ಈ ದಿನ ಜಯನಗರ ಉಪವಿಭಾಗದ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಯೂನಿಟಿ ಕಾಲೇಜಿನ ಸಭಾಂಗಣದಲ್ಲಿ ದಿ:26.06.2026 ರ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನದ ಅಂಗವಾಗಿ ಶಾಲಾ ಮಕ್ಕಳಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಮಕ್ಕಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
#Saynodrugs
ಈ ದಿನ ಭಾರತದ ಮೊದಲ ಉಪ ಪ್ರಧಾನಿ ಮತ್ತು ಮೊದಲ ಗೃಹಮಂತ್ರಿಗಳಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯ್ ಪಟೇಲ್ ರವರ 150ನೇ ಜನುಮದಿನವಾಗಿದ್ದು ಈ ದಿನವನ್ನು ಪ್ರತಿವರ್ಷ “ಏಕತಾ ದಿನ” ವನ್ನಾಗಿ ಆಚರಿಸಲಾಗುತ್ತಿದೆ.
ಈ ದಿನ ಭಾರತದ ಐಕ್ಯತೆ, ಸಮಗ್ರತೆ, ಮತ್ತು ಭದ್ರತೆಯನ್ನು ಕಾಪಾಡಲು ಶ್ರಮಿಶುವುದಾಗಿ ಪ್ರತಿಜ್ಞೆಯನ್ನು ಮಾಡಲಾಯಿತು.
ಜಯನಗರ ಪೊಲೀಸ್ ವಸತಿ ಗೃಹದಲ್ಲಿ ಪೊಲೀಸ್ ಕುಟುಂಬದ ಜೊತೆ ಈ ದಿನ “ದೀಪಾವಳಿ ಹಬ್ಬ” ಆಚರಣೆ ಮಾಡಲಾಯಿತು.
ದೀಪಗಳಂತೆ ಎಲ್ಲರ ಬದುಕು ಹೊಳೆಯುತ್ತಿರಲಿ ಎಂದು ಹಾರೈಸುತ್ತಾ, ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.
ಜಯನಗರ ಪೊಲೀಸ್ ವಸತಿ ಗೃಹದಲ್ಲಿ ಪೊಲೀಸ್ ಕುಟುಂಬದ ಜೊತೆ ಈ ವರ್ಷದ “ದೀಪಾವಳಿ ಹಬ್ಬ” ಆಚರಣೆ ಮಾಡಲಾಯಿತು.
ಈ ದೀಪಾವಳಿ ನಮ್ಮೆಲ್ಲರ ಜೀವನದಲ್ಲಿ ಹೊಸ ಭರವಸೆ, ಉಜ್ವಲ ದಿನಗಳು ಮತ್ತು ಹೊಸ ಕನಸುಗಳನ್ನು ತರಲಿ. ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.
ಅಂತರಾಷ್ಟ್ರೀಯ ಮಾದಕ ವ್ಯಸನ ಹಾಗೂ ಕಳ್ಳ ಸಾಗಾಣಿಕೆ ವಿರೋಧ ದಿನದ ಅಂಗವಾಗಿ ಜಯನಗರ ಉಪವಿಭಾಗದ ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ ಕಮ್ಯುನಿಟಿ ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ವಿಧ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕರಿಸಲಾಗಿರುತ್ತದೆ. #internationaldrugabuseday
ಈ ದಿನ ಬೆಂಗಳೂರು ನಗರ ದಕ್ಷಿಣ ವಿಭಾಗದ ಜಯನಗರ ಉಪ ವಿಭಾಗದ ಕಛೇರಿ ಆವರಣದಲ್ಲಿ ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ ಸಾರ್ವಜನಿಕರು ಉಪಯೋಗಿಸಲು e- Library ಮತ್ತು ಗ್ರಂಥಾಲಯವನ್ನು ತೆರೆಯಲಾಯಿತು.
ಗ್ರಂಥಾಲಯದಲ್ಲಿ ಕಥೆ, ಕಾದಂಬರಿ, ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳು, ಕಾನೂನು ಪುಸ್ತಕಗಳು ಹಾಗೂ ದೈನಂದಿನ ಪತ್ರಿಕೆಗಳು ಲಭ್ಯವಿರುತ್ತದೆ.