ಜಗತ್ತಿನ ಅನೇಕ ಬ್ರಹತ್ ಸೃಷ್ಟಿಗಳಲ್ಲಿ ಕೇವಲ ಅಣುಗಾತ್ರದ ಸೃಷ್ಟಿಯಾಗಿರುವ ಮಾನವನಿಗೆ ತನ್ನ ಸೃಷ್ಟಿಕರ್ತನ ಕುರಿತು ಇರುವ ಜಿಜ್ಞಾಸೆ, ಸಂಕುಚಿತತೆ, ಮತ್ತು ಪೂರ್ವಾಭಿಪ್ರಾಯಗಳ ಬಗ್ಗೆ ಚಿಂತನ-ಮಂಥನ ನಡೆಸುವ ಅಧ್ಯಯನಶೀಲ ಕೃತಿ ಇದಾಗಿದೆ.
ಕೇವಲ ಕಾನೂನಿನ ಮೂಲಕ ಯಾವುದೇ ಅಸ್ಪೃಶ್ಯತೆ, ಅಸಮಾನತೆ ಹೋಗಲಾಡಿಸಲು ಸಾಧ್ಯವಿಲ್ಲ ಎನ್ನುವುದಕ್ಕೆ ಇಂತಹ ಉದಾಹರಣೆಗಳೇ ಸಾಕು. ಎಲ್ಲಿಯವರೆಗೆ ದೇವನು ನಮ್ಮೆಲರನ್ನು ಒಂದೇ ತಂದೆ ತಾಯಿಯಿಂದ ಸೃಷ್ಟಿಸಿದ್ದಾನೆ ಮತ್ತು ಮರಣದ ನಂತರ ನಮ್ಮ ಕರ್ಮಗಳ ವಿಚಾರಣೆ ನಡೆಯಲಿದೆ ಎಂಬ ನಂಬಿಕೆ ಇರುವುದಿಲ್ಲವೋ ಅಲ್ಲಿಯವರೆಗೆ ಇಂತಹ ನೀಚ ಕೃತ್ಯ ತಡೆಯಲು ಸಾಧ್ಯವಿಲ್ಲ.
'ಇಸ್ಲಾಮ್ ಧರ್ಮ' ಕೃತಿಯು 20ನೇ ಶತಮಾನದ ಜಗದ್ವಿಖ್ಯಾತ ಇಸ್ಲಾಮೀ ವಿದ್ವಾಂಸ ಸಯ್ಯದ್ ಅಬುಲ್ ಅಲಾ ಮೌದೂದಿಯವರು 1937 ರಲ್ಲಿ ರಚಿಸಿದ ಸುಪ್ರಸಿದ್ಧ ಉರ್ದು ಗ್ರಂಥ 'ರಿಸಾಲ-ಯೆ-ದೀನಿಯ್ಯಾತ್'ನ ಕನ್ನಡಾನುವಾದವಾಗಿದೆ. ಈ ಗ್ರಂಥವು ಭಾರತ ಮಾತ್ರವಲ್ಲ , ಜಗತ್ತಿನ ಹಲವು ರಾಷ್ಟ್ರಗಳ ಆಯಾ ಭಾಷೆಗಳಿಗೆ ಅನುವಾದಗೊಂಡು ಕೋಟ್ಯಂತರ ಓದುಗರನ್ನು ತಲುಪಿದೆ.