ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿ ವಿರುದ್ಧ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಮಾನತೆಯ ಹಕ್ಕುಗಳಿಗಾಗಿ ಹೋರಾಡಿ, ಮಹಿಳಾ ಶಿಕ್ಷಣದ ಕ್ರಾಂತಿ ಜ್ಯೋತಿಯಾದ ಸಾವಿತ್ರಿಬಾಯಿ ಫುಲೆ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.
#SavitribhaiPhule
ಇಂದು ಅಂತರಾಷ್ಟ್ರೀಯ ಮಹಿಳಾ ದಿನ.
ಗೃಹಿಣಿಯರಿಂದ ಮೊದಲುಗೊಂಡು ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಸೇವೆಗೈಯುತ್ತಾ ಸಾಧನೆ ಮಾಡುತ್ತಿರುವ ಎಲ್ಲಾ ಮಹಿಳೆಯರಿಗೆ ಗೌರವಪೂರ್ವಕ ಅಭಿನಂದನೆಗಳು.
ಅವರ ಶಿಕ್ಷಣ, ಸಬಲೀಕರಣ ಮತ್ತು ಗೌರವವೇ
ಸಶಕ್ತ ಸಮಾಜಕ್ಕೆ ಬುನಾದಿ.
ಅವರ ಶಕ್ತಿಯೇ ನಮಗೆ ಪ್ರೇರಣೆ.
#women#womensday#inspirewomen
ನಮ್ಮ ಮಂಡ್ಯ ಜಿಲ್ಲೆಯ, ಕೆ.ಆರ್ ಪೇಟೆ ತಾಲೂಕಿನ ಅಂಬಿಗರಹಳ್ಳಿ ಗ್ರಾಮದ ಪ್ರತಿಭಾವಂತ ಯುವಕ ಶಿವರಾಮು ಮತ್ತು ಅರುಣಕುಮಾರಿ ದಂಪತಿಗಳ ಪುತ್ರ, ವೈದ್ಯರು ಆಗಿದ್ದ ಡಾ. ಮುತ್ತೇಶ್ ಗೌಡ ಅವರು ಐ.ಎ.ಎಸ್ ಪರೀಕ್ಷೆಯಲ್ಲಿ 622ನೇ ರ್ಯಾಂಕ್ ಗಳಿಸಿ ಸಾಧನೆ ಮಾಡಿ ತಾಲ್ಲೂಕಿನ ಗೌರವ ಹೆಚ್ಚಿಸಿದ್ದಾರೆ, ಅವರಿಗೆ ತಾಲ್ಲೂಕಿನ ಪರವಾಗಿ ಅಭಿನಂದನೆಗಳು.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭಾಶಯಗಳು 💐
ಆತ್ಮವಿಶ್ವಾಸವೇ ಯಶಸ್ಸಿನ ಮೊದಲ ಹೆಜ್ಜೆ. ನೀವು ಕಲಿತದ್ದು ನಿಮ್ಮನ್ನು ಮುನ್ನಡೆಸುತ್ತದೆ. ಶಾಂತವಾಗಿ ಯೋಚಿಸಿ, ಸಮರ್ಥವಾಗಿ ಬರೆಯಿರಿ. ನಿಮ್ಮ ಸಾಧನೆ ರಾಜ್ಯಕ್ಕೆ ಹೆಮ್ಮೆ ತರಲಿ.
#2ndPUC#exam
ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. ವಿಜ್ಞಾನ ಬೆಳಗಲಿ, ಜ್ಞಾನ ವೃದ್ಧಿಸಲಿ. ಎಲ್ಲರಿಗೂ ರಾಷ್ಟ್ರೀಯ ವಿಜ್ಞಾನ ದಿನದ ಶುಭಾಶಯಗಳು.
#NationalScienceDay
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಬೂತ್ ಕಮಿಟಿ ಸದಸ್ಯರಿಗೆ ಹಮ್ಮಿಕೊಂಡಿರುವ ಮೊದಲನೆ ಹಂತದ ವಿಶೇಷ ಸಮಗ್ರ ಪರಿಷ್ಕರಣೆ, BLA - 2 ಕಾರ್ಯಾಗಾರಕ್ಕೆ ಬೂತ್ ಕಮಿಟಿಯ ಎಲ್ಲಾ ಸದಸ್ಯರು ಕಡ್ಡಾಯವಾಗಿ ಆಗಮಿಸಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ಕೋರುತ್ತೇನೆ.
ದಿನಾಂಕ ; 20/02/2026ನೇ ಶುಕ್ರವಾರ
ಸಮಯ ; 10:30 AM
ಸ್ಥಳ ; ಯಶಸ್ವಿನಿ ಸಮುದಾಯ ಭವನ