"ಸಂಚಾರ ಸಲಹೆ"
ಬಿಹೆಚ್ಇಎಲ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಯಶವಂತಪುರ ವೃತ್ತ ಕಡೆಗೆ ನಿಧಾನಗತಿಯ ಸಂಚಾರವಿದೆ.
"Traffic advisory"
Due to a vehicle breakdown near BHEL towards Yeshwanthpur Circle is having slow-moving traffic.
ಈ ದಿನಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು ಎಚ್ಎಸ್ಆರ್ ಸಂಚಾರ ಉಪ ವಿಭಾಗ ರವರ ಅಧ್ಯಕ್ಷತೆಯಲ್ಲಿ“ಸಂಚಾರ ಸಂಪರ್ಕ ದಿವಸ” ಕಾರ್ಯಕ್ರಮವನ್ನು ಆಯೋಜಿಸಿ ನಾಗರೀಕರಿಂದ ಸುಗಮ ಸಂಚಾರಕ್ಕೆ ಸಂಬಂದಿಸಿದಂತೆ ಸಲಹೆಗಳು,ಅಹವಾಲುಗಳು , ದೂರುಗಳು, ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು
ಶಿಕ್ಷಣ, ಜಾಗೃತಿ ಮತ್ತು ಜವಾಬ್ದಾರಿಯುತ ನಡವಳಿಕೆಯ ಮೂಲಕ ರಸ್ತೆ ಸುರಕ್ಷತೆಯ ಪ್ರಚಾರ. ವಿಶೇಷವಾಗಿ ಮಕ್ಕಳು ಮತ್ತು ಯುವ ರಸ್ತೆ ಬಳಕೆದಾರರಲ್ಲಿ ಸಂಚಾರ ನಿಯಮಗಳು, ರಸ್ತೆ ಶಿಸ್ತು ಮತ್ತು ಸುರಕ್ಷಿತ ಸಂಚಾರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಮೀಸಲಾದ 'ಸಂಚಾರ ಉದ್ಯಾನವನ' (Traffic Park) ಶಂಕುಸ್ಥಾಪನೆ ಸಮಾರಂಭವನ್ನು ಬೆಂಗಳೂರು ಸಂಚಾರ ಪೊಲೀಸರು ಆಯೋಜಿಸಲಿದ್ದಾರೆ. ಈ ಸಮಾರಂಭವು ಕರ್ನಾಟಕ ಸರ್ಕಾರದ ಮಾನ್ಯ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರ ಶುಭ ಹಸ್ತದಿಂದ, ಶ್ರೀ ರಾಜೇಂದರ್ ಕುಮಾರ್ ಕಟಾರಿಯಾ, ಐ.ಎ.ಎಸ್. ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ಕರ್ನಾಟಕ ಸರ್ಕಾರ , ಡಾ. ಎಂ. ಎ. ಸಲೀಂ, ಐ.ಪಿ.ಎಸ್. ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು (ಡಿಜಿ ಮತ್ತು ಐಜಿಪಿ), ಕರ್ನಾಟಕ ರಾಜ್ಯ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಕಾರ್ತಿಕ್ ರೆಡ್ಡಿ, ಐ.ಪಿ.ಎಸ್. ಹಾಗೂ ಸರ್ಕಾರದ ಮತ್ತು ಪೊಲೀಸ್ ಇಲಾಖೆಯ ಇತರ ಹಿರಿಯ ಅಧಿಕಾರಿಗಳ ಘನ ಉಪಸ್ಥಿತಿಯಲ್ಲಿ ನೆರವೇರಲಿದೆ. ಇದು ಜವಾಬ್ದಾರಿಯುತ ರಸ್ತೆ ಬಳಕೆದಾರರನ್ನು ರೂಪಿಸುವ ಮತ್ತು ಬೆಂಗಳೂರಿನಲ್ಲಿ ರಸ್ತೆ ಸುರಕ್ಷತೆಯ ಸಂಸ್ಕೃತಿಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಇಟ್ಟಿರುವ ಪ್ರಮುಖ ಹೆಜ್ಜೆಯಾಗಿದೆ.
Promoting road safety through education, awareness and responsible behaviour. Bengaluru Traffic Police will mark the Foundation Stone Laying Ceremony of the Traffic Park, envisioned as a dedicated space to create greater awareness about traffic rules, road discipline and safe mobility, particularly among children and young road users. The ceremony will be graced by Shri Priyank Kharge, Hon’ble Minister, Government of Karnataka, Shri Rajender Kumar Kataria, IAS, Additional Chief Secretary to Government, Home Department, Dr. M. A. Saleem, IPS, Director General & Inspector General of Police, Karnataka State, in the presence of Shri Seemant Kumar Singh, IPS, Commissioner of Police, Bengaluru City, Shri Karthik Reddy, IPS, Joint Commissioner of Police (Traffic), and other senior Government and Police officials. A significant step towards nurturing responsible road users and building a stronger culture of road safety in Bengaluru.
#BengaluruTrafficPolice #TrafficPark #RoadSafety #TrafficAware #SafeBengaluru
@CPBlr@seemantsingh96@DgpKarnataka@KarnatakaCops@Jointcptraffic@CMofKarnataka@PriyankKharge@hondaindiacsr
"ಸಂಚಾರ ಸಲಹೆ"
ಮಹಾಲಕ್ಷ್ಮಿ ಲೇಔಟ್ ಬಸ್ ನಿಲ್ದಾಣದ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಮಹಾಲಕ್ಷ್ಮಿ ಲೇಔಟ್ ಮೆಟ್ರೋ ಕಡೆಗೆ ನಿಧಾನಗತಿಯ ಸಂಚಾರವಿದೆ.
"Traffic advisory"
Due to a vehicle breakdown near Mahalaxmi layout bus stop towards, Mahalaxmi Layout metro station is having slow-moving traffic.
ಇಂದು ಸಿಎಂಪಿ ಸೆಂಟರ್ ನ ಮಿಲಿಟರಿ ಪೊಲೀಸ್ ಸಿಬ್ಬಂದಿಗಳು, ಸಂಚಾರ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಸುಗಮ ಸಂಚಾರ ಹಾಗೂ ರಸ್ತೆ ಸುರಕ್ಷತೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ, ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಸಹಾಯಕ ಸಬ್-ಇನ್ಸ್ಪೆಕ್ಟರ್ರವರು ಮಿಲಿಟರಿ ಪೊಲೀಸ್ ಸಿಬ್ಬಂದಿಗಳಿಗೆ ಉಪನ್ಯಾಸ ನೀಡಿದರು.
ಕೆಲವೇ ಕ್ಷಣಗಳ ಗಮನವು ಮಹತ್ವದ ಬದಲಾವಣೆಯನ್ನು ತರಬಲ್ಲದು.
ನಮ್ಮ ಹೊಯ್ಸಳ ತಂಡಗಳು ಕಾಣೆಯಾದ ಮಕ್ಕಳನ್ನು ಅವರ ಕುಟುಂಬಗಳೊಂದಿಗೆ ಪುನರ್ಮಿಲನಗೊಳಿಸಲು ನೆರವಾಗಿವೆ. ಮಗು ಕಾಣೆಯಾದಲ್ಲಿ ಅಥವಾ ಯಾವುದೇ ಮಗು ಅಸಹಾಯಕ ಸ್ಥಿತಿಯಲ್ಲಿ ಅಥವಾ ದಾರಿ ತಪ್ಪಿದಂತೆ ಕಂಡುಬಂದಲ್ಲಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.
ತುರ್ತು ಸಹಾಯಕ್ಕಾಗಿ 112 ಸಂಖ್ಯೆಗೆ ಕರೆ ಮಾಡಿ.
ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಹತ್ತಿರದಲ್ಲೇ ನೋಡಿಕೊಳ್ಳಿ. ಎಚ್ಚರಿಕೆಯಿಂದಿರಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ.
A few moments of attention can make all the difference.
Our Hoysala teams have helped reunite missing children with their families. If a child goes missing or you spot a child who appears lost or in distress, inform the police immediately.
Dial 112 for emergency assistance.
Keep children close. Stay alert. Act quickly.
#BengaluruCityPolice #Dial112 #ChildSafety #Hoysala
@CPBlr@seemantsingh96@DgpKarnataka@KarnatakaCops
ಬೆಂಗಳೂರು ನಗರದಲ್ಲಿ ಸುರಕ್ಷಿತ ಹಾಗೂ ಸುಗಮ ಸಂಚಾರ ನಿರ್ವಹಣೆಯನ್ನು ಕಲ್ಪಿಸುವ ಉದ್ದೇಶದಿಂದ, ಸಂಚಾರ ಸುಗಮತೆ, ನಿಯಮಗಳ ಪರಿಣಾಮಕಾರಿ ಜಾರಿ ಮತ್ತು ತುರ್ತು ಸ್ಪಂದನಾ ಸಾಮರ್ಥ್ಯವನ್ನು ಹೆಚ್ಚಿಸಲು 'ಹೋಂಡಾ ಇಂಡಿಯಾ ಫೌಂಡೇಶನ್' ವತಿಯಿಂದ ನೀಡಲಾದ 20 ಸಂಚಾರ ಗಸ್ತು ವಾಹನಗಳಿಗೆ (Traffic Patrol Vehicles) ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ರವರು ಹಸಿರು ನಿಶಾನೆ ತೋರಿಸುವ ಮುಖಾಂತರ ಚಾಲನೆಗೊಳಿಸಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀ ರಾಜೇಂದರ್ ಕುಮಾರ್ ಕಟಾರಿಯಾ, ಐ.ಎ.ಎಸ್. ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ಕರ್ನಾಟಕ ಸರ್ಕಾರ , ಡಾ. ಎಂ. ಎ. ಸಲೀಂ, ಐ.ಪಿ.ಎಸ್. ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು (ಡಿಜಿ ಮತ್ತು ಐಜಿಪಿ), ಕರ್ನಾಟಕ ರಾಜ್ಯ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಕಾರ್ತಿಕ್ ರೆಡ್ಡಿ, ಐ.ಪಿ.ಎಸ್. ಹಾಗೂ ಹೋಂಡಾ ಮೋಟಾರ್ಸೈಕಲ್ & ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಶ್ರೀ ಪ್ರಭು ನಾಗರಾಜ್, ಆಪರೇಟಿಂಗ್ ಹೆಡ್ ಕಾರ್ಪೊರೇಟ್ ಅಫೇರ್ಸ್, ಶ್ರೀ ವಿಶಾಲ್ ಸಕ್ಸೆನಾ, ಶ್ರೀ ಶಿಶಿರ್ ಚತುರ್ವೇಧಿ ರವರುಗಳೊಂದಿಗೆ ಇತರೆ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರುಗಳು ಭಾಗವಹಿಸಿದ್ದರು.
Strengthening mobility and on-ground traffic enforcement across Bengaluru.
Bengaluru Traffic Police flagged off 20 Traffic Patrol Vehicles provided by Honda India Foundation, enhancing mobility, enforcement and response capabilities for safer and smoother traffic management across the city.
The initiative was launched in the presence of Shri Priyank Kharge, Hon’ble Minister, Government of Karnataka, Shri Rajender Kumar Kataria, IAS, Additional Chief Secretary to Government, Home Department, Dr. M. A. Saleem, IPS, Director General & Inspector General of Police, Karnataka State, Shri Seemant Kumar Singh, IPS, Commissioner of Police, Bengaluru City, Shri Karthik Reddy, IPS, Joint Commissioner of Police (Traffic), Shri Prabhu Nagaraj, Operating Head Corporate Affairs, Honda Motorcycle & Scooter India Pvt. Ltd., along with his team and other senior officials.
A meaningful CSR partnership towards safer roads and more responsive traffic policing in Bengaluru.
#BengaluruTrafficPolice #HondaIndiaFoundation #TrafficPatrol #RoadSafety #SafeBengaluru
@CPBlr@seemantsingh96@DgpKarnataka@KarnatakaCops@Jointcptraffic@CMofKarnataka@PriyankKharge@hondaindiacsr
ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯ ಎರಡು ಪ್ರಮುಖ ರಸ್ತೆ ಸುರಕ್ಷತಾ ಉಪಕ್ರಮಗಳ ಮುಖ್ಯಾಂಶಗಳು
ರಸ್ತೆ ಸುರಕ್ಷತಾ ಶಿಕ್ಷಣ ಹಾಗೂ ಜಾಗೃತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಚಾರ ಉದ್ಯಾನವನಕ್ಕೆ (ಟ್ರಾಫಿಕ್ ಪಾರ್ಕ್) ಶಂಕುಸ್ಥಾಪನೆ ನೆರವೇರಿಸಲಾಯಿತು. ಇದರೊಂದಿಗೆ, ನಗರದಾದ್ಯಂತ ಸಂಚಾರ ನಿರ್ವಹಣೆ, ಕಟ್ಟುನಿಟ್ಟಿನ ನಿಯಮ ಜಾರಿ ಮತ್ತು ಸ್ಥಳದಲ್ಲೇ ತುರ್ತು ಸ್ಪಂದನೆಯನ್ನು ಸುಧಾರಿಸಲು ಹೋಂಡಾ ಇಂಡಿಯಾ ಫೌಂಡೇಶನ್ ಸಹಯೋಗದ 20 ಸಂಚಾರ ಗಸ್ತು ವಾಹನಗಳಿಗೆ ಚಾಲನೆ ನೀಡಲಾಯಿತು.
ಬೆಂಗಳೂರಿನಲ್ಲಿ ಸುರಕ್ಷಿತ ರಸ್ತೆಗಳು, ಸಮರ್ಥ ಜಾಗೃತಿ ಮತ್ತು ಉತ್ತಮ ಸಂಚಾರ ನಿರ್ವಹಣೆಯ ಕಡೆಗೆ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
Highlights from two key road-safety initiatives by Bengaluru Traffic Police
The foundation stone for the Traffic Park was laid to strengthen road-safety education and awareness, while 20 Traffic Patrol Vehicles supported by Honda India Foundation were flagged off to enhance mobility, enforcement and on-ground response across the city.
A step forward towards safer roads, stronger awareness and better traffic management in Bengaluru.
#BengaluruTrafficPolice #RoadSafety #TrafficPark #HondaIndiaFoundation #SafeBengaluru
@CPBlr@seemantsingh96@DgpKarnataka@KarnatakaCops@CMofKarnataka@Jointcptraffic@PriyankKharge@hondaindiacsr
Expert Committee Meeting on India–West Indies T20 International
Bengaluru City Police Commissioner Shri Seemant Kumar Singh, IPS, chaired an Expert Committee Meeting at M. Chinnaswamy Stadium on 12 October 2026 to review preparations for the India–West Indies T20 International scheduled for 17 October 2026.
Mr. Maheshwar Rao M, Chief Commissioner, GBA, Bengaluru City along with senior officers from Bengaluru City Police, Traffic Police, KSCA, and concerned departments participated in discussions on security, traffic management, emergency response, and inter-departmental coordination to ensure the safe and smooth conduct of the match.
#BengaluruCityPolice #IndiaVsWestIndies #T20Cricket
India vs West Indies | T20 International
Heading to the stadium? Plan ahead and help make match day safe for everyone.
Use public transport wherever possible, arrive early, follow designated entry and exit routes, avoid overcrowding, and rely only on verified information.
Cheer responsibly. Stay safe. Avoid panic.
#INDvsWI #T20International #MatchDaySafety #BengaluruCityPolice
ರಾಷ್ಟ್ರೀಯ ಏಕತೆಗಾಗಿ ಒಗ್ಗೂಡಿಸೋಣ. ಮಾದಕ - ವಸ್ತು ಮುಕ್ತ ಭಾರತಕ್ಕಾಗಿ ಸಾಗೋಣ.
ರಾಷ್ಟ್ರೀಯ ಏಕತಾ ದಿವಸ್ 2026ರ ಉಪಕ್ರಮದ ಭಾಗವಾಗಿ, ಗೌರವಾನ್ವಿತ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು ಅಕ್ಟೋಬರ್ 15ರಂದು ಬೆಂಗಳೂರಿನ ವಿಧಾನ ಸೌಧದಲ್ಲಿ ಕರ್ನಾಟಕ ಪೊಲೀಸ್ ರಾಷ್ಟ್ರೀಯ ಮೋಟಾರ್ಸೈಕಲ್ ರ್ಯಾಲಿಗೆ ಚಾಲನೆ ನೀಡಿದರು. ಈ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಡಿಜಿ ಮತ್ತು ಐಜಿಪಿ ಡಾ. ಎಮ್. ಎ. ಸಲೀಂ, ಐಪಿಎಸ್, ಅಪರ ಮುಖ್ಯ ಕಾರ್ಯದರ್ಶಿ (ACS) ಶ್ರೀ ಕುಮಾರ್ ಕಟಾರಿಯಾ ಹಾಗೂ ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರು ನಗರ ಪೊಲೀಸ್, ಕೆಎಸ್ಆರ್ಪಿ, ಸಿಆರ್ಪಿಎಫ್ ಮತ್ತು ಎನ್ಸಿಬಿ ಸೇರಿದಂತೆ ವಿವಿಧ ಪೊಲೀಸ್ ಘಟಕಗಳನ್ನು ಪ್ರತಿನಿಧಿಸುವ ಕರ್ನಾಟಕದ ಒಟ್ಟು 200 ಪೊಲೀಸ್ ಸಿಬ್ಬಂದಿ ಹಾಗೂ 'ಬೈಕರ್ಸ್ ಯೂನಿಟಿ ಕಾಲ್ಸ್ ಇಂಡಿಯಾ' ಸಂಸ್ಥೆಯ ಸದಸ್ಯರು ಈ ರ್ಯಾಲಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
"ಮಾದಕ ವಸ್ತುಗಳ ವಿರುದ್ಧದ ಹೋರಾಟ" ಎಂಬುದೇ ಈ ರ್ಯಾಲಿಯ ಪ್ರಮುಖ ಧ್ಯೇಯವಾಗಿದ್ದು, ಮಾದಕ ವಸ್ತುಗಳ ದುರ್ಬಳಕೆ ಹಾಗೂ ಕಳ್ಳಸಾಗಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವ ಸಮೂಹವನ್ನು ರಕ್ಷಿಸುವುದು ಮತ್ತು ಸುರಕ್ಷಿತ, ಆರೋಗ್ಯಕರ ಹಾಗೂ ಮಾದಕವಸ್ತು -ಮುಕ್ತ ಸಮಾಜವನ್ನು ನಿರ್ಮಿಸುವಲ್ಲಿ ಜನಸಾಮಾನ್ಯರ ಸಹಭಾಗಿತ್ವವನ್ನು ಕೋರುವುದು ಇದರ ಮುಖ್ಯ ಉದ್ದೇಶವಾಗಿದೆ.
ರಾಷ್ಟ್ರೀಯ ಏಕತಾ ದಿವಸ್ ಆಚರಣೆಗಳಲ್ಲಿ ಪಾಲ್ಗೊಳ್ಳಲು ಕರ್ನಾಟಕ ಪೊಲೀಸ್ ತಂಡವು ಗುಜರಾತಿನ ಏಕ್ತಾ ನಗರದತ್ತ ತನ್ನ ಪಯಣವನ್ನು ಕೈಗೊಂಡಿದ್ದು, ಇದು ರಾಷ್ಟ್ರೀಯ ಏಕತೆ ಮತ್ತು ಮಾದಕ ವಸ್ತುಗಳ ನಿರ್ಮೂಲನೆಗೆ ತನ್ನ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.
ಒಂದು ರಾಷ್ಟ್ರ. ಒಂದು ಮಿಷನ್. ಮಾದಕವಸ್ತು -ಮುಕ್ತ ಭವಿಷ್ಯ.
United for National Unity. Riding for a Drug-Free India.
Hon’ble Home Minister Shri Priyank Kharge flagged off the Karnataka Police National Motorcycle Rally on October 15 at Vidhana Soudha, Bengaluru, as part of the National Unity Day 2026 initiative, in the presence of Dr. M. A. Saleem, IPS, DG & IGP, Karnataka, Shri Kumar Kataria, ACS, and other senior officers.
A total of 200 police personnel from Karnataka, representing various police units, including Bengaluru City Police, KSRP, CRPF and NCB, along with members of Bikers Unity Calls India, participated in the rally.
With “Fight Against Drugs” as its core theme, the rally aimed to raise awareness about drug abuse, prevent drug trafficking and misuse, and encourage public participation in protecting the youth and building a safe, healthy and drug-free society.
The Karnataka Police team embarked on its journey towards Ekta Nagar, Gujarat, to participate in the National Unity Day celebrations, reaffirming its commitment to national unity and the fight against drugs.
One Nation. One Mission. A Drug-Free Future.
#BengaluruCityPolice #NationalUnityDay #FightAgainstDrugs
@CPBlr@seemantsingh96@DgpKarnataka@KarnatakaCops@Jointcptraffic@CMofKarnataka@PriyankKharge
ಶ್ರೇಷ್ಠತೆಗೆ ಪ್ರೋತ್ಸಾಹ, ಆಕಾಂಕ್ಷೆಗಳಿಗೆ ಬೆಂಬಲ.
ಬೆಂಗಳೂರು ನಗರ ಪೊಲೀಸ್ ಇಲಾಖೆಯ ವತಿಯಿಂದ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗೌರವಿಸುವ ಸಲುವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 'ಪ್ರೋತ್ಸಾಹಕ ಬಹುಮಾನ ವಿತರಣಾ ಸಮಾರಂಭ'ವನ್ನು ಆಯೋಜಿಸಲಾಗಿತ್ತು.
ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್. ಅವರು, 2025–26ನೇ ಶೈಕ್ಷಣಿಕ ಸಾಲಿನಲ್ಲಿ ಶೇಕಡಾ 90% ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ 69 ಎಸ್ಎಸ್ಎಲ್ಸಿ ಮತ್ತು 74 ಪಿಯುಸಿ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಪ್ರದಾನ ಮಾಡಿದರು.
ಪೊಲೀಸ್ ಕಲ್ಯಾಣ ನಿಧಿಯ ಅಡಿಯಲ್ಲಿ, ಎಸ್ಎಸ್ಎಲ್ಸಿ/ಪಿಯುಸಿ ವಿಭಾಗದ 143 ಸಾಧಕರು ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ 131 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 274 ವಿದ್ಯಾರ್ಥಿಗಳಿಗೆ ₹58.30 ಲಕ್ಷ ಮೊತ್ತದ ಪ್ರೋತ್ಸಾಹಕ ಅನುದಾನವನ್ನು ವಿಸ್ತರಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಇಲಾಖೆಯು ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಅವರ ಮುಂದಿನ ಶೈಕ್ಷಣಿಕ ಪಯಣಕ್ಕೆ ಶುಭ ಹಾರೈಸುತ್ತದೆ.
Encouraging excellence, supporting aspirations.
Bengaluru City Police organised an Incentive Award Distribution Programme at the Commissioner’s Office to recognise the academic achievements of children of police officers and personnel.
Commissioner of Police Shri Seemant Kumar Singh, IPS, presented awards to 69 SSLC and 74 PUC students who secured 90% and above in the 2025–26 academic year.
Through the Police Welfare Fund, a total of ₹58.30 lakh in incentive awards has been extended to 274 students, including 143 SSLC/PUC achievers and 131 students pursuing higher education.
Bengaluru City Police congratulates all the students and wishes them continued success in their academic journey.
@CPBlr@seemantsingh96@DgpKarnataka@KarnatakaCops
ಸಾರ್ವಜನಿಕ ರಸ್ತೆಗಳಲ್ಲಿ ವಾಹನದ ವೀಲಿಂಗ್ ಮಾಡುವುದು ಅಪಾಯಕಾರಿ ಹಾಗೂ ಕಾನೂನುಬಾಹಿರ ಕೂಡ.
ಕೆಲವೇ ಸೆಕೆಂಡುಗಳ ಕ್ಷಣಿಕ ರೋಮಾಂಚನವು ಸವಾರರು, ಪಾದಚಾರಿಗಳು ಮತ್ತು ಇತರ ರಸ್ತೆ ಬಳಕೆದಾರರ ಜೀವಕ್ಕೆ ಕಂಟಕವಾಗಬಹುದು. ಸಾಹಸ ಪ್ರದರ್ಶನಗಳಿಗಿಂತ ಸುರಕ್ಷತೆಗೆ ಆದ್ಯತೆ ನೀಡಿ ಹಾಗೂ ಜವಾಬ್ದಾರಿಯುತವಾಗಿ ವಾಹನ ಚಲಾಯಿಸಿ.
ಸುರಕ್ಷಿತವಾಗಿ ವಾಹನ ಚಲಾಯಿಸಿ. ವೀಲಿಂಗ್ ಮಾಡಬೇಡಿ.
Wheeling on public roads is dangerous and illegal.
A few seconds of thrill can put riders, pedestrians and other road users at risk. Choose safety over stunts and ride responsibly.
Ride Safe. Don’t Wheel.
#BengaluruTrafficPolice #RoadSafety #SafeRiding
ಬೆಂಗಳೂರು ನಗರದ ಸಂಚಾರ ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಅರಿತುಕೊಳ್ಳಲು ಸಂಚಾರ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿ!
"ಒಂದು ದಿನದ ಮಟ್ಟಿಗೆ ಸಂಚಾರ ಪೊಲೀಸ್" ಆಗಿ ಉಪಕ್ರಮದ ಮೂಲಕ, ಸಂಚಾರ ನಿರ್ವಹಣೆಯ ಸವಾಲುಗಳು, ರಸ್ತೆ ಸುರಕ್ಷತೆಯ ಅನುಷ್ಠಾನ ಮತ್ತು ಬೆಂಗಳೂರು ನಗರದ ವಾಹನ ದಟ್ಟಣೆಯನ್ನು ಸುಗಮವಾಗಿ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಅನುಭವಿಸಿ.
ಸಂಚಾರ ನಿರ್ವಹಣೆಯ ಸವಾಲುಗಳನ್ನು ಅರಿಯಿರಿ. ಸಮವಸ್ತ್ರಕ್ಕೆ ಗೌರವ ನೀಡಿ. ಜವಾಬ್ದಾರಿಯುತ ರಸ್ತೆ ಬಳಕೆದಾರರಾಗಿ.
Step into the shoes of a Traffic COP and experience the responsibility of keeping Bengaluru’s roads safe!
Through Traffic COP for a Day, experience the challenges of managing traffic, enforcing road safety and keeping Bengaluru moving.
Understand the challenges. Respect the uniform. Be a responsible road user.
#BengaluruTrafficPolice #TrafficCOPForADay #RoadSafety #WeServeWeProtect
ಪ್ರತಿಯೊಬ್ಬ ಹೆಣ್ಣುಮಗಳಿಗೂ ಭಯಮುಕ್ತ ಬಾಲ್ಯ, ಕನಸು ಕಾಣುವ ಸ್ವಾತಂತ್ರ್ಯ ಮತ್ತು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಸಾಕಾರಗೊಳಿಸುವ ಅವಕಾಶ ಲಭಿಸಬೇಕು.
ಈ ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಂದು, ಆಕೆಯ ಹಕ್ಕುಗಳನ್ನು ರಕ್ಷಿಸೋಣ, ಆಕೆಯ ಕನಸುಗಳಿಗೆ ಬಲ ತುಂಬೋಣ ಹಾಗೂ ಪ್ರತಿಯೊಬ್ಬ ಹೆಣ್ಣುಮಗುವಿಗೂ ಸುರಕ್ಷಿತ ಮತ್ತು ಸಮಾನತೆಯ ಭವಿಷ್ಯವನ್ನು ನಿರ್ಮಿಸೋಣ.
ಆಕೆಯ ಸುರಕ್ಷತೆ. ಆಕೆಯ ಹಕ್ಕುಗಳು. ಆಕೆಯ ಭವಿಷ್ಯ. ನಮ್ಮ ಹೊಣೆಗಾರಿಕೆ.
Every girl deserves a childhood free from fear, the freedom to dream, and the opportunity to achieve her fullest potential.
This International Day of the Girl Child, let’s protect her rights, empower her dreams, and build a safer, more equal future for every girl.
Her safety. Her rights. Her future. Our responsibility.
#InternationalDayOfTheGirlChild #BengaluruCityPolice #ChildSafety
@CPBlr@seemantsingh96@DgpKarnataka@KarnatakaCops
A group of protesters assembled near K.R. Circle without prior permission or intimation and were taken into preventive custody after declining to relocate to Freedom Park. They were subsequently released.
BCP urges all citizens to follow Hon’ble High Court directions and hold peaceful protests only at Freedom Park, respecting public convenience and order.
We stand with all citizens for their security.
#BengaluruCityPolice #BCP
@CPBlr@seemantsingh96@DgpKarnataka@KarnatakaCops@CMofKarnataka@PriyankKharge