Kannadigas, when you travel outside the Indian Union, identify yourselves proudly as Kannadigas. Let the world know Kannada Nadu and our distinct language, culture, history and identity.
ಬೆಳಿಗ್ಗೆ ಒಂದು ಆಶ್ಚರ್ಯ ಕಂಡೆ..
ಹಿಂದಿ ಹೇರಿಕೆಯಿಂದ ಐಕ್ಯತೆಗೆ ಧಕ್ಕೆ ಅಂತ ಕೃಷ್ಣಬೈರೇಗೌಡ ಹೇಳಿದ್ದಾರೆ.
ಹಿಂದಿ ಹೇರಿಕೆಯ ಬಗ್ಗೆ ಹೆಚ್ಚು ಹೆಚ್ಚು ರಾಜಕೀಯ ನಾಯಕರುಗಳು ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆ.
#stopHindiImposition
@path2shah Internal probe ! What a lame excuse 🤡, give that man 2.5 crore compensation from the retired amount n transfer the pension if that inspector to this guy
ಕರ್ನಾಟಕವನ್ನು ವಲಸಿಗರ ಸ್ವರ್ಗವನ್ನಾಗಿಸಿ ಅದನ್ನೇ ಅಭಿವೃದ್ಧಿ ಎಂದು ಬೀಗುವ ಜನಪ್ರತಿನಿಧಿಗಳೇ, ನಮ್ಮ ಎಂಜಿನಿಯರ್ ಪದವೀಧರರಲ್ಲಿ ಉದ್ಯೋಗ ಪಡೆದವರು ಕೇವಲ ಶೇ.17 ಮಾತ್ರ. ಉಳಿದವರ ಭವಿಷ್ಯಕ್ಕೆ ಹೊಣೆ ಯಾರು?
ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು!
#ಕರವೇ#JobsForKannadigas#krv
@VSOMANNA_BJP@narendramodi Manganna stop praising Modi , he has not done anything to Karnataka! Bucket Raja , MO aglilla andidre nin rajakeeya Jeevana kone agthitthu! Last few years enjoy maadu as MP ! Next pakka solu
Blinkit Ambulance is now live in Bengaluru! 🚑
We’re currently covering Domlur, Indiranagar, BTM Layout and Bommanahalli. The service is currently operating 4 ambulances across 2 depots. You can request one through the Blinkit app.
Our 2nd Ambulance training academy is also now operational in Horamavu, following our first in Gurugram (more on this soon).
We’re also hiring paramedics, ambulance pilots and General Duty Assistants (GDAs) in Bengaluru. Interested candidates can apply here: https://t.co/oRZtJnnXcj
ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ @RAshokaBJP ಅವರೇ ಎಲ್ಲಿದ್ದೀರಿ? ಕನ್ನಡಿಗರ ಕೂಗು ನಿಮಗೆ ಕೇಳಿಸುತ್ತಿಲ್ಲವೇ?
ಕನ್ನಡಿಗರ ಉದ್ಯೋಗದ ಪ್ರಶ್ನೆ ಎದುರಾದಾಗ ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಧ್ವನಿ ಎಲ್ಲಿಗೆ ಹೋಗುತ್ತದೆ? ರಾಜ್ಯದಲ್ಲಿ ಸರ್ಕಾರವಿದೆ, ವಿರೋಧ ಪಕ್ಷವಿದೆ, ಒಬ್ಬರ ಮೇಲೆ ಮತ್ತೊಬ್ಬರು ಕೆಸರು ಎರಚಾಡುವ ರಾಜಕೀಯ ನಾಯಕರು ಇದ್ದಾರೆ. ಆದರೆ ಕನ್ನಡಿಗರ ಬದುಕು, ಉದ್ಯೋಗ ಮತ್ತು ಭವಿಷ್ಯದ ಪ್ರಶ್ನೆ ಬಂದಾಗ ಮಾತ್ರ ಎಲ್ಲರೂ ಮೌನಕ್ಕೆ ಶರಣಾಗಿರುವುದು ಏಕೆ?
ಕರ್ನಾಟಕದ ಐಟಿ ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು, ಅರ್ಹತೆ ಹೊಂದಿರುವ ಸ್ಥಳೀಯ ಯುವಜನರಿಗೆ ಆದ್ಯತೆ ನೀಡಬೇಕು, ನಮ್ಮ ನೆಲದಲ್ಲಿ ಬೆಳೆದ ಸಂಸ್ಥೆಗಳಲ್ಲಿ ನಮ್ಮ ಮಕ್ಕಳಿಗೂ ಉದ್ಯೋಗಾವಕಾಶ ಸಿಗಬೇಕು ಎಂಬ ನ್ಯಾಯಯುತ ಕೂಗು ಇಂದು ರಾಜ್ಯದಾದ್ಯಂತ ಕೇಳಿಬರುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಈ ವಿಚಾರವನ್ನು ಮುಂದಿಟ್ಟುಕೊಂಡು 'ಆಗ್ರಹ ಅಭಿಯಾನ' ನಡೆಸುತ್ತಿದೆ. ನೂರಾರು ಕಂಪನಿಗಳ ಬಾಗಿಲು ತಟ್ಟಿ ಕನ್ನಡಿಗರ ಉದ್ಯೋಗದ ಪಾಲಿನ ಲೆಕ್ಕ ಕೇಳುತ್ತಿದೆ. ಆದರೆ ರಾಜ್ಯದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತ್ರ ಈ ವಿಚಾರದಲ್ಲಿ ಇದುವರೆಗೆ ಗಟ್ಟಿಯಾಗಿ ಬಾಯಿ ಬಿಟ್ಟಿಲ್ಲ. ಏಕೆ ಅಶೋಕ್ ಅವರೇ? ಕನ್ನಡಿಗರ ಉದ್ಯೋಗದ ಪ್ರಶ್ನೆ ನಿಮಗೆ ಮುಖ್ಯವೆನಿಸುತ್ತಿಲ್ಲವೇ? ಎಲ್ಲಿದ್ದೀರಿ ನೀವು?
ವಿರೋಧ ಪಕ್ಷದ ನಾಯಕನ ಹುದ್ದೆ ಎನ್ನುವುದು ಕೇವಲ ವಿಧಾನಸಭೆಯಲ್ಲಿ ಸರ್ಕಾರವನ್ನು ಟೀಕಿಸಲು, ಪತ್ರಿಕಾಗೋಷ್ಠಿ ನಡೆಸಲು, ರಾಜಕೀಯ ಆರೋಪಗಳನ್ನು ಮಾಡಲು ಇರುವ ಹುದ್ದೆಯಲ್ಲ. ಸರ್ಕಾರ ಎಲ್ಲಿ ಎಡವುತ್ತದೆಯೋ ಅಲ್ಲಿ ಪ್ರಶ್ನಿಸುವುದು, ಜನರ ಹಕ್ಕುಗಳಿಗೆ ಧಕ್ಕೆಯಾದಾಗ ಧ್ವನಿ ಎತ್ತುವುದು, ಸರ್ಕಾರ ಜಾರಿಗೆ ತರಬೇಕಾದ ಜನಪರ ನೀತಿಗಳಿಗಾಗಿ ಒತ್ತಾಯಿಸುವುದು ವಿರೋಧ ಪಕ್ಷದ ನಾಯಕನ ಜವಾಬ್ದಾರಿ. ಆ ಜವಾಬ್ದಾರಿಯನ್ನು ನೀವು ಮರೆತಿದ್ದೀರಾ? ಅಥವಾ ನಾಡು ನುಡಿ ವಿಷಯ ಬಂದಾಗ ನೀವು ಬಾಯಿ ಹೊಲೆದುಕೊಂಡಿರುವ ತೀರ್ಮಾನ ಮಾಡಿದ್ದೀರಾ?
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿ ಬಿಟಿ ಸಂಸ್ಥೆಗಳಲ್ಲಿ ಎಷ್ಟು ಕನ್ನಡಿಗರಿಗೆ ಉದ್ಯೋಗ ದೊರೆತಿದೆ? ಎಷ್ಟು ಹೊರರಾಜ್ಯದವರಿಗೆ ಉದ್ಯೋಗ ನೀಡಲಾಗಿದೆ? ಯಾವ ಹುದ್ದೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಎಷ್ಟಿದೆ? ಇಂಥ ಸರಳ ಪ್ರಶ್ನೆಗಳಿಗೆ ಉತ್ತರ ಪಡೆಯುವ ಧೈರ್ಯ ಸರ್ಕಾರಕ್ಕೆ ಇಲ್ಲ. ಕಾರ್ಮಿಕ ಇಲಾಖೆ ನಡೆಸಬೇಕಾದ ಸಮೀಕ್ಷೆಗೂ ಸರ್ಕಾರವೇ ತೊಡರುಗಾಲು ಹಾಕಿ ಕುಳಿತಿದೆ. ಇಂಥ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನಾಗಿ ನೀವು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತಲ್ಲವೇ? ಎಲ್ಲಿ ಅಡಗಿಹೋಯಿತು ನಿಮ್ಮ ಧ್ವನಿ?
ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಸಂಬಂಧ ಉದ್ಯೋಗ ಪ್ರಾತಿನಿಧ್ಯ ಕಾಯ್ದೆಯನ್ನು ಜಾರಿಗೆ ತರಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಬಗ್ಗೆ ಸ್ವತಃ ರಾಜ್ಯದ ರಾಜಕೀಯ ಪಕ್ಷಗಳು ಭರವಸೆ ನೀಡಿವೆ. ಆದರೆ ಕಾಯ್ದೆ ಜಾರಿಗೆ ತರುವ ವಿಚಾರ ಬಂದಾಗ ಆಡಳಿತ ಪಕ್ಷ ಹಿಂದೇಟು ಹಾಕುತ್ತಿದೆ. ಈ ಸರ್ಕಾರದ ಮೇಲೆ ಒತ್ತಡ ಹೇರಬೇಕಾದವರು ಯಾರು? ವಿರೋಧ ಪಕ್ಷದ ನಾಯಕರಾದ ನೀವೇ ಅಲ್ಲವೇ ? ಕಾಯ್ದೆ ಜಾರಿಗೆ ತನ್ನಿ ಎಂದು ನೀವು ಸರ್ಕಾರವನ್ನು ಏಕೆ ಒತ್ತಾಯಿಸುತ್ತಿಲ್ಲ?
ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಹೇಳಲು ನಿಮಗೆ ಯಾರ ಭಯ? ಐಟಿ ಬಿಟಿ ಕಂಪನಿಗಳ ಮಾಲೀಕರ ಭಯವೇ? ಉದ್ಯಮಿಗಳ ಒತ್ತಡವೇ? ಅಥವಾ ಯಾರನ್ನಾದರೂ ಓಲೈಸಬೇಕಾದ ರಾಜಕೀಯ ಅನಿವಾರ್ಯತೆ ಇದೆಯೇ? ನಿಮ್ಮ ಮೌನಕ್ಕೆ ಕಾರಣವೇನು ಎಂಬುದನ್ನು ಕನ್ನಡಿಗರಿಗೆ ಸ್ಪಷ್ಟಪಡಿಸಿ.
ನಮ್ಮ ಹೋರಾಟ ಯಾವುದೇ ಒಂದು ಭಾಷೆಯ ಜನರ ವಿರುದ್ಧವಲ್ಲ. ಕರ್ನಾಟಕದಲ್ಲಿ ಅಗತ್ಯ ವಿದ್ಯಾರ್ಹತೆ, ಕೌಶಲ್ಯ ಮತ್ತು ಅರ್ಹತೆ ಹೊಂದಿರುವ ಕನ್ನಡಿಗರಿಗೆ ಅವರದೇ ನೆಲದಲ್ಲಿ ಉದ್ಯೋಗಾವಕಾಶ ಸಿಗಬೇಕು ಎಂಬುದಷ್ಟೇ ನಮ್ಮ ಆಗ್ರಹ. ಸಮಾನ ಅರ್ಹತೆ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎನ್ನುವುದು ಯಾವ ದೃಷ್ಟಿಯಿಂದ ತಪ್ಪು? ಈ ಪ್ರಶ್ನೆಯನ್ನು ಎತ್ತುವುದಕ್ಕೂ ನೀವು ಹಿಂದೇಟು ಹಾಕುತ್ತಿರುವುದು ಏಕೆ?
ಪದವಿ ಪಡೆದು ಉದ್ಯೋಗಕ್ಕಾಗಿ ಅಲೆಯುತ್ತಿರುವ ನಮ್ಮ ಮಕ್ಕಳ ಪರವಾಗಿ ವಿರೋಧ ಪಕ್ಷದ ನಾಯಕನಾಗಿ ನೀವು ಯಾವ ಪ್ರಶ್ನೆ ಎತ್ತಿದ್ದೀರಿ? ಎಷ್ಟು ಬಾರಿ ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದೀರಿ? ಎಷ್ಟು ಬಾರಿ ಸರ್ಕಾರದಿಂದ ಉತ್ತರ ಕೇಳಿದ್ದೀರಿ?
ಆರ್. ಅಶೋಕ್ ಅವರೇ, ನೀವು ಕರ್ನಾಟಕದ ವಿರೋಧ ಪಕ್ಷದ ನಾಯಕರು. ಆ ಹುದ್ದೆಗೆ ಒಂದು ಘನತೆ ಇದೆ, ಜವಾಬ್ದಾರಿ ಇದೆ. ಕನ್ನಡಿಗರ ಉದ್ಯೋಗದ ಹಕ್ಕಿನ ವಿಚಾರದಲ್ಲಿ ನೀವು ಮೌನವಾಗಿದ್ದರೆ ನಿಮ್ಮ ಮೌನವನ್ನು ನಾವು ಬೇರೆಯದೇ ರೀತಿ ಅರ್ಥ ಮಾಡಿಕೊಳ್ಳುತ್ತೇವೆ. ಕನ್ನಡಿಗರ ಬದುಕಿನ ಪ್ರಶ್ನೆ ಬಂದಾಗ ನೀವು ಮಾತನಾಡದಿದ್ದರೆ, ನಿಮ್ಮನ್ನು ಬೆಳೆಸಿದ ಕನ್ನಡಿಗರಿಗೆ ಆಗುವ ಪ್ರಯೋಜನವಾದರೂ ಏನು?
ಕನ್ನಡಿಗರ ಪರವಾಗಿ ಧ್ವನಿ ಎತ್ತುವುದು ನಿಮ್ಮ ಕರ್ತವ್ಯ. ಸರ್ಕಾರವನ್ನು ಪ್ರಶ್ನಿಸುವುದು ನಿಮ್ಮ ಜವಾಬ್ದಾರಿ. ಕನ್ನಡಿಗರಿಗೆ ಉದ್ಯೋಗ ಪ್ರಾತಿನಿಧ್ಯ ಕಾಯ್ದೆ ಜಾರಿಗೆ ತನ್ನಿ ಎಂದು ಒತ್ತಾಯಿಸುವುದು ನಿಮ್ಮ ಕೆಲಸ. ಅದನ್ನು ಮಾಡದೆ ಮೌನವಾಗಿರುವುದು ನಿಮ್ಮ ನಿರಭಿಮಾನವನ್ನು ತೋರಿಸುತ್ತದೆ.
ಕೊನೆಯ ಪಕ್ಷ ಕನ್ನಡಿಗರ ಉದ್ಯೋಗದ ಹೋರಾಟಕ್ಕೆ ನಿಮ್ಮ ಬೆಂಬಲ ಇದೆಯೇ ಇಲ್ಲವೇ? ಎಂಬುದನ್ನಾದರೂ ಸ್ಪಷ್ಟಪಡಿಸಿ. ಕನ್ನಡಿಗರ ಉದ್ಯೋಗದ ವಿಚಾರದಲ್ಲಿ ರಾಜಕೀಯ ಮಾಡಬೇಡಿ.
ಕನ್ನಡಿಗರ ಮಕ್ಕಳ ಭವಿಷ್ಯದ ಪ್ರಶ್ನೆ ಸುಡುವ ಕೆಂಡದಂತೆ ಎಲ್ಲ ರಾಜಕೀಯ ಪಕ್ಷಗಳನ್ನೂ ಕಾಡಿಸಲಿದೆ. ಯಾಕೆಂದರೆ ನಾಡಿನ ಜನರು ಜಾಗೃತರಾಗುತ್ತಿದ್ದಾರೆ.
@Tejasvi_Surya@narendramodi E20 scammer , Epstein friend hardeep puri , should resign , and Gadkari should be jailed for facilitating this E20 scam for his family benefits
ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಕನ್ನಡಿಗರ ಬದುಕು ನಾಶವಾಗುತ್ತಿರುವಾಗ 'ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು' ಎಂಬಂತೆ ಈ ಸಮ್ಮೇಳನ ನಡೆಸುವ ಔಚಿತ್ಯ ನನಗೆ ಅರ್ಥವಾಗುತ್ತಿಲ್ಲ. ಕನ್ನಡ ಎಂದರೆ ನನ್ನ ದೃಷ್ಟಿಯಲ್ಲಿ ಕೇವಲ ಒಂದು ನುಡಿಯಲ್ಲ, ಕನ್ನಡಿಗರ ಬದುಕು ಕೂಡ ಹೌದು. ಅಂಥ ಕನ್ನಡಿಗರೇ ಸೋತು ಹೋಗಿರುವಾಗ ಈ ಸಂಭ್ರಮಕ್ಕೆ ಯಾವ ಅರ್ಥವಿದೆ?
ವಿಶ್ವ ಕನ್ನಡ ಸಮ್ಮೇಳನವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಯವರ ನೇತೃತ್ವದಲ್ಲಿ ನಡೆಸುವುದಾಗಿಯೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ವೀರಪ್ಪ ಮೊಯ್ಲಿಯವರು ತ್ರಿಭಾಷಾ ನೀತಿಯ ಪರವಾಗಿ ಇರುವವರು, ಕನ್ನಡಿಗರ ಮೇಲಿನ ಬಲವಂತದ ಹಿಂದಿ ಕಲಿಕೆಯ ಪರವಾಗಿ ಇರುವವರು. ಇಂಥವರು ವಿಶ್ವ ಕನ್ನಡ ಸಮ್ಮೇಳನದ ವೇದಿಕೆ ಮೇಲೆ ನಿಂತು ಏನನ್ನು ಹೇಳುತ್ತಾರೆ?
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಸಕ್ತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಮೂರನೇ ಭಾಷೆಗೆ ಅಂಕ ನೀಡದೆ ಇರುವ ತೀರ್ಮಾನವನ್ನು ಸರ್ಕಾರ ಕೈಗೊಂಡಿತ್ತು. ಆದರೆ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಿ ಈ ಸುತ್ತೋಲೆ ಹೊರಡಿಸಿದ್ದರಿಂದಾಗಿ ಹೈಕೋರ್ಟ್ ರದ್ದು ಪಡಿಸಿತ್ತು. ಆದರೆ ಈಗ ಸರ್ಕಾರ ಎರಡು ನುಡಿ ನೀತಿಯ ಬಗ್ಗೆ ತುಟಿ ಎರಡು ಮಾಡುತ್ತಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವಿಭಾಷಾ ನೀತಿಯ ಪರವಾಗಿ ಇರುವುದಾಗಿಯೂ, ಆದರೆ ಇದಕ್ಕೆ ವೀರಪ್ಪ ಮೊಯ್ಲಿ ಸೇರಿದಂತೆ ಹಲವರ ವಿರೋಧ ಇರುವುದಾಗಿಯೂ ಸ್ವತಃ ನನ್ನ ಬಳಿಯೇ ಹೇಳಿದ್ದರು.
ಉತ್ತರದ ರಾಜ್ಯಗಳ ಮಕ್ಕಳು ಎರಡೇ ಭಾಷೆ ಕಲಿಯುತ್ತ, ಮೂರನೇ ಭಾಷೆಯ ಬದಲಿಗೆ ಅವರ ಭವಿಷ್ಯಕ್ಕೆ ಪೂರಕವಾದ ತಾಂತ್ರಿಕ ಕೌಶಲ್ಯದ ಪಾಠಗಳನ್ನು ಕಲಿಯುತ್ತಿರುವಾಗ ಕನ್ನಡದ ಮಕ್ಕಳು ಏಕೆ ಮೂರನೇ ಭಾಷೆಯ ಹೊರೆ ಹೊರಬೇಕು? ತಲೆತಲಾಂತರಗಳಿಂದ ನಡೆಯುತ್ತಿರುವ ಈ ಅನ್ಯಾಯ ನಿಲ್ಲಿಸಿ ಎಂದರೆ ಅದು ಸರ್ಕಾರದ ಕಿವಿಗೆ ಹೋಗುತ್ತಿಲ್ಲ. ಎಂಥ ದುಸ್ಥಿತಿ ಬಂದಿದೆ ನೋಡಿ, ಸರ್ಕಾರದ ನೀತಿಗಳನ್ನು ಕನ್ನಡ ದ್ರೋಹಿಗಳೇ ನಿರ್ಧರಿಸುತ್ತಿದ್ದಾರೆ.
ಕರ್ನಾಟಕವನ್ನು ವಲಸಿಗರ ಸ್ವರ್ಗವನ್ನಾಗಿ ಮಾಡಿ ಅದನ್ನೇ ರಾಜ್ಯದ ಅಭಿವೃದ್ಧಿ ಎಂದು ನಮ್ಮ ಜನಪ್ರತಿನಿಧಿಗಳು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಸಮಿತಿ ಒಂದು ನೀಡಿದ ಮಾಹಿತಿ ಪ್ರಕಾರ ರಾಜ್ಯದ ಎಂಜಿನಿಯರ್ ಪದವೀಧರರ ಪೈಕಿ ಶೇ. 17ರಷ್ಟು ಮಂದಿ ಮಾತ್ರ ಉದ್ಯೋಗ ಪಡೆದಿದ್ದಾರೆ. ಉಳಿದ ಶೇ.83 ರಷ್ಟು ಮಂದಿ ಎಲ್ಲಿಗೆ ಹೋದರು? ಸರ್ಕಾರಕ್ಕೆ ಕಿಂಚಿತ್ ಕಾಳಜಿ ಇದ್ದಿದ್ದರೆ ನಮ್ಮ ಮಕ್ಕಳು ಪದವಿ ಪಡೆದೂ ನಿರುದ್ಯೋಗಿಗಳಾಗಿ ಬೀದಿ ಬೀದಿ ಅಲೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುತ್ತಿತ್ತು.
ರಾಜ್ಯದ ಬಹುತೇಕ ಐಟಿ ಬಿಟಿ ಸೇರಿದಂತೆ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳಿಂದ ಜನರನ್ನು ತಂದು ತುಂಬಿಕೊಳ್ಳುತ್ತಿವೆ. ಕರ್ನಾಟಕ ಈಗ ಕಸದ ತೊಟ್ಟಿ ಆಗಿ ಹೋಗಿದೆ. ಹೊರಗಿನಿಂದ ಬಂದವರ ಉದ್ದಾರಕ್ಕೆ ಸರ್ಕಾರವೇ ತೊಂಕ ಕಟ್ಟಿ ನಿಂತ ಮೇಲೆ ಯಾರೇನು ಮಾಡಲು ಆಗುತ್ತದೆ? ಕರ್ನಾಟಕದ ಉದ್ಯಮವೂ ನಮ್ಮ ಕೈಯಲ್ಲಿ ಇಲ್ಲ, ಉದ್ಯೋಗವೂ ನಮ್ಮ ಕೈಯಲ್ಲಿ ಇಲ್ಲ. ಕನಿಷ್ಟ ಪಕ್ಷ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದೀರಿ ಎಂದು ಖಾಸಗಿ ಸಂಸ್ಥೆಗಳಿಗೆ ಕೇಳುವ ಧೈರ್ಯವೂ ಸರ್ಕಾರಕ್ಕೆ ಇಲ್ಲ. ಇಂಥ ಸಮೀಕ್ಷೆ ನಡೆಸಲು ಕಾರ್ಮಿಕ ಇಲಾಖೆ ಮೂರು ಬಾರಿ ಪ್ರಯತ್ನ ಪಟ್ಟು ವಿಫಲವಾಗಿದೆ. ಸರ್ಕಾರ ಈ ಕಾರ್ಪರೇಟ್ ಗೂಂಡಾಗಳಿಗೆ ಬೆದರಿ ಸಮೀಕ್ಷೆಗೆ ಅನುಮತಿಯನ್ನೇ ನೀಡಲಿಲ್ಲ.
ಈಗ ನಾವು, ಕರ್ನಾಟಕ ರಕ್ಷಣಾ ವೇದಿಕೆಯವರು ಐಟಿ ಬಿಟಿ ಸಂಸ್ಥೆಗಳಿಗೆ ತೆರಳಿ 'ಕನ್ನಡಿಗರ ಲೆಕ್ಕ ಕೊಡಿ' ಎಂದು ಅಭಿಯಾನ ಆರಂಭಿಸಿದರೆ 'ಮಾರಲ್ ಪೋಲೀಸಿಂಗ್' ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಉಪದೇಶ ಮಾಡುತ್ತಾರೆ. ಸರ್ಕಾರವನ್ನು ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು ನಡೆಸುತ್ತಿದ್ದಾರಾ ಅಥವಾ ಈ ಕಾರ್ಪರೇಟ್ ಕಂಪನಿಗಳು ನಡೆಸುತ್ತಿವೆಯಾ?
ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಎಲ್ಲಾ ಹಂತಗಳ ಉದ್ಯೋಗಗಳಲ್ಲಿ ಶೇ. 80 ರಷ್ಟನ್ನು ಕನ್ನಡಿಗರಿಗೆ ಮೀಸಲಾಗಿ ಇಡುವುದಾಗಿ ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀವೇ ಹೇಳಿಕೊಂಡಿದ್ದಿರಿ. ಈಗ ಕಾರ್ಪರೇಟ್ ಕುಳಗಳಿಗೆ ಹೆದರಿ ಕಾಯ್ದೆ ಜಾರಿಗೆ ತರದೆ ಹೇಡಿಗಳಂತೆ ಕುಳಿತಿದ್ದೀರಿ.
ರಾಜ್ಯ ಸರ್ಕಾರದ ಇಲಾಖೆಗಳ ಉದ್ಯೋಗಗಳನ್ನು ಒದಗಿಸುವ KPSC ಎಂಬ ವ್ಯವಸ್ಥೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಸರ್ವನಾಶ ಮಾಡಿವೆ. ಭ್ರಷ್ಟಾಚಾರದ ಕೂಪವಾದ KPSC ನಡೆಸುವ ಪರೀಕ್ಷೆಗಳನ್ನು ನಂಬಿಕೊಂಡು ವರ್ಷಗಟ್ಟಲೆ ಊಟ, ನಿದ್ದೆ ಬಿಟ್ಟು ಓದಿದ ಕನ್ನಡದ ಮಕ್ಕಳ ಬದುಕು ನರಕ ಆಗಿದೆ. ಮನೆಯವರ ಪಾಲಿಗೆ ಈ ಮಕ್ಕಳು ಈಗ ಜೀವಂತ ಹೆಣಗಳಾಗಿದ್ದಾರೆ. ಎಷ್ಟೋ ಪರೀಕ್ಷೆಗಳು ನಡೆಯಲೇ ಇಲ್ಲ, ನಡೆದ ಪರೀಕ್ಷೆಗಳು ರದ್ದಾದವು. ಈ ಚಂದಕ್ಕೆ ನಮ್ಮ ತೆರಿಗೆ ಹಣದಲ್ಲಿ ಒಂದು ಸಂಸ್ಥೆ ಬೇಕಿತ್ತೆ?
ಸಾವಿರಾರು ಕನ್ನಡ ಶಾಲೆಗಳನ್ನು ಈಗಾಗಲೇ ಮುಚ್ಚಿದ್ದೀರಿ. ಸಾಲದಕ್ಕೆ ಈಗ ಉಳಿದ ಶಾಲೆಗಳನ್ನು ಕನ್ನಡ ವಿರೋಧಿ ಖಾಸಗಿ ಸಂಸ್ಥೆಗಳಿಗೆ ಚಿನ್ನದ ತಟ್ಟೆಯಲ್ಲಿ ಇಟ್ಟು ಕೊಡುತ್ತಿದ್ದೀರಿ. ಶಾಲೆ ನಡೆಸುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ ಎನ್ನುವುದನ್ನೂ ಅದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೀರಿ? ಏನಾಗಿದೆ ನಿಮಗೆ? ಅದರಲ್ಲೂ ಸರ್ಕಾರಿ ಶಾಲಾ ಶಿಕ್ಷಕರ ಮೇಲೆ ಗೂಬೆ ಕೂರಿಸುವ ಕುತಂತ್ರಗಳು ಬೇರೆ. ಖಾಸಗಿ ಶಾಲೆಗಳ ಮಟ್ಟದಲ್ಲೇ ಫಲಿತಾಂಶ ನೀಡುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರು ಈ ಕೊಂಕು ಮಾತು ಬೇರೆ ಕೇಳಬೇಕು.
ಇಷ್ಟೆಲ್ಲಾ ಇರುವಾಗ ನೀವು ಮಾಡಲು ಹೊರಟ ವಿಶ್ವ ಕನ್ನಡ ಸಮ್ಮೇಳನಕ್ಕೆ ಏನಾದರೂ ಅರ್ಥವಿದೆಯೇ? ಕನ್ನಡಿಗರ ಬದುಕನ್ನು ಶವ ಪೆಟ್ಟಿಗೆಯಲ್ಲಿ ಇಟ್ಟು ಅದರ ಮೇಲೆ ಎಷ್ಟು ಹೂವು ಸುರಿದರೆ ಏನು ಪ್ರಯೋಜನ? ಈ ಬೂಟಾಟಿಕೆ ಬಿಟ್ಟು ಕನ್ನಡದ ಮಕ್ಕಳ ರಕ್ಷಣೆಗೆ ಕಾಯ್ದೆಗಳನ್ನು ರೂಪಿಸುವ ಶಕ್ತಿ ನಿಮಗಿಲ್ಲವೇ? ಅದ್ಯಾವುದನ್ನೂ ಮಾಡದೇ ನಡೆಸುವ ವಿಶ್ವ ಕನ್ನಡ ಸಮ್ಮೇಳನ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇನ್ನೊಂದು ರಾಜಕೀಯ ಸಮಾವೇಶವಾಗುತ್ತದೆ ಅಷ್ಟೆ.
@sivachan_x Read about battle of takkolam, where in ur chola 🤡 king was killed while being seated on elephant ! After which all your kongu warriors ran for their life with their d*** in their mouth 🤣
“Pure ghee” is easy to claim. Passing a blind lab test is harder. 🧪
We blind-tested Nandini Cow Ghee across 7 parameters.
Result: No vegetable-fat adulteration detected. Heavy metals, microbes, aflatoxin M1 & pesticides below LOQ.
But one concern remains: packaging.
Full report 👇
https://t.co/qH7rZtXm0l
Which ghee should we test next?
@TrustifiedIndia
#FoodSafety #Ghee #ConsumerAwareness #ProductTesting
ಮಹಾರಾಷ್ಟ್ರದಲ್ಲಿ ಎಲ್ಲ ಪಕ್ಷಗಳೂ ಛತ್ ಪೂಜಾ ಆಚರಣೆಯ ಪದ್ಧತಿಯ ವಿರುದ್ಧ ಹೋರಾಡುತ್ತಿದೆ. ಬಾಂಬೆ ಹೈಕೋರ್ಟ್ ತೀರ್ಪು ಅವರ ಬೆನ್ನಿಗಿದೆ.
ಎದ್ದೇಳು ಕನ್ನಡಿಗ. ಮನೆಯಲ್ಲೋ, ಸಂಘದಲ್ಲೋ ಅವರು ಹಬ್ಬ ಆಚರಿಸಿಕೊಂಡರೆ ಸಂತೋಷ. ನಾವೂ ಶುಭ ಹಾರೈಸೋಣ. ನದಿ, ಹಳ್ಳ ತೊರೆಗಳನ್ನು ಹಾಳು ಮಾಡುವ ಪದ್ಧತಿಗೆ ವಿರೋಧ ವ್ಯಕ್ತ ಪಡಿಸೋಣ.
#Ashte 💛❤️