಯಾಯದ ವಿರುದ್ಧ,ಕಲ್ಯಾಣ ಕರ್ನಾಟಕದ ಜನರ ಕಣ್ಣೀರನ್ನು ಅಕ್ಷರವಾಗಿಸುವ ಸಣ್ಣ ಪ್ರಯತ್ನ. 🌾
ಮಾಜಿ ಪ್ರಧಾನಮಂತ್ರಿ ಶ್ರೀ ದೇವೇಗೌಡ ಅವರ ಪತ್ನಿ ಶ್ರೀಮತಿ ಚೆನ್ನಮ್ಮನವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ತಮ್ಮ ವಿನಯ ಮತ್ತು ಸಮಾಜ ಸೇವೆಯ ಮೇಲಿನ ಬದ್ಧತೆಗಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ಈ ದುಃಖದ ಸಮಯದಲ್ಲಿ, ಶ್ರೀ ದೇವೇಗೌಡರು ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಂತಾಪಗಳು. ಓಂ ಶಾಂತಿ.
ಶ್ರೀಮತಿ ಚೆನ್ನಮ್ಮ ಅವರ ಅಗಲಿಕೆಯ ಸುದ್ದಿ ಅತ್ಯಂತ ದುಃಖಕರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ದೇವೇಗೌಡರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
#ಓಂ ಶಾಂತಿ. 🙏
ಅನ್ನ ಬೆಳೆಯುವ ಕೈಗಳು ಸಾಲದ ಸಂಕೋಲೆಯಿಂದ ಮುಕ್ತವಾಗಬೇಕು.
ರೈತರ ಕಲ್ಯಾಣವೇ ದೇಶದ ಸಮೃದ್ಧಿ. 🌾
ಈ ಹಿಂದೆ ಕುಮಾರಣ್ಣ ರೈತರ ಸಾಲ ಮನ್ನ ಮಾಡಿದ ಕುರಿತು ಶಾಸಕ @SN_Kandkur ಅವರು ನೆನಪಿಸಿಕೊಂಡರು.
ಬತ್ತಿದ ಹೊಲಗಳು ಮಾತಾಡುತ್ತಿವೆ,
ರೈತನ ಕಣ್ಣೀರು ಹರಿಯುತ್ತಿದೆ.
ವೇದಿಕೆಗಳ ಮೇಲೆ ಮಾತುಗಳ ಮಳೆ,
ಗ್ರಾಮಗಳಲ್ಲಿ ನೀರಿನ ಹನಿಯೂ ಇಲ್ಲ.
ಕಂಡು ಕಾಣದಂತಿದೆ ರಾಜ್ಯ ಸರ್ಕಾರ..!
@CMofKarnataka
ಬತ್ತಿದ ಹೊಲಗಳು ಪ್ರಶ್ನೆ ಕೇಳುತ್ತಿವೆ,
ಒಣಗಿದ ಬಾವಿಗಳು ಸಾಕ್ಷಿ ಹೇಳುತ್ತಿವೆ.
ಭರವಸೆಗಳ ಮಳೆ ಸುರಿದರೂ,
ನೀರಿನ ಹನಿ ಮಾತ್ರ ಕಾಣುತ್ತಿಲ್ಲ.
ಕಾಗದದ ಮೇಲಿನ ಯೋಜನೆ ಬೆಳೆದಿದೆ,
ಹೊಲದ ಮೇಲಿನ ಬೆಳೆ ಒಣಗಿದೆ.
ಭಾಷಣಗಳ ಹೊಳೆ ಹರಿದಿದೆ,
ಕುಡಿಯುವ ನೀರಿನ ಹೊಳೆ ಬರಿದಾಗಿದೆ.
ರೈತನ ಕಣ್ಣೀರಿನ ಬೆಲೆ ಎಷ್ಟು?
ಹಸಿದ ಮನೆಯ ನೋವಿನ ಲೆಕ್ಕ ಎಷ್ಟು?
ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಿ, ರೈತರ ಅಹವಾಲನ್ನು ಆಲಿಸಿದ ಯುವ ಜನತಾದಳ ರಾಜ್ಯಾಧ್ಯಕ್ಷರಾದ ಶ್ರೀ @Nikhil_Kumar_k ಅವರು ಹಾಗೂ ಗುರುಮಠಕಲ್ ಮತಕ್ಷೇತ್ರದ ಶಾಸಕರಾದ ಶ್ರೀ @SN_Kandkur ಅಣ್ಣವರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವರು, ಶಾಸಕರು, ಮುಖಂಡರು, ಕಾರ್ಯಕರ್ತರು ಇದ್ದರು.
ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಅನ್ನದಾತರ ಫಲವತ್ತಾದ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಹೊರಟಿರುವ @INCKarnataka ಸರ್ಕಾರದ ವಿರುದ್ಧ ರೈತರ ಆಕ್ರೋಶ ಕಟ್ಟೆಯೊಡೆದಿದೆ. ಅಭಿವೃದ್ಧಿಯ ಹೆಸರಲ್ಲಿ ಕಾರ್ಪೊರೇಟ್ ಸಂಸ್ಥೆಗಳಿಗೆ ಮಣೆ ಹಾಕಲು ಬಂದು, ಜೀವನಾಧಾರವಾಗಿರುವ ಜಮೀನನ್ನು ಕಸಿದುಕೊಳ್ಳಲು ಯತ್ನಿಸಿದ ಅಧಿಕಾರಿಗಳ ದರ್ಪಕ್ಕೆ ರೈತರು ಪೊರಕೆ ಮತ್ತು ದೊಣ್ಣೆಗಳ ಮೂಲಕ ತಕ್ಕ ಶಾಸ್ತಿ ಮಾಡಿದ್ದಾರೆ.
#CongressFailsKarnataka
ಹಳ್ಳಿಯ ಮುಖಗಳು.
ಬರೀ ಸಾಂತ್ವನದ ಮಾತು ನಮಗೆ ಬೇಡ,ರೈತನ ಕಣ್ಣೀರು ಒರೆಸಲು ತಡ ಮಾಡಬೇಡ.ಡ್ಯಾಂ ನಂಬಿ ಬದುಕಬೇಡಿ ಎಂಬ ಸಿಎಂ ಮಾತು,ಕೇಳಿ ತತ್ತರಿಸಿದೆ ರೈತನ ಒಳ ಜಗತ್ತು..!
ರೈತನ ಹೊಟ್ಟೆ ಉರಿದರೆ ಅಧಿಕಾರ ಉಳಿಯದು.
@CMofKarnataka@SN_Kandkur@JanataDal_S
ಇಂದು ಗುರಮಠಕಲ್ ಕ್ಷೇತ್ರದ ಮಾನ್ಯ ಜನಪ್ರಿಯ ಶಾಸಕರಾದ ಶ್ರೀ @SN_Kandkur ಅಣ್ಣವರು ಗೋಪಾಳಪೂರ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2-ಕೋಣೆಗಳ ಅಡಿಗಲ್ಲು ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳು ಪಕ್ಷದ ಜಿಲ್ಲಾಧ್ಯಕ್ಷರು, ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಇನ್ನಿತರರು ಉಪಸ್ಥಿತರಿದ್ದರು..
SIR ಅಧಿಕಾರಿಗಳ ತಂಡ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಶಾಸಕ @SN_Kandkur ಅವರಿಗೆ ವಿವರ ನೀಡಿದರು.
ಅರ್ಹ ನಾಗರಿಕರಿಗೆ ಸಿಗಲಿ ವೋಟಿನ ಶಕ್ತಿ, ಮತದಾರರ ಪಟ್ಟಿ ಶುದ್ಧೀಕರಣವೇ ದೇಶದ ಭಕ್ತಿ ಬಿ ಎಲ್ ಒ ಗಳು ಮನೆಗೆ ಬಂದಾಗ ದಾಖಲೆ ನೀಡಿ, ನಿಮ್ಮ ಹೆಸರಿದೆಯಾ ಎಂದು ಇಂದೇ ಪರಿಶೀಲನೆ ಮಾಡಿ ಅಧಿಕಾರಿಯ ಸಹಿ, ನಿಯಮದ ಪಾಲನೆ,