NEET exam ಬರೆದ ವಿದ್ಯಾರ್ಥಿಗಳು ಜೋರಾಗೇ ಸಂಭ್ರಮಿಸುತ್ತಿದ್ದಾರೆ.
ಆದರೆ ಈ ಪ್ರತಿಭಟನೆ ಮಾಡುತ್ತಿರುವವರು! ಅದೇ ಹಳೆ ರಾಗ ಅದೆ ಹಾಡು ಎನ್ನುವ ಹಾಗೆ ಒಟ್ಟಿನಲ್ಲಿ ಮೋದಿಯವರನ್ನು ವಿರೋಧಿಸಬೇಕು, ಭಾರತದಲ್ಲಿ ಅರಾಜಕತೆ ಸೃಷ್ಟಿಸಬೇಕು, ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಬೇಕು ಈಗೆ ಹಲವು ರೀತಿ ಇವರ ವಿರೋಧ ಭಾರತದ ವಿರುದ್ಧ ನೆಡೆಯುತ್ತಿದೆ.
ಈ ಸಿನಿಮಾ ನಟರು, ಬುದ್ಧಿವಂತರು ಎನ್ನಿಸಿಕೊಳ್ಳುವ ಬುದ್ಧಿಮಾಂದ್ಯತೆಯ ಜನರು ಪ್ರತಿಯೊಂದು ಹೋರಾಟವನ್ನೂ ಅದರ ಮೂಲ ಉದ್ದೇಶದ ಆಧಾರದ ಮೇಲೆ ಅರ್ಥಮಾಡಿಕೊಳ್ಳುವುದು ಮತ್ತು ಚರ್ಚಿಸುವುದು ಹೆಚ್ಚು ಜವಾಬ್ದಾರಿಯುತವಾದ ನಿಲುವು.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತು ಪೋಸ್ಟ್ ಮಾಡುವ ಮೊದಲು, ಅದು ನಿಜವಾಗಿಯೂ ಯಾವ ಕಾರಣಕ್ಕಾಗಿ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.
ಒಂದು ವೇಳೆ ಅದು ವಿದ್ಯಾರ್ಥಿಗಳ ಬೇಡಿಕೆಗಳ ಪರವಾದ ಹೋರಾಟವಾಗಿದ್ದರೆ, ಅದರ ಚರ್ಚೆಯೂ ಅದೇ ವಿಷಯಕ್ಕೆ ಮಾತ್ರ ಸೀಮಿತವಾಗಿರಬೇಕು.
1/2
ಕಾಶ್ಮೀರ, ಆರ್ಟಿಕಲ್ 370, ಅಯೋಧ್ಯಾ ರಾಮ ಮಂದಿರ ಅಥವಾ ಹಿಂದುತ್ವದ ವಿರೋಧದಂತಹ ಮತ್ತು ಬೇರೆ ರಾಜಕೀಯ ವಿಚಾರಗಳನ್ನು ಈ ಹೋರಾಟಕ್ಕೆ ತಳುಕು ಹಾಕಿ ನೋಡುವುದು ಅಥವಾ ಜೋಡಿಸುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದನ್ನು ಯೋಚಿಸಬೇಕು.
1/3
ನಿನ್ನ ನೆರಳಲ್ಲಿ ನಿಂತಾಗ
ನನ್ನ ರೂಪಕ್ಕೆ ಅರ್ಥ ಸಿಗುತ್ತದೆ.
ನಿನ್ನ ನಗು ಹರಿದಾಗ
ನನ್ನ ಆಕಾಶವೇ ಬೆಳಗುತ್ತದೆ.
ನೀ ಅರ್ಧವಲ್ಲ
ನನ್ನೊಳಗಿನ ಖಾಲಿತನಕ್ಕೆ ಪೂರ್ಣತೆ.
ನೀ ಚಂದ್ರನಲ್ಲ
ನನ್ನ ರಾತ್ರಿಯೆಲ್ಲ ತುಂಬುವ ಬೆಳಕು.
ನಿನ್ನಲ್ಲೇ ಆರಂಭ,
ನಿನ್ನಲ್ಲೇ ನನ್ನ ಸಂಪೂರ್ಣತೆ.!!🦋🧘♂️