ಪಾರದರ್ಶಕ ಆಡಳಿತ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಭ್ರಷ್ಟರ ಪರವಾಗಿ ಕೆಲಸ ಮಾಡುತ್ತಿದೆ. ದೇಶದ ಎಲ್ಲಾ ಆಡಳಿತಾಂಗಳನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಅಧಿಕಾರಿಗಳಿಗೆ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಕೊಡದೆ ನಿರುದ್ಯೋಗ, ಆರ್ಥಿಕತೆ ನಷ್ಟಕ್ಕೆ ಕಾರಣವಾಗಿದೆ.
#NationlUnemploymentDay
ಮೋದಿ ಸರ್ಕಾರ ರೈತರ ಹಿತಾಸಕ್ತಿ ಬದಿಗೊತ್ತಿ, 15 ಕೈಗಾರಿಕೋದ್ಯಮಿಗಳ 2.5 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ. ಆದರೆ ನಿರುದ್ಯೋಗಿಗಳಿಗೆ ಯಾವ ಅನುಕೂಲವನ್ನು ಮಾಡಿಕೊಡಲಿಲ್ಲ. ಮೋದಿಯದು ಸೂಟ್ ಬೂಟ್ ಸರ್ಕಾರ
#NationlUnemploymentDay
ಲಾಕ್ ಡೌನ್ ಆದ ಮೊದಲ ತಿಂಗಳಲ್ಲಿ 5 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಭಾರತದ ಮಾಜಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರೋಣಬ್ ಸೇನ್ ಅಂದಾಜಿಸಿದ್ದಾರೆ.
#NationlUnemploymentDay
ಮೆಟ್ರೋ ಕೋಚ್ ಮಾಡಲು BEML ಕಾಂಟ್ರಾಕ್ಟ್ ಕ್ಯಾನ್ಸಲ್ ಮಾಡಿ ಚೈನಾ ಕಂಪನಿಗೆ ಕೊಟ್ಟು ಸರ್ಕಾರಿ ಸಂಸ್ಥೆ ಯನ್ನು ಮೋದಿ ಹಳ್ಳ ಹಿಡಿಸಿದ್ದಾರೆ. ಚೀನಾಕ್ಕೆ ಮಣೆ ಹಾಕಿ ನಮ್ಮ ಜನರ ಉದ್ಯೋಗ ಕಿತ್ತುಕೊಂಡಿದ್ದು ಮೋದಿ.
#NationlUnemploymentDay
ಯುವಕರಿಗೆ ಉದ್ಯೋಗದ ಭರವಸೆ ನೀಡಿದ ಪ್ರಧಾನಿ ಮೋದಿ ಮೊದಲ ಐದು ವರ್ಷದ ಅವಧಿಯಲ್ಲಿ ಕನಿಷ್ಠ ಉದ್ಯೋಗ ಸೃಷ್ಟಿಸಲಿಲ್ಲ. ಬದಲಾಗಿ ನೋಟ್ಬ್ಯಾನ್ ಮಾಡುವ ಮೂಲಕ ಉದ್ಯೋಗ ಕಿತ್ತುಕೊಂಡರು.
#NationlUnemploymentDay
ನಿರುದ್ಯೋಗವನ್ನು ತಿಳಿಸುವ ವಿವಿಧ ಕಾಲಮಾನದ ಕಾರ್ಮಿಕ ಶಕ್ತಿಯ ಸಮೀಕ್ಷೆ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್ ವರದಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿತ್ತು. ಇದರಿಂದ ಇಬ್ಬರು ಅಧಿಕಾರಿಗಳು ರಾಜೀನಾಮೆ ನೀಡಿದ್ದರು. ಬಿಜೆಪಿ ಅಂಕಿ-ಅಂಶ ತಿದ್ದುಪಡಿ ಮಾಡುವ ಕೆಲಸ ಮಾಡುತ್ತಿದೆ
#NationlUnemploymentDay
2017-18 ರಲ್ಲಿ ದೇಶದ ನಿರುದ್ಯೋಗ ಪ್ರಮಾಣ ಶೇ 6.1
45 ವರ್ಷಗಳಲ್ಲೆ ಅತೀ ಹೆಚ್ಚು ನಿರುದ್ಯೋಗ ಸಮಸ್ಯೆ
7.8 % ನಗರ ಪ್ರದೇಶದ ನಿರುದ್ಯೋಗ ದರ
5.3 % ಗ್ರಾಮೀಣ ಪ್ರದೇಶದ ನಿರುದ್ಯೋಗ
#NationlUnemploymentDay
2016 ರ ನವೆಂಬರ್ ನ ನೋಟು ರದ್ದತಿಯ ನಂತರ ಮಾಡಿದ ಮೊದಲ ಸಮೀಕ್ಷೆ ಯಲ್ಲಿ ಭಾರತದನ ನಿರುದ್ಯೋಗ ದರ ಶೇ 6.1 ಏರಿದೆ. ಅಂದರೆ ಬಿಜೆಪಿ ಸರ್ಕಾರದ ಅತಿದೊಡ್ಡ ವಿಫಲ ನಿರ್ಧಾರದಿಂದ ದೇಶ ಸಂಕಷ್ಟಕ್ಕೆ ಗುರಿಯಾಯಿತು
#NationlUnemploymentDay
ಬಿಜೆಪಿ ಮನಮೋಹಮನ್ ಸಿಂಗ್ ಅವರಂತಹ ಅರ್ಥಶಾಸ್ತ್ರಜ್ಞರನ್ನು ಮೌನಿ ಪ್ರಧಾನಿ ಎಂದು ಹಂಗಿಸಿದ್ದಷ್ಟೆ ಬಂತು ಹೊರತು ಅವರಿಗಿಂತ ಉತ್ತಮ ಆಡಳಿತ ನೀಡಲು ಎಂದಿಗೂ ಸಾಧ್ಯವಿಲ್ಲ. ಈಗಿನ ಜಿಡಿಪಿ ಮತ್ತು ನಿರುದ್ಯೋಗ ಪ್ರಮಾಣ ಇದಕ್ಕೆ ಉದಾಹರಣೆ
#NationalUnemploymentDay
ತೈಲ ಬೆಲೆಯಲ್ಲಿ ಸ್ಥಿರೀಕರಣ ಕಾಯ್ದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಗ್ರಾಹಕರು ಬೆಲೆ ಏರಿಕೆ ಬಿಸಿಯಲ್ಲಿ ಬೇಯುತ್ತಿದ್ದಾರೆ.
@BJP4India ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳು, ಕೊರೊನ ಬಿಕ್ಕಟ್ಟಿನಿಂದಾಗಿ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
#BJPCantControlCorona
ಕೋವಿಡ್–19 ಸೋಂಕಿನ ಹಿನ್ನೆಲೆಯಲ್ಲಿ ಸಾಲ ಪಡೆಯುತ್ತಿರುವವರ ಪ್ರಮಾಣ ಕಡಿಮೆ ಆಗುತ್ತಿದೆ ಎನ್ನುವ ನೆಪದಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹಣಕಾಸಿನ ನೆರವು ನೀಡಲು @narendramodi ಸರ್ಕಾರ ಹಿಂದೇಟುಹಾಕಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನ ನಷ್ಟಕ್ಕೆ ದೂಡಿ ಖಾಸಗೀಕರಣ ಮಾಡುವ ಹುನ್ನಾರ ಇದರಹಿಂದಿದೆ.
#BJPCantControlCorona
ಪಿಎಂ ಕೇರ್ಸ್ ನಿಧಿಯ ಬಳಕೆಯ ಮಾಹಿತಿ ನೀಡುವುದರಿಂದ “ಕಚೇರಿಯ ಸಂಪನ್ಮೂಲಗಳು ದಿಕ್ಕುತಪ್ಪುತ್ತವೆ” ಎನ್ನುವ ನೆಪ ಮುಂದಿಟ್ಟುಕೊಂಡು @PMOIndia ಕಚೇರಿ, ದೇಶದ ಜನರಿಂದ ಸತ್ಯಾಂಶವನ್ನು ಮರೆಮಾಚುತ್ತಿದೆ.
ನಿಧಿಯು ಕೋವಿಡ್ ನಿರ್ವಹಣೆಗಾಗಿ ಬಳಕೆಯಾಗುತ್ತಿರುವುದು ನಿಜವಾದರೆ, ಮಾಹಿತಿ ನೀಡಲು ಹಿಂಜರಿಕೆ ಏಕೆ ಪ್ರಧಾನಿಗಳೇ?
#BJPCantControlCorona
ದೇಶದಲ್ಲಿನ ಕೊರೊನ ಪೀಡಿತ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ.
ಸೋಂಕು ನಿಯಂತ್ರಣಕ್ಕೆ @BJP4Karnataka ಸರ್ಕಾರ ಅಗತ್ಯ ಕ್ರಮಕೈಗೊಳ್ಳದಿರುವುದು, ಭ್ರಷ್ಟಾಚಾರದಲ್ಲಿ ತೊಡಗಿದ್ದೇ ಇದಕ್ಕೆ ಕಾರಣ.
ಸೋಂಕು ಪೀಡಿತ ರಾಜ್ಯಗಳ ಪಟ್ಟಿಯಿಂದ ಕರ್ನಾಟಕವನ್ನು ಹೊರ ತರುವುದು ಯಾವಾಗ @BSYBJP ಅವರೇ?
#BJPCantControlCorona
ಜುಲೈ ತಿಂಗಳೊಂದರಲ್ಲೇ 50 ಲಕ್ಷ ಉದ್ಯೋಗಗಳು ನಷ್ಟವಾಗಿದ್ದು, ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಏಪ್ರಿಲ್ನಿಂದ 1.89 ಕೋಟಿಗೆ ಏರಿದೆ.
@BJP4India ಸರ್ಕಾರ ಎಚ್ಚರಗೊಳ್ಳವುದು ಯಾವಾಗ? ಉದ್ಯೋಗ ಸೃಷ್ಠಿಗೆ ಕಾರ್ಯಕ್ರಮ ರೂಪಿಸುವುದು ಯಾವಾಗ?
#BJPCantControlCorona
ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ವೈದ್ಯರು, ಪೊಲೀಸರು ತಮ್ಮ ಪ್ರಾಣ ಲೆಕ್ಕಿಸದೇ ಸೇವೆ ಸಲ್ಲಿಸುತ್ತಿದ್ದಾರೆ.
ಇಂಥ ಸಂಕಷ್ಟದ ಸಮಯದಲ್ಲಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಕಾಂಗ್ರೆಸ್ ಪಕ್ಷ ಹೇಳುತ್ತಲೇ ಬಂದಿದ್ದರೂ ಇದನ್ನು ಲೇವಡಿ ಮಾಡುತ್ತಲೇ ಬಂದಿರುವ @BJP4Karnataka ನಾಯಕರ ಆದ್ಯತೆಯ ಕೆಲಸ ಯಾವುದು?
#BJPCantControlCorona
ಇತರೆ ರಾಜ್ಯಗಳು ಕಡಿಮೆ ದರದಲ್ಲಿ ಖರೀದಿಸಿದ ವೈದ್ಯಕೀಯ ಪರಿಕರಗಳನ್ನ ರಾಜ್ಯ ಸರ್ಕಾರ ಎರಡರಿಂದ ಮೂರು ಪಟ್ಟು ಹಣ ಕೊಟ್ಟು ಖರೀದಿಸಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳದ @BJP4Karnataka ಸರ್ಕಾರ ಕೊರೊನ ಹೆಣದ ಮೇಲೆ ಹಣ ಮಾಡುತ್ತಿದೆ.
#BJPCantControlCorona
ಕೊರೊನ ಸೋಂಕಿತರ ಸಂಖ್ಯೆ ದೇಶದಲ್ಲಿ 31 ಲಕ್ಷ ಹಾಗೂ ರಾಜ್ಯದಲ್ಲಿ 2 ಲಕ್ಷದ 70 ಸಾವಿರದ ಗಡಿ ದಾಟಿದೆ.
ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳಿಗೆ ದೇಶದ ಜನರು, ಪ್ರತಿಪಕ್ಷಗಳು, ಸಂಘ-ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಿದ ಬಳಿಕವೂ ಇವರಿಂದ ಕೊರೊನ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
#BJPCantControlCorona