ಕರ್ನಾಟಕ ಕಂಡಶ್ರೇಷ್ಠ ಮುತ್ಸದ್ದಿ ನಾಯಕ, ನವಕರ್ನಾಟಕದ ಶಿಲ್ಪಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗಡೆ ಅವರಜನ್ಮದಿನದಂದು ಭಕ್ತಿಪೂರ್ವಕ ಪ್ರಣಾಮಗಳು. ತಮ್ಮ ದೂರದರ್ಶಿತ್ವ, ಸುಸಂಸ್ಕೃತ ರಾಜಕಾರಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಧಿಕಾರ ವಿಕೇಂದ್ರೀಕರಣ ತಂದ ಅವರ ಕ್ರಾಂತಿಕಾರಿ ಆಡಳಿತ ಎಂದೆಂದಿಗೂ ಸ್ಮರಣೀಯ.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ, ಬರ ಘೋಷಣೆಗೆ ಸರ್ಕಾರ ವಿಳಂಬ ಮಾಡಿದೆ.
ಈಗಾಗಲೇ ರಾಜ್ಯದ ಬಹುತೇಕ ತಾಲೂಕುಗಳು ಬರಪೀಡಿತವಾಗಿವೆ. ಆದರೆ ಕೇವಲ 101 ತಾಲೂಕುಗಳನ್ನು ಮಾತ್ರವೇ ಬರಪೀಡಿತ ಎಂದು ಘೋಷಿಸಲಾಗಿದೆ. ಬರ ಪೀಡಿತ ತಾಲೂಕುಗಳ ಜನರು ತಮ್ಮ ತಾಲೂಕುಗಳನ್ನೂ ಬರ ಪೀಡಿತ ಎಂದು ಘೋಷಿಸುವಂತೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ವೈಜ್ಞಾನಿಕ��ಾಗಿ ಬರ ಪರಿಶೀಲನೆ ನಡೆಸಿ, ಎಲ್ಲ ಬರ ಪೀಡಿತ ತಾಲೂಕುಗಳನ್ನು ಸಮರ್ಪಕವಾಗಿ ಘೋಷಿಸಿ, ವೈಜ್ಞಾನಿಕ ಪರಿಹಾರ ಘೋಷಿಸಲೇಬೇಕು.
ಭಾರತದ ಹಾಕಿ ಸಾಮ್ರಾಜ್ಯಕ್ಕೆ ವಿಶ್ವಭೂಪಟದಲ್ಲಿ ಸುವರ್ಣ ��ಧ್ಯಾಯ ಬರೆದು, ತಮ್ಮ ಅತ್ಯದ್ಭುತ ಆಟದಿಂದ ದೇಶದ ಕೀರ್ತಿಪತಾಕೆಯನ್ನು ಗಗನೆತ್ತರಕ್ಕೆ ಹಾರಿಸಿದ ಕ್ರೀಡಾರತ್ನ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್ ಅವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು.
ಕ್ರೀಡಾಂಗಣದಲ್ಲಿ ಶಿಸ್ತು, ನಿಷ್ಠೆ ಮತ್ತು ಅಪಾರ ದೇಶಪ್ರೇಮಕ್ಕೆ ಅಪರೂಪದ ನಿದರ್ಶನವಾಗಿ ಬದುಕಿದ ಅವರ ನೆನಪಿನಲ್ಲಿ ಆಚರಿಸಲಾಗುತ್ತಿರುವ ಈ 'ರಾಷ್ಟ್ರೀಯ ಕ್ರೀಡಾ ದಿನ'ದಂದು, ಭಾರತೀಯ ಕ್ರೀಡಾ ಕ್ಷೇತ್ರವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿರುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ��್ರೀಡಾ ದಿನದ ಶುಭಾಶಯಗಳು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದ್ದು, ದುಷ್ಕರ್ಮಿಗಳು ಹಾಡಹಗಲೇ ಕೊಲೆ ಸುಲಿಗೆ ನಡೆಸುತ್ತಿದ್ದಾರೆ. ಗೃಹ ಸಚಿವರು ಮಾತ್ರ ಕ��ನೂನು ಸುವ್ಯವಸ್ಥೆಗೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ!
ಹುಬ್ಬಳ್ಳಿಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದಾರೆ. ದುಷ್ಕರ್ಮಿಗಳು ಯಾವುದೇ ಭಯವಿಲ್ಲದೆ ಕಾನೂನು ಕೈಗೆತ್ತಿಕೊಳ್ಳುತ್ತಿದ್ದಾರೆ. ಇದರ ಜವಾಬ್ದಾರಿ ಹೊಂದಿರಬೇಕಾದ ಗೃಹ ಸಚಿವರು ಮಾತ್ರ ಆರೆಸ್ಸೆಸ್ ವಿರುದ್ಧ ಹೇಳಿಕೆ ನೀಡುವುದರಲ್ಲಿ, ಟ್ವೀಟ್ ಮಾಡುವುದರಲ್ಲಿ ನಿರತರಾಗಿದ್ದಾರೆ!
ಗೃಹ ಸಚಿವರು ಒಂದೋ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಸೂಕ್ತವಾದ ಕ್ರಮ ಕೈಗೊಳ್ಳಿ. ಇಲ್ಲವಾದರೆ ಗೃಹ ಖಾತೆಗೆ ರಾಜೀನಾಮೆ ನೀಡಿ, ಟ್ವೀಟ್ ಖಾತೆಯನ್ನೋ, ಆರೆಸ್ಸೆಸ್ ವಿರೋಧಿಸುವ ಖಾತೆಯನ್ನೋ ವಹಿಸಿಕೊಳ್ಳಿ.
“ಮಲೆನಾಡಿನ ಜನತೆಯ ಹಿತರಕ್ಷಣೆಗೆ ನಮ್ಮ ಪೂರ್ಣ ಬದ್ಧತೆ”
ಶಿವಮ��ಗ್ಗದ ಪಕ್ಷದ ಕಛೇರಿಯಲ್ಲಿ ನಡೆದ ಶಿವಮೊಗ್ಗ ವಿಭಾಗ ಮಟ್ಟದ (ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳು) ಪಕ್ಷದ ಪ್ರಮುಖ ಜನಪ್ರತಿನಿಧಿಗಳು ಹಾಗೂ ನಾಯಕರ ವಿಶೇಷ ಸಭೆಯಲ್ಲಿ ಭಾಗವಹಿಸಿ ಕಸ್ತೂರಿರಂಗನ್ ವರದಿಯ ಕರಡು ಜಾರಿಯಿಂದ ಮಲೆನಾಡು ಹಾಗೂ ಕರಾವಳಿ ಭಾಗದ ಜನರ ಜೀವನದ ಮೇಲಾಗುವ ಗಂಭೀರ ಪರಿಣಾಮಗಳ ಕುರಿತು ಚರ್ಚಿಸಲಾಯಿತು.
ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಎಷ್ಟು ಮುಖ್ಯವೋ, ಅದೇ ರೀತಿ ಮಲೆನಾಡಿನ ಶ್ರಮಿಕ ಜನರ ಜೀವನೋಪಾಯ, ಮೂಲಭೂತ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ಕಾಯುವುದು ನಮ್ಮ ಮೊದಲ ಆದ್ಯತೆಯಾಗಿದೆ. ಪರಿಸರ ರಕ್ಷಣೆ ಮತ್ತು ಜನರ ಕಲ್ಯಾಣ ಎರಡ���್ನೂ ಸರಿದೂಗಿಸುವ ಶಾಶ್ವತ ಪರಿಹಾರ ಕಂಡುಕೊಳ್ಳಲು ನಮ್ಮ ಪಕ್ಷ ಸದಾ ಬದ್ಧ.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ @BYVijayendra, ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, @BYRBJP , ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಶ್ರೀ @JnanendraAraga , ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಆರ್. ಕೆ. ಸಿದ್ಧರಾಮಣ್ಣ, ಮಾಜಿ ಸಚಿವರಾದ ಶ್ರೀ ಡಿ. ಎನ್. ಜೀವರಾಜ್, ಮುಖಂಡರಾದ ಶ್ರೀ ಕುಮಾರಸ್ವಾಮಿ, ಶ್ರೀ ಜಗದೀಶ್ ಸೇರಿದಂತೆ ಶಿವಮೊಗ್ಗ ವಿಭಾಗದ ಪ್ರಮುಖ ಜನಪ್ರತಿನಿಧಿಗಳು ಹಾಗೂ ಪಕ್ಷದ ಮುಖಂ���ರು ಉಪಸ್ಥಿತರಿದ್ದರು.
"ಸಾಂಸ್ಕೃತಿಕವಾದ ಕೇರಳದ ಉಳಿವಿಗೆ ಕಾರಣರಾದ ರಾಷ್ಟ್ರಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳು."
ಚಿಕ್ಕಮಗಳೂರಿನ ಜಿಲ್ಲಾಡಳಿತದ ನೇತೃತ್ವದಲ್ಲಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಜರ��ಗಿದ ‘ಬ್ರಹ್ಮಶ್ರೀ ನಾರಾಯಣಗುರು ಜಯಂತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾರಾಯಣ ಗುರುಗಳ ಜೀವನ ಸಂದೇಶಗಳನ್ನು ಹಂಚಿಕೊಳ್ಳಲಾಯಿತು.
ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತಿಗೆ ಸೀಮಿತವಲ್ಲ, ಅವರು ನೀತಿಯ ಪ್ರತೀಕ. ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಎಂಬ ಶ್ರೇಷ್ಠ ಸಂದೇಶದೊಂದಿಗೆ ಏಕತೆಯ ಸಾರವನ್ನು ಸಾರಿದವರು ಅವರು. ನಾರಾಯಣ ಗುರುಗಳು ಹೇಳಿದ ಧರ್ಮ ಮತ ಸಂಪ್ರದಾಯಗಳ ಕಟ್ಟುಪಾಡುಗಳನ್ನು ಮೀರಿ ಜೀವನಾದರ್ಶವನ್ನು ಸಾರುವಂಥಹದ್ದು. ಅವರ ಬೋಧನೆಗಳು ಸರ್ವರಿಗೂ ಮಾರ್��ದರ್ಶನೀಯ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ಎಲ್. ಭೋಜೇಗೌಡ, ರಾಜ್ಯ ಪರಿಸರ ಮೌಲ್ಯಮಾಪನ ಅಧಿಕಾರಿಗಳಾದ ಶ್ರೀ ಎ.ಎನ್ ಮಹೇಶ್, ಪ್ರಧಾನ ಉಪನ್ಯಾಸಕರಾದ ಶ್ರೀ ಮಹೇಶ್ ಸೇರಿದಂತೆ ವಿವಿಧ ಮುಖಂಡರು, ಪ್ರಮುಖ ಗಣ್ಯರು ಉಪಸ್ಥಿತರಿದ್ದರು.
ತರಬೇತಿ ವಿಮಾನ ಪತನಗೊಂಡು, ಕನ್ನಡಿಗ ಅಭಿಷೇಕ್ ಪೂಜಾರಿ ಸೇರಿದಂತೆ ಇಬ್ಬರು ತರಬೇತಿ ಪೈಲಟ್ಗಳು ದುರ್ಮರಣ ಹೊಂದಿರುವುದು ಅತ್ಯಂತ ದುಃಖ ಉಂಟುಮಾಡಿದೆ. ಪೈಲಟ್ಗಳ ಕೊರತೆ ಎದುರಿಸುತ್ತಿರುವ ಭಾರತದಲ್ಲಿ ಇಂತಹ ದುರ್ಘಟನೆ ನಡೆದಿರುವುದು ದೇಶಕ್ಕೆ ಬಹುದೊಡ್ಡ ನಷ್ಟ.
ಮೃತ ಅಭಿಷೇಕ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಕಡೆಗೂ @INCKarnataka ಸರ್ಕಾರ ಕುಂಭಕರ್ಣ ನಿದ್ದೆಯಿಂದ ಎದ್ದು, ಬರ ಪರಿಸ್ಥಿತಿಯತ್ತ ಕಣ್ಣು ತೆರೆದಿದೆ!
ಸಂಪೂರ್ಣ ರಾಜ್ಯವೇ ಬರ ಪರಿಸ್ಥಿತಿಗೆ ಸಿಲುಕಿದ್ದು, ರಾಜ್ಯ ಸರ್ಕಾರ ಕೇವಲ 101 ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ವಿರೋಧ ಪಕ್ಷಗಳು ಆಗ್ರಹಿಸುತ್ತಿದ್ದ ಕಾರಣಕ್ಕೆ ಮಾತ್ರ ಕಾಟಾಚಾರಕ್ಕೆ ಬರ ಘೋಷಣೆ ಮಾಡಿದಂತಿದೆ.
ಬರ ಪರಿಸ್ಥಿತಿಯಿಂದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕಿನ ಸಾವಿರಾರು ಜನರು ಗುಳೆ ಹೋಗಿದ್ದು, ಆ ���್ರದೇಶಗಳನ್ನೂ ಬರ ಪಟ್ಟಿಯಿಂದ ಹೊರಗಿಡಲಾಗಿದೆ. ಸಾಲ ಮಾಡಿ ಹೊಲವನ್ನು ಉತ್ತು ಬಿತ್ತ ರೈತರು ಸಾಲ ತೀರಿಸಲು ಕೂಲಿ ಕೆಲಸ ಹುಡುಕಿ ಗುಳೇ ಹೋಗಿದ್ದಾರೆ. ರಾಜ್ಯ ಸರ್ಕಾರ ಅವರಿಗೆ ಸೂಕ್ತ, ವೈಜ್ಞಾನಿಕ ಪರಿಹಾರ ನೀಡದಿದ್ದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ.
ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಬರ ಸಮೀಕ್ಷೆ ನಡೆಸಲಾಗಿದ್ದು, ಬರದ ನೈಜ ಸನ್ನಿವೇಶ ನಮ್ಮ ಅರಿವಿಗೆ ಬಂದಿದೆ. ಆದರೆ, ರಾಜ್ಯದ ಜವಾಬ್ದಾರಿ ಹೊತ್ತಿರುವ ಸರ್ಕಾರಕ್ಕೆ ಮಾತ್ರ ನೈಜ ಸನ್ನಿವೇಶ ಅರಿವಿಗೆ ಬಂದಿಲ್���ದಿರುವುದು ವಿಪರ್ಯಾಸ.
ಮುಖ್ಯಮಂತ್ರಿ @DKShivakumar ಅವರೇ, ಬರ ಪರಿಸ್ಥಿತಿ ನಿರ್ವಹಣೆಯ ಕುರಿತು ತಕ್ಷಣವೇ ��ೂಕ್ತ ಮಾರ್ಗಸೂಚಿ ಬಿಡುಗಡೆಗೊಳಿಸಿ, ವೈಜ್ಞಾನಿಕ ಪರಿಹಾರ ಘೋಷಿಸಿ. ಇಲ್ಲವಾದರೆ ರೈತರ ಕಣ್ಣೀರು ಸರ್ಕಾರವನ್ನು ಸುಮ್ಮನೆ ಬಿಡದು.
ರಕ್ಷೆಯ ಕಂಕಣ ಕರದಲ್ಲಿ ಧರಿಸಿ
ನಾಡಿನ ಸೇವೆಗೆ ತೆರಳೋಣ
ಬಂಧು ಭಾವದಿ ಸ್ನೇಹವ ಬೆಸೆಯುತ
ರಾಷ್ಟ್ರ ಕಾರ್ಯಕೇ ಧುಮುಕೋಣ ||
ಬಿಡಿಬಿಡಿಯಾದ ರೇಷ್ಮೆಯ ಎಳೆಗಳಿಗೆ ಅಸ್ತಿತ್ವವಿಲ್ಲ, ಗಾಳಿಗೆ ಚದುರಿ ಹೋಗುತ್ತವೆ; ಆದರೆ ಅವುಗಳನ್ನು ಒಟ್ಟಿಗೆ ಕಟ್ಟಿದಾಗ ಸುಭದ್ರವಾದ ರಕ್ಷೆಯಾಗುತ್ತದೆ. ಅದೇ ರೀತಿ ವ್ಯಕ್ತಿ ಸ್ವಾರ್ಥಿಯಾಗಿದ್ದರೆ ಸಮಾಜ ದುರ್ಬಲಗೊಳ್ಳುತ್ತದೆ, ಅದೇ ಏಕತೆಯ ರಾಷ್ಟ್ರೀಯ ಭಾವನೆಯ ನೂಲಿನಲ್ಲಿ ನಾವೆಲ��ಲರೂ ಒಂದಾದಾಗ ಸಮಾಜ ಸಶಕ್ತವಾಗುತ್ತದೆ. ರಕ್ಷಾಬಂಧ�� ಎಂದರೆ ಕೇವಲ ಒಡಹುಟ್ಟಿದವರಿಗೆ ಸೀಮಿತವಾದ ಹಬ್ಬವಲ್ಲ, ಜಾತಿ, ಭಾಷೆ, ಪ್ರಾಂತ್ಯಗಳ ಭೇದಮರೆತು "ಹಿಂದವಃ ಸೋದರಾಃ ಸರ್ವೇ" ಎಂಬ ಸದ್ಭಾವನೆಯನ್ನು ಎದೆಯಲ್ಲಿ ತುಂಬಿಕೊಳ್ಳುವ ದಿವ್ಯ ಪರ್ವ.
ನೂರು ಸಂವತ್ಸರಗಳಿಂದ ಸಮಾಜದ ಪ್ರತಿಯೊಂದು ಗ್ರಾಮ ಹಾಗೂ ಉಪವಸತಿಗಳನ್ನು ಸಂಘಟಿತಗೊಳಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಲ್ಲಾ ಸ್ವಯಂಸೇವಕ ಬಂಧುಗಳಿಗೆ ಹಾಗೂ ಸಮಸ್ತ ಭಾರತೀಯರಿಗೆ ರಕ್ಷಾಬಂಧನ ಮತ್ತು ಶ್ರಾವಣ ಪೂರ್ಣಿಮೆಯ ಶುಭಾಶಯಗಳು
ಮಾತೃಭೂಮಿಯ ಪರಮ ವೈಭವಕ್ಕಾ��ಿ, ಸಮಾಜದ ಸಾಮರಸ್ಯಕ್ಕಾಗಿ ಹಾಗೂ ಧರ್ಮ ರಕ್ಷಣೆಗಾಗಿ ಪ್ರತಿಯೊಬ್ಬ ಭಾರತೀಯನೂ ರಕ್ಷಾಬಂಧನದ ಈ ಪವಿತ್ರ ದಿನದಂದು ರಾಷ್ಟ್ರಸೇವೆಯ ಸಂಕಲ್ಪ ತೊಡೋಣ.
ರಕ್ಷೆ ಎಲ್ಲರಿಗೂ ಶುಭ ತರಲಿ.
Deeply saddened by the passing of Shri A. Balakrishnan Ji, All India President of Vivekananda Kendra.
His lifelong dedication to the ideals and teachings of Swami Vivekananda, and his selfless service to the nation and society, leave behind an inspiring legacy.
I pray to God for the Sadgati of the departed soul and strength to the family and followers at this hard time.
Om Shanti.
ಮುಖ್ಯಮಂತ್ರಿ @DKShivakumar ಅವರು ತಮ್ಮ ಹೇಳಿಕೆಯನ್ನು ಕೊಂಚ ಬದಲಿಸಿ, 'ನಮ್ಮ ನೀರು, ತಮಿಳುನಾಡಿನ ಹಕ್ಕು' ಎನ್ನುವುದು ಒಳ್ಳೆಯದು!
ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮೈಸೂರಿಗೆ ಕುಡಿಯುವ ನೀರು ಒದಗಿಸುವ ಬಹುಮುಖ್ಯ ಕಬಿನಿ ಜಲಾಶಯ ಈಗಾಗಲೇ 30% ಬರಿದಾಗಿದೆ! ಪ್ರತಿದಿನವೂ ತಮಿಳುನಾಡಿಗೆ 14,000 ಕ್ಯೂಸೆಕ್ ತನಕ ನೀರು ಹರಿಸಿದ ಪರಿಣಾಮವಾಗಿ, ಕರ್ನಾಟಕಕ್ಕೆ ಕುಡಿಯುವ ನೀರಿಗೂ ಪರದಾಟ ಉಂಟಾಗುವ ಆತಂಕವಿದೆ.
ನ್ಯಾಯಾಧೀಕರಣದ ಆದೇಶವನ್ನು ಸರ್ಕಾರ ಪಾಲಿಸಬೇಕು ಎನ್ನುವುದು ಸರಿ. ಆದರೆ, ನ್ಯಾಯಾಧೀಕರಣದ ಮುಂದೆ ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡದಿರುವುದು ರಾಜ್ಯ ಸರ್ಕಾರದ ವೈಫಲ್ಯವಲ್ಲವೇ? ಜಲಾಶಯಗಳ ನೀರನ್ನು ನಂಬಿ ಬೆಳೆ ಬೆಳೆಯಬೇಡಿ ಎಂದು ನಮ್ಮ ರೈತರಿಗೆ ಹೇಳಿದ್ದ ಮುಖ್ಯಮಂತ್ರಿಗಳು, ತಮಿಳುನಾಡಿಗೆ ಬೆಳೆ ಬೆಳೆಯುವ ಸಲುವಾಗಿ ನೀರು ಬಿಡುತ್ತಿರುವುದ�� ಎಷ್ಟು ಸರಿ?
ರೈತರ ಬದುಕಿನ ಜೊತೆ ಚೆಲ್ಲಾಟವಾಡಬೇಡಿ. ಮೊದಲು ನಮ್ಮ ರೈತರ ಹಿತ ಕಾಯಲು ಅಗತ್ಯ ಕ್ರಮ ಕೈಗೊಳ್ಳಿ. ಇಲ್ಲವಾದರೆ ರೈತರ ಕಣ್ಣೀರಿಗೆ ಸರ್ಕಾರ ಬಲಿಯಾಗಬೇಕಾದೀತು!
ಮಂಗಳೂರು ರೈಲ್ವೇ ವಿಭಾಗ ಕರ್ನಾಟಕದ ಭಾಗವಾಗಿರಲು ಪಕ್ಷಾತೀತ ಹೋರಾಟ ಅತ್ಯವಶ್ಯಕ.
ಮೂರು ದಶಕಗಳ ಹೋರಾಟದ ಬ��ಿಕ, ಸಂಸದರಾದ ಶ್ರೀ ಬ್ರಿಜೇಶ್ ಚೌಟ ಮತ್ತು ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಪರಿಶ್ರಮ ಮತ್ತು ಮಾನ್ಯ ರೈಲ್ವೇ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಶ್ರೀ ವಿ ಸೋಮಣ್ಣ ಅವರ ಸೂಕ್ತ ನಿರ್ಧಾರದಿಂದ ಇಂದು ಮಂಗಳೂರು ರೈಲ್ವೇ ಕರ್ನಾಟಕದ ನೈಋತ್ಯ ರೈಲ್ವೇಯ ಭಾಗವಾಗುತ್ತಿದೆ.
ಮಂಗಳೂರು ಕೇರಳಂನ ಪಾಲಕ್ಕಾಡ್ ವಿಭಾಗದಲ್ಲೇ ಮುಂದುವರಿಯಬೇಕು ಎಂದು ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ದುರದೃಷ್ಟವಶಾತ್ ನಮ್ಮ @INCKarnataka ನಾಯಕರು ಮಾತ್ರ ಈ ಕುರಿತು ರಾಜ್ಯದ ಪರವಾಗಿ ���ಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿಲ್ಲ. ಮುಖ್ಯಮಂತ್ರಿ @DKShivakumar ಅವರೇ, ಈ ವಿಚಾರ ಕೇವಲ ಮಂಗಳೂರಿಗೆ ಸಂಬಂಧಿಸಿದ್ದಲ್ಲ. ಇದು ಸಂಪೂರ್ಣ ಕರ್ನಾಟಕದ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ನಿರ್ಧಾರ. ಹೈಕಮಾಂಡ್ ಮತ್ತು ಕೇರಳಂ ಕಾಂಗ್ರೆಸ್ ಒತ್ತಡಕ್ಕೆ ಮಣಿಯದೆ, ರಾಜ್ಯದ ಹಿತರಕ್ಷಣೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಪಕ್ಷಾತೀತವಾಗಿ ಹೋರಾಡಲೇಬೇಕು.
ಐತಿಹಾಸಿಕ ಪ್ರಮಾದದಿಂದ ಕನ್ನಡ ನೆಲವಾದ ಕಾಸರಗೋಡು ಕೇರಳಂ ಪಾಲಾಗಿದೆ. ಇನ್ನು ನಮ್ಮ ಮಂಗಳೂರು ರೈಲ್ವೇ ಸಹ ಕೇರಳಂ ಪಾ���ಾಗದಂತೆ ನಾವು ಸಂಘಟಿತ ಹೋರಾಟ ನಡೆಸಲೇಬೇಕು.
ಯಾವ ಕಾರಣಕ್ಕೂ ಈಗಾಗಲೇ ಕೈಗೊಂಡಿರುವ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಆಗಬಾರದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ��ನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಲೇಬೇಕು.
ರಾಜ್ಯದಲ್ಲಿ @INCKarnataka ಸರ್ಕಾರದ ಅಡಿಯಲ್ಲಿ ಮತಾಂಧ ಶಕ್ತಿಗಳಿಗೆ 'ಫ್ರೀ ಹ್ಯಾಂಡ್' ನೀಡಲಾಗಿದೆಯೇ?
ಮೊನ್ನೆ ಪುತ್ತೂರಿನ ಘಟನೆಯ ಬೆನ್ನಲ್ಲೇ, ನಿನ್ನೆ ಬೆಂಗಳೂರಿನ ಬಸವನಗುಡಿಯಲ್ಲಿ ಈದ್ ಮಿಲಾದ್ ಮೆರವಣಿಗೆಯ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಇಂತಹ ದುಷ್ಕೃತ್ಯವನ್ನು ಸಹಿಸಲು, ಕ್ಷಮಿಸಲು ಸಾಧ್ಯವೇ ಇಲ್ಲ. ಹಿಂದೂಗಳ ಧಾರ್ಮಿಕ ಆಚರಣೆಗಳು, ಗಣೇಶ ಉತ್ಸವದ ಮೆರವಣಿಗೆಯ ಮೇಲೆ ನಡೆದ ದಾಳಿಗಳನ್ನು ಇನ್ನೂ ಜನರು ಮರೆತಿಲ್ಲ. ಹೀಗಿರುವಾಗ ಈದ್ ಮಿಲಾದ್ ಮೆರವಣಿಗೆಯ ವೇಳೆ ಹಿಂದೂಗಳ ಮೇಲೆ ದಾಳಿ ನಡೆದಿರುವುದೇಕೆ? ಪೊಲೀಸರ ಸಮ್ಮುಖದಲ್ಲೇ ಮತಾಂಧರು ಪುತ್ತೂರಿನಲ್ಲಿ ದಾಳಿ ನಡೆಸಿದ್ದರು. ಅದೇ ಪ್ರವೃತ್ತಿಯನ್ನು ಬೆಂಗಳೂರಿನಲ್ಲೂ ಮುಂದುವರಿಸಿದ್ದಾರೆ. ಅಂದರೆ ಮತಾಂಧರಿಗೆ ಕಾನೂನಿನ ಭಯವೇ ಇಲ್ಲವೇ? ಅಥವಾ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಪೊಲೀಸ್ ಇಲಾಖೆಯನ್ನು ದುರ್ಬಲಗೊಳಿಸಿದ್ದಾರೆಯೇ?
ಮತಾಂಧ ಶಕ್ತಿಗಳು ಕಾನೂನು ಕೈಗೆತ್ತಿಕೊಳ್ಳುವುದು ಎಂದರೆ ಇದಕ್ಕೆ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತ ತುಷ್ಟೀಕರಣದ ನೀತಿಯೇ ಕಾರಣ. ಮತಾಂಧರನ್ನು ಓಲೈಸುವ ಮೂಲಕ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆಯನ್ನೇ ಹಾಳುಗೆಡವುತ್ತಿದೆ.
ಪೊಲೀಸ್ ಇಲಾಖೆ ತಕ್ಷಣವೇ ಈ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನೇ ಹದಗೆಡಿಸಿದ ಕಾಂಗ್ರೆಸ್ ಸರ್ಕಾರವನ್ನು ಜನತೆ ಕ್ಷಮಿಸಲು ಸಾಧ್ಯವೇ ಇಲ್ಲ.
Deeply saddened by the devastating flash floods in Nepal.
My heartfelt condolences to those who have lost their lives, and prayers for the safety of everyone affected. I hope the rescue and relief efforts bring swift assistance to those in distress and help reunite families with their loved ones.
India stands firmly with our close friend and neighbour Nepal in this difficult hour.
#NepalFloods #PrayForNepal
ಪುರಾಣ ಪ್ರಸಿದ್ಧ ಮಹಾಬಲಿ ಚಕ್ರವರ್ತಿಯ ಸ್ಮರಣೆಯಲ್ಲಿ ಆಚರಿಸುವ ಓಣಂ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂ ಸುಖ, ಶಾಂತಿ ಮತ್ತು ಹೊಸ ಹರ್ಷವನ್ನು ತರಲಿ. ಸರ್ವರಿಗೂ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು.
ಮಾನ್ಯ @PriyankKharge ಅವರೇ, ರಾಜ್ಯದಲ್ಲಿ ಆರೆಸ್ಸೆಸ್ ವಿರುದ್ಧ ಎಷ್ಟು ಪ್ರಕರಣಗಳು ದಾಖಲಾಗಿವೆ? ಸಂಘ ಯಾವುದಾದರೂ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದೆಯೇ? ಪಥ ಸಂಚಲನದ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಘಟನೆ ದಾಖಲಾಗಿದೆಯೇ ಎನ್ನುವ ಪ್ರಶ್ನೆಗೆ ಆರೆಸ್ಸೆಸ್ ವಿರುದ್ಧ ಯಾವುದೇ ಪ್ರಕರಣ ದ��ಖಲಾಗಿಲ್ಲ ಎಂದು ರಾಜ್ಯದ ಗೃಹ ಸಚಿವರು ತಿಳಿಸಿದ್ದಾರೆ. ಆದ್ದರಿಂದ, ಇನ್ನಾದರೂ ನೀವ��� ಆರೆಸ್ಸೆಸ್ ವಿರುದ್ಧ ವಿಷ ಕಾರುವುದನ್ನು ನಿಲ್ಲಿಸಿ.
ಓಹ್, ಮರೆತೇ ಹೋಗಿತ್ತು! ರಾಜ್ಯದ ಗೃಹ ಸಚಿವರೂ ತಾವೇ ಅಲ್ಲವೇ? ಆರೆಸ್ಸೆಸ್ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ, ಆರೆಸ್ಸೆಸ್ ಯಾವುದೇ ಕಾನೂನು ವಿರೋಧಿ ಕಾರ್ಯ ನಡೆಸಿಲ್ಲ ಎನ್ನುವುದು ಸಾಬೀತಾಗಿದ್ದರಿಂದ, ಇನ್ನಾದರೂ ನೀವು ಆರೆಸ್ಸೆಸ್ ಬೆನ್ನು ಬಿಟ್ಟು, ರಾಜ್ಯದ ಕಾನೂನು ಸುವ್ಯವಸ್ಥೆಯತ್ತ ಕೊಂಚ ಗಮನ ಹರಿಸಬಹುದೇ?
ದೇಶ ಭಕ್ತ ಸಂಘಟನೆಯನ್ನು ಸದಾ ವಿರೋಧಿಸುವ ಗೃಹ ಸಚಿವರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವ, ಪಾಕಿಸ್ತಾನದ ಧ್ವಜ ಹಾರಿಸುವ, ಪಾಕಿಸ್ತಾನದ ಪರವಾಗಿ ಹಾಡು ಹಾಕುವ ದೇಶದ್ರೋಹಿ ಮನಸ್ಥಿತಿಗಳ ವಿರುದ್ಧವ��� ತನಿಖೆ ನಡೆಸಬೇಕು..