ನಮ್ಮ ಹೆಮ್ಮೆಯ ಜನಪ್ರಿಯ ಶಾಸಕರು ಶ್ರೀ ಎಸ್.ಟಿ. ಸೋಮಶೇಖರ್ ಗೌಡರವರ ಸಾರಥ್ಯದಲ್ಲಿ ನಡೆಯುತ್ತಿರುವ ಯಶವಂತಪುರ ದಸರಾ ಕಾರ್ಯಕ್ರಮದ ಅಂಗವಾಗಿ ಇಂದು ಬೆಳ್ಳಗೆ 07-00 ಘಂಟೆಗೆ ಕಗ್ಗಲೀಪುರ ಗ್ರಾಮ ಪಂಚಾಯತಿ ವತಿಯಿಂದ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆಯನ್ನು ನೇರವೇರಿಸಲಾಯಿತ್ತು.
ಚಿತ್ರದುರ್ಗದ ಕೊನೆಯ ಅರಸ, ವೀರ ಮದಕರಿ ನಾಯಕ ಅವರ ಜನ್ಮದಿನದಂದು ಗೌರವ ನಮನಗಳು. ಗಂಡುಗಲಿ ಮದಕರಿ ನಾಯಕರ ಧೈರ್ಯ ಮತ್ತು ಪರಾಕ್ರಮದಿಂದ ಚಿತ್ರದುರ್ಗದ ಕೀರ್ತಿ ಅಜರಾಮರವಾಗಿದೆ. ಎಲ್ಲಾ ವರ್ಗದವರ ಏಳಿಗೆಗಾಗಿ ಶ್ರಮಿಸಿದ ನಾಯಕರ ಕೊಡುಗೆ ಶ್ಲಾಘನೀಯ.
❤️ ನಂಬಿಕೆ ಇರಲಿ… ತಾಳ್ಮೆ ಇರಲಿ…🙏
ಯಾರ ಕೈಯಲ್ಲಿ ಏನಿದೆ ಎಂಬುದಕ್ಕಿಂತ,
ಪರಮಾತ್ಮನ ಕೈಯಲ್ಲಿ ಎಲ್ಲವೂ ಇದೆ ಎಂಬ ನಂಬಿಕೆ ಇರಲಿ.
ನಮಗೆ ಸೇರಬೇಕಾದದ್ದು,
ಸಮಯ ಬಂದಾಗ ನಮ್ಮ ಪಾಲಿಗೆ ಬಂದೇ ಬರುತ್ತದೆ. ❤️
ಆತುರ ಬೇಡ… ಚಿಂತೆ ಬೇಡ…
ದೇವರ ಮೇಲೆ ನಂಬಿಕೆ ಇರಲಿ. 🙏✨
ಭಾರತದ ಆರ್ಥಿಕತೆಗೆ ಹೊಸ ದಿಕ್ಕು ತೋರಿದ ಶ್ರೇಷ್ಠ ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. ಒಬ್ಬ ಮೌಲ್ಯಯುತ ರಾಜಕಾರಣಿಯಾಗಿ ಅವರು ದೇಶಕ್ಕೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯ.
ಕಗ್ಗಲೀಪುರ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗೌರವಾನ್ವಿತ ಸದಸ್ಯರುಗಳ ಸಹಯೋಗದೊಂದಿಗೆ, ನಮ್ಮ ಪಂಚಾಯತಿ ವ್ಯಾಪ್ತಿಯ 65 ವರ್ಷ ಮೇಲ್ಪಟ್ಟ 500ಕ್ಕೂ ಹೆಚ್ಚು ಹಿರಿಯ ಜೀವಗಳಿಗೆ ತಲಾ ₹500 ಹಾಗೂ 100ಕ್ಕೂ ಹೆಚ್ಚು ವಿಶೇಷ ಚೇತನರಿಗೆ ತಲಾ ₹1,000 ಧನಸಹಾಯ ನೀಡಲಾಗುತ್ತಿದೆ.
ಕಲೆ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಉತ್ತೇಜನ ನೀಡಿ, ಜನಪರ ಹಾಗೂ ಅತ್ಯುತ್ತಮ ಆಡಳಿತಗಾರ ಎಂದು ಖ್ಯಾತಿ ಪಡೆದಿರುವ ಮೈಸೂರು ಸಂಸ್ಥಾನದ ಕೊನೆಯ ದೊರೆ ಹಾಗೂ ಕರ್ನಾಟಕದ ಮೊದಲ ರಾಜ್ಯಪಾಲರಾದ 'ರಾಜಯೋಗಿ' ಜಯಚಾಮರಾಜೇಂದ್ರ ಒಡೆಯರ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ನಮ್ಮ ಗೌರವ ಪೂರ್ವಕ ನಮನಗಳು.
"ಕಣ್ಣಲ್ಲಿ ಕನಸಿರಲಿ, ಹೃದಯದಲ್ಲಿ ಧೈರ್ಯವಿರಲಿ, ಹೆಜ್ಜೆಯಲ್ಲಿ ಆತ್ಮವಿಶ್ವಾಸವಿರಲಿ… ಜೀವನ ಎಷ್ಟೇ ಪರೀಕ್ಷಿಸಿದರೂ ಒಂದು ಮಾತು ನೆನಪಿರಲಿ “ನಾನು ಮುಗಿದಿಲ್ಲ…
ನನ್ನ ಕಥೆ ಇನ್ನೂ ಬಾಕಿಯಿದೆ.
65 ವರ್ಷ ಮೇಲ್ಪಟ್ಟ ಹಿರಿಯ ಜೀವಗಳಿಗೆ ಹಾಗೂ ವಿಶೇಷ ಚೇತನರಿಗೆ, ತಮ್ಮ ಜೀವನದ ಸಂಕಷ್ಟದ ಸಮಯದಲ್ಲಿ ಸ್ವಲ್ಪ ಮಟ್ಟಿಗಾದರೂ ಆಸರೆಯಾಗಿ ನಿಂತ ನಾಯಕ. ❤️
ಹಿರಿಯರ ಆಶೀರ್ವಾದವೇ ದೊಡ್ಡ ಶಕ್ತಿ…
ವಿಶೇಷ ಚೇತನರ ನಗುಮುಖವೇ ನಿಜವಾದ ಸೇವೆಯ ಪ್ರತಿಫಲ.**
ಸಮಾಜದ ದುರ್ಬಲ ವರ್ಗದವರ ಬದುಕಿಗೆ ನೆಮ್ಮದಿ ನೀಡುವ ಪ್ರತಿಯೊಂದು ಹೆಜ್ಜೆಯೂ ಶ್ಲಾಘನೀಯ. 🙏
ಕನ್ನಡ ಚಲನಚಿತ್ರ ರಂಗದ ಮೇರು ನಟ, ಅಭಿಮಾನಿಗಳ ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
ವಿಶಿಷ್ಟ ಪಾತ್ರಗಳ ಮೂಲಕ ದಶಕಗಳ ಕಾಲ ಜನರನ್ನು ರಂಜಿಸಿದ ಅವರು, ತಮ್ಮ ವೃತ್ತಿಯ ಮೇಲಿಟ್ಟಿದ್ದ ಶ್ರದ್ಧೆ, ಸಮಯಪ್ರಜ್ಞೆ ಹಾಗೂ ಶಿಸ್ತಿನ ಬದುಕು ಇಂದಿಗೂ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.
ಕಗ್ಗಲೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 13 ಗ್ರಾಮಗಳ 6,000 ಕುಟುಂಬಗಳಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಮ್ಮ ಪ್ರೀತಿಯ ಕೆ.ಎಸ್. ಪರ್ವೀಜ್ ಅಣ್ಣ ಅವರು ಮನೆ ಮನೆಗೆ ತೆರಳಿ ನಮ್ಮ ಅಕ್ಕ-ತಂಗಿಯರಿಗೆ ಆತ್ಮೀಯವಾಗಿ ಬಾಗಿನ ನೀಡಿದರು. #KSParveezAnna#GowriGanesha#Bagina#Kaggalipura#ಅಕ್ಕತಂಗಿ
ಕಗ್ಗಲೀಪುರ Si ಸಂಸ್ಥೆಯ ಶ್ರೀ ಶೋಯೇಬ್ ರವರು ಹಾಗೂ ಸ್ನೇಹಿತರು ಆತ್ಮೀಯವಾಗಿ ಹಾಗೂ ಅದ್ದೂರಿಯಾಗಿ ಶ್ರೀ ಕೆ.ಎಸ್. ಪರ್ವೀಜ್ ರವರ ಹುಟ್ಟುಹಬ್ಬವನ್ನು ಆಚರಿಸಿ, ಸಂಭ್ರಮಿಸಿದರು.
ಈ ವಿಶೇಷ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ, ಸಂಭ್ರಮ ಹಂಚಿಕೊಂಡು, ನೆಚ್ಚಿನ ನಾಯಕನಿಗೆ ಹೃದಯಪೂರ್ವಕ ಶುಭಾಶಯಗಳನ್ನು ಸಲ್ಲಿಸಲಾಯಿತು.