CBC Mysuru is one of the units of @CBC_Bengaluru,
Ministry of I&B, Govt. of India, engaging in inter-personal communication in villages on Union Govt's Progrm.
ನೀಲಿ ಅರ್ಥವ್ಯವಸ್ಥೆಗೆ ಹೊಸ ಶಕ್ತಿ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಭಾರತದ ಮೀನುಗಾರಿಕೆ ವಲಯದ ಸಶಕ್ತೀಕರಣಕ್ಕೆ ಆರು ವರ್ಷಗಳು
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯು (ಪಿಎಂಎಂಎಸ್ವೈ) ಭಾರತದ ಮೀನುಗಾರಿಕಾ ವಲಯವನ್ನು ಬಲಪಡಿಸಿದೆ. ಕೇಂದ್ರ ಸರ್ಕಾರವು 2026-27ರ ಅಯವ್ಯಯದ ಅಂದಾಜಿನಲ್ಲಿ ಪಿಎಂಎಂಎಸ್ವೈ ಅಡಿಯಲ್ಲಿ ₹2,500 ಕೋಟಿ ಅನುದಾನವನ್ನು ನಿಗದಿಪಡಿಸುವ ಮೂಲಕ ಈ ವಲಯದ ಮೇಲಿನ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ. ದೇಶದ ಒಟ್ಟು ಮೀನು ಉತ್ಪಾದನೆಯು 2019-20ರಲ್ಲಿ 141.64 ಲಕ್ಷ ಟನ್ಗಳಷ್ಟಿದ್ದು, 2024-25ರ ವೇಳೆಗೆ 197.75 ಲಕ್ಷ ಟನ್ಗಳ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ.
2026ರ ಸೆಪ್ಟೆಂಬರ್ 10ಕ್ಕೆ ಪಿಎಂಎಂಎಸ್ವೈ ಯೋಜನೆ 6 ವರ್ಷಗಳನ್ನು ಪೂರೈಸುತ್ತಿದ್ದು, ಭಾರತೀಯ ಮೀನುಗಾರಿಕಾ ವಲಯವನ್ನು ಆಧುನೀಕರಣ, ಸುಸ್ಥಿರತೆ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುವಲ್ಲಿ ಮಹತ್ವದ ಮೈಲಿಗಲ್ಲಾಗಿ ನಿಂತಿದೆ.
ಹೆಚ್ಚಿನ ಮಾಹಿತಿಗಾಗಿ🔗
https://t.co/932EtkeBFh
@LalanSingh_1@GeorgekurianBjp@PIB_MoFAHD@FisheriesGoI@AshwiniVaishnaw@DrLMurugan@office_murugan@PIB_India@MIB_India@chanchal001@DG_PIB@DDNewslive@DDNational@DDChandanaNews@airnewsalerts@airnews_kannada
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ 72 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿಯಿಂದ ಹೊರಗೆ, ಗುಜರಾತ್ನ ಕೆವಾಡಿಯಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುತ್ತಿದೆ ಎಂದು ಕೆಲವು ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಪ್ರತಿಪಾದಿಸುತ್ತಿವೆ.
#PIBFactCheck
ಈ ಮಾಹಿತಿ ಸುಳ್ಳು. ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭವನ್ನು ದೆಹಲಿಯಲ್ಲಿ ನಡೆಸಿಕೊಂಡು ಬರಲಾಗಿದೆಯಾದರೂ, ಈ ಹಿಂದೆ ಕೂಡ ದೇಶದ ರಾಜಧಾನಿಯಿಂದ ಹೊರಗೆ ಈ ಸಮಾರಂಭ ನಡೆದಿದೆ. 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು 1970 ರಲ್ಲಿ ಚೆನ್ನೈನಲ್ಲಿ ನಡೆದಿತ್ತು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ದೇಶದ ಇತರ ಭಾಗಗಳಲ್ಲೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಘಟಿಸಲು ನಿರ್ಧರಿಸಿದೆ. ಅದರಂತೆ, ಈ ವರ್ಷ ಈ ಸಮಾರಂಭವನ್ನು ಗುಜರಾತ್ನ ಕೆವಾಡಿಯಾದಲ್ಲಿ ಆಯೋಜಿಸಲಾಗುತ್ತಿದೆ.
ಮಾಹಿತಿಗಾಗಿ:
https://t.co/wWg4pwQsRH
@PIBFactCheck@PIB_India@MIB_India@chanchal001@DG_PIB@DDNewslive@DDNational@DDChandanaNews@airnewsalerts@airnews_kannada@CBC_Bengaluru
ಕೇಂದ್ರ ಎಂಎಸ್ಎಂಇ ಸಚಿವಾಲಯದ ಕಾರ್ಯದರ್ಶಿ ಶ್ರೀ ಭರತ್ ಖೇರಾ ಅವರು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಇನ್ನಷ್ಟು ನೆರವಾಗಲು ಎಂಎಸ್ಎಂಇಡಿ ಕಾಯ್ದೆ 2026 ಕ್ಕೆ ತರಲಾದ ಇತ್ತೀಚಿನ ತಿದ್ದುಪಡಿಗಳನ್ನು ಉಲ್ಲೇಖಿಸಿದರು. ಪ್ರತಿಭೆಯನ್ನು ಪೋಷಿಸಲು ಹಾಗೂ ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ರೂಪಿಸಲು ತಂತ್ರಜ್ಞಾನ ಕೇಂದ್ರ ಬೆಂಗಳೂರು ಒಂದು ಪ್ರಮುಖ ಉಪಕ್ರಮವಾಗಿದೆ ಎಂದು ಅವರು ಹೇಳಿದರು.
ಈ ಕೇಂದ್ರವು ಪ್ರತಿ ವರ್ಷ ಸುಮಾರು 10,000 ಅಭ್ಯರ್ಥಿಗಳಿಗೆ ಸುಧಾರಿತ ತಾಂತ್ರಿಕ ಕೌಶಲ್ಯ ತರಬೇತಿ ನೀಡುವ ನಿರೀಕ್ಷೆಯಿದ್ದು, ಎಂಎಸ್್ಎಂಇ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡಲು ಅವರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಲಿದೆ.
@jitanrmanjhi@ShobhaBJP@minmsme@dcmsmeoffice@PIB_India@MIB_India@chanchal001@DG_PIB@DDNewslive@DDNational@DDChandanaNews@airnewsalerts@airnews_kannada@CBC_Bengaluru
ಎಂಎಸ್ಎಂಇ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ರಜನೀಶ್ ಅವರು ಎಂಎಸ್ಎಂಇ ಕ್ಷೇತ್ರದ ಪ್ರಗತಿಯನ್ನು ತಿಳಿಸಿದರು. ಭಾರತೀಯ ಆರ್ಥಿಕತೆಗೆ 31% ಕೊಡುಗೆ ನೀಡುತ್ತಿರುವ ಹಾಗೂ 41.6 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿರುವ 9.4 ಕೋಟಿಗೂ ಅಧಿಕ ನೋಂದಾಯಿತ ಎಂಎಸ್ಎಂಇಗಳನ್ನು ಅವರು ದೇಶದ "ಬೆಳವಣಿಗೆಯ ಇಂಜಿನ್ಗಳು" ಎಂದು ಬಣ್ಣಿಸಿದರು. ಎಂಎಸ್ಎಂಇಗಳಿಗೆ ಹಣಕಾಸು ಮತ್ತು ತಂತ್ರಜ್ಞಾನದ ಸುಲಭ ಲಭ್ಯತೆಯನ್ನು ಕಲ್ಪಿಸಲು ಕೈಗೊಂಡಿರುವ ವಿವಿಧ ಕ್ರಮಗಳನ್ನು ಅವರು ಉಲ್ಲೇಖಿಸಿದರು. ಈ ನಿಟ್ಟಿನಲ್ಲಿ ಬೆಂಗಳೂರಿನ ತಂತ್ರಜ್ಞಾನ ಕೇಂದ್ರವು, ಎಂಎಸ್ಎಂಇ ಸಚಿವಾಲಯ ದೇಶದಾದ್ಯಂತ ಸ್ಥಾಪಿಸಿರುವ ತಂತ್ರಜ್ಞಾನ ಕೇಂದ್ರಗಳ ಸಾಲಿಗೆ ಸೇರ್ಪಡೆಯಾದ ನೂತನ ಕೇಂದ್ರವಾಗಿದೆ.
@jitanrmanjhi@ShobhaBJP@minmsme@dcmsmeoffice@PIB_India@MIB_India@chanchal001@DG_PIB@DDNewslive@DDNational@DDChandanaNews@airnewsalerts@airnews_kannada@CBC_Bengaluru
ಬ್ರಿಕ್ಸ್ : ವಿಕಾಸ, ಸಹಕಾರ ಮತ್ತು ಭಾರತದ ನಾಯಕತ್ವ
2026ರ ಅಧ್ಯಕ್ಷತೆಯಲ್ಲಿ, ಭಾರತವು 12-13 ಸೆಪ್ಟೆಂಬರ್ 2026 ರಂದು ನವದೆಹಲಿಯಲ್ಲಿ 18ನೇ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲಿದೆ. ಇದು 2026 ರಲ್ಲಿ ಭಾರತದ ನಾಲ್ಕನೇ ಬ್ರಿಕ್ಸ್ ಅಧ್ಯಕ್ಷತೆಯನ್ನು ಗುರುತಿಸುತ್ತದೆ. ಭಾರತದ ಅಧ್ಯಕ್ಷತೆಯು "ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ ಎಂಬ ವಿಷಯದ ಆಧಾರದ ಮೇಲೆ ನಡೆಯಲಿದೆ. ಈ ವಿಷಯವು ಅಸ್ತಿತ್ವದಲ್ಲಿರುವ ಸಾಧನೆಗಳನ್ನು ಮತ್ತು ಸಾಂಸ್ಥಿಕ ಕಾರ್ಯಕ್ಷಮತೆಯನ್ನು ಬಲಪಡಿಸುವ ಭಾರತದ ಗಮನವನ್ನು ಪ್ರತಿಬಿಂಬಿಸುತ್ತದೆ. ಇದು ಅಭಿವೃದ್ಧಿ, ಸುಸ್ಥಿರತೆ ಮತ್ತು ನಾವೀನ್ಯತೆಯನ್ನು ಈ ಕಾರ್ಯಸೂಚಿಯ ಕೇಂದ್ರಬಿಂದುವನ್ನಾಗಿ ಮಾಡುತ್ತದೆ. ಅಲ್ಲದೆ, ಇದು ಜಾಗತಿಕ ದಕ್ಷಿಣ ರಾಷ್ಟ್ರಗಳ ಆಕಾಂಕ್ಷೆಗಳನ್ನು ಎತ್ತಿಹಿಡಿಯುತ್ತದೆ. ಭಾರತವು ಬ್ರಿಕ್ಸ್ ಅನ್ನು ರಚನಾತ್ಮಕ ಮತ್ತು ಪರಿಹಾರ ಆಧಾರಿತ ವೇದಿಕೆಯಾಗಿ ಬಲಪಡಿಸಲು ಶ್ರಮಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ🔗
https://t.co/HBRBPT7P6w
@narendramodi@PMOIndia@BricsIndia2026@DrSJaishankar@MEAIndia@KVSinghMPGonda@PmargheritaBJP@AshwiniVaishnaw@DrLMurugan@office_murugan@PIB_India@MIB_India@chanchal001@DG_PIB@DDNewslive@DDNational@DDChandanaNews@airnewsalerts@airnews_kannada
ಮೆಟ್ರಿಕ್ ಪೂರ್ವ & ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆ ಅಡಿಯಲ್ಲಿ 1.44 ಕೋಟಿಗೂ ಹೆಚ್ಚು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.ಅವರ ಶೈಕ್ಷಣಿಕ ಪ್ರಗತಿಗೆ ನೆರವಾಗಲು & ಆರ್ಥಿಕ ಅಡೆತಡೆಗಳಿಲ್ಲದೆ ಕಲಿಕೆಯ ಅವಕಾಶಗಳನ್ನು ಮುಂದುವರಿಸಲು ₹12,773 ಕೋಟಿ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಗಿದೆ.