ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಈಗಾಗಲೇ ಶೈಕ್ಷಣಿಕ ಜಿಲ್ಲಾವಾರು ಅಧಿಸೂಚನೆ ಹೊರಡಿಸಿದ್ದು, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ನೇಮಕಾತಿ ಅಧಿಸೂಚನೆಯಲ್ಲಿ ನೇಮಕ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ವಿವರವಾಗಿ ನೀಡಿದ್ದು, ಅಧಿಸೂಚನೆಯಲ್ಲಿ ನೀಡಿರುವ ಅಂಶಗಳೇ ಅಂತಿಮವಾಗಿದೆ. ಆದರೂ ಅಭ್ಯರ್ಥಿಗಳಿಗೆ ಉದ್ಭವಿಸಿರುವ ಅಥವಾ ಉದ್ಭವಿಸಬಹುದಾದ ಅನುಮಾನಳಿಗೆ ಸ್ಪಷ್ಟ ಉತ್ತರ ನೀಡುವ ಉದ್ದೇಶದಿಂದ FAQ ಅನ್ನು ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡೇ ಮುಂದುವರಿಯಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಿಂದ ಪಡೆದುಕೊಳ್ಳಬಹುದು. ಅಧಿಸೂಚನೆಗೆ ಮತ್ತು ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ: https://t.co/i3IehNQmls
Facilitating greater clarity for job aspirants during the ongoing primary and high school teacher recruitment drive, the Department of School Education and Literacy has published a comprehensive Frequently Asked Questions (FAQ) guide. Reassuring candidates across educational districts, the department reiterated that while the provisions outlined in the official district-wise notifications remain final and legally binding, the newly released FAQ addresses common queries and technical ambiguities to streamline the application process.
Candidates are strictly urged to thoroughly read and understand the core notification parameters before submitting their applications online.Candidates can access detailed notifications and apply online at https://t.co/i3IehNQmls
#TeacherRecruitment2026 #KarnatakaEducation #GovtJobs #JobNotification #Shalashikshana #GovernmentSchoolsofKarnataka
ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಯಲ್ಲಿ (6 ರಿಂದ 8 ನೇ ತರಗತಿಗೆ) ಕನ್ನಡ ಭಾಷೆಯನ್ನು ಬೋಧಿಸಲು 2,557 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇ. 50 ಅಂಕಗಳೊಂದಿಗೆ ಪದವಿ ಮತ್ತು ಅದರೊಂದಿಗೆ 2 ವರ್ಷದ ಡಿ.ಎಲ್.ಎಡ್ (D.El.Ed), ಬಿ.ಎಡ್ (B.Ed.) ಅಥವಾ ಸ್ಪೆಷಲ್ ಬಿ.ಎಡ್. ಮಾಡಿರಬೇಕು. ಅಥವಾ ಕನಿಷ್ಠ ಶೇ. 50 ಅಂಕಗಳೊಂದಿಗೆ ಪಿಯುಸಿ (PUC) ಮತ್ತು ಅದರೊಂದಿಗೆ 4 ವರ್ಷದ ಬಿ.ಎಲ್.ಎಡ್ (B.El.Ed.) ಅಥವಾ 4 ವರ್ಷದ ಸಮಗ್ರ ಶಿಕ್ಷಕರ ಶಿಕ್ಷಣ ಪದವಿ (Integrated Teacher Education Degree) ಪೂರ್ಣಗೊಳಿಸಿರಬೇಕು. ಕನ್ನಡ ಭಾಷೆ ಮತ್ತು ಇತರೆ ವಿಷಯಗಳಲ್ಲಿ ಕನಿಷ್ಠ ಶೇಕಡ ಐವತ್ತು ಸರಾಸರಿ ಅಂಕಗಳನ್ನು ಪಡೆದಿರುವುದು ಮತ್ತು ಸದರಿ ಭಾಷೆಯಲ್ಲಿ ಅಭ್ಯಾಸ ಬೋಧನೆ / ಬೋಧನಾ ವಿಧಾನವನ್ನು ಶಿಕ್ಷಕರ ಶಿಕ್ಷಣ ಡಿಪ್ಲೋಮಾ ಅಥವಾ ಪದವಿಯಲ್ಲಿ ಅಭ್ಯಾಸ ಮಾಡಿರುವುದು ಕಡ್ಡಾಯ. ಜೊತೆಗೆ ಟಿಇಟಿ ಅಥವಾ ಸಿಟಿಇಟಿಯಲ್ಲಿ ಅರ್ಹತೆ ಪಡೆದಿರಬೇಕು. ಅಧಿಸೂಚನೆಗೆ ಮತ್ತು ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ: https://t.co/i3IehNQmls
Expanding its graduate primary teaching cadre for Classes 6 to 8, the Department of School Education has published separate notifications across educational districts to recruit 2,557 Graduate Primary Teachers for Kannada language instruction. To qualify, candidates must possess a Bachelor's degree with a minimum average of 50% along with a 2-year Diploma in Elementary Education, B.Ed., or Special B.Ed., or alternatively, a minimum 50% in PUC with a 4-year B.El.Ed. or 4-year Integrated Teacher Education Degree. Applicants must have studied Kannada along with another eligible elective language or social science subject for all three years of graduation, undergone practice teaching in Kannada during their teacher education, and qualified in either KARTET or CTET. Candidates can access detailed notifications and apply online at https://t.co/i3IehNQmls.
#TeacherRecruitment2026 #KarnatakaEducation #GovtJobs #JobNotification #Shalashikshana #GovernmentSchoolsofKarnataka
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ನೌಕರರು ಕರ್ತವ್ಯ (KAAMS-Kartavya) ಮೊಬೈಲ್ ಅಪ್ಲಿಕೇಷನ್ ಬಳಸಿ ಹಾಜರಾತಿ ದಾಖಲಿಸುತ್ತಿದ್ದಾರೆ. ಇಲಾಖೆಯ ನೌಕರರಲ್ಲಿ 99.82% ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದು, ಆಗಸ್ಟ್ 19, 2026 ರಂದು 72.88% ನೌಕರರು ಈ ಆ್ಯಪ್ ಬಳಸಿ ಹಾಜರಾತಿ ದಾಖಲಿಸಿದ್ದಾರೆ.
Employees across the Department of School Education and Literacy are now actively utilizing the KAAMS-Kartavya mobile application to record their daily attendance. 99.82% of the workforce has successfully registered on the application. Furthermore, on August 19, 2026 72.88% of employees logged their daily attendance using the 'Kartavya' app.
#KartavyaApp #KAAMS #KarnatakaGovernment #ShalaShikshana #KarnatakaEducation #GovernmentSchoolsofKarnataka
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ AI ಆಧಾರಿತ ಮುಖ ಚಹರೆ ಗುರುತಿಸುವ (Facial Recognition) ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳ ಹಾಜರಾತಿ ಪಡೆಯುವ, ಇ-ಆಡಳಿತ ಇಲಾಖೆ ಮೂಲಕ ಅಭಿವೃದ್ದಿ ಮಾಡಿರುವ ಅಪ್ಲಿಕೇಷನ್ ʻನಿರಂತರʼ ಜಾರಿಗೆ ತರಲಾಗಿದೆ. ಈಗಾಗಲೇ ಈ ಯೋಜನೆಯಡಿ ಅರ್ಹ 35,64,470 ವಿದ್ಯಾರ್ಥಿಗಳ ಪೈಕಿ ದಿನಾಂಕ 19-08-2026ರ ವರೆಗೆ 33,47,698 ವಿದ್ಯಾರ್ಥಿಗಳ ನೋಂದಣಿ ಮಾಡಲಾಗಿದ್ದು, ನಿರಂತರ ಆ್ಯಪ್ ಮೂಲಕ ಹಾಜರಾತಿ ದಾಖಲಿಸಿದ್ದಾರೆ.
To simplify and enable seamless attendance tracking, the government has launched ‘Nirantara’, an AI-based facial recognition platform developed by the Department of e-Governance across government and aided schools. As of August 19, 2026, out of 35,64,470 eligible students, 33,47,698 have been registered on the platform and are actively recording their daily attendance using the app
#ShalaShikshana #KarnatakaEducation #GovernmentSchoolsofKarnataka #AllRoundDevelopment #PUC #KarnatakaSchools #ComprehensiveEducation
ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟದ ಸಮಯದಲ್ಲಿ ಪ್ರತಿದಿನ ಮೊಟ್ಟೆಯನ್ನು ನೀಡಲಾಗುತ್ತಿದೆ. ಬೆಂಗಳೂರಿನ ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. ಮೊಟ್ಟೆಯನ್ನು ಸೇವಿಸುವುದರಿಂದ ಮಕ್ಕಳು ತುಂಬಾ ಕ್ರಿಯಾಶೀಲರಾಗುತ್ತಾರೆ ಮತ್ತು ದಿನವಿಡೀ ಆಟ-ಪಾಠಗಳಲ್ಲಿ ಆಸಕ್ತಿ ತೋರುತ್ತಾರೆ. ಮೊಟ್ಟೆಯು ಅವರ ಎಲ್ಲಾ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿಯನ್ನು ನೀಡಲು ಅಗತ್ಯವಾದ ಪ್ರೋಟೀನ್ ಮತ್ತು ವಿಟಮಿನ್ಗಳನ್ನು ಹೊಂದಿದೆ.
Eggs are being provided to government school children every day during midday meals. This initiative has been implemented in collaboration with the Bengaluru-based Azim Premji Foundation. Consuming eggs makes children highly active and keeps them engaged in academics and sports throughout the day. Eggs contain the essential proteins and vitamins required to provide the energy needed for all their activities.
#HealthyFuture #NutritiousSchools #KarnatakaGovtSupport #PMPoshanImpact #KarnatakaEducation #SchoolNutrition #Shalashikshana #GovernmentSchoolsofKarnataka
ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಯಲ್ಲಿ (6 ರಿಂದ 8 ನೇ ತರಗತಿಗೆ) ಇಂಗ್ಲಿಷ್ ಭಾಷೆಯನ್ನು ಬೋಧಿಸಲು 643 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇ. 50 ಅಂಕಗಳೊಂದಿಗೆ ಪದವಿ ಮತ್ತು ಅದರೊಂದಿಗೆ 2 ವರ್ಷದ ಡಿ.ಎಲ್.ಎಡ್ (D.El.Ed), ಬಿ.ಎಡ್ (B.Ed.) ಅಥವಾ ಸ್ಪೆಷಲ್ ಬಿ.ಎಡ್. ಮಾಡಿರಬೇಕು. ಅಥವಾ ಕನಿಷ್ಠ ಶೇ. 50 ಅಂಕಗಳೊಂದಿಗೆ ಪಿಯುಸಿ (PUC) ಮತ್ತು ಅದರೊಂದಿಗೆ 4 ವರ್ಷದ ಬಿ.ಎಲ್.ಎಡ್ (B.El.Ed.) ಅಥವಾ 4 ವರ್ಷದ ಸಮಗ್ರ ಶಿಕ್ಷಕರ ಶಿಕ್ಷಣ ಪದವಿ (Integrated Teacher Education Degree) ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಗಳು ತಮ್ಮ ಪದವಿಯ ಮೂರೂ ವರ್ಷಗಳಲ್ಲಿ ಇಂಗ್ಲಿಷ್ ಜೊತೆಗೆ ಮತ್ತೊಂದು ಅರ್ಹ ಐಚ್ಛಿಕ ಭಾಷೆ ಅಥವಾ ಸಮಾಜ ವಿಜ್ಞಾನ ವಿಷಯವನ್ನು ವ್ಯಾಸಂಗ ಮಾಡಿರಬೇಕು. ತಮ್ಮ ಶಿಕ್ಷಕರ ತರಬೇತಿಯ (B.Ed/D.El.Ed) ಸಮಯದಲ್ಲಿ ಇಂಗ್ಲಿಷ್ನಲ್ಲಿ ಬೋಧನಾ ಅಭ್ಯಾಸ (Practice Teaching) ಮಾಡಿರಬೇಕು. KARTET (ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ) ಅಥವಾ CTET (ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ) ಯಲ್ಲಿ ಅರ್ಹತೆ ಪಡೆದಿರಬೇಕು. ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಿಂದ ಪಡೆದುಕೊಳ್ಳಬಹುದು. ಅಧಿಸೂಚನೆಗೆ ಮತ್ತು ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ: https://t.co/i3IehNQmls
Expanding its graduate primary teaching cadre for Classes 6 to 8, the Department of School Education has published separate notifications across educational districts to recruit 643 Graduate Primary Teachers for English language instruction. To qualify, candidates must possess a Bachelor's degree with a minimum average of 50% along with a 2-year Diploma in Elementary Education, B.Ed., or Special B.Ed., or alternatively, a minimum 50% in PUC with a 4-year B.El.Ed. or 4-year Integrated Teacher Education Degree.
Applicants must have studied English along with another eligible elective language or social science subject for all three years of graduation, undergone practice teaching in English during their teacher education, and qualified in either KARTET or CTET. Candidates can access detailed notifications and apply online at https://t.co/i3IehNQmls.
#TeacherRecruitment2026 #KarnatakaEducation #GovtJobs #JobNotification #Shalashikshana #GovernmentSchoolsofKarnataka
ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಯಲ್ಲಿ (6 ರಿಂದ 8 ನೇ ತರಗತಿಗೆ) ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಬೋಧಿಸಲು 3,109 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ: 15-09-2026 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಿಂದ ಪಡೆದುಕೊಳ್ಳಬಹುದು. ಅಧಿಸೂಚನೆಗೆ ಮತ್ತು ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ: https://t.co/i3IehNPOvU
Expanding its graduate primary teaching cadre for Classes 6 to 8, the Department of School Education has published separate notifications across educational districts to recruit 3,109 Graduate Primary Teachers for Mathematics and Science subjects. Inviting online applications from eligible candidates across the state, the department has designated September 15, 2026, as the final deadline for submission. Job aspirants are advised to review the comprehensive notification parameters and register on the official portal at https://t.co/i3IehNPOvU.
#TeacherRecruitment2026 #KarnatakaEducation #GovtJobs #JobNotification #Shalashikshana #GovernmentSchoolsofKarnataka
ರಾಜ್ಯದ 500 ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಶಾಲೆ’ (KPS)ಗಳಾಗಿ ಉನ್ನತೀಕರಿಸಲು 1,750 ಕೋಟಿ ರೂ.ಗಳ ನೆರವು ಘೋಷಿಸಿರುವ ʻಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಮತ್ತು ರಾಜ್ಯ ಸರ್ಕಾರ ಇಂದು ಈ ಸಂಬಂಧದ ಒಪ್ಪಂದಕ್ಕೆ ಸಹಿ ಮಾಡಿವೆ. ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಎಡಿಬಿ ಅಧಿಕಾರಿಗಳು ಸಹಿ ಹಾಕಿದರು. ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ (2029-30ನೇ ಸಾಲಿನವರೆಗೆ) ರಾಜ್ಯ ಸರ್ಕಾರವು 2,500 ಕೋಟಿ ರೂ. ವಿನಿಯೋಗಿಸಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕೆ ಎಡಿಬಿ ಬ್ಯಾಂಕ್ 1,750 ರೂ.ಗಳ ನೆರವು ಒದಗಿಸಲಿದೆ. ಉಳಿದ 750 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಭರಿಸಲಿದೆ.
ಈ ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಮಾನ್ಯ ಡಾ. ಜಿ. ಪರಮೇಶ್ವರ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಮಧು ಬಂಗಾರಪ್ಪ, ಎಡಿಬಿ ನಿರ್ದೇಶಕಿ ಮಿಯೋ ಒಕಾ, ಕೈವಿ ಯಿಯೋ, ಎಡಿಬಿ ಬ್ಯಾಂಕಿನ ಹಿರಿಯ ಪ್ರಾಜೆಕ್ಟ್ ಆಫೀಸರ್ (ಶಿಕ್ಷಣ) ಶ್ರೀಮತಿ ಪೂನಂ ಎಸ್. ಭಾಂಬ್ರಿ, ಮಾನ್ಯ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಾದ ಶ್ರೀ ಎಲ್.ಕೆ. ಅತೀಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಶ್ಮಿ ವಿ. ಮಹೇಶ್, ಆರ್ಥಿಕ ವ್ಯವಹಾರಗಳ ಇಲಾಖೆ ಉಪಕಾರ್ಯದರ್ಶಿ ಸೌರಭ್ ಸಿಂಗ್, ಎಡಿಬಿ ಬ್ಯಾಂಕಿನ ಮತ್ತು ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
In a major push toward public education infrastructure, the State Government and the Asian Development Bank (ADB) signed a formal agreement to upgrade 500 government schools into Karnataka Public Schools (KPS). Executed in the presence of Chief Minister Shri D.K. Shivakumar, the signing by Department of School Education and ADB officials establishes a four-year implementation roadmap running through the 2029–30 academic year with a total outlay of ₹2,500 crore. Under the funding framework, ADB provides ₹1,750 crore in financial assistance while the state government contributes the remaining ₹750 crore.
The signing ceremony was attended by Deputy Chief Minister Dr. G. Parameshwara, Minister for School Education and Literacy Shri Madhu Bangarappa, ADB Director Mio Oka, Kai Wei Yeo, ADB Senior Project Officer Smt. Poonam S. Bhambri, Chief Minister’s Financial Advisor Shri L.K. Atheeq, Additional Chief Secretary Rashmi V. Mahesh, Department of Economic Affairs Deputy Secretary Saurabh Singh, and senior department officials.
#KarnatakaPublicSchool #KPSUpgrade #ADBLoan #DKS #MadhuBangarappa #KarnatakaEducation #Shalashikshana #GovernmentSchoolsofKarnataka #CMDKShivakumar
ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲೆಯಲ್ಲಿ (1 ರಿಂದ 8 ನೇ ತರಗತಿಗೆ) ಕಂಪ್ಯೂಟರ್ ಶಿಕ್ಷಣ ನೀಡಲು 500 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ಇನ್ನೂ ಬಿಎಡ್ ಮಾಡದೇ ಇರುವ ಕಂಪ್ಯೂಟ್ ಸೈನ್ಸ್ನಲ್ಲಿ, ಕಂಪ್ಯೂಟರ್ ಅಪ್ಲಿಕೇಷನ್ನಲ್ಲಿ ಪದವಿ ಪಡೆದವರು ಅಥವಾ ಕಂಪ್ಯೂಟರ್ ಸೈನ್ಸ್, ಇನ್ಫಾಮೇಷನ್ ಸೈನ್ಸ್ , ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳೂ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆದರೆ ನೇಮಕಾತಿಗೊಂಡ ಐದು ವರ್ಷಗಳ ಒಳಗಾಗಿ ಬಿ.ಎಡ್. ಪದವಿ ಪಡೆಯಬೇಕು ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯಬೇಕಿರುತ್ತದೆ. ಅಧಿಸೂಚನೆಗೆ ಮತ್ತು ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ: https://t.co/i3IehNQmls
The Department of School Education has issued district-wise recruitment notifications to appoint 500 Graduate Primary Teachers for Computer Education covering Classes 1 to 8. Opening doors for technical graduates without prior B.Ed. qualifications, the department has made candidates holding degrees in Computer Science, Computer Applications, or Engineering in Computer Science, Information Science, and Electronics & Communication eligible to apply. Under the relaxed mandate, selected candidates must successfully complete their B.Ed. degree and qualify the Teacher Eligibility Test (TET) within five years of joining service. Candidates can view detailed parameters and apply at https://t.co/i3IehNQmls.
#TeacherRecruitment2026 #KarnatakaEducation #GovtJobs #JobNotification #Shalashikshana #GovernmentSchoolsofKarnataka
ಶಾಲಾ ಶಿಕ್ಷಣ ಇಲಾಖೆಯು ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದ್ದು, ಆನ್ಲೈನ್ನಲ್ಲಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಸಂಪೂರ್ಣವಾಗಿ, ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ, ಶುಲ್ಕ, ಮೀಸಲಾತಿ ಇತ್ಯಾದಿಗಳನ್ನು ಅರ್ಥಮಾಡಿಕೊಂಡೇ ಮುಂದುವರಿಯಬೇಕೆಂದು ಕೋರಲಾಗಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲವಿದ್ದಲ್ಲಿ, ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಇಲಾಖೆಯ ʻಕೇಂದ್ರೀಕೃತ ದಾಖಲಾತಿ ಘಟಕʼವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಸಹಾಯವಾಣಿ ಸಂಖ್ಯೆ: 080- 22483145 / 22483140/ 9449588020
ವೆಬ್ಸೈಟ್: https://t.co/i3IehNQmls
The Department of School Education has issued educational district-wise notifications inviting online applications for teacher vacancies across the state. The department instructed applicants to thoroughly review and comprehend all eligibility parameters—including educational qualifications, age limits, fee structures, and reservation quotas—prior to submitting their forms online. Candidates facing ambiguities or requiring technical assistance are advised to contact the Centralised Admission Cell (CACell) via helplines 080-22483145, 080-22483140, or 9449588020, or visit the official portal at https://t.co/i3IehNQmls for verified guidance.
#TeacherRecruitment2026 #KarnatakaEducation #GovtJobs #JobNotification #Shalashikshana #GovernmentSchoolsofKarnataka
ಮಕ್ಕಳು ತರಗತಿಯಲ್ಲಿ ದಿನವಿಡೀ ಚುರುಕಾಗಿರಲು ಅವರ ದೇಹಕ್ಕೆ ನಿರಂತರ ಶಕ್ತಿಯ ಅಗತ್ಯವಿರುತ್ತದೆ. ಬಿಸಿಯೂಟದಲ್ಲಿ ನೀಡಲಾಗುವ ಮೊಟ್ಟೆಯು ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ಗಳ ಉತ್ತಮ ಸಂಯೋಜನೆಯನ್ನು ಹೊಂದಿದೆ. ಇದು ದೇಹಕ್ಕೆ ನಿಧಾನವಾಗಿ ಮತ್ತು ನಿರಂತರವಾಗಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮಕ್ಕಳು ಮಧ್ಯಾಹ್ನದ ನಂತರವೂ ಆಯಾಸವಿಲ್ಲದೆ ತರಗತಿಯ ಪಾಠಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗುತ್ತದೆ. ಮೊಟ್ಟೆಯಲ್ಲಿರುವ ಬಿ 12 ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ. ಬೆಂಗಳೂರಿನ ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದಲ್ಲಿ ಮೊಟ್ಟೆ ವಿತರಿಸುವ ಯೋಜನೆ ಜಾರಿಗೆ ತರಲಾಗಿದೆ.
Children require continuous energy throughout the day to stay active in the classroom. The eggs provided in midday meals contain an optimal combination of healthy fats and proteins. This releases energy slowly and steadily into the body, enabling children to actively participate in classroom lessons even after lunch without feeling fatigued. The Vitamin B12 present in eggs helps reduce anemia. This egg distribution initiative has been implemented in collaboration with the Azim Premji Foundation in Bengaluru.
#ActiveKids #EnergyBooster #KarnatakaSchools #ClassroomFocus #EggDietPower #KarnatakaEducation #SchoolNutrition #Shalashikshana #GovernmentSchoolsofKarnataka
ಅಭ್ಯರ್ಥಿಗಳೇ ಗಮನಿಸಿ! ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಒಂದೇ ವೃಂದದ ಒಂದು ಹುದ್ದೆಗೆ ಅಥವಾ ಎರಡು ಹುದ್ದೆಗೆ ಅಥವಾ ಎರಡಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಆದರೆ ಪ್ರತಿ ಹುದ್ದೆಗೆ ಅರ್ಜಿ ಶುಲ್ಕ ಪಾವತಿಸಬೇಕಾಗಿರುತ್ತದೆ. ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ಒಂದೇ ವೃಂದದ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸದರೆ 1,125 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಎಸ್ಸಿ/ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳು 750 ರೂ ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಎರಡಕ್ಕಿಂತ ಹೆಚ್ಚಿನ ಹುದ್ದೆಗಳಿಗೂ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿದ್ದು, ಈ ಮಾಹಿತಿಯನ್ನು ಅಧಿಸೂಚನೆಯಲ್ಲಿ ವಿವರವಾಗಿ ನೀಡಲಾಗಿದೆ. ಅಭ್ಯರ್ಥಿಗಳು ಇದನ್ನು ನೋಡಿಕೊಂಡೇ, ಶುಲ್ಕ ಪಾವತಿಸುವಂತೆ ಕೋರಲಾಗಿದೆ.
Attention Candidates! While applying for teacher posts, candidates have the option to apply for one post, two posts, or more than two posts within the same cadre. However, application fees must be paid separately for each post. General Merit (GM) Candidates: Applying for two posts within the same cadre requires an application fee of ₹1,125. SC / ST / Category-1 Candidates: Applying for two posts within the same cadre requires an application fee of ₹750. For applying to more than two posts, additional fees must be paid as per the detailed schedule provided in the notification. Candidates are requested to review these details carefully before making payment.
#TeacherRecruitment2026 #KarnatakaEducation #GovtJobs #JobNotification #Shalashikshana #GovernmentSchoolsofKarnataka #ApplicationFee
ಸರ್ಕಾರಿ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಸುತ್ತಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕೇಂದ್ರಿಕೃತ ದಾಖಲಾತಿ ಘಟಕವು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಮಾರ್ಗದರ್ಶಿ ಪ್ರಕಟಣೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಾಗ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಈ ಮಾರ್ಗದರ್ಶಿ ಪ್ರಕಟಣೆಯನ್ನು ಓದಿಕೊಳ್ಳುವಂತೆ ಕೋರಲಾಗಿದೆ. ನೇಮಕ ಪ್ರಕ್ರಿಯೆಯ ಕುರಿತು ಸಂಕ್ಷಿಪ್ತ ಮಾಹಿತಿಯನ್ನೂ ಇದರಲ್ಲಿ ನೀಡಲಾಗಿದೆ. ಮಾರ್ಗದರ್ಶಿ ಪ್ರಕಟಣೆ ನೋಡಲು ವೆಬ್ ಸೈಟ್ ಲಿಂಕ್: https://t.co/zlcEXy2LQO
Streamlining the application workflow for the ongoing statewide government school teacher recruitment drive, the Centralised Admission Cell (CAC) of the Department of School Education and Literacy has issued a detailed candidate guidance advisory. Designed to prevent errors and technical confusion during online registration, the instructional release outlines the step-by-step application procedure while offering a comprehensive overview of the overall recruitment process. Candidates are strongly advised to thoroughly review the instruction manual available on the official portal at https://t.co/zlcEXy2LQO prior to submitting their online forms.
#TeacherRecruitment2026 #KarnatakaEducation #ExamPattern #GovtJobs #JobNotification #Shalashikshana #GovernmentSchoolsofKarnataka #CentralisedAdmissionCell
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಅಧಿಸೂಚನೆ ಹೊರಡಿಸಿದೆ. ಇದರ ಜೊತೆಯಲ್ಲಿಯೇ ನೇಮಕಾತಿಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳ ಸಿಲಬಸ್ (Syllabus) ಅನ್ನು ಕೂಡ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿಲಬಸ್ ಅನ್ನು ಸರಿಯಾಗಿ ನೋಡಿಕೊಂಡು, ಸೂಕ್ತ ಪುಸ್ತಕಗಳನ್ನು ಆಯ್ಕೆಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಬೇಕೆಂದು ಕೋರಲಾಗಿದೆ. ಈ ಬಾರಿ ಪರೀಕ್ಷೆಯನ್ನು ವಸ್ತುನಿಷ್ಠ ಮಾದರಿಯಲ್ಲಿ ನಡೆಸಲಾಗುತ್ತದೆ. ಪ್ರತಿ ಪ್ರಶ್ನೆಗೆ ಬಹು ಆಯ್ಕೆಗಳಿರಲಿದ್ದು, ಪ್ರಶ್ನೆಗಳನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಮುದ್ರಿಸಲಾಗಿರುತ್ತದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು OMR ಶೀಟ್ನಲ್ಲಿ ಸರಿಯಾದ ಉತ್ತರವನ್ನು ನಿಗದಿತ ಸಮಯದೊಳಗೆ ಗುರುತಿಸಬೇಕಾಗಿರುತ್ತದೆ. ಸಿಲಬಸ್ ನೋಡಲು ವೆಬ್ ಸೈಟ್ ಲಿಂಕ್: https://t.co/zlcEXy2LQO
Facilitating targeted exam preparation alongside its ongoing district-wise teacher recruitment drive, the Department of School Education and Literacy has officially published the comprehensive competitive examination syllabus. Advising candidates to select appropriate study materials based on the newly released curriculum, the department highlighted that the examination will follow an objective Multiple Choice Question (MCQ) format printed in both Kannada and English. Applicants are required to mark their responses on OMR sheets within the allotted timeframe and can access the detailed syllabus syllabus directly on the official portal at https://t.co/zlcEXy2LQO.
#TeacherRecruitment2026 #OMRExam #KarnatakaEducation #ExamPattern #GovtJobs #JobNotification #Shalashikshana #GovernmentSchoolsofKarnataka #ExamSyllabus
ಸರ್ಕಾರಿ ಶಾಲಾ ಶಿಕ್ಷಕರ ನೇಮಕಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಪರೀಕ್ಷೆಯನ್ನು ವಸ್ತುನಿಷ್ಠ ಮಾದರಿಯಲ್ಲಿ ನಡೆಸಲಾಗುತ್ತದೆ. ಪ್ರತಿ ಪ್ರಶ್ನೆಗೆ ಬಹು ಆಯ್ಕೆಗಳಿರಲಿದ್ದು, ಪ್ರಶ್ನೆಗಳನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಮುದ್ರಿಸಲಾಗಿರುತ್ತದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು OMR ಶೀಟ್ನಲ್ಲಿ ಸರಿಯಾದ ಉತ್ತರವನ್ನು ನಿಗದಿತ ಸಮಯದೊಳಗೆ ಗುರುತಿಸಬೇಕಾಗಿರುತ್ತದೆ. ಪ್ರಶ್ನೆ ಪತ್ರಿಕೆ ಹೇಗಿರಲಿದೆ ಎಂಬ ಮಾಹಿತಿಯನ್ನು ನೀಡುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಇದನ್ನು ನೋಡಿಕೊಂಡು, ಪರೀಕ್ಷೆಗೆ ಸಿದ್ಧತೆ ನಡೆಸಬೇಕೆಂದು ಕೋರಲಾಗಿದೆ. ವೆಬ್ ಸೈಟ್ ಲಿಂಕ್: https://t.co/zlcEXy3jGm
Introducing key structural reforms in the competitive examination pattern for government school teacher recruitment, the Department of School Education and Literacy has announced a shift to an objective Multiple Choice Question (MCQ) format. Printed in both Kannada and English, the exam paper requires candidates to mark their responses on OMR sheets within the allotted time limit. To acquaint job aspirants with the updated format and syllabus layout, the department has officially published model question papers on its portal at https://t.co/zlcEXy3jGm, urging candidates to utilize these resources for their preparation.
#TeacherRecruitment2026 #OMRExam #KarnatakaEducation #ExamPattern #GovtJobs #JobNotification #Shalashikshana #GovernmentSchoolsofKarnataka #ModelQuestionPapers
ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ನೀಡುವ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2026'ಗೆ (National Teachers Award- 2026) ಆಯ್ಕೆಯಾದ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರತ್ನಕುಮಾರಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಿಸ್ವಾರ್ಥ ಸೇವೆ ಮತ್ತು ಸಾಧನೆ ಇಲಾಖೆ ಹೆಮ್ಮೆಪಡುವಂತೆ ಮಾಡಿದೆ. ನಿಮ್ಮ ಈ ಶೈಕ್ಷಣಿಕ ಕಾಯಕ ಹೀಗೆಯೇ ನಿರಂತರವಾಗಿರಲಿ ಎಂದು ಹಾರೈಸುತ್ತೇವೆ.
Extending hearty congratulations on a stellar national recognition, the Department of School Education and Literacy has commended Smt. Ratnakumari, Headmistress of the Government Higher Primary School, Samatagaru, located in Huncha Gram Panchayat of Hosanagara Taluk, Shivamogga District, on being selected for the prestigious 'National Teachers Award 2026' conferred by the Ministry of Education, Government of India. Commending her selfless dedication, exemplary service, and transformative contributions to primary education, the department expressed immense pride in her accomplishments and wished her continued success in her noble educational journey.
#NationalTeachersAward2026 #NationalTeachersAward #KarnatakaEducation #Shalashikshana #GovernmentSchoolsofKarnataka #Ratnakumari
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲಾ ಶಿಕ್ಷಕರ ನೇಮಕಕ್ಕೆ ಶೈಕ್ಷಣಿಕ ಜಿಲ್ಲಾವಾರು ಅಧಿಸೂಚನೆ ಹೊರಡಿಸಿದ್ದು, ಧಾರವಾಡ ಶೈಕ್ಷಣಿಕ ಜಿಲ್ಲೆಗೆ ಸಂಬಂಧಿಸಿದಂತೆ ತಿದ್ದುಪಡಿ ಅಧಿಸೂಚನೆ ಪ್ರಕಟಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಧಾರವಾಡ ಜಿಲ್ಲೆಗೆ ಸಂಬಂಧಿಸಿದ ಅಧಿಸೂಚನೆಯಲ್ಲಿ ಹಾವೇರಿ ಜಿಲ್ಲೆಯ ಪೂರ್ಣ ಅಧಿಸೂಚನೆ ನಮೂದಾಗಿದ್ದರಿಂದ ಧಾರವಾಡ ಜಿಲ್ಲೆಯ ಅಧಿಸೂಚನೆಯನ್ನು ಸರಿಪಡಿಸಿ, ತಿದ್ದುಪಡಿ ಅಧಿಸೂಚನೆ ಪ್ರಕಟಿಸಲಾಗಿದೆ. ತಿದ್ದುಪಡಿ ಅಧಿಸೂಚನೆಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ವೆಬ್ ಸೈಟ್ ಲಿಂಕ್: https://t.co/zlcEXy2LQO
Rectifying a clerical overlap in its ongoing statewide teacher recruitment process, the Department of School Education and Literacy has issued a corrigendum for Dharwad educational district. The amendment was necessitated after technical errors resulted in the complete notification text for Haveri district being erroneously published under Dharwad district. The department confirmed that the updated notification for Dharwad has now been uploaded correctly on its portal at https://t.co/zlcEXy2LQO, advising candidates from the region to review the corrected details before applying.
#TeacherRecruitment2026 #KarnatakaEducation #Dharwad #GovtJobs #JobNotification #Shalashikshana #GovernmentSchoolsofKarnataka
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 15 ಸಾವಿರ ಶಿಕ್ಷಕರ ನೇಮಕಕ್ಕೆ ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರವು ದಿನಾಂಕ 29-01-2026 ರಂದು ಆದೇಶ ಹೊರಡಿಸಿರುವಂತೆಯೇ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಲಾಗಿದೆ. ದಿನಾಂಕ: 18-12-2008ರ ಸರ್ಕಾರದ ಆದೇಶದ ಪ್ರಕಾರ ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗದವರಿಗೆ 35 ವರ್ಷ, ಪ್ರವರ್ಗ IIA, IIB, IIIA ಮತ್ತು IIIBಯವರಿಗೆ 38 ವರ್ಷ ಹಾಗೂ ಎಸ್ಸಿ/ಎಸ್ಟಿ/, ಪ್ರವರ್ಗ-1 ರ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿತ್ತು. ಈಗ ಎಲ್ಲಾ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 5 ವರ್ಷ ಹೆಚ್ಚಿಸಲಾಗಿದೆ. ವಯೋಮಿತಿಯ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದ್ದು, ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡೇ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್ಸೈಟ್ ಲಿಂಕ್ : https://t.co/i3IehNQmls.
The Department of School Education and Literacy has issued district-wise notifications to recruit 15,000 teachers, incorporating a five-year upper age limit relaxation pursuant to the Government Order dated January 29, 2026. Revising the baseline age criteria established under the Government Order dated December 18, 2008—which previously capped the maximum age at 35 years for General Category, 38 years for Categories 2A, 2B, 3A, and 3B, and 40 years for SC, ST, Category-1, and Persons with Disabilities—the new mandate extends the upper age limit by five years across all candidate categories. Prospective applicants are advised to thoroughly review their respective district notifications prior to submitting applications via the recruitment portal at https://t.co/i3IehNQmls.
#TeacherRecruitment2026 #KarnatakaEducation #GovtJobs #JobNotification #Shalashikshana #GovernmentSchoolsofKarnataka #AgeRelaxation