ಭದ್ರಾವತಿ ನಗರಸಭೆವತಿಯಿಂದ “ವಿಶ್ವ ಪರಿಸರ ದಿನಾಚರಣೆ” ಪ್ರಯುಕ್ತ ಇಂದು ದಿನಾಂಕ:05/06/2026 ರಂದು ಬೆಳಗ್ಗೆ:09.30 ಗಂಟೆಗೆ ಮಾನ್ಯ ನಗರಸಭಾ ಅಧ್ಯಕ್ಷರಾದ ಶ್ರೀಮತಿ ಜೆ.ಸಿ.ಗೀತಾ ರಾಜ್ಕುಮಾರ್ ರವರ ಅಧ್ಯಕ್ಷತೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಪಿ.ಎಂ .ಸ್ವ ನಿಧಿ ಯೋಜನೆಯ ಲೋಕ ಕಲ್ಯಾಣ ಮೇಳ ಕಾರ್ಯಕ್ರಮದಡಿ SBI main branch ಮತ್ತು ಹೊಳೆಹೊನ್ನೂರು ರಸ್ತೆ ಶಾಖೆ ಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕ್ರೆಡಿಟ್ ಕಾಡ್೯ ವಿತರಣೆ ಮಾಡಿ. ಡಿಜಿಟಲ್ ಪೇಮೆಂಟ್. ಸಾಮಾಜಿಕ ಭಧ್ರತಾ ಯೋಜನೆಯ ಬಗ್���ೆ ಮಾಹಿತಿಯನ್ನು ನೀಡಲಾಯಿತು.
ಭದ್ರಾವತಿ ನಗರಸಭೆಯ SFC ವಿಶೇಷ ಅನುದಾನ ರೂ 4 ಕೋಟಿ ವೆಚ್ಚದಲ್ಲಿ KRIDL ಸಂಸ್ಥೆ ವತಿಯಿಂದ ಹುತ್ತಾ ವೃತ್ತದಲ್ಲಿ 'ನಮ್ಮ ಭದ್ರಾವತಿ ನಾಮಫಲಕ' ಹಾಗೂ'ಕಾಮ್ರೇಡ್ ಮಾಯಣ್ಣ ಗೌಡ'ವೃತ್ತದ ಉದ್ಘಾಟನಾ ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಬಿ.ಕೆ.ಸಂಗಮೇಶ್ವರರವರು,ಅಧ್ಯಕ್ಷರು,KRIDL ಹಾಗೂ ಶಾಸಕರು, ಭದ್ರಾವತಿ ವಿಧಾನಸಭಾ ಕ್ಷೇತ್ರ,ರವರು ನೆರವೇರಿಸಿದರು
ಸ್ವಚ್ಛತಾ ಹಿ ಸೇವಾ 2025 ರ ಪ್ರಯುಕ್ತ ಮಾನ್ಯ ಅಧ್ಯಕ್ಷರು , ಉಪಾಧ್ಯಕ್ಷರು ,ಸ್ಥಾಯಿ ಸಮಿತಿ ಅಧ್ಯಕ್ಷರು, ಪೌರಾಯುಕ್ತರು, ಚುನಾಯಿತ ಪ್ರತಿನಿಧಿಗಳು, ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರುಗಳು ನಗರದ ಭದ್ರಾ ನದಿ ಅಕ್ಕ ಪಕ್ಕದಲ್ಲಿ ಸ್ವಚ್ಛತೆ ಮಾಡಿ ಸಾರ್ವಜನಿಕರ��್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು
ಸ್ವಚ್ಛತಾ ಹಿ ಸೇವಾ 2025 ರ ಕುರಿತು ದಸರಾ ಉದ್ಘಾಟನಾ ಮೆರವಣಿಗೆಯಲ್ಲಿ ಭಾಗವಹಿಸಿರುವ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಕಚೇರಿಯ ಅಧಿಕಾರಿ, ಸಿಬ್ಬಂದಿಗಳು, ಸಂಘ ಸಂಸ್ಥೆ�� ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ��ಗರದ ಸ್ವಚ್ಛತೆ ಕುರಿತು ಅರಿವು ಮೂಡಿಸಲಾಯಿತು.
ದಸರಾ 2025 ರ ಮೊದಲನೇ ದಿನವಾದ ಇಂದು ಸಂಜೆ 6.00 ಗಂಟೆಗೆ ನಗರಸಭೆ ಆವರಣದಲ್ಲಿ ಶ್ರೀಮತಿ ಗೀತಾ ರಾಜಕುಮಾರ್ ರವರ ಅಧ್ಯಕ್ಷತೆಯಲ್ಲಿ ಜೆಂಕರ್ ಮೆಲೋಡೀಸ್, ಶಿವಮೊಗ್ಗ ರವರ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ವನ್ನು ಶ್ರೀಮತಿ ಬಾಲ್ಕಿಶ್ ಬಾನು , ಸನ್ಮಾನ್ಯ ಶಾಸಕರು, ವಿಧಾನಪರಿಷತ್, ರವರು ಉದ್ಘಾಟಿಸಲಿದ್ದು ಎಲ್ಲಾ ಸ���ರ್ವಜನಿಕರಿಗೂ ಆದರದ ಸುಸ್ವಾಗತ
ನಾಡಹಬ್ಬ ದಸರಾ ಮಹೋತ್ಸವ 2025 ರ ಉದ್ಘಾಟನೆ ಯನ್ನು ಶ್ರೀ ಬಿ ಕೆ ಸಂಗಮೇಶ್ವರ ಸನ್ಮಾನ್ಯ ಅಧ್ಯಕ್ಷರು ಕೆ ಆರ್ ಐ ಡಿ ಎಲ್ ಹಾಗೂ ಶಾಸಕರು ಭದ್ರಾವತಿ ವಿಧಾನಸಭಾ ಕ್ಷೇತ್ರ ರವರ ಅಧ್ಯಕ್ಷತೆಯಲ್ಲಿ ಶ್ರೀ ಶಿವರುದ್ರಪ್ಪ ಹೆಚ್ ವಿ, ಸಮಾಜ ಸೇವಕರು ರವರು ದೇವಿಯ ಪೂಜೆಯನ್ನು ಸಲ್ಲಿಸುವುದರ ಮೂಲಕ ಭದ್ರಾವತಿ ದಸರಾ ಮಹೋತ್ಸವಗೆ25 ಕ್ಕೆ ��ಾಲನೆ ನೀಡಲಾಯಿತು
ದಿನಾ��ಕ 12-02-2025 ರಂದು ಬೆಳಿಗ್ಗೆ 11. 00 ಗಂಟೆಗೆ ಕಛೇರಿಯ ಸಭಾಂಗಣದಲ್ಲಿ ಶ್ರೀ ಮಣಿ, ಮಾನ್ಯ ನಗರಸಭಾ ಅಧ್ಯಕ್ಷರು (ಪ್ರಭಾರ) ರವರ ಅಧ್ಯಕ್ಷತೆಯಲ್ಲಿ 2025-26ನೇ ಸಾಲಿನ ಆಯ-ವ್ಯಯ ಮಂಡನೆ ಸಭೆಯನ್ನು ನಡೆಸಲಾಯಿತು.
ಸಂವಿಧಾನ ಶಿಲ್ಪಿ ಡಾ| ಬಿ.ಆ��್.ಅಂಬೇಡ್ಕರ್ ರವರ ನವೀನ ಪ್ರತಿಮೆ ಹಾಗೂ ಭದ್ರಾವತಿ ನಗರಸಭೆಯ ಖಾಸಗಿ ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ನಾಮ ಫಲಕ ಉದ್ಘಾಟನಾ ಕಾರ್ಯಕ್ರಮಕ್ಕೆ ಆತ್ಮೀಯ ಆಮಂತ್ರಣ.