ಈ ದಿವಸ ಮುಂಬರುವ 'ಈದ್ ಮಿಲಾದ್' ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆಯನ್ನು ನಡೆಸಲಾಯಿತು. ಹಬ್ಬಗಳ ಆಚರಣೆ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ, ಕಾನೂನು & ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಹಬ್ಬಗಳನ್ನು ಆಚರಿಸಲು ತಿಳಿಸಲಾಯಿತು
#Joidapolicestation#cpijoida#spkarwar
ಕರ್ನಾಟಕ ಸಾರ್ವಜನಿಕ ಸುರಕ್ಷತೆ ಕಾಯ್ದೆ, 2017
(Karnataka Public Safety Act,2017)
ಅಡಿಯಲ್ಲಿ ಪ್ರತಿಯೊಂದು ಅಂಗಡಿ / ವ್ಯಾಪಾರಸ್ಥರು ಕಡ್ಡಾಯವಾಗಿ CCTV ಕ್ಯಾಮೆರಾ ಅಳವಡಿಸಬೇಕು.
#Joidapolicestation#cpijoida#dspdandeli#spkarwar
ದಿನಾಂಕ 04/08/2026 ರಂದು ಜೋಯಿಡಾ ಪೊಲೀಸ್ ಠಾಣೆ ವತಿಯಿಂದ "ಡ್ರಗ್ಸ್ ಬೇಡ ಬ್ರೋ" ಹಾಗೂ ಆಪರೇಷನ್ ರೈಸ್ (RISE), ಅಭಿಯಾನದಡಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲು ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಜೋಯಿಡಾದ ಬಿ.ಜಿ.ವಿ.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಯಿತು.
#Operation 'RISE' & ಬೇಡ ಬ್ರೋ #joidapolicestation
ಜೋಯಿಡಾ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜುಗಳಲ್ಲಿ, ಶ್ರೀ ಡಿ.ಕೆ.ಶಿವಕುಮಾರ, ಮಾನ್ಯ ಮುಖ್ಯಮಂತ್ರಿಗಳು ಆಯೋಜಿಸಲಾದ ರಾಜ್ಯಮಟ್ಟದ "ಮಾದಕ ವಸ್ತು ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನ -2026" ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರದರ್ಶಿಸಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಿ, ಮಾದಕ ವಸ್ತು ದುಷ್ಪರಿಣಾಮಗಳ ಬಗ್ಗೆ ತಿಳಿಸಲಾಯಿತು.
ಈ ದಿವಸ ಜೋಯಿಡಾದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸೈಬರ್ ಸುರಕ್ಷತೆ, ತುರ್ತು ಸೇವೆಗಳಾದ 1930, ERSS-112 ಹಾಗೂ ಮಕ್ಕಳ ಸಹಾಯವಾಣಿ 1098 ಕುರಿತು ಮಾಹಿತಿ, ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು ಕುರಿತು ಜಾಗೃತಿ ಮೂಡಿಸಲಾಯಿತು.
ಈ ದಿವಸ ಜೋಯಿಡಾದ ಶ್ರೀ ರಾಮ್ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸೈಬರ್ ಸುರಕ್ಷತೆ, ಡಿಜಿಟಲ್ ಅರೆಸ್ಟ್ ಬಗ್ಗೆ ಅರಿವು, ತುರ್ತು ಸೇವೆಗಳಾದ 1930, ERSS-112 ಹಾಗೂ ಮಕ್ಕಳ ಸಹಾಯವಾಣಿ 1098 ಕುರಿತು ಮಾಹಿತಿ, ಜೊತೆಗೆ ರಸ್ತೆ ಸಂಚಾರ ನಿಯಮ ಪಾಲನೆ, qಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು ಕುರಿತು ಜಾಗೃತಿ ಮೂಡಿಸಲಾಯಿತು.
ಮೋಟಾರ್ ವಾಹನ ಕಾಯ್ದೆ ಸೆಕ್ಷನ್ 199A ಅಡಿಯಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ, ತಂದೆ ತಾಯಿಯರು ಅಥವಾ ವಾಹನದ ಮಾಲೀಕರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 25,000 ರೂ ದಂಡ ವಿಧಿಸಲಾಗುತ್ತದೆ.
#Joidapolicestation#cpijoida#sdpodandeli#spkarwar
ದಿನಾಂಕ 11-08-2023 ರಿಂದ 07-06-2026 ರವರೆಗೆ ಜೋಯಿಡಾ ಪೊಲೀಸ್ ಠಾಣೆಯ (ಕಾ & ಸೂ) ವಿಭಾಗದ ಪಿ.ಎಸ್.ಐ. ಆಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ ಮಾನ್ಯ ಶ್ರೀ ಮಹೇಶ ಮಾಳಿ ಅವರು ಇಂದು ತಮ್ಮ ಅಧಿಕಾರವನ್ನು
ನೂತನ (ಕಾ & ಸು) ವಿಭಾಗದ ಪಿ.ಎಸ್.ಐ. ಆಗಿ ನಿಯೋಜನೆಗೊಂಡಿರುವ ಮಾನ್ಯ ಶ್ರೀ ಜಗದೀಶ್ ಅವರಿಗೆ ಇಂದು ಅಧಿಕಾರವನ್ನು ಹಸ್ತಾಂತರಿಸಿದರು.
ಇಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಾರ್ವಜನಿಕ ರಸ್ತೆಗಳಲ್ಲಿ ವಿಜಯೋತ್ಸವ ಆಚರಣೆ, ಅನುಮತಿಯಿಲ್ಲದ ಬೈಕ್ ರ್ಯಾಲಿ ಹಾಗೂ ಟ್ರಿಪಲ್ ರೈಡಿಂಗ್ಗಳಿಗೆ ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಈ ದಿವಸ ಜೊಯಿಡಾ ಪೊಲೀಸ್ ಠಾಣೆ ವ್ಯಾಪ್ತಿಯ ಅರಿವು ಕೇಂದ್ರ ಗ್ರಂಥಾಲಯದ ಬೇಸಿಗೆ ಶಿಬಿರ ಮಕ್ಕಳನ್ನು 'ತೆರದ ಮನೆ' ಕಾರ್ಯಕ್ರಮದ ಅಡಿಯಲ್ಲಿ ಠಾಣೆಗೆ ಆಹ್ವಾನಿಸಿ, ಪೊಲೀಸ್ ಠಾಣೆಯ ದೈನಂದಿನ ಕರ್ತವ್ಯದ ಬಗ್ಗೆ, ತುರ್ತು ಸಂದರ್ಭದಲ್ಲಿ 112 ಗೆ ಕರೆಮಾಡುವ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು.
#Joidapolicestation#cpijoida#spkarwar
ಈ ದಿವಸ ಮಾನ್ಯ ಶ್ರೀ ಅಮೀತ್ ಸಿಂಗ್, ಐಪಿಎಸ್ ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು,ಪಶ್ಚಿಮ ವಲಯ ಮಂಗಳೂರು ರವರು ಜೋಯಿಡಾ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆಯನ್ನು ಕೈಗೊಂಡು, ಕಡತಗಳನ್ನು ಪರಿಶೀಲಿಸಿ, ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
#Joidapolicestation#cpijoida#sdpodandeli#spkarwar
ನೀವು ಊರಿಗೆ ಹೊರಟಿದ್ದೀರಾ? ಮನೆಯ ಸುರಕ್ಷತೆಯ ಚಿಂತೆ ಬಿಡಿ!
ಉತ್ತರ ಕನ್ನಡ ಜಿಲ್ಲಾ ಪೊಲೀಸರ ನೂತನ
“ರಕ್ಷಾ ಕಾರ್ಯಕ್ರಮ"
"ಲಾಕ್ಸ್ ಹೌಸ್ ಬೀಟ್ ಸಿಸ್ಟಮ್” ಈ ಕೆಳಗಿನ ಮಾಹಿತಿಯನ್ನಿ ವಾಟ್ಸಾಪ್ ಮಾಡಿ. ಮನೆಯಿಂದ ಹೊರಗಡೆ ಹೋಗುವ ದಿನಾಂಕವನ್ನು ತಿಳಿಸಿ.ನಿಮ್ಮ ಮನೆಯ ವಿಳಾಸ ಮತ್ತು ಲೊಕೇಶನ್ ಕಳುಹಿಸಿ.
ನಿಮ್ಮ ಮನೆಯ ಜೊತೆಗೆ ಒಂದು ಸೆಲ್ಫಿ ಕಳುಹಿಸಿ
ದಿನಾಂಕ : 12-04-2026 ರಂದು ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಭೆ ಏರ್ಪಡಿಸಿ ಕುಂದು ಕೊರತೆಗಳನ್ನು ಆಲಿಸಲಾಯಿತು ಹಾಗೂ ಅಂಬೇಡ್ಕರ್ ಜಯಂತಿ ನಿಮಿತ್ತ ಪೂರ್ವಭಾವಿ ಸಭೆ ತೆಗೆದುಕೊಳ್ಳಲಾಯಿತು.
#scstmeeting#cpijoida#spkarwar#Joidapolicestation