ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಶ್ರೀ ರಾಘವೇಂದ್ರ ಅವರ ಪರವಾಗಿ ಮಾತಯಾಚಿಸಲು ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಪ್ರಧಾನಿ ಶ್ರೀ ನರೇಂದ್ರ ಮೂದಿ ಅವರನ್ನು ಜೆಡಿಎಸ್ ಪಕ್ಷದ ಪರವಾಗಿ ಸ್ವಾಗತಿಸಿ ಅಭಿನಂದಿಸಿದ ಸಂದರ್ಭ.
#shivamogga#JDS
ಶಿವಮೊಗ್ಗೆಯ ಅತ್ಯುತ್ತಮ ಶಾಲೆಗಳಲ್ಲಿ ಒಂದಾದ, ಬಡವ ಬಲ್ಲಿದರೆನದೆ ಸಮಾಜದ ಎಲ್ಲ ವರ್ಗಗಳ ಮಕ್ಕಳಿಗೆ ವಿದ್ಯಾದಾನ ನೀಡುತ್ತಿರುವ ಶ್ರೀ ಗಿರೀಶ್ ನಡೆಸುತ್ತಿರುವ ಅನನ್ಯ ವಿದ್ಯಾ ಪೀಠದಲ್ಲಿ ವಾರ್ಷಿಕೋತ್ಸವದ "ಸಾಂಸ್ಕೃತಿಕ ಚಪ್ಪರ" ವನ್ನು ಸಂತೋಷವಾಗಿ ಉದ್ಘಾಟಿಸಿದ ಸಂದರ್ಭ. #kbpshimoga
ನಾಡಿನ ಸಮಸ್ತರಿಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಒಂಭತ್ತು ದಿನಗಳಲ್ಲಿ ಮೊದಲ ದಿನ ಪೂಜಿಸುವ ಶಕ್ತಿ ದೇವಿಯ ಮೊದಲ ಅವತಾರವೇ ಶೈಲಪುತ್ರಿ.
ಶೈಲಪುತ್ರಿ ಮಾತೆಯ ಕೃಪೆಯಿಂದ ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸುತ್ತೇನೆ. #kbpshimoga#Navarathri
ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಸಾಕಾರಗೊಂಡಾಗಲೇ ರಾಜಕೀಯ ಸ್ವಾತಂತ್ರ್ಯ ಪರಿಪೂರ್ಣಗೊಳ್ಳುವುದು.
ನಾಡಿನ ಸಮಸ್ತ ಜನಕೋಟಿಗೆ ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಮಹಾ ಜನತೆಗೆ ಭಾರತದ 77ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.
#independenceday2023#ProudIndian#ilovemyindia#kbpshimoga
16ನೇ ವಿಧಾನಸಭೆಗೆ ಜನತಾದಳ (ಜಾತ್ಯತೀತ) ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ಉಪನಾಯಕರಾಗಿ ಆಯ್ಕೆಯಾಗಿರುವ ಶ್ರೀ ಹೆಚ್.ಡಿ ಕುಮಾರಸ್ವಾಮಿ ಮತ್ತು ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.@hd_kumaraswamy@SharadaPuranaik#kbpshimoga
ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕ, ಮಿಂಚಿನ ವ್ಯಕ್ತಿತ್ವದ ಮೂಲಕ ಯುವಸಮೂಹಕ್ಕೆ ಸ್ಪೂರ್ತಿಯನ್ನು ನೀಡಿದ ಶ್ರೀ ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.
ದೇಶದ ಸಂಸ್ಕ್ರತಿ ಮತ್ತು ಜ್ಞಾನದ ಪ್ರಕಾಶವನ್ನು ಇಡೀ ವಿಶ್ವಕ್ಕೆ ಪಸರಿಸಿದ ಸ್ವಾಮಿ ವಿವೇಕಾನಂದರ ಕೊಡುಗೆ ಸದಾ ಸ್ಮರಣೀಯ.
#swamivivekananda#kbpshimoga
ಕರ್ನಾಟಕ ರಾಜ್ಯದ ನೂತನ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ ಆತ್ಮೀಯ ಸ್ನೇಹಿತರಾದ ಶ್ರೀ @Madhu_Bangarapp ಅವರಿಗೆ ಹಾರ್ದಿಕ ಅಭಿನಂದನೆಗಳು💐
ತಮ್ಮ ಸಮರ್ಥ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ಅದರಲ್ಲೂ ವಿಶೇಷವಾಗಿ ನಮ್ಮ ಶಿವಮೊಗ್ಗ ಜಿಲ್ಲೆ ತಮ್ಮ ನೇತೃತ್ವದಲ್ಲಿ ಮತ್ತಷ್ಟು ಪ್ರಗತಿ ಸಾದಿಸಲಿ ಎಂದು ಹಾರೈಸುತ್ತೇನೆ
ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಪ್ರಸನ್ನ ಕುಮಾರ್ ಅವರನ್ನು ಅತ್ಯಂತ ಆದರಪೂರ್ವಕವಾಗಿ @JanataDal_S ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಅವರ ಬೆಂಬಲಿಗರು, ಕಾಂಗ್ರೆಸ್ ಮುಖಂಡರಾದ ಶ್ರೀ ಬೊಮ್ಮಘಟ್ಟ ಮಂಜುನಾಥ್, ಶ್ರೀ ಸುನೀಲ್ ಗೌಡ, ಶ್ರೀ ರಘು, ಶ್ರೀ ಸುನೀಲ್, ಶ್ರೀ ಪ್ರಸನ್ನ ಅವರು ಪಕ್ಷಕ್ಕೆ ಸೇರಿದರು.1/2
ನಾಡಿನ ಜನತೆಗೆ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಶುಭಾಶಯಗಳು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಜೀವನದುದ್ದಕ್ಕೂ ದೀನ ದಲಿತರು, ಶೋಷಿತರ ಸಮಾನತೆಗಾಗಿ ಹೋರಾಡಿದರು. ಅಸ್ಪೃಶ್ಯತೆ ಮತ್ತು ಜಾತಿವಾದದ ವಿರುದ್ಧ ಸಮರ ಸಾರಿ, ಮಹಿಳೆಯರ ಶಿಕ್ಷಣಕ್ಕೆ ಮಹತ್ವ ನೀಡಿದರು. ಅವರ ಚಿಂತನೆಗಳು ಸದಾ ಪ್ರೇರಣಾದಾಯಿ.
#AmbedkarJayanti2023
ನಮ್ಮೆಲ್ಲರ ನಾಯಕರು, ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರು, ರಾಜ್ಯ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರೂ ಆದ ಶ್ರೀ ಆರ್. ವಿ. ದೇಶಪಾಂಡೆ ಸಾಹೇಬರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಪರಮಾತ್ಮನು ಶ್ರೀಯುತರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯವನ್ನು ಕರುಣಿಸಿ ಮತ್ತಷ್ಟು ಜನಸೇವೆ ಮಾಡುವ ಅವಕಾಶಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಉತ್ತಮ ಆಡಳಿತದ ಮೂಲಕ ಜನತೆಯನ್ನು ತಲುಪಲಾರದ ಬಿಜೆಪಿ ಪಕ್ಷವು ರಾಜ್ಯದಲ್ಲಿ ಅನ್ಯ ಮಾರ್ಗಗಳ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ತೆಗೆಸಿ ಹಾಕುವ ದುಷ್ಕೃತ್ಯಕ್ಕೆ ಇಳಿದಿದೆ. ಚುನಾವಣಾ ಆಯೋಗ ಈ ಬಗ್ಗೆ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
@ECISVEEP@ceo_karnataka
ನಮ್ಮ ಮತಕ್ಷೇತ್ರದ RML ನಗರ, ಗಾಂಧಿಬಜಾರ್, ಕುಂಬಾರ್ ಗುಂಡಿ ಪ್ರದೇಶದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಬೂತ್ ಮಟ್ಟದ #ಮತದಾರರಜಾಗೃತಿಸಭೆ ಯಲ್ಲಿ ಪಾಲ್ಗೊಂಡು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳನ್ನು ವಿತರಿಸಿ ಮಾತನಾಡಿದೆ. ಕಾಂಗ್ರೆಸ್ ಸಾಧನೆಗಳು ಹಾಗೂ ಬಿಜೆಪಿ ವೈಫಲ್ಯಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು.
@INCKarnataka@DKShivakumar
ನನ್ನ ಮತಕ್ಷೇತ್ರ ಶಿವಮೊಗ್ಗ ನಗರದ ವಾರ್ಡ್ ನ0 11ರ ಜಯನಗರ ಬಸವನಗುಡಿ ಭಾಗದಲ್ಲಿ ನಗರ ಪಾಲಿಕೆ ಸದಸ್ಯರಾದ ಶ್ರೀ ರಮೇಶ್ ಹೆಗ್ಗಡೆ ಅವರ ನೇತೃತ್ವದಲ್ಲಿ ವಾರ್ಡ್ ಅಧ್ಯಕ್ಷರು ಹಾಗು ಪ್ರಮುಖರು ಸೇರಿ ನಮ್ಮ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಗಳನ್ನು ವಿತರಿಸಲಾಯಿತು.
ಕಾಂಗ್ರೆಸ್ ಸಾಧನೆಗಳು,ಪಕ್ಷ ಅಧಿಕಾರಕ್ಕೆ ಬಂದಲ್ಲಿ ಜಾರಿಯಾಗಲಿರುವ ಯೋಜನೆಗಳು ಹಾಗೂ ಬಿಜೆಪಿ ವೈಫಲ್ಯಗಳ ಕುರಿತು ತಿಳಿಸಲಾಗುತ್ತಿದೆ.
ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ 16ವಾರ್ಡ್ ಗಳಲ್ಲಿ ಮನೆಮನೆಗೆ ತೆರಳಿ ಈ ವರೆವಿಗೆ 9 ಸಾವಿರ ಕ್ಕಿಂತ ಹೆಚ್ಚು ಕಾರ್ಡ್ ಗಳನ್ನು ವಿತರಿಸಲಾಗಿದೆ.
@INCKarnataka@DKShivakumar@rssurjewala
2/2
ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ವಾರ್ಡ್ ಗಳಲ್ಲಿ ಈ ದಿನ ಕೂಡ ಬೂತ್ ಮಟ್ಟದಲ್ಲಿ ಮತದಾರರ ಜಾಗೃತಿ ಅಭಿಯಾನ ಮುಂದುವರೆದಿದೆ. ವಿನೋಬನಗರ, ದುರ್ಗಿಗುಡಿ, ವೆಂಕಟೇಶನಗರ, ಹೊಸಮನೆ, ಶರಾವತಿ ನಗರದ ಪ್ರದೇಶಗಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ.
2/1
ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಕುಟುಂಬದ ಪ್ರತಿ ಮಹಿಳೆಗೆ ಪ್ರತಿ ತಿಂಗಳು ರೂ. 2,000 ಪಾವತಿಸುವ #ಗೃಹಲಕ್ಷ್ಮಿ ಹಾಗೂ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ #ಗೃಹಜ್ಯೋತಿ ಯೋಜನೆಗಳ #CongressGuarantee ಕಾರ್ಡ್ ಗಳನ್ನು ನನ್ನ ಮತಕ್ಷೇತ್ರದ ಶಿವಮೊಗ್ಗದಲ್ಲಿ ವಿತರಿಸಲಾಯಿತು.
Flagged off 1000 Autos of Shivamogga City in support of the #CongressGuarantee to the people of Karnataka.
1. 200 units Free Power
2. ₹2000 for female head of every household &
3. 10kg/person free rice to all BPL families.