ಗಮನಿಸಿ. ಧ್ವನಿ ಎತ್ತಿ. ಸುರಕ್ಷಿತವಾಗಿರಿ.
ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಿಮ್ಮ ಗಮನಕ್ಕೆ ಬಂದಲ್ಲಿ, ತಕ್ಷಣವೇ ಬೆಂಗಳೂರು ನಗರ ಪೊಲೀಸರಿಗೆ ಮಾಹಿತಿ ನೀಡಿ. ನೀವು ನೀಡುವ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಲಾಗುವುದು.
ಸುರಕ್ಷಿತ ಮತ್ತು ಮಾದಕ ದ್ರವ್ಯ ಮುಕ್ತ ಬೆಂಗಳೂರಿನ ನಿರ್ಮಾಣಕ್ಕಾಗಿ ನಾಗರಿಕರೆಲ್ಲರೂ ಕೈಜೋಡಿಸಬೇಕಾಗಿ ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್ ಅವರು ಕರೆ ನೀಡಿದ್ದಾರೆ.
ನಿಮ್ಮ ಒಂದು ಸಣ್ಣ ಮಾಹಿತಿ, ಒಂದು ಅಮೂಲ್ಯ ಜೀವನವನ್ನು ರಕ್ಷಿಸಬಹುದು.
See it. Speak up. Stay safe.
If you come across anyone involved in drug-related activities, inform Bengaluru City Police. Your information will be kept safe and confidential.
Commissioner of Police, Shri Seemant Kumar Singh, IPS, urges citizens to stand together for a safer, drug-free Bengaluru.
Your information can help protect a life.
#DrugFreeBengaluru #SayNoToDrugs #BengaluruCityPolice #DrugAwareness #WeServeWeProtect
@CPBlr@seemantsingh96@DgpKarnataka@KarnatakaCops
ಬೆಂಗಳೂರು ನಗರದ ಪೊಲೀಸ್ ಠಾಣೆಗಳ ಮುಂದೆ ವರ್ಷಗಳಿಂದ ನಿಂತಿದ್ದ ಹಳೆಯ ಹಾಗೂ ವಾರಸುದಾರರಿಲ್ಲದ ವಾಹನಗಳ ತೆರವು ಕಾರ್ಯಾಚರಣೆ ಈಗ ಚುರುಕುಗೊಂಡಿದೆ!
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಹಯೋಗದೊಂದಿಗೆ ಜಾಗವನ್ನು ನಿಗದಿಪಡಿಸಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಂದಾಯ ಇಲಾಖೆಯು ಇದರ ವಿಸ್ತರಣೆಗಾಗಿ 26 ಎಕರೆ ಜಾಗವನ್ನು ಒದಗಿಸಿದೆ.
ದಿನಾಂಕ 16-09-2026 ರಂದು ಜಯನಗರ ಪೊಲೀಸ್ ಠಾಣೆ ಮುಂಭಾಗದಿಂದ ಸುಮಾರು 111 ಹಳೆ ವಾಹನಗಳನ್ನು ಯಶಸ್ವಿಯಾಗಿ ತೆರವುಗೊಳಿಸಿ, ರಾಗಿಗುಡ್ಡದಲ್ಲಿ GBA ನಿಗದಿಪಡಿಸಿರುವ ಅಧಿಕೃತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲು ಮತ್ತು ಠಾಣೆಗಳ ಆವರಣವನ್ನು ಸ್ವಚ್ಛವಾಗಿಡಲು ನಮ್ಮ ಈ ಹೆಜ್ಜೆ ನಿರಂತರವಾಗಿ ಮುಂದುವರಿಯಲಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
#BengaluruPolice #Jayanagar #SafeBengaluru #ClearingOperations #GBA
ಬೆಂಗಳೂರು ನಗರದ ಪೊಲೀಸ್ ಠಾಣೆಗಳ ಸುತ್ತಮುತ್ತ ವರ್ಷಗಳಿಂದ ನಿಂತು ಅನಗತ್ಯವಾಗಿ ಸ್ಥಳಾಕ್ರಮಿಸಿಕೊಂಡಿದ್ದ 11,341 ವಾಹನಗಳ ಸ್ಥಳಾಂತರ ಕಾರ್ಯಕ್ಕೆ ಇಂದು ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರು ಜಯನಗರ ಪೊಲೀಸ್ ಠಾಣೆಯಿಂದ ಚಾಲನೆ ನೀಡಿದ್ದಾರೆ. ಇದರ ಜೊತೆಗೆ ಜಯನಗರ ಪೊಲೀಸ್ ಠಾಣೆ ಮುಂಭಾಗದಿಂದ ಸುಮಾರು 111 ಹಳೆ ವಾಹನಗಳನ್ನು ತೆರವುಗೊಳಿಸಿ ರಾಗಿಗುಡ್ಡದಲ್ಲಿ ಜಿಬಿಎ ನಿಗದಿಪಡಿಸಿರುವ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಸಿಂಗ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಶಾಸಕ ಸಿ.ಕೆ. ರಾಮಮೂರ್ತಿ, ಜಿಬಿಎ ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಹಾಗೂ ಇತರರು ಉಪಸ್ಥಿತರಿದ್ದರು. ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ನಮ್ಮ ಈ ಹೆಜ್ಜೆ.
#BengaluruPolice #Jayanagar #SafeBengaluru
ಪ್ರತಿಯೊಂದು 112 ತುರ್ತು ಕರೆಯ ಹಿನ್ನೆಲೆಯಲ್ಲೂ ತಕ್ಷಣವೇ ಸ್ಪಂದಿಸಲು ಸನ್ನದ್ಧವಾಗಿರುವ ಸಕ್ಷಮ ತಂಡವೊಂದಿರುತ್ತದೆ.
ತುರ್ತು ಸಂದರ್ಭಗಳನ್ನು ದಕ್ಷತೆಯಿಂದ ನಿರ್ವಹಿಸುವುದರ ಜೊತೆಗೆ ಕರ್ತವ್ಯಕ್ಕೂ ಮೀರಿದ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವ ನಮ್ಮ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿಯು ಸೇವೆ, ಕ್ಷಿಪ್ರತೆ ಹಾಗೂ ಬದ್ಧತೆಯ ನೈಜ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.
Behind every 112 call is a team ready to respond.
From handling emergencies to going the extra mile, the good work of our police personnel reflects what service, speed and commitment truly mean.
@CPBlr@seemantsingh96@DgpKarnataka@KarnatakaCops@PriyankKharge@CMofKarnataka
ಬೆಂಗಳೂರು ನಗರ ದಕ್ಷಿಣ ವಿಭಾಗದ ಕಛೇರಿಯ ಕದಂಬ ಸಭಾಂಗಣದಲ್ಲಿ ಗಣೇಶ ಹಬ್ಬದ ಆಚರಣೆ ಹಾಗೂ ವಿಸರ್ಜನಾ ಮೆರವಣಿಗೆಗಳ ಹಿನ್ನೆಲೆಯಲ್ಲಿ ಸರ್ವ ಧರ್ಮಗಳ ಮುಖಂಡರುಗಳೊಂದಿಗೆ ಪೂರ್ವಭಾವಿ ಸೌಹಾರ್ಧ ಸಭೆ ನಡೆಸಿ, ಗಣೇಶ ಹಬ್ಬವನ್ನು ಯಾವುದೇ ಅಡೆತಡೆಯಿಲ್ಲದೆ, ಶಾಂತಿ, ಸೌಹಾರ್ಧತೆ ಹಾಗೂ ಸುರಕ್ಷತೆಯಿಂದ ಆಚರಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಯಿತು.
ಒಂದು ಕ್ಲಿಕ್. ಒಂದು ಕರೆ. ಒಂದು ಸಣ್ಣ ತಪ್ಪು ನಿಮ್ಮ ಸರ್ವಸ್ವವನ್ನೂ ಇಲ್ಲವಾಗಿಸಬಹುದು.
ಸೈಬರ್ ವಂಚನೆಗಳು ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿವೆ ಅವುಗಳನ್ನು ಎದುರಿಸಲು ನಮ್ಮ ಪ್ರಯತ್ನಗಳೂ ಸಹ ಸನ್ನದ್ಧವಾಗುತ್ತಿವೆ.
ಜಾಗರೂಕರಾಗಿರುವುದು ಹೇಗೆ, ಸೈಬರ್ ವಂಚನೆಗಳನ್ನು ಗುರುತಿಸುವುದು ಹೇಗೆ ಮತ್ತು ವಂಚಕರ ಬಲೆಗೆ ಬೀಳದಂತೆ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ನೀಡುವ ಪ್ರಮುಖ ಸಲಹೆಗಳನ್ನು ತಿಳಿಯಿರಿ.
ಕ್ಲಿಕ್ ಮಾಡುವ ಮುನ್ನ ಯೋಚಿಸಿ. ಜಾಗರೂಕರಾಗಿರಿ. ಸುರಕ್ಷಿತವಾಗಿರಿ.
One click. One call. One mistake can cost you everything.
Cyber fraud is evolving and so are our efforts to fight it.
Commissioner of Police, Bengaluru City, shares key insights on staying alert, recognising cyber fraud, and protecting yourself from falling victim.
Think before you click. Stay alert. Stay safe.
#BengaluruCityPolice #CyberCrime #CyberSafety #StayAlert
@CPBlr@seemantsingh96@DgpKarnataka@DgpKarnataka
ದಕ್ಷಿಣ ವಿಭಾಗದ ಬನಶಂಕರಿ ಠಾಣೆ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
🔹 145 ಗ್ರಾಂ ಚಿನ್ನಾಭರಣ & 19 ಗ್ರಾಂ ಬೆಳ್ಳಿ
🔹 ₹26.15 ಲಕ್ಷ ನಗದು
🔹 12 ದ್ವಿಚಕ್ರ ವಾಹನಗಳು & 1 ಕಾರು
ಒಟ್ಟು ₹59.91 ಲಕ್ಷ ಮೌಲ್ಯದ ಸ್ವತ್ತು ಜಪ್ತಿ.
ಉತ್ತಮ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆಗಳು.
#BengaluruPolice #SouthDivision #GoodWork #NammaBengaluru
#BCP
ಮಾದಕ ವಸ್ತು ಜಾಲದ ವಿರುದ್ಧ ನಮ್ಮ ದಕ್ಷಿಣ ವಿಭಾಗದ ಪೊಲೀಸರ ಭರ್ಜರಿ ಬೇಟೆ!
ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಸುಮಾರು ₹18.26 ಕೋಟಿ ಮೌಲ್ಯದ 9 ಕೆ.ಜಿ 127 ಗ್ರಾಂ MDMA ಅನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿಯಿಂದ ತಂದು ನಗರದಲ್ಲಿ ಪೆಡ್ಲಿಂಗ್ ಮಾಡುತ್ತಿದ್ದ ಐವರಿ ಕೋಸ್ಟ್ ಮೂಲದ ವಿದೇಶಿ ಪ್ರಜೆಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಈ ಬೃಹತ್ ಜಾಲವನ್ನು ಪತ್ತೆಹಚ್ಚಿದ ನಮ್ಮ ಗಿರಿನಗರ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯ ಶ್ಲಾಘನೀಯ.
ಮಾದಕ ಮುಕ್ತ ಬೆಂಗಳೂರಿಗಾಗಿ ನಮ್ಮ ಕಠಿಣ ಕ್ರಮಗಳು ಮುಂದುವರಿಯಲಿವೆ.
#BengaluruCityPolice #SayNoToDrugs #DrugFreeBengaluru #SouthDivision #DrugsBedaBro
ಮಹಿಳೆಯರ ಸುರಕ್ಷತೆ ಎಂಬುದು ಬರಿ ಚರ್ಚೆಯಷ್ಟೇ ಅಲ್ಲ, ಅದೊಂದು ನಮ್ಮೆಲ್ಲರ ಜಂಟಿ ಹೊಣೆಗಾರಿಕೆ. ಮಹಿಳೆಯರ ಸುರಕ್ಷತೆ, ಜಾಗೃತಿ ಮತ್ತು ಮುಂದಿನ ಹಾದಿಯ ಕುರಿತಾದ ಮುಖ್ಯವಾದ ಸಂವಾದಕ್ಕಾಗಿ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್ (IPS) ಅವರು @vibhavasuki ಅವರೊಂದಿಗೆ ಕೈಜೋಡಿಸಿದ್ದಾರೆ. ಪಾಡ್ಕಾಸ್ಟ್ ಶೀಘ್ರದಲ್ಲೇ ಬರಲಿದೆ. ನೋಡುತ್ತಿರಿ. ಈ ಸಂವಾದವನ್ನು ತಪ್ಪದೇ ಕೇಳಿ.
A conversation that needs to be heard. Women’s safety is not just a conversation it is a shared responsibility. Commissioner of Police Shri Seemant Kumar Singh, IPS, joins @vibhavasuki for an important conversation on women’s safety, awareness and the way forward. The podcast is coming soon.
Stay tuned. You won’t want to miss this conversation.
#BengaluruCityPolice #WomensSafety #Podcast #ComingSoon
@CPBlr@seemantsingh96
SMJ Group of Institutions ನ BBUL ಜೈನ್ ವಿದ್ಯಾಲಯ ಮತ್ತು CB ಭಂಡಾರಿ ಜೈನ್ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ 'ಬಿಯಾಂಡ್ ಬ್ಯಾಡ್ಜಸ್' (Beyond Badges) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅತ್ಯಂತ ಸಂತಸ ತಂದಿತು.
ಸಮಾಜದ ಶಾಂತಿ ಮತ್ತು ಭದ್ರತೆಗಾಗಿ ಹಗಲಿರುಳು ಶ್ರಮಿಸುವ ನಮ್ಮ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಗೌರವಿಸಿದ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇಂತಹ ಸನ್ಮಾನಗಳು ಕರ್ತವ್ಯನಿಷ್ಠೆಗೆ ಮತ್ತಷ್ಟು ಸ್ಫೂರ್ತಿ ನೀಡುತ್ತವೆ.
#BeyondBadges #SMJInstitutions #BBULJainVidhyalay #CBBhandariJainCollege #KarnatakaPolice
#BCP
#SaluteToCourage
ದಿನಾಂಕ 04-09-2026 ರಂದು ಕರ್ನಾಟಕ ಹೈಕೋರ್ಟ್ನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಂ. ವಿ. ಶ್ರೀಶಾನಂದ ಅವರ ಉಪಸ್ಥಿತಿಯಲ್ಲಿ ಹಾಗೂ ಬೆಂಗಳೂರು ನಗರ ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಸಿ. ವಂಶಿ ಕೃಷ್ಣ, ಐಪಿಎಸ್ ಅವರ ಸಮ್ಮುಖದಲ್ಲಿ ಆಯೋಜಿಸಲಾಗಿದ್ದ "Custodial Interrogation & Salient Features of Investigation" ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ.
ತನಿಖೆಯ ಸೂಕ್ಷ್ಮತೆಗಳು ಹಾಗೂ ಕಾನೂನುಬದ್ಧ ವಿಚಾರಣಾ ಪ್ರಕ್ರಿಯೆಗಳ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ಮಾರ್ಗದರ್ಶನ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅತ್ಯಂತ ಉಪಯುಕ್ತವಾಗಿತ್ತು. ವಿ.ವಿ. ಪುರಂ ಕಾನೂನು ಕಾಲೇಜು ಹಾಗೂ ಸಹಕರಿಸಿದ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳು.
#BengaluruCityPolice #PolicingWithCare #Justice #Investigation
#bcp
ದಿನಾಂಕ 22-08-2026 ಬನಶಂಕರಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆಗಸ್ಟ್ 2026 ರ ಮಾಸಿಕ #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರೀಕರ ಸಲಹೆ & ಸಮಸ್ಯೆಗಳನ್ನು ಇತರ ಇಲಾಖೆಗಳ & ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಲಿಸಿ, ಪರಿಹಾರೋಪಾಯಗಳನ್ನು ಚರ್ಚಿಸಿ ಕೈಗೊಳ್ಳುವ ಕ್ರಮದ ಬಗ್ಗೆ ಭರವಸೆಯನ್ನು ನೀಡಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಜಯನಗರ, ಬನಶಂಕರಿ ಠಾಣಾ ಪೊಲೀಸ್ ಇನ್ಸ್ಪೆಕ್ಟರ್, ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು
ದಿನಾಂಕ 22-08-2026 ಬನಶಂಕರಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆಗಸ್ಟ್ 2026 ರ ಮಾಸಿಕ #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರೀಕರ ಸಲಹೆ & ಸಮಸ್ಯೆಗಳನ್ನು ಇತರ ಇಲಾಖೆಗಳ & ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಲಿಸಿ, ಪರಿಹಾರೋಪಾಯಗಳನ್ನು ಚರ್ಚಿಸಿ ಕೈಗೊಳ್ಳುವ ಕ್ರಮದ ಬಗ್ಗೆ ಭರವಸೆಯನ್ನು ನೀಡಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಜಯನಗರ, ಬನಶಂಕರಿ ಠಾಣಾ ಪೊಲೀಸ್ ಇನ್ಸ್ಪೆಕ್ಟರ್, ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು
ಗಿರಿನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ರಿಪಬ್ಲಿಕ್-ಆಪ್ ಐವರಿ ದೇಶದ ಪ್ರಜೆಯ ಬಂಧನ. ಆರೋಪಿಯಿಂದ ₹12 ಕೋಟಿ ಮೌಲ್ಯದ 5 ಕೆ.ಜಿ 179 ಗ್ರಾಂ ಎಂಡಿಎಂಎ (MDMA) ವಶಪಡಿಸಿಕೊಳ್ಳಲಾಗಿದೆ.
ಚೂಡಿದಾರ್ ಡ್ರೆಸ್ ಪೀಸ್ಗಳ ಒಳಗೆ ಮಾದಕ ವಸ್ತುವನ್ನು ಬಚ್ಚಿಟ್ಟು ದೆಹಲಿಯಿಂದ ತರಿಸಿ ಸ್ಥಳೀಯ ಪೆಡ್ಲರ್ಗಳಿಗೆ ಸರಬರಾಜು ಮಾಡುತ್ತಿದ್ದ ಜಾಲವನ್ನು ನಮ್ಮ ತಂಡ ಬೇಧಿಸಿದೆ.
ಈ ಕಾರ್ಯಾಚರಣೆ ನಡೆಸಿದ ವಿ.ವಿ.ಪುರಂ ಉಪ-ವಿಭಾಗದ ಎ.ಸಿ.ಪಿ, ಗಿರಿನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳು.
#WarOnDrugs #BCP #GirinagarPolice #SayNoToDrugs #drugsbedabro
ಈ ದಿನ ದಕ್ಷಿಣ ವಿಭಾಗದಲ್ಲಿ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ–2026 ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಯಿತು.
ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಪರೀಕ್ಷಾ ಸಂಬಂಧಿತ ಸೂಕ್ತ ಸೂಚನೆಗಳು ಹಾಗೂ ಸಲಹೆಗಳನ್ನು ನೀಡಲಾಯಿತು.
#KSP#PoliceRecruitment2026 #SouthDivision
ದಿನಾಂಕ 30-07-2026 ರಂದು ವಿ ವಿ ಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರ್ಷಿಕ ತಪಾಸಣೆ ನಡೆಸಲಾಯಿತು. ಠಾಣೆಯ ಒಟ್ಟಾರೆ ಕಾರ್ಯನಿರ್ವಹಣೆ ಹಾಗೂ ಪ್ರಕರಣಗಳ ತನಿಖಾ ಪ್ರಗತಿಯನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಿಸ್ತು ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಯಿತು. ಹಾಗೂ ಪರಿಸರ ಸಂರಕ್ಷಣೆಯ ಅಂಗವಾಗಿ ಠಾಣೆಯ ಆವರಣದಲ್ಲಿ ಗಿಡ ನೆಡಲಾಯಿತು.
#VVPuramPoliceStation #AnnualInspection #KarnatakaPolice
#BCP
ಜೀವನ ಒಂದೇ, ಅದನ್ನು ಡ್ರಗ್ಸ್ ನಶೆಯಲ್ಲಿ ಹಾಳು ಮಾಡಿಕೊಳ್ಳಬೇಡಿ! 🚫
ಡ್ರಗ್ಸ್ ನಿಮ್ಮ ಕನಸುಗಳನ್ನು, ತಾಯಿ-ತಂದೆಯ ಆಸೆಗಳನ್ನು ಕ್ಷಣಾರ್ಧದಲ್ಲಿ ಧೂಳೀಪಟ ಮಾಡುತ್ತದೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಉಜ್ವಲ ಭವಿಷ್ಯಕ್ಕಾಗಿ ಡ್ರಗ್ಸ್ ನಿಂದ ದೂರವಿರಿ #ಬೇಡಬ್ರೋ_ಡ್ರಗ್ಸ್_ಎಂಬ_ನಶೆ ಎಂದೆಂದಿಗೂ ಬೇಡ.
Say No To Drugs!
📞 ತುರ್ತು ಸಹಾಯಕ್ಕಾಗಿ ಸಂಪರ್ಕಿಸಿ: 112 / 1908 (Anti-Narcotics Helpline)
📱 KSP App ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡಬಹುದು. ನಿಮ್ಮ ವಿವರಗಳನ್ನು ಗೋಪ್ಯವಾಗಿಡಲಾಗುತ್ತದೆ.
#SayNoToDrugs #BedaBro #Rise #BengaluruPolice #DrugFreeBengaluru
#BCP
ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ದಕ್ಷಿಣ ವಿಭಾಗದ ವಿಶೇಷ ತಂಡವು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ವಶಕ್ಕೆ ಪಡೆದ ಆರೋಪಿಯಿಂದ ಬರೋಬ್ಬರಿ ₹31.56 ಲಕ್ಷ ಮೌಲ್ಯದ 225 ಗ್ರಾಂ ಚಿನ್ನಾಭರಣಗಳನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ.
ನಮ್ಮ ಮಾರ್ಗದರ್ಶನದಲ್ಲಿ, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ (ACP) ನೇತೃತ್ವದಲ್ಲಿ ಹಾಗೂ ಜೆ.ಪಿ.ನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ತೋರಿದ ಈ ತ್ವರಿತ ಹಾಗೂ ಶ್ಲಾಘನೀಯ ಕಾರ್ಯವೈಖರಿ ನಿಜಕ್ಕೂ ಅಭಿನಂದನಾರ್ಹ.
ಸಾರ್ವಜನಿಕರ ಆಸ್ತಿ-ಪಾಸ್ತಿಗಳ ರಕ್ಷಣೆ ಹಾಗೂ ಕಾನೂನು ಸುವರ್ವ್ಯೆ ಕಾಪಾಡಲು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಪಡೆ ಸದಾ ಜಾಗೃತ ಮತ್ತು ಬದ್ಧವಾಗಿದೆ.
#BCP #SouthDivision #JPNagar #PoliceAction #KarnatakaPolice