ಉದ್ಯೋಗ,ಮೂಲಭೂತ ಸೌಕರ್ಯ,ಹೇಳಿದ್ರೆ ಹನುಮನ ಬಾಲ ಬೆಳೆದಂತೆ ಬೆಳೆಯುತ್ತದೆ.ಮಲತಾಯಿ ಧೋರಣೆ ಸಲ್ಲದು. ಉದ್ದುದ್ದ ಬಾಷಣಕ್ಕೆ ಬ್ರೇಕ್ ಹಾಕಿ ಸರ್ಕಾರ ಅಖಂಡ ಕರ್ನಾಟಕದ ಏಳ್ಗೆಗಾಗಿ ಕೆಲ್ಸ ಮಾಡಬೇಕು. ನಮ್ಮನ್ನಾಳುವ ರಾಜಕಾರಣಿಗಳು ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಆ ಭಾಗದ ಜನರ ಕಲ್ಯಾಣಕ್ಕಾಗಿ ಕಾರಣರಾಗಬೇಕು.ಹೇಳ್ತಾ ಹೋದ್ರೆ ಪದಗಳು ಮುಗಿಯದಷ್ಟಿವೆ.
ಕನ್ನಡತನ, ಮಾನವೀಯತೆ ಅಂತ ಬಂದಾಗ, ನಮ್ಮತನ, ನಮ್ಮವರು ಎಂದು ಬಂದಾಗ ನೀರು ಕೇಳಿದ್ರೆ ಹಾಲು ಕೊಟ್ಟ ಸಂಸ್ಕೃತಿಯಿಂದ ಬಂದಂತ ಜನ ಉತ್ತರ ಕರ್ನಾಟಕದವರು. ಸ್ವಾತಂತ್ರ್ಯ ಸಿಕ್ಕು 79,ರಾಜ್ಯೋತ್ಸವಕ್ಕೆ 70 ವರ್ಷ ಕಳೆದರೂ ಆ ಭಾಗದ ಜನ ಪಟ್ಟ ಕಷ್ಟ ಅಷ್ಟಿಷ್ಟಲ್ಲ.ಬೆಂಗಳೂರಿಗರು, ಕರಾವಳಿಗರು ಅಲ್ಲಿನ ವ್ಯವಸ್ತೆ ಬಗ್ಗೆ ಮಾತನಾಡಿದಾಗ ಮೈ ಚುರ್ ಎನ್ನುತ್ತೆ.
ಗಗನ ಗಾಳಿಯಲಿ ಜಿಗಿದು ಜೀವಿಸಲಿ ಚೆಲುವ ಕನ್ನಡದ ಬಾವುಟ. ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ...ಕನ್ನಡ.. ಕಸ್ತೂರಿ ಕನ್ನಡ! ಎಲ್ಲಾದರೂ ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವ ರೋಮಾಂಚನ ಸಾಲುಗಳನ್ನು ಕೇಳುತ್ತಲೇ ಬೆಳೆದ ಸಮಸ್ತ ಕನ್ನಡದ ಮನಸ್ಸುಗಳಿಗೆ ୭೦ನೇ ಕನ್ನಡ ರಾಜ್ಯೋತ್ಸವದ ಶುಭಾಶಯ.
#ಕನ್ನಡರಾಜ್ಯೋತ್ಸವ
ಜಾತಿ ಹೀನನ ಮನೆಯ
ಜ್ಯೋತಿ ತಾ ಹಿನವೇ l
ಜಾತಿ ವಿಜಾತಿ ಏನಬೇಡ l
ದೇವನೋಲಿದಾತನೇ ಜಾತ ಸರ್ವಜ್ಞ l
ಸರ್ವಜ್ಞ, ಬಸವಣ್ಣ, ಕನಕದಾಸರು ಇವರ ವಚನಗಳಿಗೆ ಬೆಲೆ ಎಲ್ಲಿ ಬಂತು...!
ರಾಜ್ಯದಲ್ಲಿ ಜಾತಿಯದ್ದೇ ರಗಳೆ..!
ಭಾರತಕ್ಕೆ ಆ.15 ಸ್ವಾತಂತ್ರ್ಯ ದಿನದ ಸಂಭ್ರಮವಾದರೆ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯ ಜನರಿಗೆ ಮಾತ್ರ ಸೆಪ್ಟೆಂಬರ್ 17 ಸ್ವಾತಂತ್ರ್ಯ ದಿನದ ಸಂಭ್ರಮ.☺
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಶುಭಕಾಮನೆಗಳು..✨
#KalyanaKarnatakaUtsava#kalyankarnataka