ಕರ್ನಾಟಕ ರಾಜ್ಯ ರಾಜಕೀಯದ ಇತಿಹಾಸದಲ್ಲಿ ಕನ್ನಡಿಗರ ಗಟ್ಟಿಧ್ವನಿಯಾಗಿ, ಕಳೆದ 25 ವರ್ಷಗಳಿಂದ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿ ಜೆಡಿಎಸ್ ಪಕ್ಷ ಹೋರಾಟ ಮಾಡುತ್ತಾ ಬಂದಿದೆ. ಮಾಜಿ ಪ್ರಧಾನಿಗಳು ಹಾಗೂ ಪಕ್ಷದ ಸ್ಥಾಪಕರಾದ ಪೂಜ್ಯ ಶ್ರೀ ಹೆಚ್.ಡಿ. ದೇವೇಗೌಡರವರ ಅವಿರತ ಪರಿಶ್ರಮ ಮತ್ತು ದಣಿವರಿಯದ ನಾಯಕತ್ವದಿಂದ, ಪ್ರಾದೇಶಿಕ ಪಕ್ಷವೊಂದು 25 ವರ್ಷ ಪೂರೈಸಲು ಕಾರಣೀಭೂತವಾಗಿದೆ.
ನಮ್ಮ ನಿಷ್ಠಾವಂತ ಕಾರ್ಯಕರ್ತರು ಹಗಲಿರುಳೆನ್ನದೆ ನಾಯಕರ ಹೆಗಲಿಗೆ ಹೆಗಲು ಕೊಟ್ಟು ನಿಸ್ವಾರ್ಥವಾಗಿ ದುಡಿಯುತ್ತಿದ್ದಾರೆ. ನಮ್ಮ ಪಕ್ಷವು ಅನೇಕ ಸವಾಲುಗಳನ್ನು ಎದುರಿಸಿ, ಅನೇಕ ರಾಜಕೀಯ ಕುತಂತ್ರಗಳನ್ನು ಮೆಟ್ಟಿ ನಿಂತು, ಇವತ್ತು ಬಲಿಷ್ಠ ಪ್ರಾದೇಶಿಕ ಪಕ್ಷವಾಗಿ ಬೆಳೆದಿದೆ.
#ಜೆಡಿಎಸ್ #ಬೆಳ್ಳಿಹಬ್ಬ
#JDS #25years
#SilverJubilee #SilverJubileeCelebration
ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶ ಅತ್ಯಂತ ಖಂಡನಾರ್ಯ. ಇದು ಕರ್ನಾಟಕ ಮತ್ತು ಕನ್ನಡಿಗರಿಗೆ ಮರಣಶಾಸನ!
ಈಗಾಗಲೇ ಕರ್ನಾಟಕ ಬರದಿಂದ ಕಂಗೆಟ್ಟಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ, ಮತ್ತೆ 15 ದಿನಗಳಲ್ಲಿ 16 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ಕನ್ನಡಿಗರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. CWMA ಆದೇಶವನ್ನು ಪ್ರತಿಯೊಬ್ಬ ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸಬೇಕಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸು ಮತ್ತು ತೀರ್ಪುಗಳು ಪ್ರತಿ ಬಾರಿಯೂ ಕರ್ನಾಟಕದ ಪಾಲಿಗೆ ಕಂಟಕವಾಗುತ್ತಲೇ ಬಂದಿವೆ. ಮೊನ್ನೆಯಷ್ಟೇ ನಿತ್ಯ 3,500 ಕ್ಯೂಸೆಕ್ನಂತೆ 15 ದಿನಗಳ ಕಾಲ ನೀರು ಹರಿಸಲು CWMA ತೀರ್ಪು ನೀಡಿತ್ತು. ಈಗ ಮತ್ತೆ 16 ಟಿಎಂಸಿ ನೀರು ತಮಿಳುನಾಡಿಗೆ ಬಿಡಲು ಆದೇಶಿರುವುದು ಅವೈಜ್ಞಾನಿಕ ಮತ್ತು ಅನ್ಯಾಯ.
ರಾಜ್ಯದಲ್ಲಿ ಮಳೆಯ ತೀವ್ರ ಕೊರತೆಯಿಂದ ನಮಗೇ ನೀರಿಲ್ಲ. ನಮ್ಮ ರೈತರಿಗೆ ಬೆಳೆ ಬೆಳೆಯಲು ಜಲಾಶಯಗಳಲ್ಲಿ ನೀರಿಲ್ಲ. ಕುಡಿಯುವ ನೀರಿಗೂ ಬರ ಎದುರಾಗಿರುವ ಇಂತಹ ಕಠಿಣ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಹೇಳುವುದು ಯಾವ ನ್ಯಾಯ? ಹೊಣೆಗೇಡಿ ರಾಜ್ಯ ಸರ್ಕಾರಕ್ಕೆ ಇದಾವುದರ ಬಗ್ಗೆಯೂ ಚಿಂತೆ ಇಲ್ಲದಾಗಿದೆ.
#CauveryIssue
#ಕಾವೇರಿಅನ್ಯಾಯ
ಕಾಂಗ್ರೆಸ್ ಹೈಕಮಾಂಡ್ʼಗೆ @DKShivakumar ‘ರಿಮೋಟ್ ಕಂಟ್ರೋಲ್’ CM ಹಾಗೂ ಕೇವಲ ರಬ್ಬರ್ ಸ್ಟಾಂಪ್ ಅಷ್ಟೇ !
ಕೈಯಲ್ಲಿ ಮುಖ್ಯಮಂತ್ರಿ ಕುರ್ಚಿ ಒಂದನ್ನು ಬಿಟ್ಟರೆ, ನಿರ್ಧಾರ ತಗೊಳೋ ಅರ್ಧ ಇಂಚು ಅಧಿಕಾರವೂ ತಮಗಿಲ್ಲ ಎಂಬುದನ್ನು ಡಿಕೆ ಶಿವಕುಮಾರ್ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ವಿಧಾನಮಂಡಲ ಅಧಿವೇಶನ ಆರಂಭವಾಗಲು ಉಳಿದಿರುವುದು ಕೇವಲ ಒಂದೇ ಒಂದು ದಿನ. ಆದರೆ, ರಾಜ್ಯದಲ್ಲಿ ಇನ್ನು 20 ಸಚಿವರಿಗೆ ಖಾತೆ ಹಂಚಿಕೆಯೇ ಆಗಿಲ್ಲ.
* ಯಾವ ಸಚಿವರಿಗೆ ಯಾವ ಖಾತೆ?
* ಯಾರಿಗೆ ಯಾವ ಜವಾಬ್ದಾರಿ?
ಇದರ ಉತ್ತರ ರಾಜ್ಯದ ಜನತೆಗೆ ಇನ್ನೂ ಗೊತ್ತಿಲ್ಲ, ವಿಪಕ್ಷಗಳಿಗೂ ಗೊತ್ತಿಲ್ಲ, ಆಡಳಿತ ಪಕ್ಷದ ಶಾಸಕರಿಗೂ ಗೊತ್ತಿಲ್ಲ... ಕೊನೆಗೆ ಸ್ವತಃ ‘ನಿಸ್ಸಹಾಯಕ’ ಮುಖ್ಯಮಂತ್ರಿಗಳಿಗೂ ಗೊತ್ತಿಲ್ಲ.
ಸಚಿವರು ಯಾರು ? ಎಂಬುದರಿಂದ ಹಿಡಿದು, ವಿಧಾನಸಭೆಯ ಸ್ಪೀಕರ್ ಯಾರು ? ಎಂಬುದರವರೆಗೂ ದೆಹಲಿಯ ಹೈಕಮಾಂಡ್ ಮನೆ ಬಾಗಿಲಲ್ಲಿ ಸಾಷ್ಟಾಂಗ ನಮಸ್ಕಾರ ಹಾಕಿ ತೀರ್ಮಾನಕ್ಕೆ ಬರಬೇಕಾದರೆ, ರಾಜ್ಯದ @INCKarnataka ಶಾಸಕರು ಮತ್ತು ಮುಖ್ಯಮಂತ್ರಿಗಳ ಪಾತ್ರವೇನು? ಕೇವಲ ‘ಹೌದಪ್ಪಾ’ ಎನ್ನಲು ಮಾತ್ರವೇ? ಇಷ್ಟೊಂದು ಅತಿರೇಕದ ಹೈಕಮಾಂಡ್ ಗುಲಾಮಗಿರಿಯನ್ನು ಕರ್ನಾಟಕ ತನ್ನ ಇತಿಹಾಸದಲ್ಲೇ ಎಂದು ನೋಡಿರಲಿಲ್ಲ.
#PuppetCM #HighCommandGulamagiri #FailGovernment
ಬೆಂಗಳೂರಿನ "ಇಂದಿರಾ ಕ್ಯಾಂಟೀನ್" ಅಡುಗೆ ಮನೆಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ಕಂಡು ಬಂದಿದ್ದು ಇಲಿ, ಹೆಗ್ಗಣ ಮತ್ತು ಕ್ರಿಮಿಕೀಟಗಳ ಸಾಮ್ರಾಜ್ಯ!
ಗೊಟ್ಟಿಗೆರೆ ಹಾಗೂ ಲಿಂಗರಾಜಪುರದ ಇಂದಿರಾ ಕ್ಯಾಂಟೀನ್ ಕಿಚನ್ಗಳಲ್ಲಿ ಅಶುಚಿತ್ವದಿಂದ ಕೂಡಿದ ವಾತಾವರಣದಲ್ಲಿ ಅಡುಗೆ ತಯಾರಿಸಲಾಗುತ್ತಿತ್ತು. ಬಡವರು ಮತ್ತು ಶ್ರಮಿಕರ ಆರೋಗ್ಯದ ಜೊತೆ ಚಿಲ್ಲರೆ ಆಟವಾಡುತ್ತಿರುವ ಈ @INCKarnataka ಸರ್ಕಾರಕ್ಕೆ ಮಾನಮರ್ಯಾದೆ ಇದೆಯೇ?
ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದೆ, ಸೂಕ್ತ ನಿರ್ವಹಣೆ ಮಾಡದೆ ಇಂದಿರಾ ಕ್ಯಾಂಟೀನ್ಗಳನ್ನು ಮುಚ್ಚಿಸುವ ಹಂತಕ್ಕೆ ತಂದಿಟ್ಟಿದ್ದೀರಿ. ಮುಖ್ಯಮಂತ್ರಿಗಳೇ, ಚಿಲ್ಲರೆ ರಾಜಕೀಯ ಮಾಡುವುದನ್ನು ಬಿಟ್ಟು, ಇನ್ನಾದರೂ ಬಡವರಿಗೆ ಶುಚಿತ್ವದಿಂದ ಕೂಡಿದ ಪೌಷ್ಠಿಕಾಂಶಯುಕ್ತ ಉತ್ತಮವಾದ ತಿಂಡಿ-ಊಟವನ್ನು ನೀಡಿ.
@utkhader
#IndiraCanteenScam
#CongressFailsKarnataka
ಜನತಾದಳ ಜಾತ್ಯತೀತ ಪಕ್ಷದ ಮುಖ್ಯ ಕಛೇರಿಯ ಗೋಡೆಗಳಿಗೆ ವಿಕೃತ ಹಾಗೂ ಸುಳ್ಳು ಆಪಾದನೆಗಳುಳ್ಳ ಪೋಸ್ಟರ್ಗಳನ್ನು ಅಂಟಿಸಿ, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಸೇರಿದಂತೆ ನಮ್ಮ ಪಕ್ಷದ ನಾಯಕರ ತೇಜೋವಧೆಗೆ ಯತ್ನಿಸಿರುವ @INCKarnataka ಗೂಂಡಾಗಳ ವಿರುದ್ಧ ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಅಧಿಕಾರ ದುರುಪಯೋಗಪಡಿಸಿಕೊಂಡು ಜೆಡಿಎಸ್ ನಾಯಕರ ಬಗ್ಗೆ ಅಪಪ್ರಾಚಾರ ಮಾಡುತ್ತಾ, ಶಾಂತಿ ಭಂಗ ಉಂಟುಮಾಡುತ್ತಿರುವ ಕಾಂಗ್ರೆಸ್ ಗೂಂಡಾಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಕಾನೂನು ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರದೀಪ್ ಕುಮಾರ್ ಅವರ ನೇತೃತ್ವದಲ್ಲಿ ಆಗ್ರಹಿಸಲಾಯಿತು.
ಬಡ ಒಕ್ಕಲಿಗ ರೈತರ ಭೂಮಿಯನ್ನು ನುಂಗಲು ಹೊಂಚು ಹಾಕುತ್ತಿರುವ ರಣಹದ್ದು ಯಾರು ? @DKShivakumar
ಸಣ್ಣ ಸಣ್ಣ ತುಂಡು ಭೂಮಿ ಹೊಂದಿರುವ ಬಡ ರೈತರ ಸಮಾಧಿ ಮೇಲೆ ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಲು ಹೊರಟಿರುವ ನೀವು ಒಕ್ಕಲಿಗರ ರಕ್ಷಕರೇ?
ಟೌನ್ಶಿಪ್ ಹೆಸರಿನಲ್ಲಿ ಬಿಡದಿ ಭಾಗದ 26 ಹಳ್ಳಿಗಳ ಫಲವತ್ತಾದ ಕೃಷಿ ಜಮೀನನ್ನು ಕಬಳಿಸಲು ರಣಹದ್ದಿನಂತೆ ಕಾಯುತ್ತಿರುವುದು ಅಭಿವೃದ್ಧಿಯೋ ಅಥವಾ ಸ್ವಂತ ಲಾಭದ ದಂಧೆಯೋ ?
"ನಮ್ಮ ಭೂಮಿ, ನಮ್ಮ ಹಕ್ಕು" ಎನ್ನುವ ಅನ್ನದಾತರ ಹೋರಾಟವನ್ನು ಹತ್ತಿಕ್ಕುವ ನಿಮ್ಮ @INCKarnataka ಧಮನಕಾರಿ ಧೋರಣೆ, ಅಧಿಕಾರದ ದರ್ಪ ಹಾಗೂ ಇಂತಹ ನೀಚ ಕೃತ್ಯಗಳಿಗೆ ರೈತ ಸಮುದಾಯ ತಕ್ಕ ಪಾಠ ಕಳಿಸಲಿದೆ.
#SaveFarmersLand #VokkaligaRights #CongressExposed
ಧನ್ಯವಾದಗಳು ಹಾಗೂ ಕೃತಜ್ಞತಾ ಪೂರ್ವಕ ನಮನಗಳು
ಬೈರಮಂಗಲ ಮತ್ತು ಬಿಡದಿಯ ನನ್ನ ಪ್ರೀತಿಯ ರೈತ ಬಾಂಧವರೇ, ನಮ್ಮ ಪಕ್ಷದ ನಿಸ್ವಾರ್ಥ ಕಾರ್ಯಕರ್ತರೇ, ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಡೆದ ಶಾಸಕರೇ, ವಿಧಾನ ಪರಿಷತ್ ಸದಸ್ಯರೇ, ಮಾಜಿ ಸಚಿವರಿಗೆ, ಪ್ರತಿಯೊಂದು ಕ್ಷಣವನ್ನು ನಾಡಿಗೆ ತಲುಪಿಸಿದ ಮಾಧ್ಯಮ ಮಿತ್ರರಿಗೆ ಹಾಗೂ ಸೂಕ್ತ ಸಹಕಾರ ನೀಡಿದ ಪೊಲೀಸ್ ಸಿಬ್ಬಂದಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
ರೈತನಿಗೆ ಮಳೆ ಎಂದರೆ ಬದುಕಿನ ಭರವಸೆ. ಸುರಿದ ಧಾರಾಕಾರ ಮಳೆ ನಮ್ಮ ಹಾದಿಯಲ್ಲಿ ಆಶೀರ್ವಾದದಂತೆ ಸುರಯಿತೇ ಹೊರತು ನಮ್ಮ ಉತ್ಸಾಹವನ್ನು ಕುಗ್ಗಿಸಲಿಲ್ಲ. ಮಳೆಗೆ ನೆನೆಯುತ್ತಲೇ ನಮ್ಮ ರೈತರು ಮತ್ತು ಕಾರ್ಯಕರ್ತರು ಎದೆಗುಂದದೆ ಮುನ್ನಡೆದರು. ಆದರೆ, ನಮ್ಮ ಈ ಒಗ್ಗಟ್ಟು ಮತ್ತು ಹೋರಾಟದ ಶಕ್ತಿಯನ್ನು ಕಂಡು ಹೆದರಿದ ಸರ್ಕಾರ ಪೊಲೀಸ್ ಬಲ ಬಳಸಿ ನಮ್ಮನ್ನು ಬೆಂಗಳೂರು ಪ್ರವೇಶಿಸದಂತೆ ತಡೆಯುವ ಯತ್ನ ಮಾಡಿತು. ಪ್ರಕೃತಿಯ ಆಶೀರ್ವಾದದ ನಡುವೆಯೂ ಸರ್ಕಾರದ ತಡೆಗೋಡೆಗಳು ಬಂದರೂ ನಮ್ಮನ್ನಾರೂ ಹಿಂದೆ ಸರಿಯುವಂತೆ ಮಾಡಲು ಸಾಧ್ಯವಾಗಲಿಲ್ಲ.
ಈ ಇಡೀ ಯಾತ್ರೆಯ ಅಸಲಿ ಶಕ್ತಿ ಎಂದರೆ ನಮ್ಮ ಪಕ್ಷದ ನಿಸ್ವಾರ್ಥ ಕಾರ್ಯಕರ್ತರು ಮತ್ತು ಸ್ವಯಂಸೇವಕರು. ಮಳೆ, ಅಡೆತಡೆಗಳ ನಡುವೆಯೂ ಪ್ರತಿಯೊಬ್ಬರ ಕಾಳಜಿ ವಹಿಸಿ, ಮಾರ್ಗದಾದ್ಯಂತ ಸಕಲ ವ್ಯವಸ್ಥೆಗಳನ್ನು ರೂಪಿಸಿ ಪಾದಯಾತ್ರೆ ಸುಗಮವಾಗಿ ಸಾಗುವಂತೆ ನೋಡಿಕೊಂಡ ನಿಮ್ಮ ತ್ಯಾಗ ಮತ್ತು ನಿಸ್ವಾರ್ಥ ಶ್ರಮಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಿಮ್ಮ ಈ ಬೆಂಬಲವೇ ನನಗೆ ಅತಿದೊಡ್ಡ ಧೈರ್ಯ.
ನಮ್ಮ ಹೋರಾಟದ ದಾರಿ ಇಲ್ಲಿಗೇ ಮುಗಿಯುವುದಿಲ್ಲ.
ಸರ್ಕಾರ ನಮ್ಮನ್ನು ಮಧ್ಯದಲ್ಲೇ ತಡೆದಿರಬಹುದು, ಆದರೆ ನಮ್ಮ ನ್ಯಾಯಯುತ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ರೈತನಿಗೆ ಸಿಗಬೇಕಾದ ಪ್ರತಿಯೊಂದು ಹಕ್ಕು ಮತ್ತು ನ್ಯಾಯ ಸಿಗುವವರೆಗೂ ಈ ಹೋರಾಟ ಮುಂದುವರಿಯುತ್ತದೆ. ಇದು ಮುಗಿದ ಅಧ್ಯಾಯವಲ್ಲ, ಮುಂದಿನ ಹೋರಾಟದ ಆರಂಭ.
ಮುಂದಿನ ಹೆಜ್ಜೆ: ಬೃಹತ್ 'ವಿಧಾನ ಸೌಧ ಚಲೋ'
ಬನ್ನಿ, ಇದೇ ಆತ್ಮವಿಶ್ವಾಸ ಮತ್ತು ಸಂಘಟಿತ ಶಕ್ತಿಯೊಂದಿಗೆ ಮತ್ತೆ ಮುನ್ನಡೆಯೋಣ!
ದಿನಾಂಕ: 18 ಆಗಸ್ಟ್ 2026
ಸ್ಥಳ: ಫ್ರೀಡಂ ಪಾರ್ಕ್ನಿಂದ ವಿಧಾನ ಸೌಧದವರೆಗೆ
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ನಮ್ಮ ಅನ್ನದಾತರ ಧ್ವನಿಯನ್ನು ಮತ್ತೆ ಪ್ರತಿಧ್ವನಿಸೋಣ.
ಕೃತಜ್ಞತೆಗಳೊಂದಿಗೆ,
ನಿಮ್ಮ
ನಿಖಿಲ್ ಕುಮಾರಸ್ವಾಮಿ
ಸ್ವಚ್ಛ ಬೆಂಗಳೂರು ಹೆಸರಿನಲ್ಲಿ "CongressTaxTerrorism" !
ಬೆಂಗಳೂರಿನಲ್ಲಿ ಖಾಲಿ ನಿವೇಶನ ಹೊಂದಿರುವ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ಸಾವಿರಾರು ರೂಪಾಯಿ ‘ಸ್ವಚ್ಛತಾ ಶುಲ್ಕ’ ಹಾಗೂ ತ್ಯಾಜ್ಯ ಸಾಗಾಟದ ಹೆಸರಿನಲ್ಲಿ ದಂಡ ವಿಧಿಸುತ್ತಿರುವುದು ಗಾಯದ ಮೇಲೆ ಬಿಸಿ ತಪ್ಪು ಸವರಿದಂತಿದೆ. ರೆವಿನ್ಯೂ ಸೈಟು ಕೊಂಡು ಕಷ್ಟಪಟ್ಟು ಮನೆ ಕಟ್ಟಲು ಕನಸು ಕಾಣುತ್ತಿರುವ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವುದು ಯಾವ ಸೀಮೆಯ ಆಡಳಿತ @DKShivakumar ಅವರೇ?
ಜಿಬಿಎ (GBA) ತಂದು 'ಬ್ರಾಂಡ್ ಬೆಂಗಳೂರು' ಮಾಡುತ್ತೇವೆ ಎಂದು ಹೇಳಿ, ಈಗ ಕನ್ನಡಿಗರ ಮೇಲೆ ಸಾಲು ಸಾಲು ತೆರಿಗೆಗಳ ಹೊರೆ ಹೇರುವುದೇ ನಿಮ್ಮ @INCKarnataka ಸರ್ಕಾರದ ಸಾಧನೆಯೇ ?
🔴 20x30 ಖಾಲಿ ಸೈಟಿಗೆ ₹6,700 – ₹7,700 ಶುಲ್ಕ!
🔴 ತ್ಯಾಜ್ಯ ಸಾಗಾಟಕ್ಕೆ ₹19,200 ವರೆಗೆ ದಂಡದ ದರ!
🔴 ಆಸ್ತಿ ತೆರಿಗೆ ಕಟ್ಟಿದ ಮೇಲೆಯೂ ಮತ್ತೆ ಹೊಸ ಶುಲ್ಕದ ಹೊರೆ!
ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಲ್ಲಿ ನೀಡಿ, ತೆರಿಗೆ ಮತ್ತು ಸೆಸ್ಗಳ ರೂಪದಲ್ಲಿ ಇನ್ನೊಂದು ಕೈಯಲ್ಲಿ ಜನರಿಂದ ಹಣ ಕಿತ್ತುಕೊಳ್ಳುವ ‘ಕರ ಸಂಗ್ರಹ ಕಾಂಗ್ರೆಸ್’ ಸರ್ಕಾರಕ್ಕೆ ಶ್ರಮಜೀವಿಗಳ ಶಾಪ ತಟ್ಟುವುದು ಖಚಿತ.
ಬೆಂಗಳೂರು ಎಂದರೆ ಕೇವಲ ರಿಯಲ್ ಎಸ್ಟೇಟ್ ದಂಧೆಯಲ್ಲ, ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಕನ್ನಡಿಗರ ಆಶೋತ್ತರ. ಈ ಜನವಿರೋಧಿ, ದೋಚುವ ಆದೇಶವನ್ನು ತಕ್ಷಣವೇ ವಾಪಸ್ ಪಡೆಯಿರಿ.
@Krishnabgowda
#CongressTaxTerror
#SaveBengaluru
ಸ್ವತಃ ಸಿಎಂ ಸ್ಥಾನದಲ್ಲಿದ್ದುಕೊಂಡು, ಒಂದು ಸಚಿವ ಸಂಪುಟ ಖಾತೆ ಹಂಚಿಕೆ ಮಾಡುವುದಕ್ಕೂ ದೆಹಲಿಯ ಆದೇಶಕ್ಕೆ ಕಾಯುವ ದುಸ್ಥಿತಿ ಬಂದಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಆದ ಘೋರ ಅಪಮಾನ.
ದೆಹಲಿಗೆ ಹೋಗಿ ಬರಿಗೈಲಿ ವಾಪಸ್ ಬಂದ 'ಪೋಸ್ಟ್ ಮ್ಯಾನ್' @DKShivakumar ಅವರೇ , ನಿಮ್ಮ ಹೈಕಮಾಂಡ್ಗೆ ನೀವು ಕೇವಲ ಪಟ್ಟಿ ತಲುಪಿಸುವ "ಕೊರಿಯರ್ ಬಾಯ್" ಅಷ್ಟೇ ಹೊರತು, ಮುಖ್ಯಮಂತ್ರಿಯಾಗಿದ್ದರೂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ!
'ನೀವು ಪಟ್ಟಿ ಕೊಟ್ಟು ಹೊರಡಿ, ನಾವೇ ಕಳಿಸ್ತೀವಿ' ಎಂದು ದೆಹಲಿ ನಾಯಕರು ಮುಖಕ್ಕೆ ಹೊಡೆದಂತೆ ಹೇಳಿ ಕಳುಹಿಸಿದ್ದರೂ ನಿಮಗೇಕೆ ಈ ಪರಿ ಗುಲಾಮಿ ಮನಸ್ಥಿತಿ ?
ಕರ್ನಾಟಕದ ಆಡಳಿತ ದೆಹಲಿಯ ರಿಮೋಟ್ ಕಂಟ್ರೋಲ್ನಿಂದ ನಡೆಯುತ್ತಿದೆಯೇ ಹೊರತು, ವಿಧಾನಸೌಧದಿಂದ ಅಲ್ಲ ಏನ್ನುವುದು ದಿನಬೆಳಗಾದರೆ ಸಾಬೀತಾಗುತ್ತಿದೆ. ರಾಜ್ಯದ ಜನತೆಗೆ ಶುದ್ಧ ಆಡಳಿತ ಕೊಡುವುದನ್ನು ಬಿಟ್ಟು, ದೆಹಲಿ ಹೈಕಮಾಂಡ್ಗೆ ಕೊರಿಯರ್ ಬಾಯ್ ಕೆಲಸ ಮಾಡುವುದರಲ್ಲೇ ಕಾಲ ಕಳೆಯುತ್ತಿರುವುದು ನಾಚಿಕೆಗೇಡಿನ ಸಂಗತಿ.
#ಪೋಸ್ಟ್ಮ್ಯಾನ್_ಡಿಕೆಶಿ
#HighCommandPuppets
ಅವನದ್ದು ಸಾವಿರ ಎಕರೆ ಇದೆಯಲ್ಲ, ಅದನ್ನೇ ಕೊಡ್ಲಿ... ನಮ್ಮ ಬಡವರ ಭೂಮಿ ನಮಗೆ ಬೇಕು!"
ಬಿಡದಿ ಪಾದಯಾತ್ರೆಯಲ್ಲಿ ರೈತರ ಜಮೀನು ಉಳಿವಿಗಾಗಿ ಧ್ವನಿ ಎತ್ತಿದ ವೃದ್ಧೆಯೊಬ್ಬರ ಮಾರ್ಮಿಕ ಮಾತುಗಳಿವು. ಜನಸಾಮಾನ್ಯರ ಕಣ್ಣೀರು ಮತ್ತು ಆಕ್ರೋಶವೇ ಈ ಲೂಟಿಕೋರ @INCKarnatakaಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ.
#ನಮ್ಮಭೂಮಿನಮ್ಮಹಕ್ಕು #BidadiTownshipProtest
#JDS #SaveBidadi #ಬಿಡದಿ_ಉಳಿಸಿ #ಬೃಹತ್_ಪಾದಯಾತ್ರೆ
"Useless Fellows" ಎಂದು ನಿಮ್ಮನ್ನು @INCIndia ಅಧ್ಯಕ್ಷರಾದ @kharge ಅವರು ಕರೆದಿದ್ದು ಸರಿಯಾಗಿದೆ.
ರೈತರ ಪರ, ಜನಪರ ಹೋರಾಟಗಳನ್ನು ಎದುರಿಸಲಾಗದೆ ಜೆ.ಪಿ. ಭವನದ ಮುಂದೆ ತಡರಾತ್ರಿ ಕಳ್ಳರಂತೆ ಪೋಸ್ಟರ್ಗಳನ್ನು ಅಂಟಿಸುವ ಹೀನಾಯ ಸ್ಥಿತಿಗೆ ತಲುಪಿರುವುದು ಕಾಂಗ್ರೆಸ್ಸಿಗರ ಬೌದ್ಧಿಕ ದಿವಾಳಿತನವಾಗಿದೆ.
ರಾಜ್ಯದ ಜನರಿಗೆ ಉತ್ತರ ಕೊಡಲಾಗದ ಕಾಂಗ್ರೆಸ್ಸಿಗರೇ, ರಾತ್ರಿಯ ಕತ್ತಲಲ್ಲಿ ಕಳ್ಳರಂತೆ ಬಂದು ಗೋಡೆಗೆ ಪೋಸ್ಟರ್ ಅಂಟಿಸುವುದು, ಶಾಸಕರಿಗೆ ರಹಸ್ಯ ಕ್ಯಾಮೆರಾ ಇಟ್ಟು ಕಣ್ಣಿಡುವುದು — ಇದೇನಾ ಯುವ ಕಾಂಗ್ರೆಸ್ ಘಟಕಕ್ಕೆ ನೀಡಲಾಗಿರುವ ಸಂಸ್ಕಾರ ಮತ್ತು ತರಬೇತಿ ? @INCKarnataka
ಒಕ್ಕಲಿಗರ ಹೆಸರೆತ್ತಿ ಪೋಸ್ಟರ್ ಅಂಟಿಸುವ ಮುನ್ನ ನಿಮ್ಮ ನಾಯಕರ ಇತಿಹಾಸ ಒಮ್ಮೆ ತಿರುಗಿ ನೋಡಿ!
ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಬಡ ಒಕ್ಕಲಿಗರ ಸಾವಿರಾರು ಎಕರೆ ಜಮೀನನ್ನು ಕಬಳಿಸಲು ಹೊಂಚು ಹಾಕುತ್ತಿರುವ ಆ *ರಿಯಲ್ ಎಸ್ಟೇಟ್ ಗಿರಾಕಿ* ಯಾವ ಸೀಮೆಯ ಒಕ್ಕಲಿಗರ ರಕ್ಷಕ ?
ರೈತರ ಕೃಷಿ ಭೂಮಿ ಕಸಿಯುವ ಯೋಜನೆಯನ್ನು ವಿರೋಧಿಸಿದರೆ ಮತ್ತು ಪ್ರಶ್ನಿಸಿದರೇ ಅದಕ್ಕೆ 'ಹೊಟ್ಟೆಯುರಿ' ಎಂದು ಬಣ್ಣ ಹಚ್ಚುವ ಚಿಲ್ಲರೆ ಬುದ್ಧಿ ನಿಮಗೇಕೆ ? ಮಾನಗೇಡಿಗಳೇ, ಅಧಿಕಾರದ ಮದದಲ್ಲಿ ಇಂತಹ ಕೀಳುಮಟ್ಟದ ಚಿಲ್ಲರೆ ರಾಜಕೀಯ ತಂತ್ರಗಳನ್ನು ಬಿಟ್ಟು, ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಿ.
#Congress_UselessFellows
#ಸಂಸ್ಕೃತಿಹೀನ_ಕಾಂಗ್ರೆಸ್
ದೆಹಲಿ ಹೈಕಮಾಂಡ್ ಮುಂದೆ ರಾಜ್ಯ @INCKarnataka ನಾಯಕರ ಆಡಳಿತ ಎಷ್ಟರಮಟ್ಟಿಗೆ ಕುಸಿದಿದೆ ಎನ್ನಲು ಇದೇ ಸಾಕ್ಷಿ!
ಸ್ವತಃ ಮುಖ್ಯಮಂತ್ರಿಗೇ ಅವರ ಸಂಪುಟದ ಖಾತೆಗಳನ್ನು ಹಂಚಲು ಅಧಿಕಾರವಿಲ್ಲದೆ, ದೆಹಲಿಗೆ ಪಟ್ಟಿ ತಲುಪಿಸುವ 'ಪೋಸ್ಟ್ಮ್ಯಾನ್' ಕೆಲಸಕ್ಕೆ ಸೀಮಿತವಾಗಿದ್ದಾರೆ. ರಾಜ್ಯದ ಸ್ವಾಯತ್ತತೆಯನ್ನು ದೆಹಲಿಯ @INCIndia ಅಂಗಳದಲ್ಲಿ ಅಡಮಾನ ಇಟ್ಟಿರುವ @DKShivakumar ಸರ್ಕಾರಕ್ಕೆ ಕನ್ನಡಿಗರ ಹಿತಾಸಕ್ತಿ ಕಾಯಲು ಸಾಧ್ಯವೇ?
ದೆಹಲಿ ನಾಯಕರ ಆಜ್ಞೆಗಾಗಿ 'ಪೋಸ್ಟ್ಮ್ಯಾನ್' ತರ ಓಡಾಡುತ್ತಿರುವ ಈ ಹೈಕಮಾಂಡ್'ನ ಎಟಿಎಂ ಸರ್ಕಾರದಿಂದ ರಾಜ್ಯದ ಜನತೆಗೆ ಏನು ತಾನೇ ಅಭಿವೃದ್ಧಿಯಾಗಲು ಸಾಧ್ಯ? ಸ್ವಯಂ ನಿರ್ಧಾರ ತೆಗೆದುಕೊಳ್ಳಲಾಗದೇ ಕೈಗೊಂಬೆಯಾಗಿರುವ ಕಾಂಗ್ರೆಸ್ ನಾಯಕರು ಕರ್ನಾಟಕವನ್ನು ಹೇಗೆ ಮುನ್ನಡೆಸುತ್ತಾರೆ?
#ಪೋಸ್ಟ್ಮ್ಯಾನ್_ಡಿಕೆಶಿ
#HighCommandPuppets
ಬಿಡದಿ ಟೌನ್ಶಿಪ್ ವಿರೋಧಿಸಿ ನಡೆಸಿದ ಬೃಹತ್ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ಸೂಚಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು.
ರೈತರ ಜಮೀನು ಉಳಿವಿಗಾಗಿ ನಮ್ಮ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ! ಮುಂದಿನ ಹಂತವಾಗಿ ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ 'ವಿಧಾನಸೌಧ ಚಲೋ' ಚಳವಳಿ ನಡೆಸಲಿದ್ದೇವೆ.
📅 ದಿನಾಂಕ: 18 ಆಗಸ್ಟ್ 2026, ಮಂಗಳವಾರ
⏰ ಸಮಯ: ಬೆಳಿಗ್ಗೆ 11 ಗಂಟೆಗೆ
📍 ಸ್ಥಳ: ಫ್ರೀಡಂ ಪಾರ್ಕ್ನಿಂದ ವಿಧಾನಸೌಧದವರೆಗೆ
ರೈತರ ಹಕ್ಕುಗಳಿಗಾಗಿ ನಾವೆಲ್ಲರೂ ಒಂದಾಗಿ ಧ್ವನಿ ಎತ್ತೋಣ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಿ.
#BidadiTownshipProtest #VidhanaSoudhaChalo #FarmerProtest #HDDeveGowda #HDKumaraswamy
#JDS
ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ!
ಅನ್ನದಾತರ ಧ್ವನಿ ಹತ್ತಿಕ್ಕುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಷಡ್ಯಂತ್ರ ಎಂದಿಗೂ ನಡೆಯುವುದಿಲ್ಲ.
ರೈತ ವಿರೋಧಿ ರಾಜ್ಯ ಸರ್ಕಾರವು ರೈತರ ನ್ಯಾಯಬದ್ಧ ಹೋರಾಟವನ್ನು ತಡೆಯಲು ಪೊಲೀಸರನ್ನು ಬಳಸಿಕೊಂಡು ದಬ್ಬಾಳಿಕೆ ಮಾಡುತ್ತಿರುವುದು ತೀವ್ರ ಖಂಡನೀಯ. ನಮ್ಮ ರೈತರನ್ನು ತಡೆಗಟ್ಟಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ಸರ್ಕಾರ ಪ್ರಯತ್ನಿಸುತ್ತಿದೆ. ಎಷ್ಟೇ ಅಡೆತಡೆಗಳನ್ನು ತಂದರೂ ನಾವು ಬಗ್ಗುವ ಪ್ರಶ್ನೆಯೇ ಇಲ್ಲ, ರೈತರ ಬೆನ್ನಿಗೆ ನಾವು ಸದಾ ನಿಲ್ಲುತ್ತೇವೆ. ನ್ಯಾಯಕ್ಕಾಗಿ ನಮ್ಮ ಜೆಡಿಎಸ್ ಹೋರಾಟ ನಿರಂತರ.
@Nikhil_Kumar_k
#ನಮ್ಮಭೂಮಿನಮ್ಮಹಕ್ಕು #BidadiTownshipProtest #JDS #SaveBidadi
#ಬಿಡದಿ_ಉಳಿಸಿ #ಬೃಹತ್_ಪಾದಯಾತ್ರೆ #ಬೈರಮಂಗಲದಿಂದ_ಫ್ರೀಡಂ_
ರೈತರ ಕೃಷಿ ಭೂಮಿ ಉಳಿಸಲು ಜೆಡಿಎಸ್ ಪಕ್ಷ ನಡೆಸುತ್ತಿರುವ ಶಾಂತಿಯುತ ಪಾದಯಾತ್ರೆಯನ್ನು ಪೊಲೀಸರ ಬಲಪ್ರಯೋಗದ ಮೂಲಕ ಹತ್ತಿಕ್ಕುವ @INCKarnataka ಸರ್ಕಾರಕ್ಕೆ ಧಿಕ್ಕಾರ.
ರೈತರ ಪರ ಬಿಡದಿ ಪಾದಯಾತ್ರೆಗೆ ಸಿಕ್ಕಿರುವ ಜನ ಬೆಂಬಲ ಡಿಕೆ ಶಿವಕುಮಾರ್ ಸರ್ಕಾರಕ್ಕೆ ನುಡುಕ ಹುಟ್ಟಿಸಿದೆ ಎನ್ನುವುದು ಸಾಬೀತಾಗಿದೆ.
ರೈತ ವಿರೋಧಿ, ಜನ ವಿರೋಧಿ ಆಡಳಿತ ನಡೆಸುತ್ತಿರುವ @DKShivakumar ಸರ್ಕಾರದ ದಬ್ಬಾಳಿಕೆಗೆ ಜೆಡಿಎಸ್ ಪಕ್ಷ ಮತ್ತು ನಮ್ಮ ನಾಯಕರು ಜಗ್ಗುವುದಿಲ್ಲ. ರೈತರ ಪರ ನಮ್ಮ ಹೋರಾಟ ನಿರಂತರ.
#ನಮ್ಮಭೂಮಿನಮ್ಮಹಕ್ಕು #BidadiTownshipProtest #JDS #SaveBidadi
#ಬಿಡದಿ_ಉಳಿಸಿ #ಬೃಹತ್_ಪಾದಯಾತ್ರೆ #ಬೈರಮಂಗಲದಿಂದ_ಫ್ರೀಡಂ_ಪಾರ್ಕ್
ರೈತರ ಪರ ಜೆಡಿಎಸ್ ಪಾದಯಾತ್ರೆಗೆ ವರುಣ ದೇವರ ಕೃಪಾಶೀರ್ವಾದ.
ಸುರಿಯುವ ಮಳೆಯಲ್ಲೂ ಹಸಿರು ಬಾವುಟ ಹಿಡಿದು, ರೈತರು ಮತ್ತು ಜನರ ಧ್ವನಿಯಾಗಿ ಹೆಜ್ಜೆ ಹಾಕುತ್ತಿರುವ ಪ್ರತಿಯೊಬ್ಬ ಕಾರ್ಯಕರ್ತನಿಗೂ ನಮನಗಳು.
ಅನ್ನದಾತರ ಹಕ್ಕುಗಳಿಗಾಗಿ, ರೈತರ ಕಲ್ಯಾಣಕ್ಕಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ಸದಾ ಮುಂಚೂಣಿಯಲ್ಲಿರುತ್ತದೆ. ಜೈ ಜವಾನ್, ಜೈ ಕಿಸಾನ್.
#ನಮ್ಮಭೂಮಿನಮ್ಮಹಕ್ಕು #BidadiTownshipProtest #JDS #SaveBidadi
#ಬಿಡದಿ_ಉಳಿಸಿ #ಬೃಹತ್_ಪಾದಯಾತ್ರೆ #ಬೈರಮಂಗಲದಿಂದ_ಫ್ರೀಡಂ_ಪಾರ್ಕ್