ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆ ಸರಹದ್ದು ಬಡಾಮಕಾನ್ ದರ್ಗಾ ಬಳಿ ಮೊಹರಂ ಹಬ್ಬದ ಪ್ರಯುಕ್ತ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ/ಸಿಬ್ಬಂದಿಯವರಿಗೆ ಸೂಕ್ತ ಸೂಚನೆಗಳನ್ನು ನೀಡಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಯಿತು.
ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕರಿಗೆ ಮಾದಕ ವಸ್ತುಗಳ ಬಳಕೆಯಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ, ಮಾದಕ ವಸ್ತುಗಳಿಂದ ದೂರ ಇರುವಂತೆ ತಿಳಿಸಿ, DRUG FREE KARNATAKA APP ಕುರಿತು ಅರಿವು ಮೂಡಿಸಲಾಯಿತು.
ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣಾ ಸರಹದ್ದು ಟಿಪ್ಪುನಗರದ ಬಳಿ ಮಾದಕ ವ್ಯಸನದ ಕುರಿತು ಜಾಗೃತೆ ಮತ್ತು ಅರಿವು ಮೂಡಿಸಲಾಯಿತು ಹಾಗೂ ಸೈಬರ್ ಸುರಕ್ಷತೆ ಮತ್ತು 1930,112,1098 ಸಹಾಯ ವಾಣಿ ಬಗ್ಗೆ ತಿಳಿಸಲಾಯಿತು
ಈ ದಿನ,ಮನೆ ಮನೆಗೆ ಪೊಲೀಸ್, ಕಾರ್ಯಕ್ರಮದಲ್ಲಿ ಚನ್ನಪಟ್ಟಣ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಭೇಟಿ ನೀಡಿ, ಸಮಸ್ಯೆಗಳ ಬಗ್ಗೆ ಚರ್ಚಿಸಿ, "ಲಾಕ್ಡ್ ಹೌಸ್ ಬೀಟ್ ಸಿಸ್ಟಮ್" ಸೇವೆಯನ್ನು ಪಡೆದುಕೊಳ್ಳಲು ಈ ನಂಬರ್ 8277961550 ಗೆ ಕರೆ ಮಾಡಲು ತಿಳಿಸಲಾಯಿತು. ಹಾಗೂ ಆಸರೆ ಮತ್ತು ಸೈಬರ್ ಸುರಕ್ಷತೆ ಬಗ್ಗೆ ತಿಳಿಸಲಾಯಿತು
ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಪಬ್ಲಿಕ್ ಸೇಫ್ಟಿ ಆಕ್ಟ್ ಅಡಿಯಲ್ಲಿ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕನಿಷ್ಠ ಒಂದು ಸಿಸಿಟಿವಿ ಕ್ಯಾಮೆರಾವನ್ನು ಅಂಗಡಿಯ ಮುಂಭಾಗದ ರಸ್ತೆ ಹಾಗೂ ಸಾರ್ವಜನಿಕ ಸಂಚಾರ ಪ್ರದೇಶಗಳು ಸ್ಪಷ್ಟವಾಗಿ ಕಾಣುವಂತೆ ಅಳವಡಿಸುವುದು.
ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ .ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ . ಪೇಟೆಚರಿ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆಗಳ ಬಗ್ಗೆ ಚರ್ಚಿಸಿ, "ಲಾಕ್ಡ್ ಹೌಸ್ ಬೀಟ್ ಸಿಸ್ಟಮ್" ಸೇವೆಯನ್ನು ಪಡೆದುಕೊಳ್ಳಲು ಈ ನಂಬರ್ 8277961550 ಗೆ ಕರೆ ಮಾಡಲು ತಿಳಿಸಲಾಯಿತು.
🚨 ಮನೆ ಕಳ್ಳತನ ತಡೆಗಟ್ಟೋಣ! 🚨
🏠 ಮನೆ ಬಿಟ್ಟು ಹೊರಗೆ ಹೋಗುವಾಗ ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ:
✅ ಬಾಗಿಲು ಮತ್ತು ಕಿಟಕಿಗಳನ್ನು ಭದ್ರವಾಗಿ ಲಾಕ್ ಮಾಡಿ
⚠️ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಪೊಲೀಸ್ ಠಾಣೆ ಅಥವಾ 112 ಗೆ ಮಾಹಿತಿ ನೀಡಿ.
"ನಿಮ್ಮ ಜಾಗರೂಕತೆಯೇ ಕಳ್ಳತನ ತಡೆಗಟ್ಟುವ ಮೊದಲ ಹೆಜ್ಜೆ"
ಠಾಣಾ ಸರಹದ್ದು ಶೇರು ಸರ್ಕಲ್ ಬಳಿ ಮಾದಕ ವ್ಯಸನದ ಕುರಿತು ಜಾಗೃತೆ ಮತ್ತು ಅರಿವು ಮೂಡಿಸಲಾಯಿತು ಹಾಗೂ ಹಿರಿಯ ನಾಗರಿಕರಿಗೆ ಆಸರೆ ಮತ್ತು ಸನ್ಮಿತ್ರ ಹಾಗೂ ಸೈಬರ್ ಸುರಕ್ಷತೆ ಬಗ್ಗೆ ತಿಳಿಸಲಾಯಿತು.
ಇಂದು ನಡೆಯಲಿರುವ IPL ಕ್ರಿಕೆಟ್ ಪಂದ್ಯದಲ್ಲಿ ನಮ್ಮ ಹೆಮ್ಮೆಯ ಬೆಂಗಳೂರು ತಂಡವು ಅಂತಿಮ ಪೈನಲ್ ಪಂದ್ಯವನ್ನು ಆಡಲಿದ್ದ, ಈ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರ ಸುರಕ್ಷತೆಗಾಗಿ ಈ ಕೆಳಕಂಡ ಮಾರ್ಗಸೂಚಿಗಳನ್ನು ಕಡ್ದಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಈ ದಿನ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆ ಸರಹದ್ದು ಕೊತ್ತನಹಳ್ಳಿ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿ/ಸಿಬ್ಬಂದಿಯವರಿಗೆ ಸೂಕ್ತ ಸೂಚನೆಗಳನ್ನು ನೀಡಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಯಿತು.