"ವ್ಯಸನದಿಂದ ಹೊರಬರುವುದು ಕೇವಲ ವ್ಯಕ್ತಿಯ ಗೆಲುವಲ್ಲ, ಕುಟುಂಬ ಮತ್ತು ಸಮಾಜದ ಗೆಲುವು."
ಇಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ವ್ಯಸನಮುಕ್ತರ ಸಮ್ಮಿಲನ ಹಾಗೂ ಶತದಿನೋತ್ಸವದಲ್ಲಿ ಭಾಗವಹಿಸಿ, ವ್ಯಸನಮುಕ್ತರ ಕಣ್ಣಲ್ಲಿ ಹೊಸ ಬದುಕಿನ ಆತ್ಮವಿಶ್ವಾಸವನ್ನು ಕಂಡೆ. ಇದುವರೆಗೆ 2,063 ಮದ್ಯವರ್ಜನ ಶಿಬಿರಗಳ ಮೂಲಕ 1,38,000ಕ್ಕೂ ಹೆಚ್ಚು ಜನರು ವ್ಯಸನಮುಕ್ತರಾಗಿ ಹೊಸ ಜೀವನದತ್ತ ಹೆಜ್ಜೆಯಿಟ್ಟಿರುವುದು ಹೆಮ್ಮೆಯ ಸಂಗತಿ.
ವ್ಯಸನಮುಕ್ತರು ತಮ್ಮ ದೃಢಸಂಕಲ್ಪವನ್ನು ಉಳಿಸಿಕೊಂಡು, ಇತರರಿಗೂ ಪ್ರೇರಣೆಯಾಗಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಹರಿಕಾರರಾಗಬೇಕು. ಇದೇ ನಮ್ಮ ನಿಜವಾದ ಯಶಸ್ಸು.
The SIRI Mathrushree Industrial Park is more than an industrial facility—it is a catalyst for rural transformation. By promoting local manufacturing, skill development, women-led entrepreneurship, and employment, it advances, sustainable livelihoods, and rural prosperity.
I am delighted that the Hon’ble Vice President of India, C. P. Radhakrishnan ji, inaugurated the SIRI Mathrushree Industrial Park today. This landmark initiative will contribute to the vision of an #AtmanirbharBharat through sustainable rural economic growth.
@VPIndia
Education is key to rural development. Smart Class facilities sanctioned to 121 government & aided schools in Belthangady Taluk under my Rajya Sabha MP fund, with ₹1.50 crore support.
This initiative will benefit 12,500 students through digital learning.
ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವ ದೃಷ್ಟಿಯಿಂದ ನನ್ನ ರಾಜ್ಯಸಭಾ ಸದಸ್ಯರ ನಿಧಿಯಿಂದ ಬೆಳ್ತಂಗಡಿ ತಾಲೂಕಿನ 121 ಸರಕಾರಿ ಮತ್ತು ಅನುದಾನಿತ ಶಾಲೆಗೆ 1.50 ಕೋಟಿ ರೂಪಾಯಿ ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್ ಮಂಜೂರು ಮಾಡಲಾಗಿದೆ. ಈ ಮೂಲಕ 12,500 ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣಕ್ಕೆ ಅವಕಾಶ.
The Budget strengthens education and infrastructure in rural and emerging centres to reduce inequality and create livelihoods. Focus on health, Ayurveda, skills and preventive care promotes self-reliance and positions India as a global health tourism hub.
#Budget2026
Today, we commemorate the day our Constitution came into effect, laying the foundation of our democratic nation. Let us remember the great minds who ensured equality, freedom, and brotherhood for every Indian.
Wishing everyone a proud 77th Republic Day.
#RepublicDay2026
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಅಡಿಪಾಯ ನೀಡಿದ ಸಂವಿಧಾನ ಜಾರಿಗೆ ಬಂದ ಈ ಐತಿಹಾಸಿಕ ದಿನದಂದು, ಭಾರತೀಯರಾದ ನಮಗೆ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ನೀಡಿದ ಮಹನೀಯರನ್ನು ಸ್ಮರಿಸೋಣ.
ಎಲ್ಲರಿಗೂ 77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಬನ್ನಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಕೈಜೋಡಿಸೋಣ! 💪✨
Inaugurated Mahaveer Circle with the reinstated Kalasha, reviving a proud cultural symbol of Mangaluru. Congratulations to the Mangaluru Jain Society and everyone involved in bringing this landmark back to the city.
"ನಮ್ಮೂರು ನಮ್ಮ ಶ್ರದ್ಧಾ ಕೇಂದ್ರ " ಸಾಮುದಾಯಿಕ ಸ್ವಚ್ಛತಾ ಅಭಿಯಾನದಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನವನ್ನು ಕ್ಷೇತ್ರದ ಸಿಬ್ಬಂದಿಗಳು ಹಾಗೂ ಊರ ನಾಗರಿಕರ ಪಾಲ್ಗೊಳ್ಳುವಿಕೆಯಲ್ಲಿ ಸ್ವಚ್ಛಗೊಳಿಸಲಾಯಿತು.
On #NationalYouthDay, we honor the vision of Swami Vivekananda and the strength of India’s youth.
Young minds with courage, character, and clarity can shape the destiny of the nation.
“Arise, awake, and stop not till the goal is reached.” 🇮🇳Happy youth day to all my young minds.
ವಿಶ್ವವಿಜೇತ ಸ್ವಾಮಿ ವಿವೇಕಾನಂದರ ಜನ್ಮದಿನದಂದು, ಎಲ್ಲಾ ನನ್ನ ಆತ್ಮೀಯ ಯುವ ಮಿತ್ರರಿಗೆ ರಾಷ್ಟ್ರೀಯ ಯುವ ದಿನದ ಹಾರ್ದಿಕ ಶುಭಾಶಯಗಳು. 🇮🇳❤️
ಯುವಶಕ್ತಿಯೇ ದೇಶದ ಅತಿದೊಡ್ಡ ಆಸ್ತಿ. ಯುವ ಜನತೆ ಶಿಸ್ತಿನ ಹಾದಿಯಲ್ಲಿ ನಡೆದು, ಹೊಸ ಆವಿಷ್ಕಾರಗಳ ಮೂಲಕ ಜಗತ್ತನ್ನು ಬೆಳಗಲಿ ಮತ್ತು ದೇಶ ಸೇವೆಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಳ್ಳಲಿ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿ ರೂ. 2.50 ಕೋಟಿ ವೆಚ್ಚದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳ 418 ಶಾಲೆಗಳಿಗೆ 3,472 ಜೊತೆ ಡೆಸ್ಕ್-ಬೆಂಚ್ಗಳನ್ನು ಹಸ್ತಾಂತರಿಸಲಾಯಿತು.
ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳು ಹಾಗೂ ರಾಜ್ಯಸಭೆಯ ಅಧ್ಯಕ್ಷರೂ ಆದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಲಾಯಿತು.
Met and had a cordial interaction with Shri C. P. Radhakrishnan, Hon’ble Vice President of India and Chairman of the Rajya Sabha.
ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಸಾವಿರಾರು ಮರಗಳನ್ನು ಪೋಷಿಸಿ ಬೆಳೆಸಿದ 'ವೃಕ್ಷಮಾತೆ' ಸಾಲು ಮರದ ತಿಮ್ಮಕ್ಕನ ಕೊಡುಗೆ ಅಜರಾಮರ.ಅವರ ಅಗಲಿಕೆಯಿಂದ ಪರಿಸರ ಲೋಕ ಬಡವಾಗಿದೆ. ಆದರೆ ಅವರು ನೆಟ್ಟು ಬೆಳೆಸಿದ ಆ ಮರಗಳ ಸಾಲು ಸದಾಕಾಲ ನಮ್ಮ ಉಸಿರಾಗಿ, ನೆರಳಾಗಿ, ಸ್ಫೂರ್ತಿಯಾಗಿ ಉಳಿಯುತ್ತವೆ.
ಓಂ ಶಾಂತಿ...
Heartfelt birthday wishes to Hon’ble Prime Minister Shri @narendramodi Ji. May Lord Manjunatha Swamy bless you with good health, strength, and long life to serve Bharatha Matha with the same devotion and energy.
Congratulations to Shri CP Radha Krishnan ji on being elected as the Honourable Vice President of India.Wishing you success in your esteemed responsibility of serving the nation and strengthening our democratic values. 🇮🇳
@CPRGuv
:🇮🇳 Happy Independence Day!
Today, we honour the sacrifices of our freedom fighters & the courage that shaped our nation.
Independence is a reminder to keep India strong, united & progressing.May our tricolour always fly high, and the spirit of freedom live in every heart. ✨
ಅಸಂಖ್ಯಾತ ಹೋರಾಟಗಾರರ ತ್ಯಾಗ-ಬಲಿದಾನದ ಫಲವಾಗಿ ನಾವು ಇಂದು ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡುತ್ತಿದ್ದೇವೆ. ದೇಶಕೋಸ್ಕರ ಸರ್ವಸ್ವವನ್ನು ತ್ಯಾಗ ಮಾಡಿದ ನಾಯಕರನ್ನ ಸ್ಮರಿಸಿ ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ಸ್ವಾತಂತ್ರ್ಯದ ಚೈತನ್ಯ ಪ್ರತಿಯೊಬ್ಬ ಭಾರತೀಯರ ಹೃದಯದಲ್ಲಿ ಸದಾ ಹಸಿರಾಗಿರಲಿ.
ಜೈ ಹಿಂದ್!🇮🇳