ಭೂಮಿತಾಯಿಗೆ ನಮಿಸಿ, ಬಿತ್ತಿದ ಬೆಳೆಗೆ ಜೀವ ನೀಡುವ ಎತ್ತುಗಳನ್ನು ಪೂಜಿಸಿ, ರೈತನ ಬದುಕಿನಲ್ಲಿ ಸಂಭ್ರಮ ತರುವ ಹಬ್ಬವೇ ಕಾರ ಹುಣ್ಣಿಮೆ. ನಮ್ಮ ಗ್ರಾಮೀಣ ಸಡಗರ, ಸಂಸ್ಕೃತಿ ಹಾಗೂ ಕೃಷಿ ಒಲವಿನ ಸಂಕೇತವಾಗಿರುವ ಕಾರ ಹುಣ್ಣಿಮೆ ಹಬ್ಬದ ಶುಭಾಶಯಗಳು.
- ಮೈಲನಹಳ್ಳಿ ದಿನೇಶ್ ಕುಮಾರ್
ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ
ಅಭಾವೀಲಿಂ ಮಹಾಸಭಾ.
ಯೋಗ ಅಂತರಂಗದ ಬೆಳಕು.
"ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿಕೊಟ್ಟಿದ್ದು ಭಾರತ, ಯೋಗ ನಮ್ಮ ದೇಶದ ಹೆಮ್ಮೆ"
ಸಮಸ್ತ ನಾಡಿನ ಜನತೆಗೆ
#ವಿಶ್ವ_ಯೋಗ_ದಿನ ದ ಶುಭಾಷಯಗಳು.
-- ಮೈಲನಹಳ್ಳಿ ದಿನೇಶ್ ಕುಮಾರ್
ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)
#WorldYogaDay#InternationalYogaDay
ಚಿತ್ರದುರ್ಗದ ಕಲ್ಲಿನ ಕೋಟೆಯ ಅಪ್ರತಿಮ ವೀರ, ಸ್ವಾಭಿಮಾನದ ಸಂಕೇತ, 'ದುರ್ಗದ ಹುಲಿ' ಶ್ರೀ ರಾಜ ವೀರ ಮದಕರಿ ನಾಯಕ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
ಅವರ ಶೌರ್ಯ ಮತ್ತು ನಾಡು-ನುಡಿಯ ಬಗೆಗಿನ ನಿಷ್ಠೆ ಸ್ಫೂರ್ತಿದಾಯಕ.
-ಮೈಲನಹಳ್ಳಿ ದಿನೇಶ್ ಕುಮಾರ್
ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ,
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
ಕನ್ನಡದ ಅಸ್ಮಿತೆ, ದೀನ ದಲಿತರ ಆಶಾಕಿರಣ, ಸಮಾನತೆಯ ಹರಿಕಾರ, ಅನುಭವ ಮಂಟಪದ ಕರ್ತೃ, ಕೋಟ್ಯಾಂತರ ಧಮನಿತರ ಉಸಿರು, ಕರ್ನಾಟಕದ ಸಾಂಸ್ಕೃತಿಕ ನಾಯಕ,
ಅಸಮಾನತೆಯ ಎದೆಗೆ ಒದ್ದು, ಸಮಾನತೆಯ ಗಿಡ ನೆಟ್ಟ ವಿಶ್ವಗುರು ಬಸವಣ್ಣನವರ ಜಯಂತಿಯ ಶುಭಾಶಯಗಳು.
-- ಮೈಲನಹಳ್ಳಿ ದಿನೇಶ್ ಕುಮಾರ್
ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ
#BasavaJayanti
ಎಷ್ಟೇ ಎಲೆ ಉದುರಿದರೂ ಮರ ಹಾಗೇ ಇರುವಂತೆ, ಎಷ್ಟೇ ಕಷ್ಟ ಬಂದರೂ ಬದುಕು ಮತ್ತೆ ಚಿಗುರಿ ಮುಂದೆ ಸಾಗುವುದು
ಯುಗಾದಿ ಪರಿವರ್ತನೆಯ ಸಂಕೇತ
ಸಮೃದ್ಧಿ, ಸೊಗಸಿನ ಆಗಮನದ ಸಂಕೇತ ಸಂವತ್ಸರದ ಬದಲಾವಣೆ ಚಲನಶೀಲತೆಯ ಸಂಕೇತ
ನವ ಚಿಂತನೆ, ನವ ಸ್ಫೂರ್ತಿ, ನವ ಭರವಸೆಗಳೊಂದಿಗೆ ಯುಗಾದಿಯನ್ನು ಸ್ವಾಗತಿಸೋಣ
#ಯುಗಾದಿ ಹಬ್ಬದ ಶುಭಾಶಯಗಳು
#ugadi#festival
ನಾಡಿನ ಸಮಸ್ತ ಜನತೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಶುಭಾಶಯಗಳು
ಆದಿಜಗದ್ಗುರು ಶ್ರೀ ರೇಣುಕಾಚಾರ್ಯರು ಮಾನವಧರ್ಮದ ಉಳಿವಿಗಾಗಿ ಸಾರಿದ ತತ್ವಗಳು ಸಾರ್ವಕಾಲಿಕವಾಗಿವೆ. ಪ್ರತಿಯೊಬ್ಬರ ಬಾಳಿಗೆ ಬೆಳಕಾಗಿವೆ. ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆಯ ಜೀವನವನ್ನು ಬೋಧಿಸಿದ ಅವರ ಚಿಂತನೆಗಳು ಸಮಾಜದ ಸುಧಾರಣೆಗೆ ದಾರಿದೀಪವಾಗಿದೆ.
ವೀರಶೈವ ಲಿಂಗಾಯತ ಸಮುದಾಯದ ಮೇರು ಪರ್ವತ, ಕೆಚ್ಚೆದೆಯ ಕನ್ನಡಿಗರ ಧೀಮಂತ ನಾಯಕ, ರೈತಪರ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಏಕೈಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಜನ್ಮದಿನದ ನಿಮಿತ್ತ ಪ್ರೀತಿಯ ಗೌರವ ಪೂರ್ವಕ ಶುಭಾಶಯಗಳು.
#yadiyurappa#birthday#wishes
ದೇಶದ ಹೆಮ್ಮೆಯ ಸಂವಿಧಾನ ಜಾರಿಗೆ ಬಂದ ಈ ಪವಿತ್ರ ದಿನದಂದು ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ದೇಶಕ್ಕೆ ಸ್ವಾತಂತ್ರ್ಯ ಒದಗಿಬರಲು ಹಾಗೂ ದೇಶದ ಪ್ರಜಾಪ್ರಭುತ್ವದ ರಚನೆಗೆ ಕಾರಣೀಭೂತರಾದ ಸರ್ವರನ್ನೂ ಸ್ಮರಿಸೋಣ.
#ಗಣರಾಜ್ಯೋತ್ಸವ2026#RepublicDay2026#India#RepublicDay #2026
ಕಾಯಕಯೋಗಿ, ತ್ರಿವಿಧ ದಾಸೋಹಿ, ಪದ್ಮಭೂಷಣ ಪರಮ ಪೂಜ್ಯ ಲಿಂ. ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆಯಂದು ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಅನ್ನ, ಅಕ್ಷರ, ಜ್ಞಾನ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳ ಭವಿಷ್ಯ ಬಾಳಿಗೆ ಬೆಳಕಾದ ಶತಮಾನದ ಸಂತ ಸಾಧನೆ ಸದಾ ಸ್ಮರಣೀಯ.
#ದಾಸೋಹ_ದಿನ#ಶಿವಕುಮಾರ_ಸ್ವಾಮೀಜಿ
ಶೇಂಗಾ ಎಳ್ಳು ಬೆಲ್ಲದ ಹದವ ಬೆರೆಸಿ ಕಟ್ಟಿದ ಪ್ರೀತಿ ಪಾಕದ ಉಂಡೆ ಇನ್ನಷ್ಟು ಸಿಹಿಯಾಗಲಿ
ನಿಮ್ಮೆದೆಯ ತುಂಬಾ ನಗೆಯ ಪೈರು ಪಸರಿಸಲಿ
ಅದೆಷ್ಟೇ ಸುಖ ಕಷ್ಟಗಳ ಮಧ್ಯೆಯೂ ಒಡಲ ತುಂಬಾ ಒಂದಿಷ್ಟು ನಗುವ ಹೂರಣ ತುಂಬಿರಲಿ.
ನಾಡಿನ ಸಮಸ್ತ ಜನತೆಗೆ #ಉತ್ತರಾಯಣ_ಪುಣ್ಯಕಾಲ#ಮಕರ_ಸಂಕ್ರಾಂತಿ ಹಬ್ಬದ ನಿಮಿತ್ತ ಪ್ರೀತಿಯ ಶುಭಾಶಯಗಳು.
#Happy_Sankratri
ಪ್ರಖರ ಮಾತುಗಳಿಂದ ಇಡೀ ವಿಶ್ವವನ್ನೇ ಬೆರಗುಗೊಳಿಸಿದ ವೀರಸನ್ಯಾಸಿ, ಯುವ ಮನಸ್ಸುಗಳ ಪ್ರೇರಣಾ ಶಕ್ತಿ, ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯ ಹಿರಿಮೆಯನ್ನು ಜಗದಗಲ ಸಾರಿದ ಮೇರು ಸಾಧಕ, ತಮ್ಮ ವ್ಯಕ್ತಿತ್ವ & ಪ್ರತಿಭೆಯಿಂದ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಸಿಡಿಲ ಸಂತ ಸ್ವಾಮಿ ವಿವೇಕಾನಂದ ಅವರ ಜಯಂತಿಯಂದು ಗೌರವ ನಮನಗಳು.
#NationalYouthDay
ಪರಮಪೂಜ್ಯ ಹಾನಗಲ್ ಕುಮಾರೇಶ್ವರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪಿಸಿದ ಮಹಾದಾನಿ, ಶಿರಸಂಗಿ ಸಂಸ್ಥಾನದ ಕೊನೆಯ ದೊರೆ, ತಮ್ಮ ಆಸ್ತಿಯನ್ನೆಲ್ಲ ಸಮಾಜ ಸೇವೆಗಾಗಿ ಧಾರೆ ಎರೆದ ದಾನವೀರ #ಶಿರಸಂಗಿ_ಲಿಂಗರಾಜ_ದೇಸಾಯಿ ಅವರ 165ನೇ ಜಯಂತೋತ್ಸವದ ಶುಭಾಶಯಗಳು.
#Shirasangi_Lingaraja_Desai#Jayanti
ಎಂದಿಗೂ ನೋಯದಂತೆ ನೋವುಗಳೇ ಬಾರದಂತೆ.
ನಿಮ್ಮೆಲ್ಲ ನೋವುಗಳು ಮತ್ತೆ ನೆನಪಾಗದಂತೆ ಚೆಂದದ ಹೊಸದಿನಗಳು ನಿಮ್ಮದಾಗಲಿ.
ನನ್ನೆಲ್ಲ ಆತ್ಮೀಯರಿಗೆ ನೂತನ 2026 ಕ್ಯಾಲೆಂಡರ್ ವರ್ಷಾಚರಣೆಗೆ ನಲ್ಮೆಯ ಶುಭ ಹಾರೈಕೆಗಳು.
-- ಮೈಲನಹಳ್ಳಿ ದಿನೇಶ್ ಕುಮಾರ್
ಜಿಲ್ಲಾಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)
ಚಿತ್ರದುರ್ಗದ ಮೇಲೆ ಹೈದರಾಲಿ ಸೈನಿಕರು ಆಕ್ರಮಣ ಮಾಡಿದಾಗ ತನ್ನ ಒನಕೆಯನ್ನು ಅಸ್ತ್ರವನ್ನಾಗಿಸಿ ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕರನ್ನು ಸದೆಬಡಿದ ಕನ್ನಡ ನಾಡಿನ #ವೀರ_ವನಿತೆ#ಒನಕೆ_ಓಬವ್ವ ಅವರ ಜಯಂತಿ ಶುಭಾಶಯಗಳು.
ಓಬವ್ವಳ ಅಸಾಧಾರಣ ಶೌರ್ಯ, ಸಾಹಸ, ಪರಾಕ್ರಮ ಜಗತ್ತಿಗೆ ಮಾದರಿ.
#veeravanithe#onake#obavva
ನಿಜ ಭಕ್ತಿಗೆ ಒಲಿಯದ ದೇವರಿಲ್ಲ ಎಂಬುದನ್ನು ಲೋಕಕ್ಕೆ ಸಾರಿದ ಪುಣ್ಯಾತ್ಮ, ಕೀರ್ತನೆ ಸಾಹಿತ್ಯದ ಆದಮ್ಯ ಚೇತನ, ಸಂತಕವಿ ಶ್ರೀ ಕನಕದಾಸರ ಜಯಂತಿಯಂದು ನನ್ನ ಶತಕೋಟಿ ನಮನಗಳು.
ಕೀರ್ತನೆಗಳ ಮೂಲಕ ಸಮಾಜದ ಮೌಢ್ಯಗಳನ್ನು ಹೊಗಲಾಡಿಸಿಲು ಶ್ರಮಿಸಿದ ಅವರ ಸೇವೆ ಎಂದೆಂದಿಗೂ ಅಮರ.
ದಾಸಶ್ರೇಷ್ಠ ಶ್ರೀ #ಕನಕದಾಸ ಜಯಂತಿಯ ಶುಭಾಶಯಗಳು.
#Kanaka_Jayanti
ಕನ್ನಡ ಬರೀ ಭಾಷೆಯಲ್ಲ...!
ಅದು ನಮ್ಮ ಬದುಕು, ಸಂಸ್ಕೃತಿ, ಪರಂಪರೆ...!!
ಸ್ವಾಭಿಮಾನ, ಏಕತೆ, ಒಗ್ಗಟ್ಟು, ಸಹಬಾಳ್ವೆ ಸಂಕೇತವಾದ ರಾಜ್ಯೋತ್ಸವವು ನಾಡಿನ ಜನರಿಗೆ ಹರ್ಷ ತರಲಿ.
ನಲ್ಮೆಯ ನಾಡಿನ ಜನತೆಗೆ #ಕನ್ನಡ_ರಾಜ್ಯೋತ್ಸವ ದ ಪ್ರಯುಕ್ತ ಪ್ರೀತಿಯ ಶುಭಾಶಯಗಳು.
🟡 #ಕನ್ನಡರಾಜ್ಯೋತ್ಸವ 🔴 #kannadarajyotsava
ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕನ್ನಡದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ್ತಿ, ವೀರರಾಣಿ, ಬ್ರಿಟಿಷರ ವಿರುದ್ಧ ಖಡ್ಗ ಎತ್ತಿದ ಭಾರತದ ವೀರಪುತ್ರಿ ಕಿತ್ತೂರು ರಾಣಿ ಚೆನ್ನಮ್ಮಳ ಹೋರಾಟದ ಹಾದಿಯಿಂದ ನಾವೆಲ್ಲರೂ ಸ್ಫೂರ್ತಿ ಪಡೆಯೋಣ.
ನಾಡಿನ ಸಮಸ್ತ ಜನತೆಗೆ ವೀರವನಿತೆ #ಕಿತ್ತೂರು ರಾಣಿ #ಚೆನ್ನಮ್ಮ#ಜಯಂತಿ ಯ ಹಾರ್ದಿಕ ಶುಭಾಶಯಗಳು.
#kitturrani
ಬೆಳಕಿಗೆ ಕುಲವಿಲ್ಲ
ಕುಂಬಾರನ ಹಣತೆ, ಗಾಣಿಗನ ಎಣ್ಣೆ, ರೈತನ ಹತ್ತಿಯ ಬತ್ತಿಗಳೆಲ್ಲ ಸೇರಿ ಬಂದ ಬೆಳಕು ಎಲ್ಲರಿಗೂ ಆದರ್ಶ
ದೀಪವು ಮತ್ತೊಂದು ದೀಪವನ್ನು ಬೆಳಗುವಂತೆ, ಪ್ರೀತಿಯಿಂದ ಪ್ರೀತಿ ಹರಡಲಿ
ದ್ವೇಷ ಅಸೂಯೆ ಕೋಪ ನಶಿಸಿ ನಿಮ್ಮ ಬಾಳಲ್ಲಿ ಪ್ರೀತಿ, ಮಮತೆ, ಸಂತೋಷ ಎಂದೆಂದಿಗೂ ಚಿಗುರಲಿ
ಸರ್ವರಿಗೂ #ದೀಪಾವಳಿ ಹಬ್ಬದ ಶುಭಹಾರೈಕೆಗಳು.
#deepawali