ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಬಿ.ಎಸ್.ಮಂಜುನಾಥಸ್ವಾಮಿ,ಕ.ಆ.ಸೇ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಆದ ಶ್ರೀ ನಮ್ರತ ಎನ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಡಾ. ಹುಲಿಕುಂಟೆ ಮೂರ್ತಿ ಸದಸ್ಯರು ಇವರ ಸಂಚಾಲಕತ್ವದಲ್ಲಿ ಯಶಸ್ವಿಯಾಗಿ ನಡೆದ ಈ ಸಮಾರಂಭದಲ್ಲಿ ಅಕಾಡೆಮಿಯ ಎಲ್ಲ ಸದಸ್ಯರು ಭಾಗವಹಿಸದ್ದರು.
ಕರ್ನಾಟಕ ಜಾನಪದ ಅಕಾಡೆಮಿಯ2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು 30 ಮಂದಿ ಜಾನಪದ ಕಲಾವಿರಿಗೆ, ಎರಡು ತಜ್ಞ ಪ್ರಶಸ್ತಿಯನ್ನು ಇಬ್ಬರು ಜಾನಪದ ವಿದ್ವಾಂಸರಿಗೆ ಹಾಗೂ2024ನೇ ಸಾಲಿನ ಪುಸ್ತಕ ಬಹುಮಾನವನ್ನು ಇಬ್ಬರು ಲೇಖಕರಿಗೆ ಸನ್ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ್ ಎಸ್ ತಂಗಡಗಿ ಅವರು
ಮುಖ್ಯ ಅತಿಥಿಗಳಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ|| ಆರ್.ಸುನಂದಮ್ಮ. ಶ್ರೀ ಎಂ ಶಿವರಾಜ್, ಜನಪದ ಚಿಂತಕರು ಹಾಗೂ ಮಾಜಿ ಅಧ್ಯಕ್ಷರು, ತೆರಿಗೆ ಹಾಗೂ ಆರ್ಥಿಕ ಸಮಿತಿ, ಬೆಂಗಳೂರು ಮಹಾನಗರ ಪಾಲಿಕೆ , ಮಂಡ್ಯ ಜಿಲ್ಲೆಯ ಹಿರಿಯ ಪಟಾಕುಣಿತ ಕಲಾವಿದರಾದ ಶ್ರೀ ಕದಲಗೆರೆ ಶಿವಣ್ಣಗೌಡ
ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು ವತಿಯಿಂದ ದಿನಾಂಕ 16.01.2026ರಂದು ಸಂಜೆ 4.30 ಕರ್ನಾಟಕ ಪಬ್ಲಿಕ್ ಶಾಲೆ, ಕಾರಟಗಿಯಲ್ಲಿ “ಸೌಹಾರ್ದ ಜಾನಪದ ಸಂಭ್ರಮ”(ಭಾವೈಕ್ಯತೆಯ ಹಾಡು ಹಾಡೋಣ ಬಾರಾ.....) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸರ್ವರಿಗೂ ಆತ್ಮೀಯ ಸುಸ್ವಾಗತ
ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ದಿನಾಂಕ 27-12-2025ರಂದು ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ "ಶರಣೆಂದೆ ಭೂಮಿ ತಾಯಿಗೆ" (ಜಾನಪದ ಗಾಯನ ಮತ್ತು ಕಲಾ ಪ್ರದರ್ಶನ) ಕಾರ್ಯಕ್ರಮದ ಛಾಯಾಚಿತ್ರಗಳು.
ಪತ್ರಿಕಾ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಗೊಲ್ಲಹಳ್ಳಿ ಶಿಪ್ರಸಾದ್ ವಹಿಸಿರುತ್ತಾರೆ. ಅಕಾಡೆಮಿಯ ಸದಸ್ಯರಾದ ಶ್ರೀ ಹುಲಿಕುಂಟೆ ಮೂರ್ತಿ, ಡಾ. ಕೆಂಪಮ್ಮ, ಶ್ರೀ ಕೆಂಕೆರೆ ಮಲ್ಲಿಕಾರ್ಜುನ್, ಶ್ರೀ ಮೆಹಬೂಬ್ ಕಿಲ್ಲೆದಾರ್, ಶ್ರೀ ವಿಜಯ್ಕುಮಾರ್ ಸೋನಾರೆ ಮತ್ತು ಶ್ರೀ ಮಂಜೇಶ್ ಹಾಗೂ ರಿಜಿಸ್ಟ್ರಾರ್ ಎನ್ ನಮ್ರತ ಅವರು ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಅಕಾಡೆಮಿಯ 2025 ನೇ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರು ಜಾನಪದ ವಿದ್ವಾಂಸರಿಗೆ ತಜ್ಞ ಪ್ರಶಸ್ತಿ, 2024 ನೇ ಸಾಲಿನ 02 ಮಂದಿಗೆ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿರುವ ಬಗ್ಗೆ ಪತ್ರಿಕಾ ಗೋಷ್ಠಿ.
ಕರ್ನಾಟಕ ಜಾನಪದ ಅಕಾಡೆಮಿಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ಇವರ ಸಂಯುಕ್ತಾಶ್ರಯದಲ್ಲಿ
ಅಲೆಮಾರಿ ಸಮುದಾಯಗಳ ಜಾನಪದ ಕಲೆ ಕುರಿತಾದ ವಿಚಾರ ಸಂಕಿರಣ ಹಾಗೂ ಕಲಾ ಪ್ರದರ್ಶನ ಕಾರ್ಯಕ್ರಮ
ದಿನಾಂಕ 26-11-2025
ಸ್ಥಳ : ಮಲ್ಲಿಗೆ ದಂಡೆ ಸಭಾಂಗಣ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ, ಹಾವೇರಿ ಜಿಲ್ಲೆ
ಸರ್ವರಿಗೂ ಆದರದ ಸುಸ್ವಾಗತ
ಸಹಾಯಕ ನಿರ್ದೇಶಕರ ಕಾರ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರ ಬೀದರ್ ನಲ್ಲಿ ಕಲಬುರ್ಗಿ ವಿಭಾಗದ ಮಾಸಾಶನ ಸಂದರ್ಶನ ಕರೆಯಲಾಗಿತ್ತು. ಮಾಸಾಶನ ಸಂದರ್ಶನದ ಪತ್ರಿಕಾ ವರದಿ.
ಕರ್ನಾಟಕ ಸರ್ಕಾರವು ಜಾನಪದ ಕಲಾವಿದರಿಗೆ ಮಾಸಾಶನ ನೀಡುವ ಯೋಜನೆಯಡಿಯಲ್ಲಿ ಕಲಾವಿದರನ್ನು ಸಂದರ್ಶನ ನಡೆಸಿ, ಅರ್ಹ ಕಲಾವಿದರ ಹೆಸರುಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶಿಫಾರಸ್ಸು ಮಾಡುವ ಸಂಬಂಧ ದಿನಾಂಕ: 15-09-2025 ರಂದು ಸೋಮವಾರ ಬೆಳಿಗ್ಗೆ 10.30 ಗಂಟೆಗೆ
ಸಹಾಯಕ ನಿರ್ದೇಶಕರ ಕಾರ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರ ಬೀದರ್ ನಲ್ಲಿ ಕಲಬುರ್ಗಿ ವಿಭಾಗದ ಮಾಸಾಶನ ಸಂದರ್ಶನ ಕರೆಯಲಾಗಿತ್ತು. ಮಾಸಾಶನ ಸಂದರ್ಶನದ ಛಾಯಾಚಿತ್ರಗಳು.
ಕರ್ನಾಟಕ ಸರ್ಕಾರವು ಜಾನಪದ ಕಲಾವಿದರಿಗೆ ಮಾಸಾಶನ ನೀಡುವ ಯೋಜನೆಯಡಿಯಲ್ಲಿ ಕಲಾವಿದರನ್ನು ಸಂದರ್ಶನ ನಡೆಸಿ, ಅರ್ಹ ಕಲಾವಿದರ ಹೆಸರುಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶಿಫಾರಸ್ಸು ಮಾಡುವ ಸಂಬಂಧ ದಿನಾಂಕ: 15-09-2025 ರಂದು ಸೋಮವಾರ ಬೆಳಿಗ್ಗೆ 10.30 ಗಂಟೆಗೆ
ಬೋಧನೆ... ಹೀಗೆ ಜಾನಪದ ತಜ್ಞರಾಗಿ ಹೆಚ್ಚು ಗುರುತಿಸಿಕೊಂಡಿದ್ದರು.
ನಮ್ಮನ್ನು ಅಗಲಿದ ಹಿರಿಯ ಜೀವಕ್ಕೆ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು ಸದಸ್ಯರು ಹಾಗೂ ಅಕಾಡೆಮಿಯ ಅಧಿಕಾರಿ ಸಿಬ್ಬಂದಿ ವರ್ಗದ ವತಿಯಿಂದ ಭಾವಪೂರ್ಣ ಶ್ರದ್ದಾಂಜಲಿ. 🙏🏻
ಅಂಕೋಲಾ ತಾಲೂಕಿನ ಬಾವಿಕೇರಿಯ ಎನ್.ಆರ್. ನಾಯಕರು ಕಳೆದ ಐದಾರು ದಶಕಗಳಿಂದಲೂ ಉತ್ತರ ಕನ್ನಡ ಭಾಗದ ಜನಪದ ಸಾಹಿತ್ಯ ಸಂಸ್ಕೃತಿಯನ್ನು ಸಂಗ್ರಹಿಸಿ ಮುಂದಿನ ತಲೆಮಾರಿಗೆ ಕಾಪಿಟ್ಟವರು.
ನಾಯಕರು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿದ್ದರು.
ಕ್ರಿಯಾಶೀಲ ಲೇಖಕರಾಗಿ ಇವರು ಕಥೆ, ಕಾವ್ಯ, ನಾಟಕ, ವಿಮರ್ಶೆ, ಪ್ರಬಂಧ, ವ್ಯಕ್ತಿ ಚಿತ್ರಗಳ ಅನೇಕ ಕೃತಿಗಳನ್ನು ರಚಿಸಿದರೂ ಅವರು ವಿಶೇಷವಾಗಿ ಜಾನಪದಕ್ಕೆ ಸಂಬಂಧಿಸಿದಂತೆ ಸಂಶೋಧನೆ, ಕ್ಷೇತ್ರಕಾರ್ಯ, ಸಂಪಾದನೆ, ಖಂಡ ಕಾವ್ಯಗಳ ಸಂಗ್ರಹ, ಬುಡಕಟ್ಟು ಜನಾಂಗಗಳ ಅಧ್ಯಯನ, ವಿವಿಧ ಜಾನಪದ ಕಾರ್ಯಕ್ರಮಗಳ ಸಂಘಟನೆ,
ಕರ್ನಾಟಕ ಜಾನಪದ ಅಕಾಡೆಮಿಯು ಶ್ರೀ ಆದಿನಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜು, ನಾಗಮಂಗಲ ಇವರ ಸಹಯೋಗದಲ್ಲಿ ದಿನಾಂಕ 12-09-2025ರಂದು ಶ್ರೀ ಬಿ.ಜಿ.ಎಸ್ ಸಭಾಂಗಣ, ಶ್ರೀ ಆದಿನಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜು,ನಾಗಮಂಗಲ, ಮಂಡ್ಯ ಜಿಲ್ಲೆಯಲ್ಲಿ “ಹಿರಿಯರ ನೆನದೇವು” ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಿದೆ.