ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು, ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯ ನಾರಾಯಣಪುರ ಗ್ರಾಮದ ಎಂ.ಕೃಷ್ಣಪ್ಪ ಬಿನ್ ದೊಡ್ಡಮುನಿಸೊಣ್ಣಪ್ಪರವರ ಜಮೀನಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಜಲಶಕ್ತಿ ಅಭಿಯಾನದಡಿ ನಿರ್ಮಾಣವಾದ ಕಂದಕ ಬದುವಿನಲ್ಲಿ ಮುಂಗಾರು ಮಳೆಯಿಂದ ನೀರು ತುಂಬಿರುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವಪುರ ಗ್ರಾಮದ ಕೆಂಪಮ್ಮ ಕೋಂ ಲೇಟ್ ಮುನಿಶಾಮಪ್ಪರವರ ಜಮೀನಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿ ಮಾಡಲಾದ 3 ನೇ ವರ್ಷದ ಹಿಪ್ಪು ನೇರಳೆ ತೋಟ ನಿರ್ವಹಣೆ ಕಾಮಗಾರಿ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಜರಾ ಹೊಸಹಳ್ಳಿಯಲ್ಲಿ SBM-G ಯೋಜನೆಯಡಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕವನ್ನು ದೆಹಲಿಯ SBM-G ಸಹ ನಿರ್ದೇಶಕರು,ಜಿಲ್ಲಾ ಸಹ ಕಾರ್ಯದರ್ಶಿ, ರಾಜ್ಯ ಮತ್ತು ಜಿಲ್ಲಾ ಸಮಾಲೋಚಕರು ಭೇಟಿ ನೀಡಿ ಪರಿಶೀಲಿಸಿದರು.
ಜೂಮ್ ಮೀಟಿಂಗ್ ಮೂಲಕ jjm ಮತ್ತು sbm-g ಯೋಜನೆಗಳ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಉದ್ಘಾಟಿಸಿದರು. ಕಾರ್ಯಗಾರದಲ್ಲಿ ಯೋಜನೆಗಳ,ಉದ್ದೇಶ,ಅನುಷ್ಟಾನದ ಕುರಿತು CEO ಸರ್ ತಿಳಿಸಿದರು. ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರರು, ಉಪ ಕಾರ್ಯದರ್ಶಿಗಳು, ಜಿಲ್ಲಾ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಾಲೋಚಕರು ಇದ್ದರು.