ಕಳೆದ ಬಾರಿ 1994ನೇ ಇಸವಿಯಲ್ಲಿ ಮಂಡ್ಯದಲ್ಲಿ 63ನೇ ಕನ್ನಡ ಸಾಹಿತ್ಯ ಸಮ್ಮೇಳನ ಆದಾಗ ನಾನು 2ನೇ ಪಿಯುಸಿ ವಿದ್ಯಾರ್ಥಿ, ಎನ್ ಸಿಸಿ ಕೆಡೆಟ್ ಆಗಿದ್ದೆ. ಖ್ಯಾತ ಸಾಹಿತಿ ಚದುರಂಗ ಸಮ್ಮೇಳನದ ಅಧ್ಯಕ್ಷರಾಗಿದ್ದರು. ನಾನು ಪ್ರಧಾನ ವೇದಿಕೆಯಲ್ಲಿ ಸ್ವಯಂ ಸೇವಕನಾಗಿ ಸಂಭ್ರಮಿಸಿದ್ದೆ. ಈಗ ಮತ್ತೊಂದು ಅವಕಾಶ. ಭಾಗ್ಯ ಎನ್ನಲೇ...ಪುಣ್ಯ ಎನ್ನಲೇ...😊
ನನ್ನ ಮತ್ತು ಕುಟುಂಬದ ಹೆಮ್ಮೆ, ಸಂತೋಷ, ನೆಮ್ಮದಿ, ಆತ್ಮವಿಶ್ವಾಸ ಎಲ್ಲವೂ ಆಗಿದ್ದ ನನ್ನಪ್ಪ ನಮ್ಮನ್ನಗಲಿ ಡಿ.21ಕ್ಕೆ 25 ವರ್ಷ. ಅಣ್ಣನ ನೆನಪು ನನ್ನ ಅಭೌತಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ನನ್ನ ಆತ್ಮಸಾಕ್ಷಿಯಾಗಿ ಚಾಲಕ ಶಕ್ತಿಯಾಗಿದೆ. ಅಣ್ಣನ ನಂತರ ಅಕ್ಕ ನಮ್ಮನ್ನೆಲ್ಲ ದಣಿವರಿಯದೆ ಮುನ್ನಡೆಸುತ್ತಿದ್ದಾರೆ.
ಆತ್ಮೀಯರೆ,
ನನ್ನ ಇನ್ ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ದಯವಿಟ್ಟು ಆ ನಕಲಿ ಖಾತೆಯ ಮುಖಾಂತರ ಬರುವ ಯಾವುದೇ ಕೋರಿಕೆಯನ್ನು ಮನ್ನಿಸಬಾರದು ಎಂದು ಕೋರುತ್ತೇನೆ.
ನಿಮ್ಮ ಪ್ರೀತಿಯ
ಚಂದ್ರಶೇಖರ ದ.ಕೋ.ಹಳ್ಳಿ