ಬಿಜೆಪಿ ರಾಜ್ಯ ಮುಖಂಡರು ಮಾರ್ಗದರ್ಶಕರು ಆತ್ಮೀಯರು ಶ್ರೀ ಜಗದೀಶ್ ಹಿರೇಮನಿಯವರ ಅಗಲಿಕೆಯಿಂದ ಮನಸ್ಸಿಗೆ ತುಂಬಾ ದುಃಖವಾಗಿದೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬ ವರ್ಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.🙏
ನಾಡಿನ ಸಮಸ್ತ ಜನತೆಗೆ 77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಇಂದು ಭಾರತವು ಸಂವಿಧಾನವನ್ನು ಅಂಗೀಕರಿಸಿದ ದಿನ ನಮ್ಮ ಸಂವಿಧಾನವು ಜಾತಿ-ಮತ ಲಿಂಗ ಧರ್ಮ ಯಾವುದಕ್ಕೂ ಬೆಲೆ ನೀಡದೆ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕನ್ನು ಒದಗಿಸಿದೆ
ಇಂತಹ ಶ್ರೇಷ್ಠ ಸಂವಿಧಾನವನ್ನು ರಚನೆ ಮಾಡಿರುವ ಎಲ್ಲಾ ಮಹನೀಯರನ್ನು ಗೌರವ ಪೂರ್ವಕವಾಗಿ ಸ್ಮರಿಸುತ್ತಾ
🚩🚩ವಿಶ್ವ ಹಿಂದೂ ಪರಿಷತ್ ಬಜರಂಗದಳ 🚩🚩
ಇಂದು ವಿಜಯನಗರ ಜಿಲ್ಲಾ ಬಜರಂಗದಳ ವತಿಯಿಂದ ವಿಜಯನಗರ ಜಿಲ್ಲಾ ಸುರಕ್ಷಾ ಪ್ರಮುಖ್ ಜವಾಬ್ದಾರಿಯನ್ನು ವಯಿಸಿದಂತ ರಾಜ್ಯ ಹಾಗೂ ಜಿಲ್ಲಾ ಅಧ್ಯಕ್ಷರಿಗೆ ಮತ್ತು ತಾಲ್ಲೂಕು ಅಧ್ಯಕ್ಷರಿಗೆ. ಎಲ್ಲಾ ಪದಾಧಿಕಾರಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು 🙏
#ಚಂದ್ರುದೇವಲಾಪುರ
ರಾಷ್ಟ್ರೀಯ ಅಂಚೆ ದಿನ
ಸಾಂಪ್ರದಾಯಿಕ ಅಂಚೆ ಸೇವೆಗಳೊಂದಿಗೆ, ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾದ ಭಾಗವಾಗಿ ಅಂಚೆ ಇಲಾಖೆಯಲ್ಲೂ ಆನ್ ಲೈನ್ ಸೇವೆಗಳು ಲಭ್ಯವಿದೆ.
ಜನೋಪಯೋಗಿ ಯೋಜನೆಗಳ ಪ್ರಯೋಜನ ಪಡೆದು ಅಂಚೆ ಇಲಾಖೆಯ ಅಭಿವೃದ್ಧಿಗೆ ಕೈಜೋಡಿಸೋಣ.
#NationalPostDay
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇಡಿದ ವರವ ನೀಡುವ ಶ್ರೀ ಲಕ್ಷ್ಮಿ ದೇವಿಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರಗೊಳಿಸಿ, ನಾಡನ್ನು ಸದಾ ಸುಭಿಕ್ಷಗೊಳಿಸಲೆಂದು ಪ್ರಾರ್ಥಿಸುತ್ತೇನೆ.
#HappyVaramahalakshmi
ಇಂದು ಅಂತರಾಷ್ಟ್ರೀಯ ಹುಲಿ ದಿನದಂದು, ಕಾಡಿನ ರಾಜ ಹಾಗೂ ನಮ್ಮ ರಾಷ್ಟ್ರೀಯ ಪ್ರಾಣಿಯಾದ ಹುಲಿಯ ಗೌರವಕ್ಕೆ ವಂದನೆಗಳನ್ನು ಸಲ್ಲಿಸೋಣ!
ಬಂಡೀಪುರ, ನಾಗರಹೊಳೆ, ದಾಂಡೇಲಿ-ಅಂಶಿ, ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶಗಳ ಮೂಲಕ ಕರ್ನಾಟಕವು ಹುಲಿಗಳ ಭದ್ರ ಆಶ್ರಯವಾಗಿದೆ.
ನಮ್ಮ ಹುಲಿಗಳನ್ನು ರಕ್ಷಿಸೋಣ, ನಿಸರ್ಗವನ್ನು ಉಳಿಸೋಣ.