ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ಕಲ್ಲು ಗಣಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿರುವುದು ನೋವು ತಂದಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ: ಪ್ರಧಾನಮಂತ್ರಿ @narendramodi
ಕಲ್ಯಾಣ ಕರ್ನಾಟಕ ಭಾಗದಲ್ಲಿ 18,000 ಕ್ಕೂ ಹೆಚ್ಚು ಸರ್ಕಾರಿ ಶಾಲಾ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದರೂ ಕಾಂಗ್ರೆಸ್ ಸರ್ಕಾರ ಮಾತ್ರ ಮೌನಕ್ಕೆ ಶರಣಾಗಿದೆ.
ಹೊಣೆಗಾರಿಕೆಯ ಬಗ್ಗೆ ಸದಾ ಉದ್ದುದ್ದ ಭಾಷಣ ಬಿಗಿಯುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ ತಮ್ಮದೇ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿರುವುದು ಏಕೆ?
ಮಂದಿರ ಬೇಡ, ಶಾಲೆ ಕಟ್ಟಿ ಎಂದು ಹಿತವಚನ ಹೇಳುವ ಪ್ರಿಯಾಂಕ್ ಖರ್ಗೆ ಅವರೇ, ದಶಕಗಳ ಕಾಲ ಕಲ್ಯಾಣ ಕರ್ನಾಟಕದಲ್ಲಿ ನಿಮ್ಮದೇ ಕುಟುಂಬದ ರಾಜಕೀಯ ಪ್ರಾಬಲ್ಯವಿದ್ದರೂ, ಅಲ್ಲಿ ಇಂದಿಗೂ ಸುಸಜ್ಜಿತ ಶಾಲೆಗಳು ಮತ್ತು ಮೂಲಭೂತ ಸೌಕರ್ಯಗಳು ಏಕೆ ಮರೀಚಿಕೆಯಾಗಿವೆ?
#CongressFailsKarnataka
ನಿಮ್ಮ ಮೊಬೈಲ್ನಲ್ಲೇ SIR ಫಾರ್ಮ್ ತುಂಬಿ!
ಮತದಾರರ ಪಟ್ಟಿ ಪರಿಷ್ಕರಣೆ ಫಾರ್ಮ್ ಅನ್ನು ಈಗ ಆನ್ಲೈನ್ನಲ್ಲೇ ಕೇವಲ 5 ನಿಮಿಷಗಳಲ್ಲಿ ಸಲ್ಲಿಸಬಹುದು.
ಹೇಗೆ ಅಂತೀರಾ?
1️⃣ https://t.co/e7r4W9ZlSk ಗೆ ಭೇಟಿ ನೀಡಿ.
2️⃣ ಲಾಗಿನ್ ಆಗಿ (ಮೊಬೈಲ್ ನಂಬರ್ ಲಿಂಕ್ ಕಡ್ಡಾಯ).
3️⃣ 'Fill Enumeration Form' ಕ್ಲಿಕ್ ಮಾಡಿ, ಆಧಾರ್ e-Sign ಮೂಲಕ ಸಲ್ಲಿಸಿ.
ಯಾವುದೇ ಗೊಂದಲವಿದ್ದಲ್ಲಿ ಈ ವಿಡಿಯೋ ನೋಡಿ. ನಿಮ್ಮ ವೋಟು, ನಿಮ್ಮ ಹಕ್ಕು!
#SIRKarnataka #ElectionCommission
ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ರಾಷ್ಟ್ರ ಚಿಂತನೆಯನ್ನು ಉದ್ದೀಪಿಸಿ ಅನೇಕ ಅದ್ಭುತ ಸಾಹಸಗಳಿಗೆ, ಸಹಸ್ರಾರು ಜನರ ತ್ಯಾಗ-ಬಲಿದಾನಗಳಿಗೆ ಪ್ರೇರಣೆ ನೀಡಿದ 'ವಂದೇ ಮಾತರಂ' ರಣಮಂತ್ರ ರಚಿಸಿದ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಜನ್ಮದಿನದ ಸ್ಮರಣೆಗಳು.
#BankimChandraChattopadhyaya
ಯೋಗ ದಿನವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸಬಾರದು. ಪ್ರತಿಯೊಬ್ಬರೂ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು. ಕುಟುಂಬದ ಸದಸ್ಯರು, ಮಕ್ಕಳು ಮತ್ತು ಯುವಜನರಲ್ಲಿ ಯೋಗದ ಬಗ್ಗೆ ಆಸಕ್ತಿ ಮೂಡಿಸಿ ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಆರೋಗ್ಯಕರ ವ್ಯಕ್ತಿ, ಆರೋಗ್ಯಕರ ಕುಟುಂಬ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳೋಣ.
- ಪ್ರಧಾನಿ ಶ್ರೀ @narendramodi
#InternationalDayofYoga #IDY2026
ಕಳೆದ 3 ವರ್ಷಗಳಿಂದ ರೈತರ ಹಿತರಕ್ಷಣೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ @INCKarnataka ಸರ್ಕಾರದ ವಿರುದ್ಧ ಅನ್ನದಾತರು ರೊಚ್ಚಿಗೆದ್ದಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರು ಹಾಗೂ ರೈತ ಮಹಿಳೆಯರು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನಾದರೂ ರೈತ ವಿರೋಧಿ ನೀತಿಗಳಿಂದ ಸರ್ಕಾರ ಹಿಂದೆ ಸರಿಯದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ!
#RaithaVirodhiCongress
#CongressFailsKarnataka
ಕಾನೂನಾತ್ಮಕವಾಗಿ ಎಸ್ಐಆರ್ ನಡೆದರೆ ಕಾಂಗ್ರೆಸ್ ಪಾಲಿನ ನಕಲಿ ಮತಗಳು ಕರಗುವ ಬಗ್ಗೆ ಸಿಎಂ ಡಿಕೆಶಿ ಆತಂಕಕ್ಕೊಳಗಾಗಿದ್ದಾರೆ.
ಎಸ್ಐಆರ್ ಬಗ್ಗೆ ಪೂರ್ವಾಗ್ರಹ ಮತ್ತು ಗ್ಯಾರಂಟಿಗಳಿಂದ ದಿವಾಳಿಯಾಗಿರುವ ಕಾಂಗ್ರೆಸ್ ಸರ್ಕಾರ ಈಗ ಎರಡನ್ನೂ ಲಿಂಕ್ ಮಾಡಿ ಮತಪಟ್ಟಿಯಲ್ಲಿ ಹೆಸರಿದ್ದವರಿಗಷ್ಟೇ ಗ್ಯಾರಂಟಿ ಎಂದು ಬೆದರಿಸಲು ಆರಂಭಿಸಿದೆ.
ಗ್ಯಾರಂಟಿ ಘೋಷಿಸುವಾಗ ಈ ರೀತಿಯ ಷರತ್ತುಗಳನ್ನು ವಿಧಿಸದೆ, ಮಹಿಳೆಯರ ಮತ ಪಡೆದು ಅಧಿಕಾರ ಪಡೆದ ಬಳಿಕ, ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಇಲ್ಲ, ತೆರಿಗೆ ಪಾವತಿದಾರರಿಗೆ ಇಲ್ಲ, ಮತಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಇಲ್ಲ ಎನ್ನುವುದು ನೈತಿಕ ದಿವಾಳಿತನದ ಸಂಕೇತವಲ್ಲದೆ ಮತ್ತೇನು?
#CongressBogusGuarantee
ಸಾರಿಗೆ ಇಲಾಖೆಯನ್ನು 'ಶಕ್ತಿ'ಹೀನಗೊಳಿಸಿದ ಕಾಂಗ್ರೆಸ್ ಸರ್ಕಾರ.
▶️ ₹5,173 ಕೋಟಿ ಭೀಕರ ನಷ್ಟದಲ್ಲಿ ಸಾರಿಗೆ ಸಂಸ್ಥೆಗಳು
▶️ ಸಂಬಳಕ್ಕೆ ₹1,271 ಕೋಟಿ ಬೇಕಿದ್ದರೆ ಕೊಟ್ಟಿದ್ದು ಕೇವಲ ₹450 ಕೋಟಿ
▶️ ಈಗ ನಷ್ಟ ತುಂಬಲು ಜನಸಾಮಾನ್ಯರ ಮೇಲೆ ಬಸ್ ದರ ಏರಿಕೆಯ ಬರೆ
#CongressFailsKarnataka#CongressLootsKarnataka
ಬೆಂಗಳೂರು ಎನ್ನುವ ಸ್ವರ್ಗದಂತಿದ್ದ ನಗರವನ್ನು ಕಾಂಗ್ರೆಸ್ ಸರ್ಕಾರ ಅಕ್ಷರಶಃ ನರಕವನ್ನಾಗಿಸಿದೆ. ಬೆಂಗಳೂರಿನ ರಸ್ತೆಗಳನ್ನು ಒಳನಾಡು ಜಲಸಾರಿಗೆ ವ್ಯವಸ್ಥೆಗೆ ಪೂರಕವಾಗಿ ಮೇಲ್ದರ್ಜೆಗೇರಿಸಿದ ಕೀರ್ತಿ ಮಾನ್ಯ ಡಿಕೆಶಿ ಅವರಿಗೆ ಸಲ್ಲಬೇಕು.
ಈಗ ಬೆಂಗಳೂರಿನಲ್ಲಿ ರೋಡ್ ಟ್ಯಾಕ್ಸ್ ಕಟ್ಟಿ, ಬೋಟಿಂಗ್ ಅನುಭವ ಫ್ರೀಯಾಗಿ ಪಡೆಯಬಹುದಾಗಿದೆ !
#CongressFailsKarnataka
ಭಾರತೀಯ ನೌಕಾಸೇನೆಯ ಹೊಸ ತ್ರಿಶೂಲ! 🔱 🚢
INS ಅಗ್ರಾಣಿ ⚓
INS ದೂನಗಿರಿ ⚓
INS ಸಂಶೋಧಕ್ ⚓
ಮೂರು ಹೆಸರುಗಳು, ಒಂದೇ ಸಂದೇಶ...
ಭಾರತದ ಕಡಲ ಅಸ್ಮಿತೆ ಮತ್ತು ಭದ್ರತೆಯಲ್ಲಿ ಯಾವುದೇ ರಾಜಿ ಇಲ್ಲ! 🇮🇳
#ViksitBharat
ಮಾಜಿ ಮುಖ್ಯಮಂತ್ರಿ @siddaramaiah ದರ ಏರಿಕೆ ಮಾಡಲು ಬಿಟ್ಟುಹೋಗಿದ್ದ ಕ್ಷೇತ್ರಗಳನ್ನು ದುರ್ಬೀನು ಹಾಕಿ ಹುಡುಕುತ್ತಿದ್ದ @DKShivakumar ಅವರಿಗೆ ಮಾಸಿಕ ಬಸ್ ಪಾಸ್ ಮೇಲೆ ಕಣ್ಣು ಬಿದ್ದಿದೆ.
ಬಿಎಂಟಿಸಿ ಬಸ್ಸುಗಳಲ್ಲಿ ದಿನವಹಿ ಪಾಸ್ ವಿತರಣೆ ನಿಲ್ಲಿಸಿದ ಬೆನ್ನಲ್ಲೇ ಇದೀಗ ಮಾಸಿಕ ಬಸ್ ಪಾಸ್ ದರ 300-400 ರೂಪಾಯಿಯಷ್ಟು ಏರಿಕೆ ಮಾಡಿದೆ. ಜನರ ತೆರಿಗೆ ಹಣವನ್ನು ಲೂಟಿ ಮಾಡಿ ಖಜಾನೆ ಖಾಲಿ ಮಾಡಿದ ಬಳಿಕ, ಇದೀಗ ಜನರ ಜೇಬಿನಿಂದ ರಾಜಾರೋಷವಾಗಿ ಪಿಕ್ ಪಾಕೆಟ್ ಮಾಡುತ್ತಿದೆ.
ಉಚಿತದ ನೆಪದಲ್ಲಿ ಎಲ್ಲಾ ಅಗತ್ಯ ಸರಕು - ಸೇವೆಗಳ ಬೆಲೆ ಏರಿಸಿ ದುಡಿಯುವ ವರ್ಗದ ಜನರ ರಕ್ತವನ್ನು ಕೊತ್ವಾಲನ ಶಿಷ್ಯರ ಸರ್ಕಾರ ಹೀರುತ್ತಿದೆ.
#CongressLootsKarnataka
#CongressFailsKarnataka
ಹಿಂದುತ್ವದ ಧೀಮಂತ ಧ್ವನಿ, ಪತ್ರಿಕೋದ್ಯಮದಿಂದ ರಾಜಕಾರಣದವರೆಗೆ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಮಾಜಿ ಸಂಸದರು ಹಾಗೂ ನಮ್ಮೆಲ್ಲರ ಪ್ರೀತಿಯ ನಾಯಕರಾದ ಶ್ರೀ ಪ್ರತಾಪ್ ಸಿಂಹ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 🎂
ನಿಮಗೆ ಭಗವಂತ ಧೀರ್ಘಾಯುಷ್ಯ ಮತ್ತು ಸಮಾಜ ಸೇವೆಯನ್ನು ಮುಂದುವರಿಸಲು ಅಪಾರ ಶಕ್ತಿಯನ್ನು ನೀಡಲಿ
@mepratap
ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಯೋಗ ಕೇವಲ ವ್ಯಾಯಾಮವಷ್ಟೇ ಅಲ್ಲ. ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಏಳಿಗೆಗೆ ಸಂಜೀವಿನಿಯಾಗಿದೆ ಮತ್ತು ವಿಶ್ವಕ್ಕೆ ಭಾರತ ಕೊಟ್ಟ ಮಹಾನ್ ಕೊಡುಗೆಯಿದು. ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗಾಭ್ಯಾಸ ಮಾಡೋಣ.
ಎಲ್ಲರಿಗೂ ಅಂತರರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.
Thanks to PM Modi’s leadership, the Northeast has witnessed many historic firsts:
🔸 Mizoram became insurgency free for the first time ever.
🔸 Freight rail connectivity reached Manipur for the first time in 2022.
🔸 Mizoram witnessed its first passenger train trial run since Independence in 2025.
🔸 Meghalaya welcomed its first electric train in 2023.
🔸 Nagaland got its first railway station after Independence in 2022.
🔸 Vande Bharat reached Assam, ushering in a new era of modern rail travel.
These are not just milestones. They are symbols of a Northeast that is more connected, peaceful and empowered than ever before.
#12YearsOfRisingNorthEast
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ನೀತಿಯಿಂದ 2014ರಿಂದ 2026ರವರೆಗೆ ಉತ್ತರ–ಪೂರ್ವ ಭಾರತದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಉದ್ದವು 10,905 ಕಿಲೋಮೀಟರ್ನಿಂದ 16,207 ಕಿಲೋಮೀಟರ್ಗಿಂತ ಹೆಚ್ಚಾಗಿದೆ. ಇದು ರಸ್ತೆ ಸಂಪರ್ಕ, ವ್ಯಾಪಾರ, ಪ್ರವಾಸೋದ್ಯಮ, ಹೂಡಿಕೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಹೊಸ ವೇಗ ನೀಡಿದೆ.
ಒಂದು ಕಾಲದಲ್ಲಿ ಭೌಗೋಳಿಕ ಸವಾಲುಗಳಿಂದ ಅಭಿವೃದ್ಧಿಯಿಂದ ದೂರ ಉಳಿದಿದ್ದ ಉತ್ತರ–ಪೂರ್ವ ಭಾರತ ಇಂದು ಉತ್ತಮ ರಸ್ತೆ ಜಾಲ, ವೇಗವಾದ ಸಂಪರ್ಕ ಮತ್ತು ಹೆಚ್ಚಿದ ಆರ್ಥಿಕ ಅವಕಾಶಗಳ ಮೂಲಕ ದೇಶದ ಬೆಳವಣಿಗೆಯ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಬಲವಾದ ಸಂಪರ್ಕವೇ ಬಲವಾದ ಅಭಿವೃದ್ಧಿಗೆ ಅಡಿಪಾಯ. ಉತ್ತರ–ಪೂರ್ವ ಭಾರತದ ಪ್ರಗತಿಯ ಈ ಪಯಣ ಅದಕ್ಕೆ ಅತ್ಯುತ್ತಮ ಉದಾಹರಣೆ.
#12YearsOfRisingNorthEast
ಸಿಲಿಕಾನ್ ಸಿಟಿಯನ್ನು ಗಾರ್ಬೇಜ್ ಸಿಟಿಯನ್ನಾಗಿ ಮಾರ್ಪಡಿಸಿ ಬೆಂಗಳೂರಿನ ಘನತೆ, ಗೌರವ ಮಣ್ಣು ಪಾಲು ಮಾಡಿದೆ @INCKarnataka ಸರ್ಕಾರ. ಸಚಿವ @krishnabgowda ಅವರೇ, ಬೆಂಗಳೂರಲ್ಲಿ ಕಂಡ ಕಂಡಲ್ಲಿ ಕಸದ ರಾಶಿ ಬಿದ್ದು ಗಬ್ಬೆದ್ದು ನಾರುತ್ತಿದೆ, ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಕೂಡಲೇ ಕಸದ ಸಮಸ್ಯೆ ಬಗೆಹರಿಸಿ.
#CongressFailsKarnataka
Spread across over 200 countries, the 3.5 crore-strong Indian diaspora continues to strengthen India’s global presence and contribute to its growth story.
#12YearsOfIndiaFirst