Biggest SCAM in Karnataka History!
KAS - 2024 Mains ನಲ್ಲಿ ಏನೋ ಗದ್ದಲ ನಡೀತಿದೆ!
ಕಾರ್ಯದರ್ಶಿ ಸಹಿ ಹಾಕಬೇಕಿದ್ದ ಜಾಗದಲ್ಲಿ,
"ಕರ್ನಾಟಕ ಲೋಕಸೇವಾ ಆಯೋಗದ ಪರವಾಗಿ" ಅಂತಾ ಯಾರೋ ಬರೆದು ಪ್ರಕಟಣೆ ಹೊರಡಿಸಿದ್ದಾರೆ!
ಅಂದ್ರೆ ಏನಿದರ ಅರ್ಥ?
#kpscmosa#KPSCDroha
@ArnabGoswamiRTv kindly look into KPSC issue, there is a demand from almost 75000+ students continuously to govt for their grave mistakes done in paper with translation issues... Atleast u wake them up...we are expecting your show on this..
ಕೆಪಿಎಸ್ಸಿ ಅನ್ಯಾಯದ ವಿರುದ್ಧ ಕೋರ್ಟ್ ಮೆಟ್ಟಲೇರಿದ್ದ ಅಭ್ಯರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕಾಂಗ್ರೆಸ್ ಸರ್ಕಾರ!
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿ, ಮೇ 3ರಿಂದ ಅಂದರೆ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ಅನುಮತಿ ಪಡೆದಿದ್ದರೆ, ಅವರಿಗೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ @INCKarnataka ಸರ್ಕಾರ.
ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಅರ್ಜಿ ತುಂಬಲು ಯಾವ ದಾಖಲಾತಿಗಳು ಬೇಕೆ ಎನ್ನುವ ಗೊಂದಲ, ಹತ್ತಿರದಲ್ಲಿ ಒಂದು ಜೆರಾಕ್ಸ್ ಅಂಗಡಿ ಇಲ್ಲ, ಕುಡಿಯೋಕೆ ನೀರಿಲ್ಲ, ಕಾಫಿ ತಿಂಡಿಗೆ ಒಂದು ಹೋಟೆಲ್ ಇಲ್ಲ, ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ, ಹಸುಗೂಸುಗಳಿಗೆ ಹಾಲುಣಿಸೋಕೆ ಜಾಗ ಇಲ್ಲ, ಮಧ್ಯರಾತ್ರಿ ಆದರೂ ಹಾಲ್ ಟಿಕೆಟ್ ಕೈಗೆ ಸಿಕ್ಕಿಲ್ಲ, ಬೆಳಗಾದರೆ ಪರೀಕ್ಷೆ, ಇಂತಹ ಅವಾಂತರದ ನಡುವೆ ಪಾಪ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ?
ಸಿಎಂ @siddaramaiah ನವರೇ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅಂದರೆ ತಮಗೆ ಯಾಕಿಷ್ಟು ದ್ವೇಷ? ಯಾಕಿಷ್ಟು ಅಸಡ್ಡೆ? ಬಡವರು ಮಕ್ಕಳು ಮುಂದೆ ಬರಬಾರದ?
ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬೇರೆ ದಾರಿ ಇಲ್ಲದೆ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಆದೇಶ ತಂದರೆ ಹಾಲ್ ಟಿಕೆಟ್ ಕೊಡಲು
ಸತಾಯಿಸಿ ನೆಮ್ಮದಿಯಾಗಿ ಪರೀಕ್ಷೆ ಬರೆಯಲೂ ತೊಂದರೆ ಮಾಡಿದ್ದೀರಿ.
ನೂರಾರು ಕನಸುಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ವರ್ಷಗಟ್ಟಲೆ ತಯಾರಿ ನಡೆಸಿದ ಅಭ್ಯರ್ಥಿಗಳ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರದು.
#KPSCMosa
#ಕೆಪಿಎಸ್ಸಿ_ಮೋಸ
"ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ ಯಾರಿಗೂ ನೆಮ್ಮದಿಯಿಲ್ಲ"
KPSC ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದರು, ಮಧ್ಯರಾತ್ರಿ ಅರ್ಜಿ ತುಂಬಿ ಪ್ರವೇಶಾತಿ (ಹಾಲ್ ಟಿಕೆಟ್) ಪಡೆಯುವಂತೆ ಗೊಂದಲ ಸೃಷ್ಟಿಸಿರುವ KPSC ಕಾರ್ಯವೈಖರಿ ಪರೀಕ್ಷಾರ್ಥಿಗಳಿಗೆ ಅನಗತ್ಯ ಕಿರುಕುಳ ನೀಡುವ ದುರುದ್ದೇಶ ಪ್ರತಿಬಿಂಬಿಸಿದೆ. ಉದ್ಯೋಗಾಂಕ್ಷಿ ಅಭ್ಯರ್ಥಿಗಳ ಭವಿಷ್ಯದ ಜೊತೆ KPSC ಚೆಲ್ಲಾಟವಾಡುತ್ತಿದ್ದರೆ ರಾಜ್ಯ ಸರ್ಕಾರ ಕಣ್ಣುಮುಚ್ಚಿಕೊಂಡು ನೋಡುತ್ತಿದೆ.
ಮೇ 2ರ ಮಧ್ಯರಾತ್ರಿ 12 ಗಂಟೆಯವರೆಗೆ KPSC ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಮಧ್ಯರಾತ್ರಿ ಹಾಲ್ ಟಿಕೆಟ್ ಪಡೆದು ಹೋಗಿ ಮರುದಿನ ಬೆಳಗ್ಗೆಯೇ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯುವಂತೆ ಮಾಡಿರುವ ಗೊಂದಲದ ವ್ಯವಸ್ಥೆಯಿಂದ ಹಿಂಸೆ ಅನುಭವಿಸುತ್ತಿರುವ ಪರೀಕ್ಷಾರ್ಥಿಗಳು ಹಾಗೂ ಅವರ ಕುಟುಂಬದವರ ಶಾಪ ರಾಜ್ಯ ಸರ್ಕಾರಕ್ಕೆ ತಟ್ಟದೇ ಬಿಡದು.
ವಿಧಾನಸಭಾ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಮಾತು ಕೊಟ್ಟು, ಪರೀಕ್ಷಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. @BJP4Karnataka ನೊಂದವರ ದನಿಯಾಗಿ ನಿಲ್ಲಲಿದೆ.
#KPSCMosa #WakeUpKarnataka #CongressFailsKarnataka
ಎತ್ತ ಸಾಗುತ್ತಿದೆ ಕರ್ನಾಟಕ, ತಾಲಿಬಾನ್ ಆಡಳಿತ ಕೂಡಾ ಇಷ್ಟು ಕೆಟ್ಟು ಹೋಗಿಲ್ಲ!!!
ಅಪರಾತ್ರಿ, ಸುರಿಯುತ್ತಿರುವ ಮಳೆ, ವಿಪರೀತ ಚಳಿ, ಹಸಿದ ಹೊಟ್ಟೆ, ಒಬ್ಬಾಕೆಯ ಕಂಕುಳಲ್ಲಿ ಪುಟ್ಟ ಕಂದಮ್ಮ, ಕೈಯಲ್ಲಿ ಶೈಕ್ಷಣಿಕ ದಾಖಲೆಗಳು.... ಈ ದೃಶ್ಯಗಳು ಊರಿಗೆ ಹೊರಟವರೋ, ಪ್ರವಾಸಕ್ಕೆ ಹೊರಟವರು ಎದುರಿಸುತ್ತಿರುವ ಸನ್ನಿವೇಶಗಳಲ್ಲ, ಇದೆಲ್ಲವೂ ಭಾವೀ ಸರ್ಕಾರಿ ಅಧಿಕಾರಿಗಳಾಗಬೇಕಿರುವ ಅಭ್ಯರ್ಥಿಗಳು ನಾಲಾಯಕ್ @INCKarnataka ಸರ್ಕಾರದಿಂದ ಎದುರಿಸುತ್ತಿರುವ ಸಮಸ್ಯಗಳು.
ಕೆಪಿಎಸ್ಸಿ ಕರ್ಮಕಾಂಡಗಳಿಗೆ ನ್ಯಾಯಾಲಯದಿಂದ ಉಗಿಸಿಕೊಂಡಿದ್ದ ಸರ್ಕಾರ, ಅಂತಿಮವಾಗಿ ಮೇ 3 ರಂದು ಪರೀಕ್ಷೆ ನಡೆಸುವುದಾಗಿ ಒಪ್ಪಿಕೊಂಡಿತ್ತು. ಆದರೆ ಪರೀಕ್ಷೆಯ ಹಿಂದಿನ ದಿನ ಮಧ್ಯರಾತ್ರಿ 12 ಗಂಟೆಗೆ ಹಾಲ್ ಟಿಕೆಟ್ ನೀಡುತ್ತೇವೆ ಎನ್ನುವ ಮೂಲಕ ಅಭ್ಯರ್ಥಿಗಳನ್ನು ಅತಂತ್ರರನ್ನಾಗಿಸಿದೆ. ನಡುರಾತ್ರಿ ಅರ್ಜಿ ಸಲ್ಲಿಸಿ, ಹಾಲ್ ಟಿಕೆಟ್ ಪಡೆದು ಮರುದಿನ ಪರೀಕ್ಷೆಗೆ ಹಾಜರಾಗಬೇಕು ಎಂದರೆ ಹೇಗೆ ಸಾಧ್ಯ?
⁉️ ದೂರದ ಊರುಗಳ ಅಭ್ಯರ್ಥಿಗಳು ಏನು ಮಾಡಬೇಕು?
⁉️ 12 ಗಂಟೆ ರಾತ್ರಿಗೆ ಹೆಣ್ಣು ಮಕ್ಕಳು, ಮಹಿಳೆಯರು ಬರಲು ಸಾಧ್ಯವೇ?
⁉️ ನಡುರಾತ್ರಿ ಬರುವ ಹೆಣ್ಣು ಮಕ್ಕಳಿಗೆ ಸರ್ಕಾರ ಎಸ್ಕಾರ್ಟ್ ವ್ಯವಸ್ಥೆ ಮಾಡುತ್ತದೆಯೇ?
ಹೀಗೆ ಪ್ರಶ್ನೆಗಳ ಸುರಿಮಳೆಗಳನ್ನು ಅಭ್ಯರ್ಥಿಯೋರ್ವರು ಸಿಎಂ @siddaramaiah ಅವರ ಮುಖಕ್ಕೆ ಎಸೆದಿದ್ದಾರೆ, ಏನು ಉತ್ತರ ಹೇಳುತ್ತಾರೆ ತುಘಲಕ್ ದರ್ಬಾರಿನ ರಾಯಭಾರಿಗಳು?
ನೆಟ್ಟಗೆ ಒಂದು ಪರೀಕ್ಷೆ ನಡೆಸಲು ಕೈಲಾಗದವರಿಗೆ ಆಡಳಿತ ನಡೆಸಲು ಯಾವ ಅರ್ಹತೆಯಿದೆ?
#KPSCMosa #WakeUpKarnataka #CongressFailsKarnataka
ಯಾವ ನಾಡಿನಲ್ಲಿ ಇದೀವಿ ನಾವು #Siddaramaiah ಅವರೆ ನಿಮಗೆ ಮಾನವೀಯತೆ ಇದೀಯ ಛೀ ನಾಚಿಕೆ ಆಗುತಿದೇ ಭ್ರಷ್ಟ #kpsc ಮಾಡುತಿರುವ ದ್ರೋಹ ನಿಮಗೆ ಕಂಡರು ಕಾಣದೆ ಇರುವ ನಿಮಗೆ ದೇವರು ಸರಿಯಾದ ಶಿಕ್ಷೆಯನ್ನೇ ಕೊಡುತಾನೆ ಮಾನವೀಯತೆ ಮರೆತ @KpscSecretary ನಿಮಗೂ ನಿಮ್ಮ ಮಕ್ಕಳಿಗೂ ನಮ್ಮ ಕಣ್ಣೀರು ಶಾಪವಾಗಿ ನಿಮ್ಮ ಕುಟುಂಬವೇ ಸರ್ವನಾಶವಾಗಲಿ
ಕರ್ನಾಟಕದ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸಿದ ಕೆಪಿಎಸ್ಸಿ!
ಇಂದು ರಾತ್ರಿ 12 ಗಂಟೆಯ ತನಕ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೋರಿದೆ
ಇದರ ಕಾರ್ಯವೈಖರಿ ಮೆಚ್ಚಬೇಕು!
ಏನ್ರಿ ಇಷ್ಟೊಂದು ಅವಸರ ನಿಮಗೆಲ್ಲಾ? ಏಕೆ ಇಷ್ಟು ಜಿದ್ದಾ ಜಿದ್ದಿ, ಕನ್ನಡದ ಯುವಕರು ಭವಿಷ್ಯದ ಮೇಲೆ ನೀವು ಸಮಾಧಿ ಕಟ್ಟಲು ಹೊರಟಿದ್ದೀರಿ! ಮಾಧ್ಯಮಗಳೇ @tv9kannada ಗಮನಿಸಿ
Dear @CMofKarnataka, your timely intervention is crucial to uphold the sanctity of #KAS examination.
Allowing only those 144 candidates, who went to court, to write mains is unjust & deeply demoralizing for the entire aspirant community of the state.
#KPSC#Karnataka
@siddaramaiah@CMofKarnataka
ಮಾನ್ಯ ಮುಖ್ಯಮಂತ್ರಿಗಳೇ ಸದನದಲ್ಲಿ ಸುಳ್ಳನ್ನು ಹೇಳಿ ಶೃಂಗರಿಸುವ ಜಾಣ್ಮೆ ನಿಮ್ಮಲ್ಲಿರಬಹುದು ಸುಳ್ಳನ್ನು ಬೆತ್ತಲು ಮಾಡುವ ಶಕ್ತಿ ವಿದ್ಯಾರ್ಥಿಗಳಿಗಿದೆ ;
ಕೆ ಎ ಎಸ್ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಲು ಸತ್ಯಾಗ್ರಹ ;
ವಿಧಾನಸಭೆಯ ಅಧಿವೇಶನದಲ್ಲಿ ಆಶ್ವಾಸನೆ ಕೊಟ್ಟಂತೆ ದೋಷಪೂರಿತ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ರದ್ದು ಪಡಿಸಿ, ಮರು ಪರೀಕ್ಷೆಗೆ ಆದೇಶಿಸುವ ಮೂಲಕ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ 70,000ಕ್ಕೂ ಹೆಚ್ಚು ಗ್ರಾಮೀಣ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ @siddaramaiah ಅವರಿಗೆ ಪತ್ರ ಬರೆದಿದ್ದೇನೆ.
#KAS #KPSC #Prelims
ಎಲ್ಲಾ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಶೋಷಿತ ಪರ ಸಂಘಟನೆಗಳು, ಕನ್ನಡ ಮಾಧ್ಯಮದಲ್ಲಿ ಕೆಎಎಸ್ ಅಭ್ಯರ್ಥಿಗಳಾದ ಅನ್ಯಾಯಕ್ಕೆ ಸರ್ಕಾರಕ್ಕೆ ಮೂಗು ಹಿಡಿದಾಗ ಮಾತ್ರ ಬಾಯಿ ಬಿಡ್ತಾರೆ, ರಾಜ್ಯ ಬಂದ್ ಮಾಡಿಯಾದ್ರು ಸರಿ, ನ್ಯಾಯಕ್ಕಾಗಿ ನಾವು ಹೋರಾಡಬೇಕಿದೆ @karave_KRV@prajavani@tv9kannada@narayanagowdru@RAshokaBJP
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕೆಎಎಸ್ ಪೂರ್ವಬಾವಿ ಪರೀಕ್ಷೆಯಲ್ಲಿನ ಮರು ಪರೀಕ್ಷೆಯ 2 ಪತ್ರಿಕೆಗಳಲ್ಲಿ 79 ದೋಷಗಳಿದ್ದರೂ ಕೆಪಿಎಸ್ ಸಿ ಕೇವಲ 5 ಪ್ರಶ್ನೆಗಳಿಗೆ ಮಾತ್ರ ಕೃಪಾಂಕ ನೀಡುವ ಮೂಲಕ ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಅನ್ಯಾಯಮಾಡಿದೆ, ಕೆಪಿಎಸ್ ಸಿಯ ನಿರಂತರ ಯಡವಟ್ಟುಗಳನ್ನು ಸಹಿಸದೇ ಪರೀಕ್ಷಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಹಿಂದೆ ಮುಖ್ಯಮಂತ್ರಿಗಳು ಸದನದಲ್ಲಿ ಹೇಳಿದ್ದಂತೆ ನ್ಯಾಯಾಲಯದ ತೀರ್ಪು ಬಂದಕೂಡಲೇ ಪರೀಕ್ಷಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವುದಾಗಿ ತಿಳಿಸಿದ್ದರು.
ಸದ್ಯ ಘನ ನ್ಯಾಯಾಲಯ 32 ಅಭ್ಯರ್ಥಿಗಳಿಗೆ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿದೆ. ಆದರೆ ಉಳಿದ ಅಭ್ಯರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಿ ಎಲ್ಲಾ ಅಭ್ಯರ್ಥಿಗಳಿಗೂ ಮರು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವುದು ನ್ಯಾಯೋಜಿತ ಕ್ರಮವಾಗಿರುತ್ತದೆ, ಈ ಕುರಿತು ಮುಖ್ಯಮಂತ್ರಿಗಳು ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪತ್ರ ಬರೆಯಲಾಗಿದೆ.
KAS ಮರುಪರೀಕ್ಷೆಗೆ ಆಗ್ರಹಿಸಿ ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡ ಪರೀಕ್ಷಾರ್ಥಿಗಳನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಲಾಗಿದೆ. ಕಲ್ಬುರ್ಗಿಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಾಕಿದ ದೇಶ ದ್ರೋಹಿಗಳ ಮೇಲೆ ಯಾವ ಕ್ರಮ ಕೈಗೊಂಡಿದ್ದರೋ ಗೊತ್ತಿಲ್ಲ; ಆದರೆ ತಮಗಾದ ಅನ್ಯಾಯವನ್ನು ಶಾಂತಿಯುತವಾಗಿ ಪ್ರತಿಭಟಿಸಿ ಧಾರವಾಡದಿಂದ ಪಾದಯಾತ್ರೆ ಮೂಲಕ ಪಾಲ್ಗೊಂಡಿದ್ದ ಪರೀಕ್ಷಾರ್ಥಿಗಳ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಆಡಳಿತಾತ್ಮಕ ವೈಫಲ್ಯ, ಪರೀಕ್ಷಾ ನಿಯಂತ್ರಕರ ಸಾಲು ಸಾಲು ತಪ್ಪುಗಳ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ? ಸರ್ಕಾರದ ವೈಫಲ್ಯವನ್ನು ಬಯಲಿಗೆಳೆಯುತ್ತಿರುವ ಪರೀಕ್ಷಾರ್ಥಿಗಳನ್ನು ಏಕೆ ಅರೆಸ್ಟ್ ಮಾಡಲಾಯಿತು? 'ಕೈ' ಲಾಗದ ಸರ್ಕಾರ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನ್ನು ಬಿಡುತ್ತಿದೆ.
ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವರನ್ನು ಕೂಡಲೇ ಸರ್ಕಾರ ಬಂಧಮುಕ್ತಗೊಳಿಸಿ, ತಮ್ಮ ಪರಾಕ್ರಮ, ಪೌರುಷಗಳನ್ನು ಆಯೋಗವನ್ನು ಭ್ರಷ್ಟಮುಕ್ತ ಮಾಡುವಲ್ಲಿ, ಪರೀಕ್ಷಾರ್ಥಿ ಸ್ನೇಹಿ ಮಾಡುವಲ್ಲಿ ವಿನಿಯೋಗಿಸಲಿ
ಮಾತು ತಪ್ಪಿದ ಮುಖ್ಯಮಂತ್ರಿ !
@CMofKarnataka@siddaramaiah
ಆಗ
ಕನ್ನಡ ಕಾವಲು ಸಮಿತಿಯ ಅಧ್ಯಕ್ಷರು ಸದನದಲ್ಲಿ ಕನ್ನಡ ವ್ಯಾಕರಣಗಳನ್ನು ಸುಲಲಿತವಾಗಿ ಬಳಸುತ್ತಿದ್ದ ಕನ್ನಡ ರಾಮಯ್ಯ
ಈಗ
ಕನ್ನಡ ಮಾಧ್ಯಮದ ಮಕ್ಕಳಿಗೆ ಘೋರ ಅನ್ಯಾಯ ವಾಗಿದ್ದರು ನ್ಯಾಯ ದೊರಕಿಸಿಕೊಡುತ್ತೇನೆಂದು ಸದನದಲ್ಲಿ ಮಾತು ಕೊಟ್ಟರು
ಮಾತು ತಪ್ಪಿದ ರಾಮಯ್ಯ
ಕೋಟಿ ಇದ್ದರೆ ಸಾಕು!
ಸತ್ಯಶೋಧನ ಸಮಿತಿ ಏಕೆ ಬೇಕು ?
ಎರಡು ದಶಕಗಳಿಂದ ಈಚೆಗೆ ನಡೆದಿರುವ ಕೆಪಿಎಸ್ಸಿ ನೇಮಕಾತಿ ಪ್ರಕ್ರಿಯೆಗಳು ಸಾಂವಿಧಾನಿಕ ಸಂಸ್ಥೆಯ ಗೌರವವನ್ನು ಅದೋಗತಿಗೆ ತಂದು ನಿಲ್ಲಿಸಿವೆ
ಪ್ರಾಮಾಣಿಕ ನೇಮಕಾತಿಗಳಿಲ್ಲ ;
ಹಗರಣಗಳಿಲ್ಲದೆ ಕೆಪಿಎಸ್ಸಿ ಇಲ್ಲ ;
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯಕಾರಿಣಿ ಸಭೆಯ ತೀರ್ಮಾನಗಳು
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯಕಾರಿಣಿ ಹೋಟೆಲ್ ಲಲಿತ್ ಅಶೋಕದಲ್ಲಿ ನಡೆಯಿತು. ರಾಜ್ಯದ ಎಲ್ಲ 31 ಜಿಲ್ಲೆಗಳ ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಕರ್ನಾಟಕ ನಾಡು, ನುಡಿ ರಕ್ಷಣೆಯ ಹೋರಾಟಕ್ಕೆ ಸಂಬಂಧಪಟ್ಟಂತೆ ಇಡೀ ದಿನ ಚರ್ಚೆ ನಡೆದು ಹಲವು ಮುಖ್ಯ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಮೇ.15ರಿಂದ ರಾಜ್ಯಾದ್ಯಂತ ಮಹಾಸಂಘರ್ಷ ಯಾತ್ರೆ:
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕನ್ನಡಿಗರ ಹಕ್ಕುಸ್ಥಾಪನೆಗಾಗಿ ʻಮಹಾಸಂಘರ್ಷ ಯಾತ್ರೆʼ ಈಗಾಗಲೇ ಬೆಂಗಳೂರಿನಲ್ಲಿ ಉದ್ಘಾಟನೆಯಾಗಿದ್ದು, ಮೇ.15ರಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಯಾತ್ರೆ ಸಾಗಲಿದೆ. ಇದಕ್ಕಾಗಿ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳಲು ಪದಾಧಿಕಾರಿಗಳಿಗೆ ಸೂಚಿಸಲಾಯಿತು.
ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಬರೆಹವಿರಬೇಕು ಎಂಬ ನಮ್ಮ ಬೇಡಿಕೆಯನ್ನು ಸರ್ಕಾರ ಈಗಾಗಲೇ ಈಡೇರಿಸಿದ್ದು, ಅದು ಅನುಷ್ಠಾನಗೊಳ್ಳಬೇಕಿದೆ. ಹಾಗೆಯೇ ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳ ಏಜೆನ್ಸಿ ಕನ್ನಡಿಗರಿಗೇ ಕೊಡಬೇಕು ಎಂಬುದು ಮಹಸಂಘರ್ಷ ಯಾತ್ರೆಯ ಬೇಡಿಕೆಯಾಗಿದೆ. ಕರ್ನಾಟಕದ ಎಲ್ಲ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದಿಯನ್ ರಾಜ್ಯಗಳ ಜನರನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕರೆಯಿಸಿಕೊಳ್ಳಬೇಕು. ಆ ಜಾಗಗಳಿಗೆ ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕು ಎಂಬುದು ಮಹಾಸಂಘರ್ಷ ಯಾತ್ರೆಯ ಮತ್ತೊಂದು ಗುರಿಯಾಗಿದೆ.
ಅದೇ ರೀತಿ ಕರ್ನಾಟಕದಲ್ಲಿ ಶಿಕ್ಷಣ ನೀತಿಯಲ್ಲಿ ಬದಲಾವಣೆ ಮಾಡಿ ತಮಿಳುನಾಡು ಮಾದರಿಯಲ್ಲಿ ʻದ್ವಿಭಾಷಾ ನೀತಿʼಯನ್ನು ಜಾರಿಗೊಳಿಸಿ ಹಿಂದಿ ಕಲಿಕೆ ಕಡ್ಡಾಯವನ್ನು ತೊಲಗಿಸಬೇಕು. ಕೇಂದ್ರ ಸರ್ಕಾರ ಕ್ಷೇತ್ರವಾರು ಪುನರ್ ವಿಂಗಡಣೆಯ ಹೆಸರಿನಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವೆಸಗುತ್ತಿದ್ದು, ಲೋಕಸಭೆ, ರಾಜ್ಯಸಭೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಶೇಕಡಾವಾರು ಕುಸಿಯಲಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರವಾರು ಪುನರ್ ವಿಂಗಡಣೆಯನ್ನು ನಡೆಸಕೂಡದು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.
ಈ ಎಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಇಡೀ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡರು ʻಮಹಾಸಂಘರ್ಷ ಯಾತ್ರೆʼ ಕೈಗೊಳ್ಳಲಿದ್ದು, ಇಂದಿನಿಂದಲೇ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿ ವ್ಯಾಪಕವಾದ ಪ್ರಚಾರಾಂದೋಲನ ಕೈಗೊಳ್ಳಲು ಸೂಚಿಸಲಾಯಿತು.
ಕೆ.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಬೃಹತ್ ಚಳವಳಿಯಿಂದಾಗಿ ಸರ್ಕಾರ ಇನ್ನು ಮುಂದೆ ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಮೊದಲು ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ತಯಾರಿಸಿ ನಂತರ ಇಂಗ್ಲಿಷ್ ಗೆ ಅನುವಾದಿಸುವಂತೆ ನಿಯಮ ರೂಪಿಸಿದೆ. ಹೋರಾಟ ಭಾಗಶಃ ಯಶಸ್ವಿಯಾಗಿದೆ. ಆದರೆ ಡಿಸೆಂಬರ್ 29ರಂದು ನಡೆದ ಪರೀಕ್ಷೆಯಲ್ಲಿ ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಇನ್ನೂ ನ್ಯಾಯ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ರೂಪಿಸುವ ನಿರ್ಧಾರ ಕೈಗೊಳ್ಳಲಾಯಿತು. ರಾಜ್ಯ ಉಚ್ಛನ್ಯಾಯಾಲಯದಲ್ಲಿ ಈಗಾಗಲೇ ವಿದ್ಯಾರ್ಥಿಗಳ ಪರವಾಗಿ ದಾವೆ ಹೂಡಲಾಗಿದ್ದು, ಅದನ್ನು ಗಂಭೀರವಾಗಿ ಮುಂದುವರೆಸಲು ತೀರ್ಮಾನಿಸಲಾಯಿತು.
ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಯಾರೇ ಸಿಎಂ ಆಗಿರಲಿ,ಅಧಿಕಾರಿಗಳಿರಲಿ,ಎಂತದ್ದೇ ಅಕ್ರಮ ಮಾಡುವ ಪಟಾಲಂಗಳಿರಲಿ,ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಲಂಚಕೋರರನ್ನು ಮಟ್ಟಹಾಕಲು ಸುಭದ್ರವಾಗಿದೆ, ರಾಜ್ಯದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನ್ಯಾಯ ಸಿಗದಿದ್ದರೆ ಸರ್ವೋಚ್ಛ ನ್ಯಾಯಾಲಯ ಮೊರೆ ಹೋಗುವುದು ಶತಸಿದ್ಧ@CMofKarnataka@HKPatilINC@vinaygb
KPSC ಅಕ್ರಮಗಳಲ್ಲಿ ನ್ಯಾಯ ಮತ್ತು ಪಾರದರ್ಶಕತೆ ಖಚಿತಪಡಿಸಿಕೊಳ್ಳಲು CBI ತನಿಖೆ ಅಗತ್ಯವಿದೆ ಎಂದು ಉಚ್ಛ ನ್ಯಾಯಾಲಯ ಆಗ್ರಹಿಸಿದರು ಸರ್ಕಾರ ಮೀನಾಮೇಶ ಮಾಡುತ್ತಿರುವುದು ಯಾರನ್ನು ಸಂರಕ್ಷಿಸುವುದಕ್ಕೆ?ಇದರ ಅರ್ಥವೇನು?ತನಿಖೆ ಆಗಲೇಬೇಕು,ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು @Kbarandbench@siddaramaiah