ನಂಗೆ ಅನಿಸೋದು ಇತರದ commercial ಸಾಂಗುಗಳು #DBoss ಕೆರಿಯರ್ ಅಲ್ಲಿ ಸುಮಾರು ಇದ್ದಾವೆ.
But ಆ Raw Mass, Heavy aggressive, psych goosebumps ಕೊಡುವಂತ ಸಾಂಗ್ಸ್ (Like Kgf, Bhagheera) ಬರ್ತಾ ಇಲ್ಲ, ಬರೇ ಈ ಡೋಲು ತಮಟೆ ಸಾಂಗ್ಸ್ ಜಾಸ್ತಿ ಆಗೋದ್ವು.
ರವಿ ಬಸ್ರೂರು ಸ್ಟೈಲ್ ಮ್ಯೂಸಿಕ್ ಬೇಕು.
#IdreNemdhiyaagIrbek#DBoss
#Siddaramaiah’s faith was clear: “The Constitution is my religion.”
#DrYathindraSiddaramaiah carries that legacy forward by taking oath in the name of the Constitution.
On #BabasahebAmbedkar’s path, the journey continues.
Confident of a comeback in 2028 says BK Hariprasad
Newly appointed KPCC President BK Hariprasad expressed confidence that Congress will retain power in Karnataka, citing the government's delivery on promises made during the 2023 Assembly elections
Hariprasad said the Congress govt has successfully implemented its commitments, maintained law and order and ensured Karnataka remains a peaceful destination for investment
This is going to be a big win if it’s implemented 😎😬
#DKCM speaking for KKK youth is a big victory in real sense for #KKK community.
Way to go Sir! 30 days alla 90 days thagoli and idanna implement maadi! Kannadigas will remember you for ever🙏🏼🙌🏼
Appreciate @Ggk_here_ 🫶🏼 👏🏼
ಡಿಕೆ ಶಿವಕುಮಾರ್ 10,000 ಭಾರತ್ ಜೋಡೋ ಸಂಘ ಮೂಲಕ 25 ಲಕ್ಷ ಯುವಕರ ಬೃಹತ್ ಸಂಘಟನೆ ಕಟ್ಟುತ್ತಿದ್ದಾರೆ. ₹1000 ಕೋಟಿ ಮೀಸಲು ಮಾಡಿ ನೆಲಮಟ್ಟದಲ್ಲಿ ಶಕ್ತಿ ನಿರ್ಮಾಣ ಮಾಡುತ್ತಿದ್ದಾರೆ.
ಇತ್ತ ಕರ್ನಾಟಕ ಬಿಜೆಪಿ ನಾಯಕರು ಕಾರ್ಯಕರ್ತರಿಗಿಂತ ಒಳಜಗಳ, ಹೊಂದಾಣಿಕೆ ರಾಜಕೀಯ ಮತ್ತು ಸ್ವಂತ ಉದ್ಧಾರದಲ್ಲೇ ಬ್ಯುಸಿ!
ಸಂಘಟನೆ ಕಟ್ಟೋದು ಕಲಿಯಿರಿ…
Reason for Water Logging in Bengaluru.
Who are the actual culprits?
Blaming authorities is not enough. We should be having better civic sense.
Share this video maximum.
Stop Littering 🚯
Warm felicitations to @DKShivakumar Ji on taking oath as the Chief Minister of Karnataka.
May his leadership usher in greater progress, prosperity, and inclusive development across the state.
#WATCH | Bengaluru | Karnataka Minister Priyank Kharge says, "I don't know if I will be the Home Minister... It's all speculation... Let the list come out. The CM is yet to convey it..."
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರ ನೇತೃತದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪ್ರಗತಿಯ ಮುನ್ನೋಟದ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
◆ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ವಿಸ್ತರಿಸುವ ತೀರ್ಮಾನ ಕೈಗೊಳ್ಳಲಾಗಿದೆ, ಈ ನಿರ್ದಾರದಿಂದ ಕಡಿಮೆ ಆದಾಯದ ಕುಟುಂಬಗಳ ಶೈಕ್ಷಣಿಕ ವೆಚ್ಚದ ಹೊರೆ ತಗ್ಗಲಿದೆ.
◆ ಯುವ ಸಮುದಾಯಕ್ಕೆ ಸುಭದ್ರ ಭವಿಷ್ಯವನ್ನು ಒದಗಿಸಿಕೊಡುವ ಉದ್ದೇಶದಿಂದ "ಯುವ ಉದ್ಯೋಗ ಸೇತು" ಎಂಬ ಉದ್ಯೋಗ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಈ ಕ್ರಮದಿಂದ ಉದ್ಯೋಗವನ್ನು ಅರಸುವ ಯುವ ಸಮುದಾಯಕ್ಕೆ ತಮ್ಮ ಅರ್ಹತೆಯ ಉದ್ಯೋಗವನ್ನು ಸುಲಭದಲ್ಲಿ ಪಡೆಯಲು ಅನುಕೂಲವಾಗಲಿದೆ.
◆ ಯುವಜನರಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಭ್ರಾತೃತ್ವ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಮತ್ತು ಸಾಮುದಾಯಿಕ ಮನೋಭಾವವನ್ನು ಉತ್ತೇಜಿಸಲು ಗ್ರಾಮ ಪಂಚಾಯತ್ ಹಾಗೂ ನಗರ ವಾರ್ಡ್ಗಳ ವ್ಯಾಪ್ತಿಯಲ್ಲಿ 10ಸಾವಿರ ಭಾರತ್ ಜೋಡೋ ಯುವ ಸಂಘ ಕ್ಲಬ್ಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರತಿ ಕ್ಲಬ್ಗೆ ತಲಾ ರೂ.10 ಲಕ್ಷ ಅನುದಾನದಂತೆ, ಒಟ್ಟು ₹1000 ಕೋಟಿ ಒದಗಿಸಲಾಗುವುದು.
◆ 2400 ಚದರಡಿವರೆಗಿನ (+10 ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಜಿ+2 ಅಂತಸ್ತಿನ ವಸತಿ ಕಟ್ಟಡಗಳು ಅಥವಾ ಸ್ಕಿಲ್ಡ್ ಪಾರ್ಕಿಂಗ್ +3 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ 31 ಮೇ 2026ರ ಒಳಗಾಗಿ ಅರ್ಜಿ ಸಲ್ಲಿಸಿದವರಿಗೆ ವಿದ್ಯುತ್ ಸಂಪರ್ಕ ಪಡೆಯಲು ಒಂದು ಬಾರಿಯ ಸ್ವಾಧೀನಾನುಭವ ಪ್ರಮಾಣ ಪತ್ರ ವಿನಾಯಿತಿ ಸೌಲಭ್ಯ ಒದಗಿಸಲಾಗುವುದು.
◆ ರಾಜ್ಯದಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಕಾನೂನು ಮತ್ತು ನಿಯಮಾವಳಿಗಳನ್ನು ಸರಳೀಕರಣಗೊಳಿಸುವ ಮೂಲಕ ಅರ್ಹ ಆಸ್ತಿಗಳನ್ನು ಬಿ ಖಾತಾದಿಂದ ಎ- ಖಾತಾ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗುವುದು. ಈ ಮೂಲಕ ನಾಗರಿಕರಿಗೆ ಆಸ್ತಿಪತ್ರ ಪಡೆಯಲು ಸಾಧ್ಯವಾಗಲಿದ್ದು, ಭೂಮಿಯ ನೈಜ ಮೌಲ್ಯದ ಅರಿವಾಗಲಿದೆ.
◆ ಗ್ರೇಟರ್ ಬೆಂಗಳೂರು (ಜಿಬಿಎ) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಕಾರ್ಯಕ್ರಮಗಳ ಜೊತೆಯಲ್ಲಿ ಹೆಚ್ಚುವರಿಯಾಗಿ ರೂ.3000 ಕೋಟಿ ವೆಚ್ಚದಲ್ಲಿ ವಾರ್ಡ್ ರಸ್ತೆಗಳು ಸೇರಿದಂತೆ ರಸ್ತೆ ಮೂಲಸೌಲಭ್ಯ ಅಭಿವೃದ್ಧಿ ಕೈಗೊಳ್ಳಲಾಗುವುದು.
ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ @DKShivakumar ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡುವ ನಿರ್ಣಯವನ್ನು ಕೈಗೊಳ್ಳಲಾಗಿದೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಎಲ್ಲಾ ಹಂತದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದ್ದು, ಇದಕ್ಕಾಗಿ ಸಂಬಂಧಪಟ್ಟ ಅರ್ಜಿ ವಿತರಣೆಯ ಬಗ್ಗೆ ಸಾರಿಗೆ ಇಲಾಖೆಯು ಸದ್ಯದಲ್ಲಿಯೇ ಕ್ರಮ ಕೈಗೊಳ್ಳಲಿದೆ.
#CabinetDecisions
Bengaluru: Karnataka CM D.K. Shivakumar says, "Unemployed people looking for jobs should register with the government. We will talk to companies and make arrangements to provide them with the jobs they need."
ಕರ್ನಾಟಕ ರಾಜ್ಯದ ಗೌರವಾನ್ವಿತ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಆತ್ಮೀಯರಾದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು.
ನಿಮ್ಮ ದೂರದರ್ಶಿತ್ವದ ನಾಯಕತ್ವದಲ್ಲಿ ಕರ್ನಾಟಕವು ಪ್ರಗತಿ ಮತ್ತು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಿ ಎಂದು ಆಶಿಸುತ್ತೇನೆ. ಜನಸಾಮಾನ್ಯರ ಕಲ್ಯಾಣಕ್ಕಾಗಿ ಕೈಜೋಡಿಸಿ ಮುನ್ನಡೆಯೋಣ. ಪ್ರಗತಿಪರ ಆಡಳಿತಕ್ಕೆ ಶುಭ ಹಾರೈಕೆಗಳು.
#satishjarkiholi #bengaluru
ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಮತೊಮ್ಮೆ ಜನಸೇವೆ ಮಾಡಲು ಅವಕಾಶ ಕಲ್ಪಿಸಿದ ಕಾಂಗ್ರೆಸ್ ಪಕ್ಷಕ್ಕೆ ಹೃದಯಪೂರ್ವಕ ಧನ್ಯವಾದಗಳು.
ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಅವರು ನೀಡಿದ ಜವಾಬ್ದಾರಿಯನ್ನು ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಪೂರೈಸಿದ್ದೇನೆ. ಅದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಐಟಿಬಿಟಿ ಇಲಾಖೆಯ ಪ್ರಗತಿಯೇ ಸಾಕ್ಷಿ.
ಪಂಚಾಯತ್ ವಿಕೇದ್ರೀಕರಣದಲ್ಲಿ ದೇಶಕ್ಕೆ ಕರ್ನಾಟಕವು ನಂಬರ್ ಒನ್ ಸ್ಥಾನ ಪಡೆದಿದೆ. ಗ್ರಾಮಪಂಚಾಯತಿಗಳಲ್ಲಿ ತೆರಿಗೆ ಸಂಗ್ರಹದಲ್ಲಿಯೂ ದೇಶಕ್ಕೆ ಮಾದರಿಯಾಗಿದೆ. ಇದಲ್ಲದೆ ಪಿಡಿಒ ನೌಕರರ ವರ್ಗಾವಣೆಯನ್ನು ಸಹ ಪಾರದರ್ಶಕವಾಗಿ ಮಾಡಿ ಯಶಸ್ವಿಯಾಗಿದ್ದಾರೆ. ಇನ್ನು ಗ್ರಾಮೀಣ ಯುವಜನತೆಗಾಗಿ ಗ್ರಂಥಾಲಯಗಳನ್ನು ಡಿಜಿಟಲ್ ಸ್ಪರ್ಶ ನೀಡಿ ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ನರೇಗಾ ಯೋಜನೆಯಡಿ ಕಾರ್ಮಿಕರ ಮಕ್ಕಳ ಲಾಲನೆ ಮತ್ತು ಪೋಷಣೆಗಾಗಿ ಕೂಸಿನ ಮನೆ ಪ್ರಾರಂಭಿಸಲಾಗಿದೆ. ಇದರೊಂದಿಗೆ ಐಟಿಬಿಟಿ ಇಲಾಖೆಯಡಿ ಬೆಂಗಳೂರಿನ ಆಚೆಗೆ ಉದ್ಯಮವನ್ನು ಬೆಂಬಲಿಸಲು ಲೀಪ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದೆಲ್ಲವನ್ನು ಗಣನೆಗೆ ತೆಗೆದುಕೊಂಡು ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸಿದ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಧನ್ಯವಾದಗಳು.
ಇದೀಗ ನೂತನ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಭಾಗವಾಗಿರುವುದು ನಿಜಕ್ಕೂ ಸಂತಸ ನೀಡಿದೆ. ಪಕ್ಷ ಹಾಗೂ ಮುಖ್ಯಮಂತ್ರಿಗಳು ವಹಿಸುವ ಯಾವುದೇ ಹೊಣೆಗಾರಿಕೆಯನ್ನು ನಿಭಾಯಿಸಲು ನಾನು ಬದ್ಧನಾಗಿರುತ್ತೇನೆ.