ಹೆಮ್ಮೆಯ ಕನ್ನಡಿಗರು ನಾವು 💛❤️ ಆದರೆ ಪರಭಾಷೆ ಸಂಸ್ಕೃತಿಗೆ ಪರಭಾಷೆಗೆ ಮಾರುಹೋಗೋದ್ರಲ್ಲಿ ಮೊದಲು
ಕನ್ನಡ ಭಾಷೆ ನಮ್ಮ ಅಸ್ತಿತ್ವ, ಎಲ್ಲೇ ಇದ್ದರೂ ಕನ್ನಡ ಮಕ್ಕಳಿಗೆ ಸ್ವಾಭಿಮಾನದಿಂದ ಬೆಳೆಸಿ ಅದಕ್ಕಾಗಿ ಕನ್ನಡ ಇತಿಹಾಸ ಕಡ್ಡಾಯವಾಗಿ ತಿಳಿಸಿ ಇಲ್ಲಾಂದರೆ ಪರಭಾಷೆ ಸಂಸ್ಕೃತಿಗೆ/ಪರಭಾಷೆಗಳಿಗೆ ಮಾರು ಹೋಗುತ್ತಾರೆ.
https://t.co/Z5yDjZg5ni
ಶುಭೋದಯ ಕನ್ನಡಿಗರೇ
ಮನೆಗೆ ನುಗ್ಗಿ ವಕೀಲ ಮಂಜುನಾಥ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ.
ಸ್ವಿಗ್ಗಿ-ಜೊಮ್ಯಾಟೋದಲ್ಲಿ ಕೆಲಸ ಮಾಡ್ತಿದ್ದ ಇಬ್ಬರು ಬಿಹಾರ ಮೂಲದ ವ್ಯಕ್ತಿಗಳೇ ಮಾಲೀಕನನ್ನ ಹತ್ಯೆ ಮಾಡಿರುವ ಅನುಮಾನ.
ಕೃಪೆ:https://t.co/KwTF94MpjG
ರಾಜ್ಯದ ಜನ ಎತ್ತುಕೊಳ್ಳಿ.
"ಕನ್ನಡದ ಸೊಲ್ಲರಿಮೆ" ಹೊತ್ತಗೆ ಬಿಡುಗಡೆಯಾದಾಗ ಮೂಡಿಬಂದ ಬರಹ
ಕನ್ನಡ ವ್ಯಾಕರಣ ಎಂದು ಇಂದು ನಾವು ಕಲಿಯುತ್ತಿರುವ ವ್ಯಾಕರಣಗಳು ನಿಜಕ್ಕೂ ಕನ್ನಡದ ವ್ಯಾಕರಣಗಳೇ ಅಲ್ಲ. ಬೇರೆ ನುಡಿಗಳ ವ್ಯಾಕರಣಗಳನ್ನು ಕನ್ನಡಕ್ಕೆ ಅಳವಡಿಸುವ ಬಳಕೆಗೆ ಬಾರದ ಪ್ರಯತ್ನ ಮಾತ್ರ.
https://t.co/hsMBioiNM5
The book "Bhagavante Maranam" was written in Malayalam by author K.R. Meera, pertaining to the killing of M.M. Kalaburgi. The hole in the title cover is carried over to all pages, symbolizing the Hindutva bullet that shot down "Basavatatva" and humanity.
#MMKalburgi#Basavatatva
ನಿಮ್ಮ ಮಗುವಿಗೆ ಇಂಗ್ಲಿಶ್ ನುಡಿ ಮಾತ್ರ ಸಾಕೇ ?
ಮೊದಲನೇ ನುಡಿಯನ್ನು ಅವರು ಶಾಲೆಯಲ್ಲಿ ಬಳಸಲೇಬಾರದೆಂಬುದಾಗಿ ಅವರ ಮೇಲೆ ಒತ್ತಾಯ ಹೇರಿದರೆ, ಅವರಿಗೆ ಅದರ ಮೇಲೆ ಕೀಳರಿಮೆಯುಂಟಾಗುತ್ತದೆ ಮಾತ್ರವಲ್ಲ, ಅವರ ಎರಡನೇ ನುಡಿಯ ಕಲಿಕೆಯೂ ತೊಡಕಿನದಾಗುತ್ತದೆ.
https://t.co/RlPlYuQZLV
ಅರವತ್ತು ವರ್ಷಗಳ ಹಿಂದೆ ಬೆಂಗಳೂರು ಇಷ್ಟು ದೊಡ್ಡದಾಗಿರಲಿಲ್ಲ. ಆಗ ಎರಡು ಬೆಂಗಳೂರು ಇತ್ತು. ಅತ್ತ ಕಡೆ ದಂಡು ಪ್ರದೇಶದ ಭಾಗ ಮತ್ತು ಇತ್ತ ಕಡೆ ನಗರ ಪ್ರದೇಶದ ಭಾಗ. ನಾವೆಲ್ಲ ನಗರದಲ್ಲಿ ಓಡಾಡುತ್ತಿದ್ದೆವೇ ಹೊರತು ದಂಡು ಪ್ರದೇಶದ ಕಡೆಗೆ ಹೋಗುತ್ತಿರಲಿಲ್ಲ.
ನಾನು ಹುಟ್ಟಿದ್ದು, ಬೆಳೆದಿದ್ದು ವಿದ್ಯಾಭ್ಯಾಸ ಮಾಡಿದ್ದೆಲ್ಲ ಮೈಸೂರಿನಲ್ಲಿ. 1940ರ ವೇಳೆಗೆ ಬೆಂಗಳೂರಿಗೆ ಬಂದೆ. ವಿಜಯಾ ಕಾಲೇಜಿನಲ್ಲಿ ಕೆಲಸ ಸಿಕ್ಕ ನಂತರ ಬೆಂಗಳೂರು ಕಾಯಂ ವಾಸಸ್ಥಳವಾಯಿತು.
ಬೆಂಗಳೂರಿಗೆ ಬಂದ ಹೊಸತರಲ್ಲಿ ವಾಸ ಮಾಡುತ್ತಿದ್ದದ್ದು ವಿಶ್ವೇಶ್ವರಪುರದಲ್ಲಿ. ಆಗ ವಿಶ್ವೇಶ್ವರಪುರ ಬೆಂಗಳೂರಿನ ಕೇಂದ್ರ ಪ್ರದೇಶವಾಗಿತ್ತು. ತುಂಬಾ ಸೊಗಸಾದ ಜಾಗವದು. ಈಗ ಅದನ್ನು ನೆನಪು ಮಾಡಿಕೊಳ್ಳುವುದಕ್ಕೆ ಆಗುವುದೇ ಇಲ್ಲ.
ವಿಶ್ವೇಶ್ವರಪುರದ ವೃತ್ತ ಇದೆ ನೋಡಿ, ಅಲ್ಲಿ ಸುಂದರವಾದ ಹುಲ್ಲುಗಾವಲಿತ್ತು. ಸಾಯಂಕಾಲದ ಹೊತ್ತು ಹೆಂಗಸರೆಲ್ಲ ತಮ್ಮ ಮಕ್ಕಳೊಂದಿಗೆ ಅಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು.
ವೈಶ್ಯ ಸಮುದಾಯದವರು ಹೆಚ್ಚಾಗಿದ್ದ ಪ್ರದೇಶವದು. ಈಗ ಅಲ್ಲಿ ವೈಶ್ಯರು ಇಲ್ಲವೇ ಇಲ್ಲ. ಜೈನ ಸಮುದಾಯದವರು ಸೇರಿಕೊಂಡಿದ್ದಾರೆ. ದೇವಸ್ಥಾನ ಕೂಡ ಕಟ್ಟಿಕೊಂಡಿದ್ದಾರೆ.
ಅಂದಿನ ದಿನಗಳಲ್ಲಿ ಬೆಂಗಳೂರು ಎಂದರೆ ಮಲ್ಲೇಶ್ವರ, ಮಾರ್ಕೆಟ್, ಶಂಕರಪುರ, ಚಾಮರಾಜಪೇಟೆ, ಬಸವನಗುಡಿ, ಹನುಮಂತನಗರ, ವಿಶ್ವೇಶ್ವರಪುರ... ಅಲ್ಲಿ ನಾಗಸಂದ್ರ ಅಂತ ಒಂದು ಹಳ್ಳಿ ಇತ್ತು... ಡಿಸ್ಟ್ರಿಕ್ಟ್ ಆಫೀಸ್ ಕಡೆಗೊಂದಿಷ್ಟು ಬೆಳೆದಿತ್ತು. ಇಷ್ಟೇ ಬೆಂಗಳೂರು ಇದ್ದಿದ್ದು.
ರಾಗಿ ಪೈರಿನ ಸಮೃದ್ಧಿ
ವಿಲ್ಸನ್ ಗಾರ್ಡನ್ ಅನ್ನುವುದು ಕೂಡ ಹೊಸದು. ಜಯನಗರವೂ ಹೊಸದು. ನಿಟ್ಟೂರು ಶ್ರೀನಿವಾಸರಾಯರ ಮನೆ ಇದೆ ನೋಡಿ, ಅಲ್ಲಿ ಸೌತ್ ಎಂಡ್ ರಸ್ತೆ ಇದ್ಯಲ್ಲ, ಅದು ನಿಜವಾಗಿಯೂ ಬೆಂಗಳೂರಿನ ಕೊನೆ ಆಗಿತ್ತು. ಅಲ್ಲಿಂದ ಆಚೆಗೆಲ್ಲ ರಾಗಿ ಹೊಲಗಳು. ರಾಗಿಗುಡ್ಡ ಬೇರೆ ಇದೆ ಅಲ್ಲಿ. ನಿಟ್ಟೂರು ಶ್ರೀನಿವಾಸರಾಯರ ಮನೆ ಎದುರು ನಿಂತುಕೊಂಡರೆ ರಾಗಿ ಪೈರು ಕಾಣುತ್ತಿತ್ತು.
ಆಮೇಲೆ ಜಯನಗರ ಅಂತ ದೊಡ್ಡ ಬಡಾವಣೆ ಆರಂಭಿಸಿದರು. ಸೊಗಸಾದ ಮುಖ್ಯರಸ್ತೆ– ಅಡ್ಡರಸ್ತೆಗಳನ್ನು ಮಾಡಿದರು. ಈಗ ಆ ಪ್ರದೇಶವೇ ನಗರದ ಕೇಂದ್ರವಾಗಿದೆ. ಆಗ ನಮಗೆ ಬೆಂಗಳೂರು ಇಷ್ಟೊಂದು ಬೆಳೆಯುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ.
ವಿಶ್ವೇಶ್ವರಪುರದಲ್ಲಿದ್ದಾಗ ವಾಯುವಿಹಾರಕ್ಕಾಗಿ ಲಾಲ್ಬಾಗ್ಗೆ ಹೋಗುತ್ತಿದ್ದೆ. ಲಾಲ್ಬಾಗ್ಗೆ ಒಂದು ಸುತ್ತು ಹಾಕಿ ಮನೆಗೆ ಬಂದರೆ ದೇಹಕ್ಕೆ ವ್ಯಾಯಾಮವಾಗಿ ಮನಸ್ಸು ಉಲ್ಲಸಿತವಾಗುತ್ತಿತ್ತು. ಅದಿಲ್ಲದೆ ಹೋದರೆ ಬಸವನಗುಡಿ ಗುಡ್ಡ ಇದ್ಯಲ್ಲ, ಅಲ್ಲಿಗೆ ಹೋಗ್ತಾ ಇದ್ದೆ. ಬಸವನಗುಡಿಯಲ್ಲಿನ ಬಸವನ ವಿಗ್ರಹ ನೋಡಿ ನಮಸ್ಕಾರ ಮಾಡಿ ಬರುತ್ತಿದ್ದೆ. ನರಹರಿರಾಯನ ಗುಡ್ಡದಲ್ಲಿಯೂ ಒಂದು ದೇವಸ್ಥಾನ ಇದೆ. ಅಲ್ಲಿಗೂ ಸುತ್ತಾಡಲು ಹೋಗುತ್ತಿದ್ದೆ.
ಮಾರ್ಕೆಟ್ನ ಬೆರಕೆ ಸೊಪ್ಪು
ತರಕಾರಿ ತೆಗೆದುಕೊಳ್ಳಬೇಕು ಎಂದರೆ ವಿಶ್ವೇಶ್ವರಪುರದಿಂದ ಮಾರ್ಕೆಟ್ಗೆ ಹೋಗಬೇಕಾಗಿತ್ತು. ಮಾರ್ಕೆಟ್ನಲ್ಲಿ ಒಂದು ಕಡೆ ಬೆರಕೆ ಸೊಪ್ಪು ಅಂತ ಮಾರುತ್ತಿದ್ರು. ಯಾವ್ಯಾವುದೋ ಸೊಪ್ಪುಗಳನ್ನು ಸೇರಿಸಿ ಕೂಡಿಸಿ ಗುಡ್ಡೆ ಮಾಡಿ ಇಟ್ಟಿರುತ್ತಿದ್ದರು. ಎರಡಾಣೆಗೆ ಒಂದು ಗುಡ್ಡೆ ಸಿಗುತ್ತಿತ್ತು. ಒಂದು ಗುಡ್ಡೆ ತಗೊಂಡ್ರೆ ಒಂದು ಸಣ್ಣ ಕುಟುಂಬಕ್ಕೆ ಸಾಕಾಗುವಷ್ಟು ಹುಳಿ ಮಾಡಬಹುದಿತ್ತು.
ಅದು ಬಿಟ್ಟರೆ ಗಾಂಧಿ ಬಜಾರ್ನಲ್ಲಿಯೂ ತರಕಾರಿ ಸಿಗುತ್ತಿತ್ತು. ಈ ಎರಡು ಜಾಗಗಳನ್ನು ಬಿಟ್ಟರೆ, ಈಗಿನ ಹಾಗೆ ಗಾಡಿಯಲ್ಲಿ ತುಂಬಿಕೊಂಡು ಬೀದಿ ಬೀದಿಗೆ ಬರುತ್ತಾರಲ್ಲಾ, ಹಾಗೆ ಯಾರೂ ಬರುತ್ತಿರಲಿಲ್ಲ.
ಆಗ ಹೋಟೆಲ್ಗಳ ಸಂಖ್ಯೆಯೂ ಕಡಿಮೆ ಇತ್ತು. ಹೋಟೆಲ್ಗೆ ಹೋಗಿ ತಿಂಡಿ ತಿನ್ನುವ ಪದ್ಧತಿ ಅಷ್ಟಾಗಿ ಇರಲಿಲ್ಲ. ಈಗ ಬೀದಿಗೊಂದು ಹೋಟೆಲ್ ಇದೆ. ವಿಶ್ವೇಶ್ವರಪುರದಿಂದ ಮಲ್ಲೇಶ್ವರಕ್ಕೆ ಸ್ನೇಹಿತರನ್ನು ನೋಡಲು ನಾನು ನಡೆದುಕೊಂಡು ಹೋಗುತ್ತಿದ್ದೆ. ಅಲ್ಲಿನ ನನ್ನ ಸ್ನೇಹಿತರೂ ಇಲ್ಲಿಗೆ ಬರುತ್ತಿದ್ದರು.
ಪರ್ವತವಾಣಿ ಅಂತ ನನ್ನ ಸ್ನೇಹಿತರಿದ್ದರು. ಆರ್. ಗುರುರಾಜಲು ಅವರೂ ಸ್ನೇಹಿತರಾಗಿದ್ದರು. ನಾವೆಲ್ಲ ಸೇರಿ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾ ಕಾಲ ಕಳೆಯುತ್ತಿದ್ದೆವು. ವಿಶ್ವಾಸದ ಮಾತು, ಸಾಹಿತ್ಯದ ಚರ್ಚೆ, ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳನ್ನು ಮಾತನಾಡುತ್ತಿದ್ದೆವು. ಹೊಸದಾಗಿ ಬಂದ ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದೆವು. ಆ ಚರ್ಚೆಯೇ ಒಳ್ಳೆಯ ವಿಮರ್ಶೆಯಾಗಿರುತ್ತಿತ್ತು.
ಆಗಿನ ಕಾಲದಲ್ಲಿ ಸಿನಿಮಾ ನೋಡುವುದು ಒಂದು ಹುಚ್ಚು. ‘ಒಪೆರಾ’ದಲ್ಲಿ ಇಂಗ್ಲಿಷ್ ಚಿತ್ರಗಳು ಬರುತ್ತಿದ್ದವು. ಅದನ್ನು ನೋಡಲು ಶನಿವಾರ, ಭಾನುವಾರ ಸ್ನೇಹಿತರ ಜೊತೆಗೆ ಹೋಗುತ್ತಿದ್ದೆ.
ಡಿವಿಜಿ ಅವರಿಂದ ಭಗವದ್ಗೀತೆ ಪಾಠ
ಬಸವನಗುಡಿ ಪೊಲೀಸ್ ಸ್ಟೇಷನ್ ವೃತ್ತದ ಸನಿಹ ಡಿ.ವಿ.ಗುಂಡಪ್ಪನವರು ಒಂದು ಬಾಡಿಗೆ ಮನೆಯಲ್ಲಿ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ ಆರಂಭಿಸಿದ್ದರು. ಅಲ್ಲಿ ನಿತ್ಯ ಸಂಜೆ ಯಾವುದಾದರೂ ವಿಚಾರ ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದರು.
ಅಲ್ಲಿ ಭಗವದ್ಗೀತೆಯನ್ನು ಮೊದಲಿನಿಂದಲೂ ಕೊನೆಯವರೆಗೆ ಎರಡು ಸಲ ಪಾಠ ಮಾಡಿದ್ದರು. ಸಾಯಂಕಾಲ ಆರರಿಂದ ಏಳೂವರೆ ತನಕ ಭಗವದ್ಗೀತೆ ಶ್ಲೋಕ ಓದಿ ಅರ್ಥ ವ್ಯಾಖ್ಯಾನ ಮಾಡುತ್ತಿದ್ದರು. ನಾವೆಲ್ಲ ಅವರ ಮಾತನ್ನು ಕೇಳಲಿಕ್ಕೆ ಹೋಗುತ್ತಿದ್ದೆವು.
ಅವರು ಪಾಠ ಮಾಡಿದ್ದನ್ನೆಲ್ಲ ಅವರ ಶಿಷ್ಯ ಎಸ್.ಆರ್.ರಾಮಸ್ವಾಮಿ ಸಂಗ್ರಹಿಸಿ ‘ಪ್ರಜಾಮತ’ ಪತ್ರಿಕೆಗೆ ಬರೆಯುತ್ತಿದ್ದರು. ಆ ಬರಹಗಳೆಲ್ಲ ಸೇರಿ ‘ಜೀವನ ಧರ್ಮ ಯೋಗ’ ಎಂಬ ಒಂದು ಪುಸ್ತಕವೂ ಬಂದಿದೆ.
ಆ ಪುಸ್ತಕಕ್ಕೆ 1964ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಆಗ ನಾನು ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದೆ. ಅಕಾಡೆಮಿಯಿಂದ ಫೋನ್ ಮಾಡಿ ನನಗೆ ವಿಷಯ ತಿಳಿಸಿದರು. ನಾನು ಹೋಗಿ ಗುಂಡಪ್ಪನವರಿಗೆ, ‘ಸರ್ ನಿಮ್ಮ ಪುಸ್ತಕಕ್ಕೆ ಪ್ರಶಸ್ತಿ ಬಂದಿದೆ’ ಎಂದು ಹೇಳಿದೆ. ‘ನನಗೆ ಬಹುಮಾನ ಬಂದಿದೆಯೇ? ಗೋಖಲೆ ಇನ್ಸ್ಟಿಟ್ಯೂಟ್ಗೆ ಒಂದಿಷ್ಟು ದುಡ್ಡು ಬಂತು’ ಎಂದು ಪ್ರತಿಕ್ರಿಯಿಸಿದ್ದರು.
From FB.
Continues..